ಅತ್ಯಾಕರ್ಷಕ, ಹೊಸಬರು ಖರೀದಿಸಬಲ್ಲ ನಯವಾದ ಕಾಂಪಾಕ್ಟ್ ಸ್ಮಾರ್ಟ್‌ಫೋನ್ OPPO A55!

By Suvarna News  |  First Published Oct 5, 2021, 4:11 PM IST
  • ಒಪ್ಪೊ ಬಿಡುಗಡೆ ಮಾಡಿದ ಕೈಗೆಟುಕುವ ಬೆಲೆ ಸ್ಮಾರ್ಟ್‌ಫೋನ್‌ಗಳಲ್ಲಿ OPPO A55
  • ಬ್ಯಾಟರಿ ಖಾಲಿಯಾಗುವ ಆತಂಕವಿಲ್ಲ, 18W ಫಾಸ್ಟ್ ಚಾರ್ಜ್ ಮೂಲಕ ನಿಮಿಷಗಳಲ್ಲಿ ಫುಲ್ ಚಾರ್ಜ್
  • 50MP AI ಟ್ರಿಪಲ್ ಕ್ಯಾಮಾರ, 64GB ಹಾಗೂ 128GB ವೇರಿಯೆಂಟ್ ಲಭ್ಯ
     

ಒಪ್ಪೊ ಬಿಡುಗಡೆ ಮಾಡಿದ ಕೈಗೆಟುಕುವ ಬೆಲೆ ಸ್ಮಾರ್ಟ್‌ಫೋನ್‌ಗಳಲ್ಲಿ OPPO A55 ಇತ್ತೀಚೆಗಿನ ಹೊಚ್ಚ ಹೊಸ A ಸಿರೀಸ್ ಸ್ಮಾರ್ಟ್‌ಫೋನ್ ಆಗಿದೆ. ಈ ಹ್ಯಾಂಡ್‌ಸೆಟ್ ಚಾಲ್ತಿಯಲ್ಲಿರುವ ವಿನ್ಯಾಸ ಹೊಂದಿದೆ. ನೀವು ಹೆಚ್ಚು ಸ್ಟೈಲೀಶ್, ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಮೊಬೈಲ್ ಫೋನ್ ಹುಡುಕುತ್ತಿದ್ದರೆ, OPPO A55 ಅತ್ಯುತ್ತಮ ಆಯ್ಕೆಯಾಗಿದೆ. 
OPPO A55 ಸ್ಪೋರ್ಟ್ಸ್ ಸ್ಮಾರ್ಟ್‌ಫೋನ್ ವಿಸ್ತಾರವಾದ IPS LCD ಡಿಸ್‌ಪ್ಲೇ,  5000mAh ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಫೋನ್‌ನಲ್ಲಿರುವ ಹಲವು ವಿಶೇಷತೆಗಳ ಪೈಕಿ 50MP AI ಟ್ರಿಪಲ್ ಕ್ಯಾಮಾರ ಕೂಡ ಒಂದಾಗಿದೆ. ಫೈಲ್, ಇಮೇಜ್, ವಿಡಿಯೋ ಸೇರಿದಂತೆ ಇನ್ನಿತರ ಸ್ಟೋರೇಜ್‌ಗೆ 64GB ಹಾಗೂ 128GB ವೇರಿಯೆಂಟ್ ಲಭ್ಯವಿದೆ. ಈ ಸ್ಟೋರೇಜನ್ನು ಮೈಕ್ರೋ  SD ಕಾರ್ಡ್ ಬಳಸಿ 256GBವರೆಗೆ ವಿಸ್ತರಿಸಲು ಸಾಧ್ಯವಿದೆ. ಹಲವು ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದೆ. ಈ ಫೋನ್ ಜಗತ್ತಿನಾದ್ಯಂತ ಬಳಕೆಗಾರರಿಗೆ ಅತ್ಯುತ್ತಮ ಹಾಗೂ ಪರಿಪೂರ್ಣ ಆಯ್ಕೆಯಾಗಿದೆ. OPPO A55 ಫೋನ್ ಎರಡು ಟ್ರೆಂಡಿ ಬಣ್ಣಗಳಲ್ಲಿ ಲಭ್ಯವಿದೆ. 

Tap to resize

Latest Videos

undefined

OPPO A55 ಸ್ಮಾರ್ಟ್‌ಫೋನ್ ಲುಕ್ ಹಾಗೂ ಡಿಸೈನ್ ಕುರಿತು ಹೇಳುವುದಾದರೆ,  8.4mm ನಯವಾದ ಹಾಗೂ ಸ್ಲಿಮ್ ಡಿಸೈನ್ ಹೊಂದಿದೆ. ಇದರ ತೂಕ 193 ಗ್ರಾಂ. ಇದರ ಜೊತೆಗೆ ನೀವು 16.55 cm ಪಂಚ್ ಹೋಲ್  LCD ಡಿಸ್‌ಪ್ಲೇ(60Hzರಿಫ್ರೆಶ್ ರೇಟ್)ಕೂಡ ಪಡೆಯಲಿದ್ದೀರಿ. ಇದರಿಂದ ಬಳಕೆದಾರರು ಅದೆಷ್ಟೆ ಹೊತ್ತು ಮೊಬೈಲ್ ನೋಡಿದರೂ ಕಣ್ಣಿಗೆ ಆಯಾಸವಾಗುವುದಿಲ್ಲ ಹಾಗೂ ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ. ಕಣ್ಣಿನ ಆರೈಕೆಯಲ್ಲೂ ಈ ಫೋನ್ ಕಾಳಜಿ ವಹಿಸಲಿದೆ. 89.2% ಸ್ಕ್ರೀನ್ ಟು ಬಾಡಿ ಅನುಪಾತದಿಂದ ಫೋನ್ ಲುಕ್ ಹೆಚ್ಚಿಸಿದೆ.  ರೇನ್‌ಬೋ ಬ್ಲೂ ಮತ್ತು ಸ್ಟಾರಿ ಬ್ಲಾಕ್ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿದೆ.

ಫೋನ್ ಬ್ಯಾಟರಿ ಅತ್ಯುತ್ತಮವಾಗಿದ್ದು, ಪದೇ ಪದೇ ಚಾರ್ಜ್ ಮಾಡುವ ಅವಶ್ಯಕತೆ ಇಲ್ಲ. 5000mAh ಬ್ಯಾಟರಿ ಪ್ಯಾಕ್‌ ಹೊಂದಿದೆ. ಸೂಪರ್ ಪವರ್ ಸೇವಿಂಗ್ ಮೋಡ್ ಮತ್ತು ಆಪ್ಟಿಮೈಸ್ಡ್ ನೈಟ್ ಚಾರ್ಜಿಂಗ್‌ನೊಂದಿಗೆ ನಿಮಗೆ ಬ್ಯಾಟರಿ ಖಾಲಿಯಾಗುವ ಆತಂಕ ಎದುರಾಗುವುದಿಲ್ಲ. 18W ಫಾಸ್ಟ್ ಚಾರ್ಜ್ ಇರುವುದರಿಂದ OPPO A55 ಫೋನ್ ಚಾರ್ಜ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನಿಮಿಷಗಳಲ್ಲೇ ಫೋನ್ ಚಾರ್ಜಿಂಗ್ ಆಗುವ ಮೂಲಕ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ಇದು ನನಗೂ ವೈಯುಕ್ತಿಕವಾಗಿ ಹೆಚ್ಚು ಇಷ್ಟವಾದ ವಿಚಾರವಾಗಿದೆ.

OPPO ತನ್ನ ಬಳಕೆದಾರ ಅಗತ್ಯತೆ ಹಾಗೂ ಬೇಡಿಕೆಗೆ ತಕ್ಕಂತೆ ಕ್ಯಾಮರಾ ಕುರಿತು ಗಮನವಹಿಸಿದೆ. ಫೋನ್ ಹಿಂಭಾಗದಲ್ಲಿ 50MP AI ಟ್ರಿಪಲ್ ಕ್ಯಾಮರ, 2MP ಬೊಕೆ ಕ್ಯಾಮರಾ ಹಾಗೂ 2MP ಮ್ಯಾಕ್ರೋ ಕ್ಯಾಮರಾ ಜೊತೆಗೆ ಪಿಕ್ಸೆಲ್ ಬೈನಿಂಗ್ ತಂತ್ರಜ್ಞಾನ ಹೊಂದಿದೆ. ಬಳೆಕೆದಾರರು ತಾವು ತೆಗೆದ ಫೋಟೋ ಹಾಗೂ ಸ್ಮರಣೀಯ ಘಳಿಗೆಯನ್ನು 12.5MP ಆಗಿ ಬದಲಾಯಿಸಬಹುದು. OPPO ಫೋಟೋಗಳಿಗೆ ನೈಸರ್ಗಿಕ ಅಂದವನ್ನು ಹೆಚ್ಚಿಸಲಿದೆ. ಇನ್ನು ನೈಟ್ ಮೊಡ್‌ನಲ್ಲಿ ಬ್ಯಾಕ್‌ಲಿಟ್ HDR ಬಳಕೆ ಮಾಡಿದರೆ, ಫೋಟೋದ ಬ್ಯಾಕ್‌ಗ್ರೌಂಡ್ ಜೊತೆ ಕಡಿಮೆ ಬೆಳಕಿನಲ್ಲಿ ಅಂದವಾದ ಫೋಟೋ ಕ್ಲಿಕ್ಕಿಸುವ ತಂತ್ರಜ್ಞಾನವಿದೆ.

ಇಷ್ಟಕ್ಕೆ ಕ್ಯಾಮಾರ ಹಾಗೂ ತಂತ್ರಜ್ಞಾನ ಮುಗಿದಿಲ್ಲ.  OPPO A55 ಫೋನ್ 16MP ಸೆಲ್ಫಿ ಕ್ಯಾಮಾರ ಹಾಗೂ ಹೊಚ್ಚ ಹೊಸ 360° ಫಿಲ್ ಲೈಟ್ ಫೀಚರ್ಸ್ ಕೂಡ ನೀಡುತ್ತಿದೆ. ಈ ತಂತ್ರಜ್ಞಾನದಿಂದ ಮಂದ ಬೆಳಕು ಹಾಗೂ ಮಬ್ಬಿನಲ್ಲೂ ಸ್ಪಷ್ಟ ಸೆಲ್ಫಿ ಫೋಟೋ ತೆಗೆಯಲು ನೆರವಾಗುತ್ತಿದೆ. OPPO ಫೋನ್‌ನಲ್ಲಿರುವ  AI ಬ್ಯೂಟಿಫಿಕೇಶನ್ ಬಳಕೆದಾರರಿಗೆ ಹೆಚ್ಚು ನೈಸರ್ಗಿಕವಾಗಿ ಕಾಣುವ  ಫೋಟೋಗಳನ್ನು ಹಾಗೂ ಸೌಂದರ್ಯ ಹೆಚ್ಚಿಸಲು ನೆರವಾಗುತ್ತಿದೆ.

ಇದರ ಜೊತೆಗೆ ಹೆಚ್ಚುವರಿಯಾಗಿ  OPPO A55 ಫೋನ್ 15 ಫೋಟೋ ಫಿಲ್ಟರ್‌ ಫೀಚರ್ಸ್ ಹಾಗೂ 10 ಬಿಲ್ಟ್ ಇನ್ ವಿಡಿಯೋ ಫಿಲ್ಟರ್ಸ್ ನೀಡುತ್ತದೆ.  

ಇವಿಷ್ಟು ಕ್ಯಾಮರಾ ವಿಶೇಷತೆಗಳಾದರೆ, ಫೋನ್ ಕಾರ್ಯಕ್ಷಮತೆ(performance)ಕುರಿತು ಹೇಳುವುದಾದರೆ, ಎರಡು ವೇರಿಯೆಂಟ್‌ಗಳಲ್ಲಿ ಫೋನ್ ಲಭ್ಯವಿದೆ. 64GB+4GB ವೇರಿಯೆಂಟ್ ಹಾಗೂ 128GB+6GB ವೇರಿಯೆಂಟ್. ಈ ಎರಡೂ ಫೋನ್ ಕೂಡ ಡ್ಯುಯೆಲ್ ಸಿಮ್ ಬಳಕೆಗೆ ಅವಕಾಶ ನೀಡುತ್ತದೆ. ಬಳೆಕೆದಾರರು ಸ್ಟೋರೇಜ್ ಹೆಚ್ಚಿಸಲು ಬಯಸಿದರೆ ಮೈಕ್ರೋ SD ಸ್ಲಾಟ್ ಮೂಲಕ  256GBವರೆಗೆ ಸ್ಟೋರೇಜ್ ವಿಸ್ತರಿಸಲು ಸಾಧ್ಯವಿದೆ. OPPO A55 ನಲ್ಲಿರುವ ಮೆಡಿಯಾಟೆಕ್ ಹಿಲಿಯೊ G35 Octa-Core ಪ್ರೊಸೆಸರ್ 2.3GHz  ಬಳಕೆಗಾರಿಗೆ ಅತ್ಯುತ್ತಮ ಅನುಭವ ನೀಡುತ್ತದೆ. ಈ ಹ್ಯಾಂಡ್‌ಸೆಟ್‌ನಲ್ಲಿ ನಾನು ನಿಜವಾಗಿಯೂ ಇಷ್ಟಪಟ್ಟಿದ್ದು, ಬಳಕೆದಾರರು ಸೈಡ್ ಫಿಂಗರ್‌ಪ್ರಿಂಟ್ ಅನ್‌ಲಾಕ್ ಬಳಸುವ ಆಯ್ಕೆ ಈ ಫೋನ್‌ನಲ್ಲಿದೆ.  ಇನ್ನು  AI ಫೇಸ್ ಅನ್‌ಲಾಕ್ ಮೂಲಕವೂ ಫೋನ್ ಬಳಕೆ ಮಾಡಲು ಸಾಧ್ಯವಿದೆ. 

ಸ್ಪಷ್ಟವಾಗಿ ಹೇಳಬೇಕೆಂದರೆ, ಇದು ಕೇವಲ ಅಸಾಧಾರಣವಾಗಿ ಕಾಣುವ ಫೋನ್ ಅಲ್ಲ, ಅಷ್ಟೇ ಅತ್ಯುತ್ತಮ ಪರ್ಫಾಮೆನ್ಸ್ ಕೂಡ ನೀಡಲಿದೆ.  ColorOS 11.1 ಸಿಸ್ಟಮ್ ಬೂಸ್ಟರ್‌ನಿಂದ OPPO A55 ಬಹಳ ಸರಾಗವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತಿದೆ. ಇದರಿಂದ ರೆಸ್ಪಾನ್ಸ್ ರೇಟ್ ಶೇಕಡಾ 5ಕ್ಕೆ ಹೆಚ್ಚಿಸಲಿದೆ.  ಇನ್ನು ಫ್ರೇಮ್ ರೇಟ್ ಸ್ಥಿರತೆಯನ್ನು  6.9% ರಷ್ಟು ಹೆಚ್ಚಿಸುತ್ತದೆ.  ಐಡಲ್ ಟೈಮ್ ಆಪ್ಟಿಮೈಜರ್, ಸ್ಟೋರೇಜ್ ಆಪ್ಟಿಮೈಜರ್, ಫ್ಲೆಕ್ಸ್ ಡ್ರಾಪ್, ಗೂಗಲ್ ಲೆನ್ಸ್‌ನೊಂದಿಗೆ ಮೂರು ಫಿಂಗರ್ ಟ್ರಾನ್ಸ್‌ಲೇಟ್ ಮತ್ತು UI ಫಸ್ಟ್ 3.0  ಕಾರಣ ಅತ್ಯುತ್ತಮ ಅನುಭವದ ಜೊತೆಗೆ  ಸ್ಮಾರ್ಟ್ ಫೋನ್‌ಗಳನ್ನು ಮತ್ತಷ್ಟು ಸ್ಮಾರ್ಟ್ ಮಾಡಲಿದೆ. 

OPPO A55 ಜೇಬಿನಲ್ಲಿಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಮೊದಲೆ ಹೇಳಿದಂತೆ ಸ್ಲಿಮ್ ಹಾಗೂ ನಯವಾದ ಡಿಸೈನ್ ಹೊಂದಿದೆ. ಎರಡು ವೇರಿಯೆಂಟ್‌ಗಳಲ್ಲಿ 4GB+64GB ಪೋನ್ ಅಕ್ಟೋಬರ್ 3 ರಿಂದ ಲಭ್ಯವಿದೆ.  5,490 ರೂ ಮೂಲಕ ಮಾರುಕಟ್ಟೆ ಪ್ರವೇಶ ಮಾಡಿದೆ.  6GB+128GB ವೇರಿಯೆಂಟ್ ಫೋನ್ ಅಮೆಜಾನ್‌ನಲ್ಲಿ ಹಾಗೂ ಇತರ ವ್ಯಾಪಾರಿಗಳಲ್ಲಿ 17,490 ರೂಪಾಯಿಗಳಲ್ಲಿ ಲಭ್ಯವಿದೆ. ನೀವು ಕಡಿಮೆ ತೂಕದ ಹೆಚ್ಚು ವಿಶ್ವಾಸಾರ್ಹ ಫೋನ್ ಹುಡುಕುತ್ತಿದ್ದರೆ, OPPO A55 ಮೊದಲ ಆಯ್ಕೆಯಾಗಲಿದೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. 

ಕೊಡುಗೆಗಳು:
OPPO A55 ನೀವು ಅಮೆಜಾನ್‌ನಲ್ಲಿ ಅಥವಾ ಇ-ಸ್ಟೋರ್ ಮೂಲಕ ಅಥವಾ ಆಫ್‌ಲೈನ್‌ನಲ್ಲಿ ಫೋನ್ ಖರೀದಿಸಿದರೂ ಅದ್ಭುತ ಕೊಡುಗೆಗಳನ್ನು ನೀಡುತ್ತದೆ.
ನೀವು ಅಮೆಜಾನ್ ಮೂಲಕ ಫೋನ್ ಅನ್ನು ಖರೀದಿಸುವ ಎಲ್ಲಾ ಗ್ರಾಹಕರಿಗೆ HDFC ಬ್ಯಾಂಕ್ ಡೆಬಿಟ್ / ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ನೊಂದಿಗೆ ಫ್ಲಾಟ್ INR 3,000 ರಿಯಾಯಿತಿ ಪಡೆಯುತ್ತೀರಿ. ಜೊತೆಗೆ 3 ತಿಂಗಳ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ. ಅಮೆಜಾನ್ ಪ್ರೈಮ್  ಸದಸ್ಯರು 6 ತಿಂಗಳವರೆಗೆ ನೋ ಕಾಸ್ಟ್ EMI ಹಾಗೂ 6 ತಿಂಗಳ ವರೆಗೆ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಕೊಡುಗೆ ಪಡೆಯಲಿದ್ದಾರೆ.
OPPO E ಅಂಗಡಿಯಿಂದ ಫೋನ್ ಖರೀದಿಸುವ ಗ್ರಾಹಕರಿಗೆ  ಕೋಟಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಆಕ್ಸಿಸ್ ಬ್ಯಾಂಕ್‌ನೊಂದಿಗೆ 10% ತ್ವರಿತ ರಿಯಾಯಿತಿ ಮತ್ತು 3 ತಿಂಗಳವರೆಗೆ ನೋ ಕಾಸ್ಟ್ EMI ಕೊಡುಗೆ ಪಡೆಯಲಿದ್ದೀರಿ.

ಮುಖ್ಯ ಚಿಲ್ಲರೆ ವ್ಯಾಪಾರಿಗಳಿಂದ ಖರೀದಿಸುವಾಗ ನೀವು INR 3,000 ಕ್ಯಾಶ್‌ಬ್ಯಾಕ್ ಮತ್ತು ಆಯ್ದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ 3 ತಿಂಗಳವರೆಗೆ ಯಾವುದೇ ವೆಚ್ಚದ EMI ಪಡೆಯಬಹುದು. ಬಜಾಜ್ ಫಿನ್‌ಸರ್ವ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಎಚ್‌ಡಿಬಿ ಫೈನಾನ್ಶಿಯಲ್ ಸರ್ವಿಸಸ್, ಟಿವಿಎಸ್ ಕ್ರೆಡಿಟ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್, ಐಸಿಐಸಿಐ ಬ್ಯಾಂಕ್ ಗ್ರಾಹಕ ಹಣಕಾಸು, ಹೋಮ್ ಕ್ರೆಡಿಟ್, ಮಹೀಂದ್ರಾ ಫೈನಾನ್ಸ್, ಜೆಸ್ಟ್‌ಗಳಿಂದಲೂ ಈಸಿ EMI ಫೈನಾನ್ಸ್ ಲಭ್ಯವಿದೆ.

click me!