OnePlus 9R 5G ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 870 ಮೊಬೈಲ್ ಪ್ಲಾಟ್ ಫಾರ್ಮ್ ನಿಂದ ಸುಸಜ್ಜಿತ್ತವಾಗಿದೆ. ಇದು ಈ ಹಿಂದಿನ ಜನರೇಶನ್ ಗಿಂತ ಶೇ.12.6 ರಷ್ಟು ವೇಗವನ್ನು ನೀಡುತ್ತದೆ ಮತ್ತು ಡಿವೈಸ್ ಅನ್ನು ಗೇಮಿಂಗ್ ಪವರ್ ಹೌಸ್ ರೀತಿಯನ್ನಾಗಿ ಪರಿವರ್ತಿಸಲಿದೆ. 5G ವೇಗ ಸೇರಿದಂತೆ ಹಲವು ವಿಶೇಷತೆಗಳಿವೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.
ಬೆಂಗಳೂರು(ಏ.12): ಜಾಗತಿಕ ತಂತ್ರಜ್ಞಾನ ಕಂಪನಿಯಾಗಿರುವ ಒನ್ ಪ್ಲಸ್ ಇತ್ತೀಚೆಗೆ ಒನ್ ಪ್ಲಸ್ 9 ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದ್ದು, ಇದರ ಮುಂದುವರಿದ ಭಾಗವಾಗಿ ಗೇಮಿಂಗ್ ಉತ್ಸಾಹಿಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿರುವ OnePlus 9R 5G ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಈ OnePlus 9R 5G ಪ್ರೀಮಿಯಂ ಸ್ಮಾರ್ಟ್ ಫೋನ್ ಅನುಭವವನ್ನು ಇನ್ನೂ ಹೆಚ್ಚಿನ ಬಳಕೆದಾರರಿಗೆ ಸುಲಭ ದರದಲ್ಲಿ ಲಭ್ಯವಾಗುವಂತೆ ಮಾಡುವ ಬ್ರ್ಯಾಂಡ್ ನ ಗುರಿಯನ್ನು ಪುನರುಚ್ಚರಿಸುತ್ತದೆ.
ಮಾ.23ಕ್ಕೆ ಒನ್‌ಪ್ಲಸ್9 ಸೀರೀಸ್ ಫೋನ್ ಜತೆಗೆ ಸ್ಮಾರ್ಟ್ ವಾಚ್ ಬಿಡುಗಡೆ.
undefined
OnePlus 9R 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ನಮಗೆ ಅತ್ಯಂತ ಸಂತಸವೆನಿಸುತ್ತಿದೆ. ಅತ್ಯುತ್ಕೃಷ್ಠ ಮಟ್ಟದ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳ ತಡೆರಹಿತವಾದ ಸಮಗ್ರ ಸೌಲಭ್ಯಗಳನ್ನು ನೀಡುವ ಮೂಲಕ ಇನ್ನೂ ಹೆಚ್ಚು ಗೇಮಿಂಗ್ ಉತ್ಸಾಹಿಗಳನ್ನು ಆಕರ್ಷಿಸುವಂತೆ ಮಾಡಲಿದೆ ಎಂದು ಒನ್ ಪ್ಲಸ್ ಸಿಇಒ ಮತ್ತು ಮುಖ್ಯ ಉತ್ಪನ್ನ ಅಧಿಕಾರಿ ಪೀಟ್ ಲೂ ಹೇಳಿದ್ದಾರೆ.`
ಸುಪೀರಿಯರ್ ಶಕ್ತಿ & ಕಾರ್ಯದಕ್ಷತೆ
OnePlus 9R 5G ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 870 ಮೊಬೈಲ್ ಪ್ಲಾಟ್ ಫಾರ್ಮ್ ನಿಂದ ಸುಸಜ್ಜಿತ್ತವಾಗಿದೆ. ಇದು ಈ ಹಿಂದಿನ ಜನರೇಶನ್ ಗಿಂತ ಶೇ.12.6 ರಷ್ಟು ವೇಗವನ್ನು ನೀಡುತ್ತದೆ ಮತ್ತು ಡಿವೈಸ್ ಅನ್ನು ಗೇಮಿಂಗ್ ಪವರ್ ಹೌಸ್ ರೀತಿಯನ್ನಾಗಿ ಪರಿವರ್ತಿಸಲಿದೆ. 5ಜಿ ಸಂಪರ್ಕದ ವೇಗದೊಂದಿಗೆ OnePlus 9R 5G 875/ ಎಂಬಿ/ಎಸ್ ನವರೆಗೆ ಡೌನ್ ಲೋಡ್ ವೇಗಗಳನ್ನು ನೀಡುತ್ತದೆ ಮತ್ತು ಅತ್ಯಂತ ತ್ವರಿತವಾಗಿ ಆಗುತ್ತದೆ. ಈ ಶಕ್ತಿಯನ್ನು ಡ್ಯುಯೆಲ್ ಮೋಡ್ ಗಳಾದ ಎನ್ಎಸ್ಎ + ಎಸ್ಎ 5ಜಿ ಮತ್ತು ವೈಫೈ-6 ಬೆಂಬಲದಿಂದ ವೇಗವನ್ನು ನೀಡುತ್ತದೆ. ಇದು ವಿಶ್ವಾಸಾರ್ಹವಾದ ಡೇಟಾ ವೇಗಗಳು ಮತ್ತು ಸರಳತೆಯನ್ನು ಹೊಂದಿದೆ. ಇದಲ್ಲದೇ, OnePlus 9R 5G ಯ ಯುಎಫ್ಎಸ್ 3.1 ಫ್ಲ್ಯಾಶ್ ಸ್ಟೋರೇಜ್ 3.0 ಗಿಂತ ಸುಮಾರು 3 ಪಟ್ಟು ವೇಗದ ಕ್ಷಮತೆಯನ್ನು ಹೊಂದಿದೆ. ಅಲ್ಲದೇ, ಮೈಕ್ರೋಎಸ್ ಡಿ ಕಾರ್ಡ್ ನ 10 ಪಟ್ಟು ವೇಗವನ್ನು ಒಳಗೊಂಡಿದೆ.
ನ್ಯೂಕ್ಲಿಯಾ ಹಾಗೂ ಒನ್‌ಪ್ಲಸ್‌ನಿಂದ ತೇರೆ ಬಿನಾ ಒನ್‌ಪ್ಲಸ್ BWZ ಬಾಸ್ ಹಾಡು ಬಿಡುಗಡೆ!
ಸರಿಸಾಟಿಯಿಲ್ಲದ ಗೇಮಿಂಗ್
ಇದನ್ನು ಕ್ಯಾಶ್ಯುವಲ್ ಮತ್ತು ಹಾರ್ಡ್ ಕೋರ್ ಗೇಮರ್ ಇಬ್ಬರಿಗೂ ಹೊಂದಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. OnePlus 9R 5G ಯ 240 Hz ಟಚ್ ಸ್ಯಾಂಪ್ಲಿಂಗ್ ದರವು ಬಳಕೆದಾರರು ಒಂದೇ ಬಾರಿ ಐದೂ ಬೆರಳುಗಳನ್ನು ಬಳಸಿ ತಮ್ಮ ಗೇಮಿಂಗ್ ಅನ್ನು ಅತ್ಯಂತ ವೇಗವಾಗಿ ಆಡಲು ಅನುವು ಮಾಡಿಕೊಡುತ್ತದೆ. ಇದರಲ್ಲಿನ ಎಕ್ಸ್-ಆಕ್ಸಿಸ್ ಲೀನಿಯರ್ ಮೋಟರ್ ಡೈನಾಮಿಕ್ ವೈಬ್ರೇಶನ್ ಅನ್ನು ಅತ್ಯದ್ಭುತವಾಗಿ ಆಗುವಂತೆ ನೋಡಿಕೊಳ್ಳಲಿದೆ. ಅದೇ ರೀತಿ ವಿವಿಧ ಮಾದರಿಯ ಇನ್-ಗೇಮ್ ವೈಬ್ರೇಷನ್ ಗಳಿಂದ ಅತ್ಯಾಕರ್ಷಕವಾದ ಗೇಮಿಂಗ್ ಅನುಭವವನ್ನು ನೀಡಲಿದೆ. ಇದರ ಶಕ್ತಿಶಾಲಿ ಡ್ಯುಯೆಲ್ ಸ್ಟೀರಿಯೋ ಸ್ಪೀಕರ್ ಗಳು 3ಡಿ ಸೌಂಡ್ ಸ್ಕೇಪ್ ಮತ್ತು ಡಾಲ್ಬಿ ಅಟ್ಮೋಸ್ ಆಡಿಯೋ ಅನುಭವವನ್ನು ನೀಡಲಿವೆ. OnePlus 9R 5G ಗೇಮಿಂಗ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದ್ದು, ಇದರಲ್ಲಿನ ಮಲ್ಟಿ ಲೇಯರ್ ಕೂಲಿಂಗ್ ಸಿಸ್ಟಂನಿಂದಾಗಿ ಬಳಕೆದಾರರ ಅನುಭವವನ್ನು ಇಮ್ಮಡಿಗೊಳಿಸಲಿದೆ.
120 Hz ಫ್ಲ್ಯುಯಿಡ್ ಅಮೋಲ್ಡ್ ಡಿಸ್ ಪ್ಲೇ
OnePlus 9R 5G ಯ 6.55” ಫ್ಲ್ಯುಯಿಡ್ ಅಮೋಲ್ಡ್ ಡಿಸ್ ಪ್ಲೇ ಪ್ರತಿ ಫ್ರೇಂನಲ್ಲಿಯೂ ಅಲ್ಟ್ರಾ ಸ್ಮೂತ್ ಸ್ಕ್ರಾಲಿಂಗ್ ಅನ್ನು ನೀಡಲಿದೆ. ಇದರ ಕ್ರಿಸ್ಪ್ 120 Hz ಪೆನಲ, ಫ್ಲ್ಯಾಟ್ ಡಿಸ್ ಪ್ಲೇ ಮರೆಯಲಾಗದಂತಹ ದೃಶ್ಯದ ಅನುಭವವನ್ನು ನೀಡಲಿದೆ. ಬಣ್ಣದ ನಿಖರತೆಯಲ್ಲಿನ ಹೆಚ್ಚಳದಿಂದಾಗಿ OnePlus 9R 5Gಯ ಪ್ರತಿಯೊಂದು ಫ್ರೇಂನ ಎಫ್ಎಚ್ ಡಿ + ಡಿಸ್ ಪ್ಲೇ 1,100 ನಿಟ್ಸ್ ವರೆಗೆ ಬಾಳಿಕೆ ಬರುವಂತೆ ಮಾಡುತ್ತದೆ ಮತ್ತು 8,192 ಆಟೋಮ್ಯಾಟಿಕ್ ಬ್ರೈಟ್ ನೆಸ್ ಹಂತಗಳವರೆಗೆ ಬರುತ್ತದೆ.
ಅಡ್ವಾನ್ಸ್ಡ್ ಕ್ವಾಡ್-ಕ್ಯಾಮೆರಾ ಸಿಸ್ಟಂ
OnePlus 9R 5G ಯ ಮೇನ್ ಕ್ಯಾಮೆರಾದಲ್ಲಿ 48MP ಸೋನಿ IMX586 ಸೆನ್ಸಾರ್ ನಿಂದ ಕಸ್ಟಮೈಸ್ಡ್ ವೈಶಿಷ್ಟ್ಯತೆಯನ್ನು ಒಳಗೊಂಡಿದೆ. ಇದರಿಂದಾಗಿ ವೇಗ, ಅತ್ಯದ್ಭುತ ಕಲರ್ ನಿಖರತೆ ಮತ್ತು ರಾತ್ರಿ ವೇಳೆಯ ಫೋಟೋಗ್ರಾಫಿಯನ್ನು ಅತ್ಯುತ್ತಮವಾಗಿ ಮಾಡಬಹುದಾಗಿದೆ. ಿದರಲ್ಲಿ ನೈಟ್ ಸ್ಕೇಪ್ ಮೋಡ್ ಇರಲಿದ್ದು, ಇಂಟಲಿಜೆಂಟ್ ಮಲ್ಟಿ ಫ್ರೇಂ ಪ್ರೊಸೆಸಿಂಗ್ ಸಹ ಇರುವುದರಿಂದ ಸ್ಪಷ್ಟತೆ ಮತ್ತು ರಾತ್ರಿ ವೇಳೆ ನಿಮ್ಮ ನೆಚ್ಚಿನ ಸಿಟಿಸ್ಕೇಪ್ ಗಳನ್ನು ಕ್ಲಿಕ್ಕಿಸಬಹುದಾಗಿದೆ.