ದುಬಾರಿ ಒನ್‌ಪ್ಲಸ್‌ ಪ್ರೀಮಿಯಂ ಫೋನ್‌ ಖರೀದಿಸುವುದು ಇನ್ಮುಂದೆ ಸುಲಭ!

By Suvarna News  |  First Published Dec 5, 2019, 5:55 PM IST
  • ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ  Oneplus
  • ಇತ್ತೀಚೆಗೆ 5G ಸಪೋರ್ಟ್‌ ಮಾಡೋ  7T ಫೋನ್‌ ಬಿಡುಗಡೆ ಮಾಡಿದ್ದ Oneplus
  • ಟೀವಿ ಮಾರುಕಟ್ಟೆಗೂ ಪದಾರ್ಪಣೆ ಮಾಡಿರುವ ಚೀನಾದ ದೈತ್ಯ 
     

ಬೆಂಗಳೂರು (ಡಿ.05): ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ  Oneplus ಇದೀಗ ಜನಸಾಮಾನ್ಯರ ಕೈಗೆ ಸುಲಭವಾಗಿ ಸಿಗಲಿದೆ.  

ಟ್ರೇಡ್‌ ಡಿಸ್ಟ್ರಿಬ್ಯೂಟಿಂಗ್‌ ಕಂಪೆನಿ ಆ್ಯರೋ ಹೆಡ್‌ ಕಮ್ಯೂನಿಕೇಶನ್ಸ್‌ ಜೊತೆಗೆ ಚೀನಾದ ಈ ಜನಪ್ರಿಯ ಕಂಪನಿ Oneplus ಒಪ್ಪಂದ ಮಾಡಿಕೊಂಡಿದೆ. 

Tap to resize

Latest Videos

undefined

ಈ ಪಾಲುದಾರಿಕೆ ಮೂಲಕ Oneplus ಸ್ಮಾರ್ಟ್‌ಫೋನ್‌ ಡಿವೈಸ್‌ಗಳನ್ನು ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಖರೀದಿಸಬಹುದು. ಆ್ಯರೋ ಹೆಡ್‌ ಕಳೆದೊಂದು ದಶಕದಿಂದ ಆ್ಯಪಲ್‌, ಬ್ಲ್ಯಾಕ್‌ಬೆರ್ರಿಯಂಥಾ ಉತ್ಪನ್ನಗಳನ್ನು ವಿತರಣೆ ಮಾಡುತ್ತಿತ್ತು. ಇದೀಗ Oneplus ಉತ್ಪನ್ನಗಳೂ ಸೇರಿಕೊಂಡಿವೆ. 

ಇದನ್ನೂ ಓದಿ | ಒನ್‌ಪ್ಲಸ್ ಮೊಬೈಲ್ ಖರೀದಿಸುವುದು ಇನ್ಮುಂದೆ ಸುಲಭ; ಇಲ್ಲಿಗೆ ಹೋದರೆ ಇನ್ನೂ ಲಾಭ!...

ರಾಜ್ಯದಲ್ಲಿ 200 ಕ್ಕೂ ಹೆಚ್ಚು ರೀಟೇಲ್‌ ಸ್ಟೋರ್‌ಗಳಲ್ಲಿ ತನ್ನ ಆ್ಯರೋ ವಿತರಣಾ ಜಾಲ ಹೊಂದಿದೆ. ಈ ಸಂದರ್ಭ ಮಾತನಾಡಿದ Oneplus ಇಂಡಿಯಾದ ಮುಖ್ಯಸ್ಥ ಸಿದ್ಧಾರ್ಥ್ ದೇಶಮುಖ್‌, ‘ರಾಜ್ಯದಲ್ಲಿ ಹೆಚ್ಚುತ್ತಿರುವ Oneplus ಬಳಕೆದಾರರ ಅನುಕೂಲಕ್ಕಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ಇತ್ತೀಚೆಗೆ 5G ಸಪೋರ್ಟ್‌ ಮಾಡೋ ಒನ್‌ಪ್ಲಸ್ 7T ಫೋನ್‌ನ್ನು ಕಂಪನಿಯು ಬಿಡುಗಡೆ ಮಾಡಿತ್ತು. ಈವೆರೆಗೆ ಸ್ಮಾರ್ಟ್‌ಫೋನ್‌ ತಯಾರಿಕೆ ಕ್ಷೇತ್ರದಲ್ಲಿದ್ದ Oneplus ಕಂಪನಿಯು ಟೀವಿಯನ್ನು ಕೂಡಾ ಬಿಡುಗಡೆ ಮಾಡಿದೆ.

click me!