Oppo K10 ಮಾರ್ಚ್‌ 23ಕ್ಕೆ ಭಾರತದಲ್ಲಿ ಲಾಂಚ್: ಅಗ್ಗದ ಬೆಲೆಯಲ್ಲಿ ಉತ್ತಮ ಫೀಚರ್ಸ್!‌

By Suvarna NewsFirst Published Mar 22, 2022, 12:41 PM IST
Highlights

K10 ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾ, 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ ಮತ್ತು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನೊಂದಿಗೆ ಬರಲಿದೆ ಎಂದು ಓಪ್ಪೊ ದೃಢಪಡಿಸಿದೆ.

Tech Desk: ಭಾರತದಲ್ಲಿ Oppo K10 ಬಿಡುಗಡೆಯು ನಾಳೆ, ಅಂದರೆ ಮಾರ್ಚ್ 23 ರಂದು ನಡೆಯಲಿದೆ. ಭಾರತದಲ್ಲಿ ಒಪ್ಪೊದ ಹೊಸ K-ಸರಣಿಯಲ್ಲಿ ಮುಂಬರುವ ಫೋನ್‌ಗಳಲ್ಲಿ K10 ಮೊದಲನೆಯದು. ಒಪ್ಪೋ ಚೀನಾದಲ್ಲಿ K-ಸರಣಿ ಫೋನ್‌ಗಳನ್ನು ಮಾರಾಟ ಮಾಡುತ್ತದೆ, ಆದರೆ ಇದು ಮೊದಲ ಬಾರಿಗೆ ತನ್ನ ಚೀನಾ ಹೊರಗಿನ ಮಾರುಕಟ್ಟೆಗಳಿಗೆ ಈ ಸರಣಿಯನ್ನು ಬಿಡುಗಡೆ ಮಾಡುತ್ತಿದೆ.  ಬಿಡುಗಡೆಗೆ ಮುಂಚಿತವಾಗಿ, Oppo K10 ನ ಪ್ರಮುಖ ವಿಶೇಷಣಗಳನ್ನು ಬಹಿರಂಗಪಡಿಸಿದೆ. ತನ್ನ ವೆಬ್‌ಸೈಟ್‌ನಲ್ಲಿನ ಬ್ಯಾನರ್‌ನಲ್ಲಿ, Oppo K10 ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳೊಂದಿಗೆ ಬರಲಿದೆ ಎಂದು ದೃಢಪಡಿಸಿದ್ದು ಅದರಲ್ಲಿ ಒಂದು 50-ಮೆಗಾಪಿಕ್ಸೆಲ್ ಕ್ಯಾಮೆರಾ, 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ ಮತ್ತು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ತಿಳಿಸಿದೆ.

ಈ ಹಿಂದೆ ವರದಿಗಳು ತಿಳಿಸಿದಂತೆ Oppo K10 5G ಫೋನ್ 5G ಬೆಂಬಲ ಹೊಂದಿಲ್ಲ. ಇದು ಆಶ್ಚರ್ಯಕರವಾಗಿದ್ದು ಕಳೆದ ವರ್ಷ ಚೀನಾದಲ್ಲಿ ಬಿಡುಗಡೆಯಾದ ಹಿಂದಿನ K9 ಸರಣಿಯು 5G ಸಂಪರ್ಕವನ್ನು ಹೊಂದಿದೆ. ಕ್ವಾಲ್ಕಾಮ್ ಪ್ರೊಸೆಸರನ್ನು ಬಳಸುವ ಬದಲು, K9 5G ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್ನೊಂದಿಗೆ ಬರುತ್ತದೆ. K10 4G ಫೋನ್ ಆಗಿರುವುದರಿಂದ, ಇದು ಕೈಗೆಟುಕುವ ಫೋನ್ ಆಗುವ ಸಾಧ್ಯತೆಯಿದೆ. 

Latest Videos

ಇದನ್ನೂ ಓದಿ: ಬಹುನೀರಿಕ್ಷಿತ OnePlus 10 Pro ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ: ನಿರೀಕ್ಷಿತ ಬೆಲೆ ಎಷ್ಟು?

ಹಿಂದಿನ ಕೆಲವು ವರದಿಗಳ ಪ್ರಕಾರ, ಭಾರತದಲ್ಲಿ K10 ಬೆಲೆ 20,000 ರೂ.ಗಿಂತ ಕಡಿಮೆ ಇರುತ್ತದೆ. ಸ್ನಾಪ್‌ಡ್ರಾಗನ್ 680-ಚಾಲಿತ ಫೋನ್‌ಗಳೊಂದಿಗೆ ನಾವು ಮಾರುಕಟ್ಟೆಯನ್ನು ಗಮನಿಸಿದರೆ ಅಗ್ಗದ ಫೋನ್ ಬೆಲೆ 12,999 ರೂ. ಬೆಲೆಯಲ್ಲಿ ಲಭ್ಯವಿದೆ. ಹೀಗಾಗಿ K10 ಕೂಡ ಬಜೆಟ್‌ ಫೋನಾಗುವ ಸಾಧ್ಯತೆ ಇದೆ.

Oppo K10 ಫಿಚರ್ಸ್:‌ Oppo K10 6.5-ಇಂಚಿನ IPS LCD ಜೊತೆಗೆ 1080x1920 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ ಎಂದು 91Mobiles ವರದಿ ಹೇಳಿದೆ. ಫೋನ್‌ನಲ್ಲಿರುವ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ 6GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲ್ಪಡುತ್ತದೆ. 

ಫ್ಲಿಪ್‌ಕಾರ್ಟ್ ಮೈಕ್ರೋಸೈಟ್  ರಚಿಸಿದ್ದು ಅದು K10 ವಿಸ್ತರಿಸಬಹುದಾದ RAM ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ ಎಂದು ಖಚಿತಪಡಿಸುತ್ತದೆ.  Oppo K10, ವರದಿಯ ಪ್ರಕಾರ, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪನ್ನು ಹೊಂದಿರುತ್ತದೆ. Oppo K10 ನಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರುತ್ತದೆ ಎಂದು ಕಂಪನಿ ಬಹಿರಂಗಪಡಿಸಿದೆ. 

ಇದನ್ನೂ ಓದಿ: 4,500mAh ಬ್ಯಾಟರಿಯೊಂದಿಗೆ Redmi K40S ಲಾಂಚ್: ಏನೆಲ್ಲಾ ವಿಶೇಷತೆಗಳಿವೆ?

ಓಪ್ಪೋ ಇತರ ಎರಡು ಕ್ಯಾಮೆರಾಗಳ ವಿಶೇಷಣಗಳನ್ನು ಬಹಿರಂಗಪಡಿಸಲಿಲ್ಲ, ಆದರೆ ಫೋನ್‌ನ ಹಿಂಭಾಗದಲ್ಲಿ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್-ಸೆನ್ಸಿಂಗ್ ಕ್ಯಾಮೆರಾ ಇರುತ್ತದೆ ಎಂದು ವರದಿ ಹೇಳಿದೆ. ಸೆಲ್ಫಿಗಳಿಗಾಗಿ, AI ವೈಶಿಷ್ಟ್ಯಗಳೊಂದಿಗೆ 16-ಮೆಗಾಪಿಕ್ಸೆಲ್ ಕ್ಯಾಮೆರಾ ಇರುತ್ತದೆ ಎಂದು ಓಪ್ಪೋ ದೃಢಪಡಿಸಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯೊಂದಿಗೆ ಬರುತ್ತದೆ. K10 ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿರಲಿದೆ.

Oppo Enco Air 2: K10 ಜೊತೆಗೆ, ಓಪ್ಪೋ ಭಾರತದಲ್ಲಿ ಹೊಸ Enco Air 2 ಟ್ರು ವೈರ್‌ಲೆಸ್ ಇಯರ್‌ಬಡ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಎನ್ಕೋ ಏರ್ 2  ಮೂಲತಃ ಜನವರಿಯಲ್ಲಿ ಚೀನಾದಲ್ಲಿ ಪ್ರಾರಂಭಿಸಲಾಯಿತು. Oppo Enco Air 2 ಇಯರ್‌ಬಡ್‌ಗಳು 13.4mm ಡೈನಾಮಿಕ್ ಡ್ರೈವರ್‌ಗಳೊಂದಿಗೆ ಬರುತ್ತವೆ ಮತ್ತು ಮೊದಲ ತಲೆಮಾರಿನ ಏರ್‌ಪಾಡ್‌ಗಳ ವಿನ್ಯಾಸವನ್ನು ಹೋಲುತ್ತವೆ. 

click me!