52 ದಿನಗಳ ಕಾಲ ನಡೆಯುವ ಐಪಿಎಲ್ ಪ್ರತಿ 60 ಪಂದ್ಯಗಳ ನೇರ ಪ್ರಸಾರದ ವೇಳೆಯೂ ವಿ ಗ್ರಾಹಕರು ಒಬ್ಬರೇ ಆಟವಾಡಬಹುದು ಅಥವಾ ಸ್ನೇಹಿತರ ಜತೆ ಆಡಿ ಬಹುಮಾನ ಗೆಲ್ಲಬಹುದು. ಕಾರು, ಬೈಕ್, ಲ್ಯಾಪ್‌ಟಾಪ್, ಫೋನ್ ಸೇರಿದಂತೆ ಹಲವು ಅತ್ಯಾಕರ್ಷ ಬಹುಮಾನ ಗೆಲ್ಲುವ ಅವಕಾಶವಿದೆ.
ಬೆಂಗಳೂರು(ಏ.12): ದೇಶದ ಅತಿದೊಡ್ಡ ಕ್ರೀಡಾ ಉತ್ಸವ ಚಾಲನೆ ಪಡೆದಿದ್ದು, ಐಪಿಎಲ್ 2021ರ ಸಹ ಮಾಧ್ಯಮ ಪ್ರಾಯೋಜಕ ಹಾಗೂ ಭಾರತದ ಮುಂಚೂಣಿ ಟೆಲಿಕಾಂ ಬ್ರಾಂಡ್ ಆಗಿರುವ ವಿ, ಜನಪ್ರಿಯ "ಪ್ಲೇ ಅಲಾಂಗ್" ಗೇಮಿಂಗ್ ಪರಿಕಲ್ಪನೆಯಡಿ ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವ ಮತ್ತು ಬಹುಮಾನ ಘೋಷಿಸಿದೆ. ಅಂದರೆ ವಿ ಗ್ರಾಹಕರು ಟಿ20 ಲೀಗ್ ನೇರಪ್ರಸಾರವನ್ನು ವೀಕ್ಷಿಸುತ್ತಲೇ, 52 ದಿನಗಳ ಕಾಲ ನಡೆಯುವ ಎಲ್ಲ 60 ಪಂದ್ಯಗಳ ವೇಳೆಯೂ ವೈಯಕ್ತಿಕವಾಗಿ ಅಥವಾ ತಮ್ಮ ಸ್ನೇಹಿತರ ಜತೆಗೆ ಮೋಜಿನ ಹಾಗೂ ರೋಮಾಂಚಕ ಆಟವಾಡಿ ಬಹುಮಾನ ಗೆಲ್ಲಲು ಅವಕಾಶವಿದೆ. ವಿ ತನ್ನ ಗ್ರಾಹಕರಿಗೆ ವಿ ದೇಖೊ ಭಾಯ್, ಖೇಲೋ ಭಾಯ್, ಜೀತೋ ಭಾಯ್ ಆನ್‍ಲೈನ್ ಗೇಮಿಂಗ್ ಉಪಕ್ರಮದಲ್ಲಿ ಭಾಗವಹಿಸಲು ಹಾಗೂ ಮೇ 30ರವರೆಗೆ ಪ್ರತಿದಿನ ಬಹುಮಾನ ಗೆಲ್ಲಲು ಮತ್ತು ಬಂಪರ್ ಟೂರ್ನಮೆಂಟ್ ಬಹುಮಾನ ಗೆಲ್ಲಲು ಅವಕಾಶ ಮಾಡಿಕೊಟ್ಟಿದೆ.
ಪ್ರಿಪೇಡ್ ಗ್ರಾಹಕರಿಗೆ Viನಿಂದ 4 ಹೊಸ ಪ್ಲ್ಯಾನ್; ಏನೆಲ್ಲ ಲಾಭಗಳಿವೆ ಪರೀಕ್ಷಿಸಿಕೊಳ್ಳಿ!.
undefined
ಡಿಸ್ನಿ + ಹಾಟ್‍ಸ್ಟಾರ್ ಜತೆ ವಿ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ, ವಿ ಗ್ರಾಹಕರು ಎಲ್ಲೇ ಇದ್ದರೂ, ಐಪಿಎಲ್ ಟಿ20 ಪಂದ್ಯಗಳ ನೇರಪ್ರಸಾರವನ್ನು ತಮ್ಮ ಮೊಬೈಲ್ ಫೋನ್‍ಗಳಲ್ಲೇ ವೀಕ್ಷಿಸಲು ಸಾಧ್ಯವಾಗಿರುವ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.
Viನಿಂದ 1,499 ಪ್ರೀಪೇಡ್ ಪ್ಲ್ಯಾನ್ ಮೇಲೆ 50 ಜಿಬಿ ಎಕ್ಸಟ್ರಾ ಡೇಟಾ?
ವಿ ಗ್ರಾಹಕರು ಪ್ರತಿ ಪಂದ್ಯದ ಬಿಡುವಿನ ಸಂದರ್ಭದಲ್ಲಿ 'ವಿ ಫ್ಯಾನ್ ಆಫ್ ದ ಮ್ಯಾಚ್' ಆಟವನ್ನು ವಿ ಫೇಸ್‍ಬುಕ್ ಪೇಜ್, ವಿ ಇನ್‍ಸ್ಟಾಗ್ರಾಂ ಪೇಜ್ ಮತ್ತು ಟ್ವಿಟ್ಟರ್‍ನಲ್ಲಿ ಆಡಬಹುದಾಗಿದೆ. ಇದರಲ್ಲಿ ಭಾಗವಹಿಸುವವರು ನೇರ ಪ್ರಸಾರವಾಗುತ್ತಿರುವ ಪಂದ್ಯದ ಬಗೆಗಿನ ಸರಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಪ್ರತಿ ಪಂದ್ಯಕ್ಕೆ 20 ಪ್ರಶ್ನೆಗಳಿರುತ್ತವೆ. ಗರಿಷ್ಠ ಸರಿ ಉತ್ತರಗಳನ್ನು ಹೇಳಿದವರಿಗೆ ಬಹುಮಾನ ನೀಡಲಾಗುತ್ತದೆ:
* ಪ್ರತಿ ವಿರಾಮದಲ್ಲೂ ಅಚ್ಚರಿಯ ವೋಚರ್‍ಗಳು
* ಪ್ರತಿ ಪಂದ್ಯದ ಕೊನೆಗೆ ಐಫೋನ್ ಗೆಲ್ಲುವ ಅವಕಾಶ- 60 ಪಂದ್ಯಗಳು, 60 ವಿಜೇತರು, 60 ಐಫೋನ್‍ಗಳು.
* ಸೀಸನ್ ಕೊನೆಗೆ ಬಂಪರ್ ಬಹುಮಾನ