ಜಿಯೋದಿಂದ ಸೂಪರ್ ಪ್ಲಾನ್ - ಜಸ್ಟ್ 175 ರೂಪಾಯಿಗೆ ಡೇಟಾ ಜೊತೆ 12 OTT ಪ್ಲಾಟ್‌ಫಾರಂಗೆ ಎಂಟ್ರಿ

By Mahmad Rafik  |  First Published Aug 12, 2024, 7:11 PM IST

ಜಿಯೋ ಡೇಟಾ ಬಳಕೆದಾರರಿಗೆ ಸೂಪರ್ ಪ್ಲಾನ್ ತಂದಿದೆ.  ಇಲ್ಲಿ ನಿಮಗೆ 12 OTT ಪ್ಲಾಟ್‌ಫಾರಂಗಳನ್ನು ಉಚಿತವಾಗಿ ಪ್ರವೇಶ ಮಾಡಬಹುದಾಗಿದೆ.


ಮುಂಬೈ: ಜಿಯೋ ರೀಚಾರ್ಜ್ ಬೆಲೆ ಹೆಚ್ಚಳಾದ ಹಿನ್ನೆಲೆ ಲಕ್ಷಾಂತರ ಗ್ರಾಹಕರನ್ನು ಕಳೆದುಕೊಂಡಿದೆ. ಹೀಗಾಗಿ ಜಿಯೋ ರೀಚಾರ್ಜ್‌ನಲ್ಲಿ ಹೊಸ ಹೊಸ ಪ್ಲಾನ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ಹಿಂದಿರುಗಿ ತರುವ ಕೆಲಸವನ್ನು ಮಾಡುವ ಪ್ರಯತ್ನದಲ್ಲಿದೆ. ಉಳಿದಿರುವ ಬಳಕೆದಾರರನ್ನು ಉಳಿಸಿಕೊಳ್ಳಲು ಮುಂದಾಗಿದ್ದು, ಇದರ ಭಾಗವಾಗಿ ಜಿಯೋ ರೂ.200ಕ್ಕಿಂತ ಕಡಿಮೆ ಮೊತ್ತದ ಹೊಸ ಯೋಜನೆಯನ್ನು ತಂದಿದೆ. ಇತ್ತೀಚೆಗಷ್ಟೇ 336 ದಿನ ವ್ಯಾಲಿಟಿಡಿ ಸೇರಿ 4 ರಿಚಾರ್ಜ್ ಪ್ಲಾನ್ ಜಾರಿ ಮಾಡಿತ್ತು. ಇದೀಗ ಮತ್ತೊಂದು ಸೂಪರ್ ಪ್ಲಾನ್‌ನ್ನು ಜಿಯೋದಲ್ಲಿದೆ. ಆದ್ರೆ ಬಹುತೇಕರಿಗೆ ಇಷ್ಟು ದೊಡ್ಡ ಆಫರ್‌ಗಳನ್ನು ಹೊಂದಿರುವ ಕಡಿಮೆ ಬೆಲೆಯ ರೀಚಾರ್ಜ್‌ ಪ್ಲಾನ್ ತಿಳಿದಿಲ್ಲ. 

ನೀವು ಕೇವಲ 175 ರೂಪಾಯಿ ರೀಚಾರ್ಜ್ ಮಾಡುವ ಮೂಲಕ ಬರೋಬ್ಬರಿ 12 ಒಟಿಟಿ ಪ್ಲಾಟ್‌ಫಾರಂಗಳಿಗೆ ಉಚಿತವಾಗಿ ಲಾಗಿನ್ ಆಗಬಹುದು. ಈ 175 ರೂಪಾಯಿ ರೀಚಾರ್ಜ್‌ನಲ್ಲಿ ನಿಮಗೆ 10 ಜಿಬಿ ಡೇಟಾ ಸಿಗಲಿದೆ. 

Latest Videos

undefined

175 ರೂಪಾಯಿಯ ರೀಚಾರ್ಜ್ ಪ್ಲಾನ್ ಹೀಗಿದೆ.

10 ಜಿಬಿ ಡೇಟಾಗೆ 28 ದಿನದ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ ನಿಮಗೆ ಜಿಯೋ ಟಿವಿ ಮೊಬೈಲ್ ಆಪ್ ಮೂಲಕ ಸೋನಿ ಲಿವ್, ಜಿ5ಗೆ ಲಾಗಿನ್ ಆಗಬಹುದಾಗಿದೆ. ಜಿಯೋ ಟಿವಿಯಲ್ಲಿ ನಿಮಗೆ 800ಕ್ಕೂ ಅಧಿಕ ಟಿವಿ ಚಾನೆಲ್ ವೀಕ್ಷಿಸಬಹುದಾಗಿದೆ. 100ಕ್ಕೂ ಅಧಿಕ ಹೆಚ್‌ಡಿ ಚಾನೆಲ್ ವೀಕ್ಷಣೆ ಮಾಡಬಹುದು. ಪ್ಲಾನೆಟ್ ಮರಾಠಿ, ಚೌಪಾಲ್, ಡೊಕುಬೆ, ಎಪಿಕ್ ಆನ್‌ನಂತಹ OTT ಸೇವೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಪಡೆಯಬಹುದು.

 42,000 ಉದ್ಯೋಗಿಗಳಿಗೆ ಗೇಟ್‌ ಪಾಸ್ ಕೊಟ್ಟ ರಿಲಯನ್ಸ್ ಉದ್ಯಮ

ಒಟ್ಟಾರೆಯಾಗಿ ಈ ಯೋಜನೆಯ ಮೂಲಕ ನೀವು 10GB ಡೇಟಾ ಮತ್ತು 12 OTT ಪ್ಲಾಟ್‌ಫಾರ್ಮ್ ಸೇವೆಗಳನ್ನು ಉಚಿತವಾಗಿ ಪಡೆಯಬಹುದು. ಡಿಸ್ಕವರಿ ಪ್ಲಸ್, ಸೋನಿ ಎನ್‌ಎಕ್ಸ್‌ಟಿ, ಕಂಚಾ ಲಂಕಾ,ಎಪಿಕ್ ಆನ್ ಗಳನ್ನು ಸಹ ಜಿಯೋ ಆಪ್ ಮೂಲಕ ಎಂಟ್ರಿ ಮಾಡಬಹುದು. 

ಮಗ ಅನಂತ್ ಅಂಬಾನಿ ಮದುವೆ ಬಳಿಕ ಜಿಯೋ ಟ್ಯಾರಿಫ್ ಬೆಲೆಯನ್ನು ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲೇ ಉಳಿದ ಟೆಲಿಕಾಂ ಕಂಪನಿಗಳು ಸಹ ಟಾರಿಫ್ ಪ್ಲಾನ್ ಹೆಚ್ಚಿಸಿಕೊಂಡಿದ್ದವು. ಇತ್ತೀಚೆಗಷ್ಟೇ ಬಿಡುಗಡೆಯಾದ ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಟ್ ವಾರ್ಷಿಕ ವರದಿಯಲ್ಲಿ ನಿವ್ವಳ ಲಾಭ ಶೇ.5ರಷ್ಟು ಇಳಿಕೆಯಾಗಿದೆ. 42 ಸಾವಿರ ಉದ್ಯೋಗಿಗಳ ಕೆಲಸ ಕಡಿತವಾಗಿದೆ ಎಂದು ಮಾಹಿತಿ ನೀಡಿತ್ತು.

ಒಬ್ಬರ ಬಳಿ ಗರಿಷ್ಠ ಎಷ್ಟು ಸಿಮ್ ಕಾರ್ಡ್ ಇರಬೇಕು? ಮಿತಿ ಮೀರಿದ್ರೆ 3 ವರ್ಷ ಜೈಲು, 2 ಲಕ್ಷ ದಂಡ

click me!