Realme GT 2 Pro ಏಪ್ರಿಲ್ 7ಕ್ಕೆ ಭಾರತದಲ್ಲಿ ಲಾಂಚ್: ಬೆಲೆ ಎಷ್ಟು?

By Suvarna News  |  First Published Mar 24, 2022, 3:15 PM IST

*ಕಳೆದ ಜನವರಿಯಲ್ಲಿ ಚೀನಾದಲ್ಲಿ ಲಾಂಚ್ ಆಗಿದ್ದ ಫೋನ್ ಇದೀಗ ಭಾರತದ ಮಾರುಕಟ್ಟೆಗೆ ಬರಲಿದೆ
*ಈ ಸ್ಮಾರ್ಟ್‌ಫೋನಿನಲ್ಲಿ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ
*ಸಾಕಷ್ಟು ಫೀಚರ್‌ಗಳನ್ನು ಈ ರಿಯಲ್‌ಮಿ ಜಿಟಿ 2 ಪ್ರೋ ಸ್ಮಾರ್ಟ್‌ಫೋನ್ ಒಳಗೊಂಡಿದೆ.


 Realme GT 2 Pro:‌ ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಮತ್ತು  ಬಜೆಟ್ ಸ್ಮಾರ್ಟ್‌ಫೋನುಗಳ ಮೂಲಕ ಗ್ರಾಹಕ ವರ್ಗವನ್ನು ಸೃಷ್ಟಿಸಿಕೊಂಡಿರುವ ರಿಯಲ್‌ಮಿ ಕಂಪನಿ ಇದೀಗ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧತೆ ಆರಂಭಿಸಿದೆ. ಏಪ್ರಿಲ್ 7ರಂದು ಕಂಪನಿಯು ರಿಯಲ್‌ಮಿ ಜಿಟಿ 2 ಪ್ರೋ (Realme GT 2 Pro) ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ. ಈ ಫೋನ್ ಬಿಡುಗಡೆಯು ಈಗಾಗಲೇ ಸಾಕಷ್ಟು ಚರ್ಚೆಯಲ್ಲಿತ್ತು. ಈಗ ಕಂಪನಿಯೇ ಫೋನ್ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿದೆ. ಚೀನಾ ಮೂಲದ ರಿಯಲ್‌ಮಿ ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು ಮೊದಲಿಗೆ, ಕಳೆದ ಜನವರಿಯಲ್ಲಿ ಚೀನಾ ಮಾರುಕಟ್ಟೆಗೆ ಪರಿಚಯ ಮಾಡಿತ್ತು.

ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ ಎಷ್ಟಿರಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ಚೀನಾದಲ್ಲಿ  ಬಿಡುಗಡೆಯಾದ ಫೋನ್ ಬೆಲೆಯ ಮಾಹಿತಿಯನ್ನು ಪರಿಗಣಿಸಿದರೆ ರಿಯಲ್‌ಮಿ ಜಿಟಿ 2 ಪ್ರೋ ಸ್ಮಾರ್ಟ್‌ಫೋನ್ ಪ್ರೀಮಿಯಂ ಸಾಧನವಾಗಿರಲಿದೆ ಎಂದು ಹೇಳಬಹುದು. ಸಾಕಷ್ಟು ಗಮನ ಸೆಳೆಯುವ ಫೀಚರ್ ಗಳನ್ನು ಹೊಂದಿರುವ ಈ ಫೋನ್‌ನಲ್ಲಿ ನೀವು ಅಕ್ಟಾಕೋರ್ ಸ್ನ್ಯಾಪ್‌ಡ್ರಾಗನ್ 8 ಜೆನ್ ಪ್ರೊಸೆಸರ್ ಕಾಣಬಹುದು. ಜತೆಗೆ, ಇನ್ನೂ ಹಲವು ವಿಶಿಷ್ಟ ಫೀಚರ್‌ ಮತ್ತು ಸೌಲಭ್ಯಗಳನ್ನು ಪಡೆಯಬಹುದಾಗಿದೆ.

Tap to resize

Latest Videos

 ಇದನ್ನೂ ಓದಿ: ASUS ZenBook 14 Flip OLED ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು, ವಿಶೇಷತೆಗಳೇನು?

ವಿಶೇಷತೆಗಳೇನು?:  ರಿಯಲ್ ಮಿ ಜಿಟಿ 20 ಪ್ರೋ ಸ್ಮಾರ್ಟ್‌ಫೋನ್ (Realme GT 2 Pro) Android 12 ಜೊತೆಗೆ Realme UI 3.0, 6.7-ಇಂಚಿನ 2K (1,440x3,216 ಪಿಕ್ಸೆಲ್‌ಗಳು) LTPO 2.0 AMOLED 'ಸೂಪರ್ ರಿಯಾಲಿಟಿ' ಪ್ರದರ್ಶಕವನ್ನು ಒಳಗೊಂಡಿದ್ದು, ಅದು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ Glass ಸ್ಕ್ರೀನ್ ರಕ್ಷಣೆಯನ್ನು ಹೊಂದಿದೆ. ಈ ಫೋನ್ 12GB RAM ಜೊತೆಗೆ Snapdragon 8 Gen 1 SoCನಿಂದ ಚಾಲಿತವಾಗಿದೆ.  512 ಜಿಬಿ ಸ್ಟೋರೇಜ್ ಮೆಮೊರಿ ಇದೆ. 

 

Get ready to welcome the !

The World's First Sustainably Designed Smartphone is aesthetically pleasing, environmentally friendly, and durable..

Launching at 12:30 PM, 7th April on our official channels.

Know more: https://t.co/pgZ3465uDC pic.twitter.com/IqY4pm6tsm

— realme (@realmeIndia)

 

50 ಮೆಗಾ ಪಿಕ್ಸೆಲ್ ಕ್ಯಾಮೆರಾ: ರಿಯಲ್‌ಮಿ ಜಿಟಿ 2 ಪ್ರೋ ಸ್ಮಾರ್ಟ್‌ಫೋನ್ ಕ್ಯಾಮೆರಾಗಳ ಬಗ್ಗೆ ಹೇಳುವುದಾದರೆ, ಒಟ್ಟು ಮೂರು ಕ್ಯಾಮೆರಾಗಳನ್ನು ಕಂಪನಿಯು ಫೋನ್ ಹಿಂಬದಿಯಲ್ಲಿ ನೀಡಿದೆ. ಅಂದರೆ, ಟ್ರಿಪಲ್ ಕ್ಯಾಮೆರಾ ಸೆಟ್ ಅಪ್‌ ಕಾಣಬಹುದು.  ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಆಗಿದೆ. ಇನ್ನುಳಿದಂತೆ 2 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿದೆ. ಇನ್ನು, ವಿಡಿಯೋ ಚಾಟಿಂಗ್ ಮತ್ತು ಸೆಲ್ಫಿಗಾಗಿ ಕಂಪನಿಯು ಫೋನ್ ಫ್ರಂಟ್‌ನಲ್ಲಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಈ ಸೆಗ್ಮೆಂಟ್‌ನ ಇತರ ಫೋನುಗಳಿಗೆ ಹೋಲಿಸಿದರೆ, ಸೆಲ್ಫಿ ಕ್ಯಾಮೆರಾ ಪಿಕ್ಸೆಲ್ ಹೆಚ್ಚೇ ಇದೆ. 

ಇದನ್ನೂ ಓದಿಭಾರತದಲ್ಲಿ ಶೀಘ್ರವೇ OnePlus Nord Smartwatch ಲಾಂಚ್? ಏನೆಲ್ಲ ವಿಶೇಷತೆಗಳು?

ಕನೆಕ್ಟಿವಿಟಿ ಆಪ್ಷನ್ಸ್ ಏನು?: ರಿಯಲ್ ಮಿ ಜಿಟಿ 2 ಪ್ರೋ ಸ್ಮಾರ್ಟ್‌ಫೋನ್ 5ಜಿ, 4ಜಿ, ಎಲ್‌ಟಿಇ, ವೈ ಫೈ 6, ಬ್ಲೂಟೂಥ್ ವಿ5.2, ಜಿಪಿಎಸ್/ಎ-ಜಿಪಿಎಸ್, ಎನ್‌ಎಫ್‌ಸಸಿ ಮತ್ತು ಯುಎಸ್‌ಬಿ ಸಿ ಪೋರ್ಟ್ ಸಪೋರ್ಟ್ ಮಾಡುತ್ತದೆ. ಕಂಪನಿಯು 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದ್ದು, ಅದು 64 ವ್ಯಾಟ್ ಸೂಪರ್‌ಡಾರ್ಟ್ ಚಾರ್ಜ್ ಎನ್ಹಾನ್ಸ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

ಚೀನಾ ಮತ್ತು ಯುರೋಪ್ ಮಾರುಕಟ್ಟೆಗೆ ಲಾಂಚ್ ಆಗಿರುವ ಈ ಫೋನ್ ಬೆಲೆ ನೋಡಿದರೆ ಖಂಡಿತವಾಗಿಯೂ ಇದು ಪ್ರೀಮಿಯಂ ಫೋನ್ ಎನಿಸದೇ ಇರದು. ಹಾಗಾಗಿ, ಭಾರತದಲ್ಲೂ ತುಸು ತುಟ್ಟಿಯ ಫೋನ್ ಆಗಬಹುದು ಎಂದು ನಿರೀಕ್ಷಿಸಬಹುದು. ಹಾಗೆಯೇ ಈ ಸ್ಮಾರ್ಟ್‌ಫೋನ್ ಪೇಪರ್ ಗ್ರೀನ್, ಪೇಪರ್ ವೈಟ್ ಮತ್ತು ಸ್ಟೀಲ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಈ ಸ್ಮಾರ್ಟ್‌ಫೋನ್ ದೊರೆಯಲಿದೆ.

click me!