ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಕರೆ ಮತ್ತು ಡೇಟಾ ಪ್ಯಾಕ್‌ಗಳ ದರ ಏರಿಕೆ ಮಾಡಿದ ಬೆನ್ನಲ್ಲೇ, ರಿಲಯನ್ಸ್ ಜಿಯೋ ಸಹ ಡಿಸೆಂಬರ್ 6ರಿಂದ ಅನ್ವಯವಾಗುವಂತೆ ಮೊಬೈಲ್ ಕರೆ ಮತ್ತು ಇಂಟರ್‌ನೆಟ್ ಪ್ಯಾಕ್‌ಗಳ ದರವನ್ನು ಶೇ.39 ರಷ್ಟುಏರಿಕೆ ಮಾಡಲು ನಿರ್ಧರಿಸಿದೆ.
ನವದೆಹಲಿ (ಡಿ. 05): ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಕರೆ ಮತ್ತು ಡೇಟಾ ಪ್ಯಾಕ್‌ಗಳ ದರ ಏರಿಕೆ ಮಾಡಿದ ಬೆನ್ನಲ್ಲೇ, ರಿಲಯನ್ಸ್ ಜಿಯೋ ಸಹ ಡಿಸೆಂಬರ್ 6 ರಿಂದ ಅನ್ವಯವಾಗುವಂತೆ ಮೊಬೈಲ್ ಕರೆ ಮತ್ತು ಇಂಟರ್‌ನೆಟ್ ಪ್ಯಾಕ್‌ಗಳ ದರವನ್ನು ಶೇ.39 ರಷ್ಟು ಏರಿಕೆ ಮಾಡಲು ನಿರ್ಧರಿಸಿದೆ.
ಜೇಬಿಗೆ ಕತ್ತರಿ, ಪುಕ್ಕಟೆ ಸೌಲಭ್ಯ ಕೊಟ್ಟಿದ್ದ ಜಿಯೋದಿಂದ ಈಗ ಮಾಸ್ಟರ್ ಸ್ಟ್ರೋಕ್!
undefined
ದರ ಏರಿಕೆ ಹೊರತಾಗಿಯೂ, ಟೆಲಿಕಾಂ ವಲಯದಲ್ಲಿ ತಮ್ಮ ಎದುರಾಳಿ ಸಂಸ್ಥೆಗಳಾದ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿ. ಕಂಪನಿಗಳಿಗಿಂತಲೂ ರಿಲಯನ್ಸ್ ಜಿಯೋ ಪ್ಲಾನ್‌ಗಳು ಗ್ರಾಹಕರಿಗೆ ಶೇ.300 ರಷ್ಟುಲಾಭವಾಗಲಿದೆ ಎಂದು ಜಿಯೋ ಹೇಳಿದೆ.
ಈ ಪ್ರಕಾರ 84 ದಿನಗಳ ಕಾಲ ದಿನಕ್ಕೆ 1.5 ಜಿಬಿ ಡೇಟಾ, ಜಿಯೋ-ಜಿಯೋ ಸಂಖ್ಯೆಗೆ ಅನಿಯಮಿತ ಕರೆ, ಜಿಯೋ-ಇತರೆ ನೆಟ್‌ವರ್ಕ್ಗೆ ನಿಮಿಷಕ್ಕೆ 6 ಪೈಸೆಯ ಪ್ಲಾನ್‌ಗೆ ಗ್ರಾಹಕರರು 555 ರು. ಪಾವತಿಸಬೇಕು. ಈ ಹಿಂದೆ ಈ ಪ್ಲಾನ್ 399 ರು.ಗೆ ಲಭ್ಯವಾಗುತ್ತಿತ್ತು. ಅಲ್ಲದೆ, 153 ರು. ಪ್ಲಾನ್ 199 ರು.ಗೆ, 198 ರು. ಪ್ಲಾನ್ 249 ರು., 299 ರು. ಪ್ಲಾನ್ 349 ರು., 349 ರು. ಪ್ಲಾನ್ 399 ರು., 448 ರು. ಪ್ಲಾನ್ 599 ರು. 1699 ರು. ಪ್ಲಾನ್ 2199 ರು.ಗೆ ಏರಿಕೆಯಾಗಿದೆ.
ಗೂಗಲ್ ಪಿಚ್ಚೈಗೆ ಅಲ್ಫಾಬೆಟ್ ಮಣೆ ; ಭಾರತೀಯನ ಹೆಗಲಿಗೆ ಮಾತೃಕಂಪನಿಯ ಹೊಣೆ
ಹಿಂದಿನ ದರ ಪರಿಷ್ಕೃತ ದರ
153 ರು. 199 ರು.
198 ರು. 249 ರು.
299 ರು. 349 ರು.
349 ರು. 399 ರು.
448 ರು. 599 ರು.
1699 ರು. 2199 ರು.
98 ರು. 129 ರು.
ಡಿಸೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: