ಪಬ್‌ಜೀ ಗೇಮ್‌ನಿಂದ ಮಕ್ಕಳಲ್ಲಿ ಅಪರಾಧ ಮನೋಭಾವ: ಇಸ್ರೋ ವಿಜ್ಞಾನಿ ಮಾಧವನ್‌ ನಾಯರ್‌ ಹೇಳಿಕೆ

By Suvarna News  |  First Published Jul 4, 2020, 10:44 AM IST

ಪಬ್‌ಜೀ ಗೇಮ್‌ನಿಂದ ಮಕ್ಕಳಲ್ಲಿ ಅಪರಾಧ ಮನೋಭಾವ: ನಾಯರ್‌| ಪಬ್‌ಜಿಯಿಂದ ಮಕ್ಕಳಲ್ಲಿ ಋುಣಾತ್ಮಕ ಚಿಂತನೆ| ಮಕ್ಕಳಲ್ಲಿ ಯುದ್ಧದ ಮನೋಭಾವ ಹೆಚ್ಚಳ| ಇಸ್ರೋ ವಿಜ್ಞಾನಿ ಮಾಧವನ್‌ ನಾಯರ್‌ ಹೇಳಿಕೆ


ನವದೆಹಲಿ(ಜು.04): ಮಕ್ಕಳು ಹಾಗೂ ಯುವಜನರಲ್ಲಿ ಭಾರೀ ಜನಪ್ರಿಯವಾಗಿರುವ ‘ಪಬ್‌ಜೀ’ ಆನ್‌ಲೈನ್‌ ಆಟದಿಂದಾಗಿ ಮಕ್ಕಳಲ್ಲಿ ಅಪರಾಧ ಮನೋಭಾವ ಹಾಗೂ ಋುಣಾತ್ಮಕ ಚಿಂತನೆ ಮನೋಭಾವ ಹೆಚ್ಚಳವಾಗುತ್ತದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ, ಖ್ಯಾತ ವಿಜ್ಞಾನಿ ಮಾಧವನ್‌ ನಾಯರ್‌ ಎಚ್ಚರಿಸಿದ್ದಾರೆ.

ನೂರಾರು ಜನರ ಜೀವ ಉಳಿಸಿದ ಪಬ್ ಜಿ, ಆಡೋರಿಗೆ ಇನ್ನುಂದೆ ಬೈಯಂಗಿಲ್ಲ!

Latest Videos

undefined

ಪಬ್‌ಜೀ ಆಟ ಮಕ್ಕಳನ್ನು ಅಪರಾಧ ಹಾಗೂ ಯುದ್ಧದ ಪ್ರಪಂಚಕ್ಕೆ ತೆರೆದುಕೊಳ್ಳುವಂತೆ ಮಾಡುತ್ತದೆ. ಈ ಆಟದಿಂದ ಕೌಶಲ್ಯಾಭಿವೃದ್ಧಿ ಅಥವಾ ಮಾನಸಿಕ ಸಾಮರ್ಥ್ಯ ಹೆಚ್ಚಳವಾಗುವುದಿಲ್ಲ. ಇದು ಅವರಲ್ಲಿ ಋುಣಾತ್ಮಕ ಚಿಂತನೆಗೆ ಕಾರಣವಾಗುತ್ತದೆ. ಇದೊಂದು ಅದೃಷ್ಟದ ಆಟವಾಗಿದ್ದು, ಗೆಲ್ಲುವ ತನಕ ಆಡಲೇ ಬೇಕು ಎನ್ನುವ ಮನಸ್ಥಿತಿಗೆ ಆಟಗಾರರು ಹೊಂದಿರುತ್ತಾರೆ. ಇದರಿಂದ ಸಮಯವೂ ವ್ಯರ್ಥ. ಈ ಆಟದಿಂದ ಮಕ್ಕಳಲ್ಲಿ ಆಪರಾಧ ಮನೋಭಾವ ಬೆಳೆಯುತ್ತದೆ ಹೊರೆತು ಬೇರೆನಿಲ್ಲ ಎಂದು ನಾಯರ್‌ ಹೇಳಿದ್ದಾರೆ.

ಚಿಕ್ಕಬಳ್ಳಾಪುರ: ಪಬ್‌ ಜೀ ಗೇಮ್‌ಗೆ 15ರ ಬಾಲಕ ಬಲಿ

ಪಬ್‌ಜೀ ಸಹಿತ ಮಕ್ಕಳ ಸಮಯ ಕಳೆಯುವ ಗೇಮ್‌ಗಳಿಗೆ ನಿರ್ಬಂಧ ವಿಧಿಸಬೇಕು ಎನ್ನುವ ಕೂಗು ಕೇಳಿ ಬರುತ್ತಿರವ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ ಅವರನ್ನು ಸಂದರ್ಶನ ಮಾಡಿದಾಗ ಹೀಗೆ ಅಭಿಪ್ರಯಿಸಿದ್ದಾರೆ. ದೇಶದಲ್ಲಿ ಸುಮಾರು 4-5 ಕೋಟಿಯಷ್ಟುಪಬ್‌ಜೀ ಬಳಕೆದಾರರಿದ್ದಾರೆ.

click me!