*ಭಾರತದಲ್ಲಿ Motorola ಹೊಸ ಫೋನ್ ಲಾಂಚ್
*ಮೊದಲ Qualcomm Snapdragon 480 ಮೊಬೈಲ್
*8GB RAM 128GB Internal Memory
*ಡಿ. 10 ರಂದು ಭಾರತದಲ್ಲಿ ಬಿಡುಗಡೆ ಸಾಧ್ಯತೆ
ನವದೆಹಲಿ(ಡಿ. 05): ಮೊಟೊರೊಲಾ (Motorola) ಒಂದಾದ ಮೇಲೊಂದು ಹೊಸ ಸ್ಮಾರ್ಟ್‌ಫೋನ್ (Smartphone) ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ Moto G31 ಅನ್ನು ಅಧಿಕೃತ ಬಿಡುಗಡೆ ನಂತರ ಲೆನೋವೋ (Lenevo) ಮಾಲೀಕತ್ವದ ಸ್ಮಾರ್ಟ್‌ಫೋನ್ ಕಂಪನಿಯ Moto G51 ಈಗ ಭಾರತೀಯ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಕಂಪನಿಯು ಡಿಸೆಂಬರ್ 10 ರಂದು ಭಾರತದಲ್ಲಿ Moto G51 ಅನ್ನು ಅನಾವರಣಗೊಳಿಸಲಿದೆ ಎಂದು ಊಹಿಸಲಾಗಿದೆ. Moto G51 ಅನ್ನು Moto G31 ಮತ್ತು Moto G41 ಸೇರಿದಂತೆ ಇತರ ಮೊಟೊರೋಲಾ ಸ್ಮಾರ್ಟ್‌ಫೋನ್‌ಗಳೊಂದಿಗೆ ಕೆಲವು ದಿನಗಳ ಹಿಂದೆ ಜಾಗತಿಕ ಮಾರುಕಟ್ಟೆಯಲ್ಲಿ (Global Market) ಬಿಡುಗಡೆ ಮಾಡಲಾಗಿತ್ತು. ಈ ಸ್ಮಾರ್ಟ್‌ಫೋನ್ ಲಾಂಚ್ ಮೂಲಕ ಭಾರತದಲ್ಲಿ Qualcomm Snapdragon 480 SoC ಪ್ಲಸ್‌ನೊಂದಿಗೆ ಬರುವ ಮೊಟೊರೊಲಾದ ಮೊದಲ ಸ್ಮಾರ್ಟ್‌ಫೋನ್ ಆಗಿರುತ್ತದೆ.
ಮೊಟೊರೋಲಾ ಇನ್ನೂ ಅಧಿಕೃತವಾಗಿ ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಘೋಷಿಸಿಲ್ಲ. ಆದರೆ ಮೊಬೈಲ್ ಹಾಗೂ ತಂತ್ರಜ್ಞಾನದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವ ಟಿಪ್‌ಸ್ಟರ್ ಮುಕುಲ್ ಶರ್ಮಾ (Tipster Mukul Sharma) ಅವರು Moto G51 ಅನ್ನು ಡಿಸೆಂಬರ್ 10 ರಂದು ಭಾರತದಲ್ಲಿ ಅನಾವರಣಗೊಳಿಸಲಾಗುವುದು ಎಂದು ಟ್ವೀಟ್ (Tweet) ಮಾಡಿದ್ದಾರೆ. ಸ್ಮಾರ್ಟ್‌ಫೋನ್ 8GB ರೂಪಾಂತರದಲ್ಲಿ (RAM) 128GB ಆಂತರಿಕ ಮೆಮರಿಯೊಂದಿಗೆ ಲಭ್ಯವಿರಲಿದೆ. Moto G51 ಅನ್ನು ಕಂಪನಿಯು ಮತ್ತೊಂದು ಮಧ್ಯಮ-ಶ್ರೇಣಿ ಸ್ಮಾರ್ಟ್‌ಫೋನ್ ಎಂದು ಹೇಳಿದೆ.
undefined
[Exclusive] I can confirm the launch of another Motorola smartphone - on 10th Dec!
It will be a true 5G phone with 12 5G Bands & have India's first Snapdragon 480+ 5G Processor!
Motorola is on FIRE!
Your thoughts? pic.twitter.com/htVXX8j3NE
ಭಾರತದಲ್ಲಿ Moto G51 ನಿರೀಕ್ಷಿತ ಬೆಲೆ?
Moto G51 ಭಾರತದಲ್ಲಿ ರೂ 19,999 ಬೆಲೆಯೊಂದಿಗೆ ಬರಲಿದೆ ಎಂದು ಊಹಿಸಲಾಗಿದೆ. ಚೀನಾದಲ್ಲಿ (China) 8GB RAM + 128GB ಸ್ಟೋರೇಜ್ ಗಾಗಿ ಸ್ಮಾರ್ಟ್‌ಫೋನ್‌ನ ಬೆಲೆಯನ್ನು CNY 1,499 (ಸುಮಾರು ರೂ. 17,500) ನಿಗದಿಪಡಿಸಲಾಗಿದೆ. ಸ್ಮಾರ್ಟ್ಫೋನ್ ನೀಲಿ (Blue) ಮತ್ತು ಬೂದು ಗ್ರೇಡಿಯಂಟ್ ( Grey gradient ) ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ.
Moto G51: ವಿಶೇಷತೆಗಳು
Moto G51 120 Hz ರಿಫ್ರೆಶ್ ದರದೊಂದಿಗೆ, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ನ 6.8-ಇಂಚಿನ ಹೋಲ್-ಪಂಚ್ ಎಲ್‌ಸಿಡಿ ( Hole-punch LCD) ಹೊಂದಿದೆ. ಸ್ಮಾರ್ಟ್‌ಫೋನ್ 2.2GHz Qualcomm Snapdragon 480+ SoC ಪ್ರೊಸೆಸರ್ ಹೊಂದಿದ್ದು 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ನಲ್ಲಿ ಸಿಗಲಿದೆ. ಮೈಕ್ರೊ ಎಸ್‌ಡಿ ಕಾರ್ಡ್ (Micro SD Card) ಕೂಡ ಬಳಸಿ ಸ್ಟೋರೆಜ್ ವಿಸ್ತರಿಸಬಹುದಾಗಿದೆ. ಕ್ಯಾಮೆರಾದ ವಿಷಯದಲ್ಲಿ, Moto G51 ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್ (Trippla Camera setup) ಅನ್ನು ಹೊಂದಿದ್ದು ಇದು 50- ಮೆಗಾಪಿಕ್ಸೆಲ್ S5JKN1 ಪ್ರೈಮರಿ ಸೆನ್ಸರ್ ಒಳಗೊಂಡಿದೆ. ಜೊತೆಗೆ 8-ಮೆಗಾಪಿಕ್ಸೆಲ್ ಮತ್ತು 2-ಮೆಗಾಪಿಕ್ಸೆಲ್ ಸೆನ್ಸರ್ ಕೂಡ ಒಳಗೊಂಡಿದೆ. ಮುಂಭಾಗದಲ್ಲಿರುವ ಕ್ಯಾಮೆರಾ (Front Camera) ಬಗೆಗಿನ ವಿಶೇಷಣಗಳನ್ನು ಬಹಿರಂಗಪಡಿಸಲಾಗಿಲ್ಲ.
Amazon Offers: iPhone 12 Pro ಖರೀದಿ ಮೇಲೆ ಭರ್ಜರಿ ರಿಯಾಯಿತಿ! ಈ ಆಫರ್ ಮಿಸ್ ಮಾಡ್ಕೋಬೇಡಿ!
Moto G51 10W ವೇಗದ ಚಾರ್ಜಿಂಗ್‌ಗೆ (Fast Charging) ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಇದು Dolby Atmos ಬೆಂಬಲದೊಂದಿಗೆ ಬರುತ್ತದೆ. ಸಂಪರ್ಕಕ್ಕಾಗಿ, Moto G51 5G ಬೆಂಬಲ, Wi-Fi 5, ಬ್ಲೂಟೂತ್ v5.2, GPS, USB ಟೈಪ್-C ಪೋರ್ಟ್ ಮತ್ತು 3.5mm ಆಡಿಯೊ ಜ್ಯಾಕ್‌ನೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ (Finger Print Sensor) ಕೂಡ ಇದೆ.