* ದೇಶದಲ್ಲೇ ಅತಿ ಅಗ್ಗದ ಪ್ರೀಪೇಯ್ಡ್ ಯೋಜನೆ ಪ್ರಕಟ
* ಜಿಯೋ 1 ರು. ರೀಚಾರ್ಜ್‌ಗೆ 30 ದಿನ ವ್ಯಾಲಿಡಿಟಿ ಆಫರ್
ಮುಂಬೈ(ಡಿ.16): ದೇಶದ ನಂ.1 ಮೊಬೈಲ್ ಸೇವಾ ಕಂಪನಿಯಾದ ರಿಲಯನ್ಸ್ ಜಿಯೋ, ತನ್ನ ಪ್ರೀಪೇಯ್ಡ್ ಗ್ರಾಹಕರಿಗಾಗಿ ಕೇವಲ 1 ರು. ರೀಚಾಜ್‌ರ್ ಯೋಜನೆ ಪ್ರಕಟಿಸಿದೆ. ಇದು ಭಾರತದಲ್ಲಿ ಇದುವರೆಗೆ ಯಾವುದೇ ಟೆಲಿಕಾಂ ಕಂಪನಿಯೊಂದು ಘೋಷಿಸಿದ ಅತಿ ಅಗ್ಗದ ಯೋಜನೆಯಾಗಿದೆ.
ಈ ಯೋಜನೆಯಡಿ ಯಾವುದೇ ಗ್ರಾಹಕರು 1 ರು. ರಿಚಾಜ್‌ರ್ ಪ್ಲಾನ್ ಆಯ್ಕೆ ಮಾಡಿಕೊಂಡರೆ, 1 ತಿಂಗಳು ಯೋಜನೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಗ್ರಾಹಕರು ಯಾವುದೇ ಕರೆ ಸ್ವೀಕರಿಸುವ, ಕರೆ ಮಾಡುವ ಸೌಲಭ್ಯ ಇರುವುದಿಲ್ಲ. ಆದರೆ 100 ಎಂಬಿ ಡಾಟಾ ಸಿಗುತ್ತದೆ. ಇದು ಖಾಲಿ ಆದ ಬಳಿಕ ಇಂಟರ್ನೆಟ್ ವೇಗ 64 ಕೆಬಿಪಿಎಸ್‌ಗೆ ಇಳಿಯುತ್ತದೆ.
undefined
ವಿಶೇಷವೆಂದರೆ ಇದೇ 1 ರು.ಪ್ಲ್ಯಾನ್ ಅನ್ನು 10 ಬಾರಿ ರೀಚಾಜ್‌ರ್ ಮಾಡಿದರೆ ಗ್ರಾಹಕರಿಗೆ 1ಜಿಬಿ ಹೈಸ್ಪೀಡ್ ಇಂಟರ್ನೆಟ್ ಡಾಟಾ ಸಿಗುತ್ತದೆ. ಇದು ಜಿಯೋ ಈಗಾಗಲೇ 1ಜಿಬಿ ಡಾಟಾಕ್ಕೆ ವಿಧಿಸುತ್ತಿರುವ 15 ರು.ಶುಲ್ಕಕ್ಕಿಂತ 5 ರು. ಆಗ್ಗ.
Global Environment Impact ರಿಲಯನ್ಸ್ ಜಿಯೋಗೆ ಇಂಗಾಲ ನಿಯಂತ್ರಿಸಿ ಪರಿಸರ ಉಳಿಸುವ ದೇಶದ ಕಂಪನಿ ಕಿರೀಟ!
ತನ್ನ ಪ್ರೀಪೇಯ್ಡ್ ಬಳಕೆದಾರರು, ಬೇರೆ ಸೇವಾದಾರ ಕಂಪನಿಗೆ ತೆರಳದಂತೆ ತಡೆಯಲು ಜಿಯೋ ಈ ವಿಶೇಷ ಯೋಜನೆ ಪ್ರಕಟಿಸಿದೆ ಎನ್ನಲಾಗಿದೆ. ಈ ಆಫರ ಕೇಬಲ ಮೊಬೈಲ್ ಆ್ಯಪ್‌ನಲ್ಲಿ ಲಭ್ಯವಿದೆ. ವೆಬ್‌ಸೈಟ್‌ನಲ್ಲಿ ಸಿಗುತ್ತಿಲ್ಲ.
ಎಲ್ಲಿ ಲಭ್ಯ: ಮೈ ಜಿಯೋ ಆ್ಯಪ್‌ನಲ್ಲಿ ರೀಚಾಜ್‌ರ್ ಆಪ್ಷನ್ ಕ್ಲಿಕ್ ಮಾಡಿದರೆ ಬಲ ತುದಿಯಲ್ಲಿ ಮೋರ್ ಎಂಬ ವಿಭಾಗ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಅತ್ಯಂತ ಕೆಳ ಭಾಗದಲ್ಲಿ ವ್ಯಾಲ್ಯೂ ಎಂಬ ಆಪ್ಷನ್ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಅದರ್ ಪ್ಲ್ಯಾನ್ ಎಂಬ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ 1 ರು. ಆಫರ್ ಲಭ್ಯವಿರುತ್ತದೆ.
ಪ್ರೀಪೇಯ್ಡ್ ಗ್ರಾಹಕರಿಗೆ ಪೋರ್ಟ್ ಎಸ್‌ಎಂಎಸ್ ಸೌಲಭ್ಯಕ್ಕೆ ಟ್ರಾಯ್ ಆದೇಶ
ಎಸ್‌ಎಂಎಸ್ ಸೌಲಭ್ಯ ನೀಡದೇ ಇರುವುದರಿಂದ ಗ್ರಾಹಕರಿಗೆ ಬೇರೆ ನೆಟ್‌ವರ್ಕ್ ಗೆ ಪೋರ್ಟ್ ಆಗಲು ಕಷ್ಟವಾಗುತ್ತಿದೆ ಎಂದು ವೋಡಾಫೋನ್ ವಿರುದ್ಧ ಜಿಯೋ ಸಂಸ್ಥೆ ಟ್ರಾಯ್‌ಗೆ ದೂರು ನೀಡಿದ್ದ ಬೆನ್ನಲ್ಲೇ, ಯಾವುದೇ ಸಿಮ್ ಬಳಕೆದಾರರಿಗೆ ಅಗತ್ಯವಿರುವ ಪೋರ್ಟ್ ಔಟ್ ಎಸ್‌ಎಂಎಸ್ ಸೌಲಭ್ಯ ನೀಡುವಂತೆ ದೂರ ಸಂಪರ್ಕ ನಿಯಂತ್ರಣ ಸಂಸ್ಥೆ( ಟ್ರಾಯ್) ಟೆಲಿಕಾಂ ಕಂಪೆನಿಗಳಿಗೆ ನಿರ್ದೇಶಿಸಿದೆ.
Global Environment Impact ರಿಲಯನ್ಸ್ ಜಿಯೋಗೆ ಇಂಗಾಲ ನಿಯಂತ್ರಿಸಿ ಪರಿಸರ ಉಳಿಸುವ ದೇಶದ ಕಂಪನಿ ಕಿರೀಟ!
ತಮ್ಮ ಪ್ರೀಪೇಯ್ಡ್ ಅಕೌಂಟ್‌ನಲ್ಲಿ ಸಾಕಷ್ಟುಬ್ಯಾಲೆನ್ಸ್ ಇದ್ದರೂ ಇತರೆ ಮೊಬೈಲ್ ನೆಟ್‌ವರ್ಕ್ಗೆ ಪೋರ್ಟ್ ಆಗಲು ಯುಪಿಸಿ (ಯೂನಿಕ್ ಪೋರ್ಟಿಂಗ್Ü ಕೋಡ್) ಪಡೆಯಲು 1900 ನಂಬರ್‌ಗೆ ಎಸ್‌ಎಂಎಸ್ ಕಳಿಸಬೇಕು. ಆದರೆ ಪ್ರೀಪೇಯ್ಡ್ ಗ್ರಾಹಕರಿಗೆ ಕೆಲ ಟೆಲಿಕಾಂ ಕಂಪೆನಿಗಳು ಎಸ್‌ಎಂಎಸ್ ಸೌಲಭ್ಯ ನೀಡಿಲ್ಲವಾದ್ದರಿಂದ ಗ್ರಾಹಕರು ಎಸ್‌ಎಂಎಸ್ ಸೌಲಭ್ಯಕ್ಕೆ ಆಗ್ರಹಿಸಿದ್ದರು. ಈ ಹಿನ್ನೆಲೆ ಟ್ರಾಯ್ ಎಲ್ಲಾ ಮೊಬೈಲ್ ಕಂಪೆನಿಗಳಿಗೂ ತಕ್ಷಣವೇ ಗ್ರಾಹಕರಿಗೆ ಪೋರ್ಟ್ ಔಟ್ ಎಸ್‌ಎಂಎಸ್ ಸೌಲಭ್ಯ ನೀಡುವಂತೆ ಆದೇಶಿಸಿದೆ.