ಬ್ಯಾನ್ ಬಳಿಕ ಮೌನ ಮುರಿದ PUBG; ಚೀನಾ ಗೇಮಿಂಗ್ ಕಂಪನಿ ಜೊತೆ ಒಪ್ಪಂದ ರದ್ದು!

By Suvarna News  |  First Published Sep 8, 2020, 2:27 PM IST

ಕೇಂದ್ರ ಸರ್ಕಾರ ಚೀನಾ ಮೂಲದ ಹಾಗೂ ಚೀನಾ ಜೊತೆ ಸಂಪರ್ಕವಿರುವ ಆ್ಯಪ್‌ ಬ್ಯಾನ್ ಮಾಡುತ್ತಿದೆ. ಇತ್ತೀಚೆಗೆ ಜನಪ್ರಿಯ ಗೇಮಿಂಗ್ ಆ್ಯಪ್ PUBG ಬ್ಯಾನ್ ಮಾಡಿದೆ. ಹಲವು ದಿನಗಳ ಬಳಿಕ ಇದೀಗ PUBG ಕಾರ್ಪೋರೇಶನ್ ಈ ಕುರಿತು ಮಾತನಾಡಿದೆ. ಇಷ್ಟೇ ಅಲ್ಲ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.


ನವದೆಹಲಿ(ಸೆ.08): ಕೇಂದ್ರ ಸರ್ಕಾರ PUBG ಗೇಮಿಂಗ್ ಆ್ಯಪ್ ಬ್ಯಾನ್ ಮಾಡಿ ಕೆಲ ದಿನಗಳಾದರೂ ಸುಮ್ಮನಿದ್ದ PUBG ಕಾರ್ಪೋರೇಶನ್ ಕೊನೆಗೂ ಮೌನ ಮುರಿದಿದೆ. ಬ್ಯಾನ್ ಕುರಿತು ತನ್ನ ಆಭಿಪ್ರಾಯ ಹಂಚಿಕೊಂಡಿದೆ. ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದೇವೆ. ದೇಶದ ಭದ್ರತೆ ಹಾಗೂ ಬಳಕೆದಾರರ ಮಾಹಿತಿ ಗೌಪ್ಯತೆ ಪ್ರಮುಖವಾದದ್ದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪೂರಕವಾಗಿ ನಾವು ಕಾರ್ಯನಿರ್ವಹಿಸಲಿದ್ದೇವೆ ಎಂದಿದೆ.

 ಪಬ್‌ಜಿ ಅಕ್ಷಯ್‌ ಸಡ್ಡು: ಫೌ-ಜಿ ಆ್ಯಪ್‌ ಅಭಿವೃದ್ಧಿ!

Tap to resize

Latest Videos

undefined

PUBG ಗೇಮಿಂಗ್ ಆ್ಯಪ್‌ಗೆ ಭಾರತದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಭಾರತೀಯರ ಮಾಹಿತಿ ಹಾಗೂ ಭದ್ರತೆಗೆ PUBG ಕಾರ್ಪೋರೇಶನ್ ಬದ್ಧವಾಗಿದೆ. PUBG ಆ್ಯಪ್‌ಗೆ ಗೇಮ್ ಪೂರೈಕೆ ಮಾಡುತ್ತಿದ್ದ ಚೀನಾದ ಟೆನ್ಸೆಂಟ್ ಕಂಪನಿ ಜೊತೆ ಒಪ್ಪಂದ ರದ್ದು ಮಾಡುತ್ತೇವೆ. ಭಾರತದಲ್ಲಿ PUBG ಆ್ಯಪ್‌ಗೆ ಚೀನಾದ ಯಾವುದೇ ಸಂಬಂಧ ಇರುವುದಿಲ್ಲ ಎಂದು PUBG ಸ್ಪಷ್ಟಪಡಿಸಿದೆ.

ಟಿಕ್ ಟಾಕ್ ಹೋಯ್ತು, ಪಬ್‌ಜಿನೂ ಹೋಯ್ತು..ಇನ್ನು ಇರೋದ್ಯಾವುದು?

ಕೇಂದ್ರ ಸರ್ಕಾರ ಬ್ಯಾನ್ ನಿರ್ಧಾರದ ಗಂಭೀರತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಭಾರತದ ಕಾನೂನು ಹಾಗೂ ನಿಯಮಕ್ಕೆ ನಾವು ಬದ್ದರಾಗಿದ್ದೇವೆ. ಇದರಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತದಲ್ಲಿನ ಗೇಮಿಂಗ್ ಹಾಗೂ ಇತರ ಎಲ್ಲಾ ಮೇಲ್ವಿಚಾರಣೆಯನ್ನು PUBG ಕಾರ್ಪೋರೇಶನ್ ನಿರ್ವಹಿಸಲಿದೆ. ಚೀನಾದ ಯಾವುದೇ ಸಂಬಂಧ ಇರುವುದಿಲ್ಲ ಎಂದು PUBG ಹೇಳಿದೆ. ಭಾರತಕ್ಕ ಪೂರಕವಾದ ನೂತನ ಗೇಮಿಂಗ್ ಜೊತೆಗೆ PUBG ಮತ್ತೆ ಆರಂಭಿಸವು ವಿಶ್ವಾಸವಿದೆ ಎಂದು PUBG ಕಾರ್ಪೋರೇಶನ್ ಹೇಳಿದೆ. 

PUBG ಚೀನಾದ ಕಂಪನಿಯಲ್ಲಿ. ಇದು ಸೌತ್ ಕೊರಿಯಾ ಮೂಲದ ಗೇಮಿಂಗ್ ಕಂಪನಿಯಾಗಿದೆ. PUBG ಸೌತ್ ಕೊರಿಯಾದ ಬ್ಲೂ ಹೋಲ್ ವಿಡಿಯೋ ಗೇಮಿಂಗ್ ಕಂಪನಿಯ ಸಹ ಸಂಸ್ಥೆಯಾಗಿದೆ. PUBG ಆ್ಯಪ್‌ನಲ್ಲಿ ಹೆಚ್ಚು ರೋಚಕತೆ, ಸಾಹಸಮಯ ಗೇಮಿಂಗ್ ಪರಿಚಯಿಸಲು PUBG ಕಾರ್ಪೋರೇಶನ್, ಚೀನಾ ಮೂಲದ ಟೆನ್ಸೆಂಟ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. 

PUBGಯಲ್ಲಿ ಬರುವ ಎಲ್ಲಾ ಗೇಮ್ ಹಾಗೂ ಅದರ ಕೋಡಿಂಗ್ ಮಾಡಿರುವುದು ಚೀನಾದ ಟೆನ್ಸೆಂಟ್ ಕಂಪನಿಯಾಗಿದೆ. ಇದೀಗ ಈ ಟೆನ್ಸೆಂಟ್ ಕಂಪನಿ ಜೊತೆಗಿನ ಒಪ್ಪಂದವನ್ನು PUBG ರದ್ದು ಮಾಡಿದೆ. 

click me!