ಅತ್ಯುತ್ತಮ ವಿಡಿಯೋ, ಗೇಮಿಂಗ್, ವ್ಯಾಯ್ಸ್‌ ಆ್ಯಪ್‌ನಲ್ಲಿ ಏರ್‌ಟೆಲ್‌ಗೆ ಅಗ್ರಸ್ಥಾನ!

By Suvarna NewsFirst Published Apr 20, 2021, 3:33 PM IST
Highlights

ಭಾರತದ ಟೆಲಿಕಾಂ ಕ್ಷೇತ್ರ ಪ್ರತಿ ದಿನ ಅಪ್‌ಗ್ರೇಡ್ ಆಗುತ್ತಲೇ ಇದೆ. ಈ ಮೂಲಕ ಗ್ರಾಹಕರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅವಿರತ ಪ್ರಯತ್ನ ಮಾಡುತ್ತಿದೆ. ಇದರಲ್ಲಿ ಏರ್‌ಟೆಲ್ ಮುಂಚೂಣಿಯಲ್ಲಿದೆ. ಇದೀಗ 2021ರ ಒಪನ್‌ಸಿಗ್ನಲ್ ವರದಿ ಪ್ರಕಟಗೊಂಡಿದ್ದು, ಅತ್ಯುತ್ತಮ ವಿಡಿಯೋ, ಗೇಮಿಂಗ್ ಹಾಗೂ ವಾಯ್ಸ್ ಆ್ಯಪ್‌ನಲ್ಲಿ ಏರ್‌ಟೆಲ್ ಮೊದಲ ಸ್ಥಾನ ಪಡೆದಿಕೊಂಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

ನವದೆಹಲಿ(ಏ.20): ಟೆಲಿಕಾಂ ವಲಯ ಪರಿವರ್ತನೆಗಳನ್ನು ಕಾಣುತ್ತಲೇ ಇರುತ್ತದೆ. ಈ ಕ್ಷೇತ್ರದಲ್ಲಿ ಇದು ಅನಿವಾರ್ಯವಾಗಿದೆ. 3ಜಿ, 4ಜಿ ಆಗಮನದಿಂದ ಕಂಪ್ಯೂಟರ್ ಮಾಡುವ ಎಲ್ಲಾ ಕೆಲಸವನ್ನು ಇದೀಗ ಫೋನ್ ಮಾಡುತ್ತಿದೆ. ತಂತ್ರಜ್ಞಾನದ ಅಭಿವೃದ್ಧಿ, ಟೆಲಿಕಾಂ ಕ್ಷೇತ್ರದಲ್ಲಿನ ಅಪ್‌ಗ್ರೇಡ್‌ಗಳಿಂದ ಭಾರತಿಯ ಟಿಲಿಕಾಂ ರಂಗ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಇದೀಗ ಗ್ರಾಹಕರ ಮೊಬೈಲ್ ಅನುಭವ ವಿಶ್ಲೇಷಕನಾಗಿ ಗುರಿತಿಸಿಕೊಂಡಿರುವ ಒಪನ್‌ಸಿಗ್ನಲ್ 2021ರ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ವಿಡಿಯೋ, ಗೇಮಿಂಗ್ ಹಾಗೂ ವಾಯ್ಸ್ ಆ್ಯಪ್ ಅನುಭವದಲ್ಲಿ ಗ್ರಾಹಕರು ಏರ್‌ಟೆಲ್‌ಗೆ ಸರಿಸಾಟಿ ಯಾವುದು ಇಲ್ಲ ಎಂದಿದ್ದಾರೆ.

ಒಪನ್‌ಸಿಗ್ನಲ್ ಪ್ರತಿ ದಿನ ನೆಟ್‌ವರ್ಕ್ ಮತ್ತು ಕಾರ್ಯಕ್ಷಮತೆ  ಮಾಪನ ಮಾಡುತ್ತದೆ. ಪ್ರತಿ ಗ್ರಾಹಕರ ಅನುಭವ, ಅಭಿಪ್ರಾಯವನ್ನು ಸಂಗ್ರಹಿಸುತ್ತದೆ. ಗ್ರಾಹಕರ ಪ್ರತಿಕ್ರಿಯೆ, ಅಭಿಪ್ರಾಯಗಳನ್ನು ಸಂಗ್ರಹಿಸಿ ರೇಟಿಂಗ್ ಬಿಡುಗಡೆ ಮಾಡುತ್ತದೆ. ಈ ಕುರಿತ ಮಾರ್ಚ್ 2021ರ ಒಪನ್‌ಸಿಗ್ನಲ್  ವರದಿ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ವಿಡಿಯೋ, ಗೇಮಿಂಗ್, ವಾಯ್ಸ್ ಆ್ಯಪ್ ಅನುಭವದಲ್ಲಿ ಏರ್‌ಟೆಲ್‌ ಮೊದಲ ಸ್ಥಾನ ಪಡೆದುಕೊಂಡಿದೆ.

ವಿಡಿಯೋ ಅನುಭವ;
ಒಪನ್‌ಸಿಗ್ನಲ್ ವರದಿಯಲ್ಲಿ ಕಳೆದ ತ್ರೈಮಾಸಿಕದಿಂದ ಏರ್‌ಟೆಲ್ ರೇಟಿಂಗ್ 2.8 ಪಾಯಿಂಟ್ ಹೆಚ್ಚಾಗಿದೆ. ಸಣ್ಣ ವಿಡಿಯೋಗಳ ಬಳಕೆ ಹಾಗೂ ವೀಕ್ಷಿಸುವಿಕೆ ಸದ್ಯ ಆನ್‌ಲೈನ್ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.  ಚಾನೆಲ್‌ಗಳಾದ ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳು ದೇಶದ ಮೊಬೈಲ್ ಡೇಟಾದ ಶೇಕಡಾ 50 ರಷ್ಟು ಕೊಡುಗೆ ನೀಡುತ್ತವೆ. ಇದು ಗ್ರಾಹಕರ ಉತ್ತಮ ವೀಡಿಯೊ ಅನುಭವದ ಮಹತ್ವವನ್ನು ತೋರಿಸುತ್ತದೆ. ಈ ನಿಟ್ಟಿನಲ್ಲಿ ಏರ್‌ಟೆಲ್ ತನ್ನ ಸೇವೆಯನ್ನು ಅತ್ಯುತ್ತಮ ಹಾಗೂ ಉತ್ಕೃಷ್ಠ ಮಟ್ಟದಲ್ಲಿ ನೀಡುತ್ತಿದೆ. ಜೊತೆಗೆ ನಿರಂತರವಾಗಿ ಸುಧಾರಿಸುತ್ತಿದೆ. ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ, ಭಾರಿ ಅಂತರದೊಂದಿಗೆ ಅಗ್ರ ಸ್ಥಾನ ಉಳಿಸಿಕೊಂಡಿದೆ.

ಗೇಮಿಂಗ್ ಅನುಭವ:
ಗೇಮಿಂಗ್ ಇತ್ತೀಚಿನ ದಿನಗಳಲ್ಲಿ ಪ್ರಮುಖ ಆಸಕ್ತಿ ಹಾಗೂ ಗಮನಾರ್ಹ ತಾಣವಾಗಿ ಬದಲಾಗಿದೆ. ವಿಶೇಷವಾಗಿ ಮೊಬೈಲ್ ಬಳಕೆದಾರರು ಒಂದೇ ಸಮಯದಲ್ಲಿ ಹಲವು(ಮಲ್ಟಿಪ್ಲೇಯರ್ ಮೊಬೈಲ್ ಗೇಮಿಂಗ್) ಅನುಭವ ಪಡೆಯುತ್ತಾರೆ.  ಮೊಬೈಲ್ ಗೇಮ್ ಜನಪ್ರಿಯ ಪ್ರಕಾರಗಳಾದ ಸಿಒಡಿ ಮೊಬೈಲ್ ಅಥವಾ ಗರೆನಾ ಫ್ರೀಫೈರ್ ಮತ್ತು ಮೊಬಾ (ಮಲ್ಟಿಪ್ಲೇಯರ್ ಆನ್‌ಲೈನ್ ಬ್ಯಾಟಲ್ ಅರೇನಾ) ಅರೆನಾ ಆಫ್ ವಾಲರ್ ನಂತಹ  ಗೇಮಿಂಗ್ ಅನುಭವಗಳನ್ನು ಪ್ರತಿನಿಧಿಸುತ್ತದೆ.  ಸೆಪ್ಟೆಂಬರ್ 2020ರಲ್ಲಿ ಮೊದಲ ಬಾರಿಗೆ ಮೊಬೈಲ್ ಬಳಕೆದಾರರು ಭಾರತದ ವಿವಿಧ ಆಪರೇಟರ್‌ಗಳಲ್ಲಿ ನೈಜ ಸಮಯದ ಮಲ್ಟಿಪ್ಲೇಯರ್ ಗೇಮಿಂಗ್ ಹೇಗೆ ಅನುಭವಿಸುತ್ತಾರೆ ಎಂಬುದನ್ನು ಪರೀಕ್ಷಿಸಲಾಗಿದೆ.  ಮಲ್ಟಿಪ್ಲೇಯರ್ ಗೇಮ್ಸ್ ಅನುಭವಕ್ಕಾಗಿ ಏರ್‌ಟೆಲ್ ಭಾರತದಲ್ಲಿ 58.5 ಅಂಕಗಳನ್ನು ಪಡೆದು ಭರ್ಜರಿ ಮೇಲುಗೈ ಸಾಧಿಸಿದೆ.  ಏಕೆಂದರೆ ಏರ್‌ಟೆಲ್ ಕಡಿಮೆ ಸುಪ್ತತೆ ತಡೆರಹಿತ ಗೇಮಿಂಗ್‌ಗೆ ಅವಕಾಶ ಮಾಡಿಕೊಡುತ್ತದೆ.

ವಾಯ್ಸ್ ಆ್ಯಪ್ ಅನುಭವ:
ಕರೆಗಳ ಗುಣಮಟ್ಟ, ಅಡೆತಡೆ ಇಲ್ಲದ ಕರೆ ಸೇರಿದಂತೆ ಹಲವು ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಒಪನ್‌ಸಿಗ್ನಲ್ ವಾಯ್ಸ್ ಆ್ಯಪ್ ಗುಣಮಟ್ಟವನ್ನು ಅಳೆಯುತ್ತದೆ. ಮೊಬೈಲ್ ವಾಯ್ಸ್ ಆ್ಯಪ್ಲಿಕೇಶನ್‌ಗಳಾದ ವ್ಯಾಟ್ಸ್ಆ್ಯಪ್, ಫೇಸ್‌ಬುಕ್ ಮೆಸೆಂಜರ್, ಸ್ಕೈಪ್ ಸೇರಿದಂತೆ ಇತರ ವಾಯ್ಸ್ ಆ್ಯಪ್  ಒಳಗೊಂಡಿದೆ. ಈ ವಿಭಾಗದ ಮೌಲ್ಯ ಮಾಪನದಲ್ಲಿ ಏರ್‌ಟೆಲ್ 77.8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ 2.3 ಪಾಯಿಂಟ್ ಹೆಚ್ಚಳವಾಗಿದೆ. ಇದು ಕಳೆದ 3 ತಿಂಗಳಲ್ಲಿ ಏರ್‌ಟೆಲ್ ವಾಯ್ಸ್ ಆ್ಯಪ್ ಸುಧಾರಣೆ ಹಾಗೂ ಬಳಕೆದಾರರ ಏರ್‌ಟೆಲ್ ಮೇಲಿಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ.

ಕಳಪೆ ನೆಟ್‌ವರ್ಕ್, ಕೆನೆಕ್ಟಿವಿಟಿ ಸಮಸ್ಸೆ, ನೆಟ್ ಸಮಸ್ಯೆ, ಕಾಲ್ ಡ್ರಾಪ್ ಸೇರಿದಂತೆ ಹಲವು ಸಮಸ್ಯೆಗಳಿಂದ ಬೇಸತ್ತು ಬೇರೆ ನೆಟ್‌ವರ್ಕ್ ಸೇರಬಯಸುವ ಯೋಚನೆ ನಿಮ್ಮದಾಗಿದ್ದರೆ, ಈ ವರದಿ ನಿಮಗೆ ಸಹಕಾರಿಯಾಗಿದೆ. ಕಾರಣ ನೀವು ಬಯಸುತ್ತಿರುವ ಅತ್ಯುತ್ತಮ ಸೇವೆ ಯಾರು ನೀಡುತ್ತಿದ್ದಾರೆ ಅನ್ನೋದನ್ನು ಪತ್ತೆ ಹಚ್ಚಲು ಈ ವರದಿ ನೆರವಾಗಲಿದೆ.

click me!