ರಕ್ಷಾಬಂಧನ ಬಂತಲ್ವಾ.. ತಂಗಿಗೆ ಗಿಫ್ಟ್‌ ಕೊಡೋಕೆ ಇಲ್ಲಿವೆ ನೋಡಿ 7 ಸಾವಿರ ರೂಪಾಯಿ ಒಳಗಿನ ಮೊಬೈಲ್ಸ್‌!

By Santosh NaikFirst Published Aug 16, 2024, 5:04 PM IST
Highlights

Smartphones under 7000: ವರಮಹಾಲಕ್ಷ್ಮೀ ಹಬ್ಬ ಮುಗಿತು. ಸೋಮವಾರ ರಕ್ಷಾಬಂಧನದ ಸಂಭ್ರಮ. ತಂಗಿಗೆ ಏನ್‌ ಗಿಫ್ಟ್‌ ಕೊಡ್ಬೇಕು ಅನ್ನೋ ಆಲೋಚನೆಯಲ್ಲಿದ್ರೆ, ಇಲ್ಲಿವೆ ನೋಡಿ ಕೇವಲ 7 ಸಾವಿರ ರೂಪಾಯಿ ಒಳಗಿನ ಸಖತ್‌ ಮೊಬೈಲ್ಸ್‌.
 

ಬೆಂಗಳೂರು (ಆ.16): ರಾಜ್ಯದಲ್ಲಿ ಇಂದು ಭರ್ಜರಿಯಾಗಿ ವರಮಹಾಲಕ್ಷ್ಮೀ ಹಬ್ಬ ಆಚರಣೆ ಮಾಡಲಾಗಿದೆ. ಸೋಮವಾರ ಅಣ್ಣ-ತಂಗಿಯರ ಹಬ್ಬ ರಕ್ಷಾಬಂಧನ. ಆಗಸ್ಟ್‌ 19ಕ್ಕೆ ಇಡೀ ದೇಶ ಇದನ್ನು ಇನ್ನಷ್ಟು ಖುಷಿಯಿಂದ ಆಚರಣೆ ಮಾಡುತ್ತದೆ. ಆದರೆ, ಪ್ರತಿ ಬಾರಿ ರಕ್ಷಾಬಂಧನ ಹಬ್ಬ ಬರುವ ಮುನ್ನವೇ ಅಣ್ಣನಿಗೆ ಫುಲ್‌ ಟೆನ್ಶನ್‌. ತಂಗಿಗೆ ಯಾವ ಗಿಫ್ಟ್‌ ನೀಡ್ಬೇಕು ಅನ್ನೋದರ ಟೆನ್ಶನ್‌ ಅವರಲ್ಲಿ ಇರೋದು ಸಹಜ. ಯಾವ ಗಿಫ್ಟ್‌ ಕೊಟ್ರೆ ತಂಗಿಗೆ ಇಷ್ಟವಾಗುತ್ತೆ ಅನ್ನೋ ಗೊಂದಲವೂ ಇರುತ್ತದೆ. ಆದರೆ, ಮೊಬೈಲ್‌ ಅಂದ್ರೆ ಇಷ್ಟ ಪಡದೇ ಇದ್ದವರು ಯಾರಿದ್ದಾರೆ ಹೇಳಿ. ಒಂದೊಳ್ಳೆಯ ಫೋನ್‌ ಬೇಕು ಅಂತಾ ತಂಗಿ ಕೂಡ ನಿಮ್ಮಲ್ಲಿ ಕೇಳಿದ್ದಿರಬಹುದು. ಫ್ರೆಂಡ್ಸ್‌ ಜೊತೆ ಪಾರ್ಟಿ ಮಾಡೋಕೆ ಸಾವಿರಾರು ರೂಪಾಯಿ ಖರ್ಚು ಮಾಡೋ ಅಣ್ಣ, ರಕ್ಷಾಬಂಧನದಂದು ತಂಗಿಗೆ ಒಂದೊಳ್ಳೆ ಮೊಬೈಲ್‌ ಫೋನ್‌ ಕೊಡ್ಸಿಲ್ಲ ಅಂದ್ರೆ ಆ ಸಂಭ್ರಮಕ್ಕೆ ಮಜಾ ಇರೋದಿಲ್ಲ. ತಂಗಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಮೊಬೈಲ್‌ ಕೊಡಿಸಬೇಕು ಅನ್ನೋ ಅಣ್ಣ ನೀವಾಗಿದ್ದರೆ, ಇಲ್ಲಿವೆ ನೋಡಿ ನಿಮಗೆ ಆಪ್ಶನ್ಸ್. ಬರೀ 7 ಸಾವಿರ ರೂಪಾಯಿಯ ಒಳಗೆ ಅಮೇಜಾನ್‌ ವೆಬ್‌ಸೈಟ್‌ ನಿಮಗೆ ಸಖತ್‌ ಆಗಿರೋ ಮೊಬೈಲ್ಸ್‌ಅನ್ನು ಆಫರ್‌ನಲ್ಲಿ ಇರಿಸಿದೆ.

ನೋಕಿಯಾ ಜಿ42 5ಜಿ (Nokia G42 5G): ನೋಕಿಯಾ ಜಿ42 5ಜಿ ಮೊಬೈಲ್‌ ಫೋನ್‌ನ 4GB RAM ಮತ್ತು 128GB ಸ್ಟೋರೇಜ್ ಮಾಡೆಲ್ ಹೊಂದಿದ್ದು, ಅಮೇಜಾನ್‌ನಲ್ಲಿ 10 ಸಾವಿರ ರೂಪಾಯಿಗೆ ಲಭ್ಯವಿದೆ. 6.56 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನು ಈ ಫೋನ್‌ ಹೊಂದಿದೆ. ಇದಲ್ಲದೆ, ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನಲ್ಲಿ ಪೋನ್‌ ಕೆಲಸ ಮಾಡುತ್ತದೆ. ಫೋಟೋಗ್ರಫಿಗಾಗಿ, ಫೋನ್ 50MP ಮತ್ತು 2MP ಕ್ಯಾಮೆರಾವನ್ನು ಹೊಂದಿದೆ. ಫೋನ್‌ನ ಬ್ಯಾಟರಿ 5000mAh ಆಗಿದ್ದು, ಇದರೊಂದಿಗೆ ವೇಗದ ಚಾರ್ಜಿಂಗ್ ಬೆಂಬಲ ಲಭ್ಯವಿದೆ. ಇದು 3 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ, 2 ವರ್ಷಗಳ ಆಂಡ್ರಾಯ್ಡ್ ಅಪ್‌ಗ್ರೇಡ್ ಲಭ್ಯವಿದೆ.

Latest Videos

ರೆಡ್ಮಿ ಎ3 (Redmi A3): ಒಂದು ಕಾಲದಲ್ಲಿ ಕಡಿಮೆ ಬೆಲೆಯ ಮೊಬೈಲ್‌ಅನ್ನು ಆಳುತ್ತಿದ್ದ ಸ್ಯಾಮ್‌ಸಂಗ್‌ನ ಸ್ಥಾನವನ್ನು ರೆಡ್ಮಿ ಎ3 ಪಡೆದುಕೊಂಡಿದೆ. 3 RAM ಮತ್ತು 64GB ಸ್ಟೋರೇಜ್ ಮಾಡೆಲ್‌ನ ಈ ಫೋನ್‌ಅನ್ನು ಅಮೇಜಾನ್‌ನಲ್ಲಿ 6999 ರೂಪಾಯಿಗೆ ಖರೀದಿ ಮಾಡಬಹುದು. 6.71 ಇಂಚಿನ ಎಚ್‌ಡಿ ಡಿಸ್‌ಪ್ಲೇ ಇದರಲ್ಲಿದೆ. ಇದಲ್ಲದೆ, ಫೋನ್ ಮೀಡಿಯಾ ಟೆಕ್ ಹೆಲಿಯೊ ಜಿ 36 ಪ್ರೊಸೆಸರ್ ಅನ್ನು ಹೊಂದಿದೆ. ಫೋನ್ ಫೋಟೋಗ್ರಫಿಗಾಗಿ 8MP ಕ್ಯಾಮೆರಾವನ್ನು ಹೊಂದಿದೆ. ಫೋನ್‌ನ ಬ್ಯಾಟರಿ 5000mAh ಆಗಿದ್ದು, ಇದರೊಂದಿಗೆ ವೇಗದ ಚಾರ್ಜಿಂಗ್ ಬೆಂಬಲ ಲಭ್ಯವಿದೆ.

ಟೆಕ್ನೋ ಪಾಪ್‌ 8(TECNO POP 8): ಟೆಕ್ನೋ ಪಾಪ್‌ 8 ಫೋನ್‌ನ 4GB RAM ಮತ್ತು 64GB ಸ್ಟೋರೇಜ್ ಮಾಡೆಲ್‌ಗೆ ಅಮೇಜಾನ್‌ನಲ್ಲಿ 6899 ರೂಪಾಯಿ ಬೆಲೆ ಇದೆ. ಬ್ಯಾಂಕ್ ಕಾರ್ಡ್ ಮೂಲಕ ನೀವು ಈ ಫೋನ್‌ಗೆ ನೀವು 1250 ವರೆಗೆ ರಿಯಾಯಿತಿಯನ್ನು ಸಹ ಪಡೆಯಬಹುದು. ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, , ಫೋನ್ 6.56 ಇಂಚಿನ ಡಿಸ್ಪ್ಲೇ ಹೊಂದಿದೆ. ಇದಲ್ಲದೆ, ಫೋನ್ ಆಕ್ಟಾ-ಕೋರ್ T606 ಪ್ರೊಸೆಸರ್ ಅನ್ನು ಹೊಂದಿದೆ. ಫೋಟೊಗ್ರಫಿಗಾಗಿ 12MP ಕ್ಯಾಮೆರಾವನ್ನು ಫೋನ್‌ನಲ್ಲಿ ನೀಡಲಾಗಿದೆ. ಅದೇ ಸಮಯದಲ್ಲಿ, ಫೋನ್‌ 5000mAh ಬ್ಯಾಟರಿ ಹೊಂದಿದೆ.

ಪೋಕೋ ಸಿ65 (POCO C65):  ಪೋಕೋ ಸಿ65 ಫೋನ್‌ 4GB RAM ಮತ್ತು 128GB ಸ್ಟೋರೇಜ್ ಮಾಡೆಲ್ ಅನ್ನು ಅಮೇಜಾನ್‌ನಲ್ಲಿ 6,999 ರೂಪಾಯಿಗೆ ಖರೀದಿಸಬಹುದು. ಈ ಫೋನ್ 6.74-ಇಂಚಿನ HD+ ಡಿಸ್ಪ್ಲೇ ಹೊಂದಿದೆ. ಇದಲ್ಲದೆ, ಫೋನ್ ಮೀಡಿಯಾಟೆಕ್ ಹೆಲಿಯೊ ಜಿ 85 ಪ್ರೊಸೆಸರ್ ಅನ್ನು ಹೊಂದಿದೆ. ಫೋನ್ ಫೋಟೋಗ್ರಫಿಗಾಗಿ 50MP ಕ್ಯಾಮೆರಾವನ್ನು ಹೊಂದಿದೆ. ಫೋನ್‌ 5000mAh ಬ್ಯಾಟರಿ ಹೊಂದಿದೆ.

ವಿಶ್ವದ ಅತಿದೊಡ್ಡ ಏರ್‌ಲೈನ್‌ ಕಂಪನಿಗಳು, ಟಾಪ್‌ 10 ಲಿಸ್ಟ್‌ನಲ್ಲಿ ಭಾರತದ ಏಕೈಕ ಬ್ರ್ಯಾಂಡ್‌!

ಐಟೆಲ್‌ ಎ70(itel A70):  12GB RAM ಮತ್ತು 64GB ಸ್ಟೋರೇಜ್ ಮಾದರಿಯ ಐಟೆಲ್‌ ಎ70 ಫೋನ್ ಅನ್ನು ಅಮೇಜಾನ್‌ನಿಂದ 6,499 ರೂಪಾಯಿಗೆ ಖರೀದಿಸಬಹುದು. ಈ ಫೋನ್ 6.6-ಇಂಚಿನ HD+ IPS ಡಿಸ್ಪ್ಲೇ ಹೊಂದಿದೆ. ಇದಲ್ಲದೆ, ಫೋನ್ ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಫೋಟೋಗ್ರಫಿಗಾಗಿ, ಫೋನ್ 13MP, 8MP ಕ್ಯಾಮೆರಾವನ್ನು ಹೊಂದಿದೆ. ಫೋನ್‌ 5000mAh ಬ್ಯಾಟರಿ ಹೊಂದಿದೆ.

ಮಾರುತಿ ಸುಜುಕಿಯ ಮೇಡ್‌ ಇನ್‌ ಇಂಡಿಯಾ ಕಾರ್‌ಗೆ ಜಪಾನ್‌ನಲ್ಲೂ ಭಾರೀ ಬೇಡಿಕೆ, 1600 ಕಾರ್‌ ರಫ್ತು ಮಾಡಿದ ಕಂಪನಿ!

click me!