ಒನ್ ಪ್ಲಸ್ ನೋಡ್ CE4 ಲೈಟ್ 5G, ನಿಮ್ಮ ಹೊಸ ಮನೋರಂಜನೆ ಸಂಗಾತಿ ಫೋನ್ ಲಾಂಚ್!

By Chethan Kumar  |  First Published Jul 3, 2024, 10:24 PM IST

ಉತ್ತಮ ಕ್ವಾಲಿಟಿ ಕ್ಯಾಮೆರಾ, ಇಡೀ ದಿನದ ಮನೋರಂಜನೆಯ ಸಂಗಾತಿ ಅನುಭವ ನೀಡುವ ಒನ್ ಪ್ಲಸ್ ನೊರ್ಡ್ CE4 ಲೈಟ್ 5G ಫೋನ್ ಬಿಡುಗಡೆಯಾಗಿದೆ. ನೂತನ ಫೋನ್ ವಿಶೇಷತೆ ಏನು? 
 


ಬೆಂಗಳೂರು(ಜು.03)  ಒನ್ ಪ್ಲಸ್ ತನ್ನ ಮತ್ತೊಂದು ಪವರ್-ಪ್ಯಾಕ್ಡ್ ಮನೋರಂಜನೆ ಕೇಂದ್ರಿತ ಒನ್ ಪ್ಲಸ್ ನಾರ್ಡ್ CE4 ಲೈಟ್ 5G ಮೊಬೈಲ್ ಬಿಡುಗಡೆ ಮಾಡಿದೆ. ವಿಶಿಷ್ಟ ಶೈಲಿ, ಹೊಸ ವಿನ್ಯಾಸದ ಮೂಲಕ ಮಾರುಕ್ಟಟೆಗೆ ಲಗ್ಗೆ ಇಟ್ಟಿದೆ. ನಾರ್ಡ್ CE4 ಲೈಟ್ 5G ಮೊಬೈಲ್ ಫೋನ್ ಬಳಕೆದಾರನ ಕೈಯಲ್ಲಿ ಸುತ್ತಮುತ್ತಲಿನ ಎಲ್ಲಾ ಕಡೆಯ ಅದ್ಭುತ ಚಿತ್ರೀಕರಣದ ಅನುಭವವನ್ನು ಭರವಸೆ ನೀಡಲು OIS ವೈಶಿಷ್ಟ್ಯತೆಯುಳ್ಳ 50MP ಸೋನಿ ಲಿಟಿಯಾ ಕ್ಯಾಮೆರಾ ಹೊಂದಿದೆ. 

ಹೆಚ್ಚುವರಿಯಾಗಿ, ಒನ್ ಪ್ಲಸ್ ನಾರ್ಡ್ CE4 ಲೈಟ್ 5G ಇಡೀ-ದಿನದ ಮನೋರಂಜನೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ಹ್ಯಾಂಡಿ ರಿವರ್ಸ್ ಚಾರ್ಜಿಂಗ್(ವೈರ್ ಇರುವ) ಜೊತೆಗೆ ಒನ್ ಪ್ಲಸ್ ನ ಅತಿ ದೊಡ್ಡ ಬ್ಯಾಟರಿ 5500 mAH ಬ್ಯಾಟರಿ ಹೊಂದಿದೆ. ಒನ್ ಪ್ಲಸ್ ನಾರ್ಡ್ CE4 ಲೈಟ್ 5G ಹೆಡ್ ಫೋನ್ ಗಳು, ಪರಿಕರಗಳು ಅಥವಾ ಮತ್ತೊಂದು ಫೋನ್ ಅನ್ನು ಸಹ ಚಾರ್ಜ್ ಮಾಡುವಷ್ಟು ಬಲಶಾಲಿಯಾಗಿದೆ. ನಿಮ್ಮ ದಿನಕ್ಕೆ ಹೆಚ್ಚಿನ ಪವರ್ ನೀಡುವುದಕ್ಕಾಗಿ, ಈ ಹೊಸ ನಾರ್ಡ್ ಸಾಧನವು 80W ಸೂಪರ್ವೂಕ್ ಫಾಸ್ಟ್ ಚಾರ್ಜಿಂಗ್ ವೈಶಿಷ್ಟವನ್ನು ಸಹ ಹೊಂದಿದೆ.    

Tap to resize

Latest Videos

undefined

ಬಿದ್ದರೂ ಸಮಸ್ಯೆಯಿಲ್ಲ, ಕೈಗೆಟುಕುವ ದರದಲ್ಲಿ ಒನ್‌ಪ್ಲಸ್ ನಾರ್ಡ್ CE4 ಲಾಂಚ್!

ನಾರ್ಡ್ CE4 ಲೈಟ್ 5G ಫೋನ್ 2100 ನಿಟ್ಸ್ ಗರಿಷ್ಟ ಪ್ರಕಾಶಮಾನದ ಅಮೋಲೆಡ್ ಡಿಸ್ಪ್ಲೇ ಹೊಂದಿದ್ದು, ಇದು ಗಮನಾರ್ಹವಾಗಿ ಹೊರಾಂಗಣ ಚಿತ್ರಗಳನ್ನು ಉತ್ತಮವಾಗಿಸುತ್ತದೆ. ಈ ವೈಶಿಷ್ಟ್ಯತೆಯ ಸಹಾಯದಿಂದ ಮೊಬೈಲ್ ಬಳಕೆದಾರರು ನೆರಳು ಅಥವಾ ಕಣ್ಣು ಕಿರಿದಾಗಿಸದೆ ಪ್ರಕಾಶಮಾನ ಬೆಳಕಿನಲ್ಲಿಯೂ ಸಹ ಮೊಬೈಲ್ ನಲ್ಲಿರುವುದನ್ನು ಚೆನ್ನಾಗಿ ಓದಬಹುದು ಮತ್ತು ನೋಡಬಹುದು ಮತ್ತು ಅತ್ಯುತ್ತಮ ವೀಕ್ಷಣೆಯ ಅನುಭವವನ್ನು ಪಡೆಯಬಹುದು.   

ಈ ವಾರದಲ್ಲಿ ಮೊದಲೇ ಹೇಳಿದಂತೆ, ಈ ಮೊಬೈಲ್ ಹೊಸ ಬಣ್ಣಗಳಲ್ಲಿ ಬಂದಿದ್ದು, ಸಾಂಪ್ರದಾಯಿಕ ವಿಡಿಯೋ ಗೇಮ್ ಪಾತ್ರವಾದ ಮೆಗಾ ಮ್ಯಾನ್‌ನಿಂದ ಸ್ಫೂರ್ತಿ ಪಡೆದು - ಮೆಗಾ ಬ್ಲೂ ಬಣ್ಣದಲ್ಲಿದೆ, ಇದು ತನ್ನ ವಿಶಿಷ್ಟ ನೀಲಿ ಬಣ್ಣದಿಂದ ಎದ್ದು ಕಾಣುತ್ತದೆ.   ವಿಶಿಷ್ಟ ವೈಶಿಷ್ಟ್ಯತೆಗಳು ಮತ್ತು ಸಾಫ್ಟವೇರ್ ನಿಂದ ಸ್ಪೂರ್ತಿ ಪಡೆದಿದ್ದು, ಒನ್ ಪ್ಲಸ್ ನಾರ್ಡ್ CE4 ಲೈಟ್ 5G ಅತ್ಯುತ್ತಮ ಬ್ಯಾಟರಿ ಲೈಫ್, ರೋಮಾಂಚನಕಾರಿ ಡಿಸ್ಪ್ಲೇ ಬೆಳಕು, ಮತ್ತು ಉತ್ಕೃಷ್ಟ ಕ್ಯಾಮೆರಾ ಗುಣಮಟ್ಟವನ್ನು ನೀಡುತ್ತದೆ. 

ಭಾರತದಲ್ಲಿ 5G ತಂತ್ರಜ್ಞಾನದ ಅನುಭವ ಹೆಚ್ಚಿಸಲು ಜಿಯೋ-ಒನ್‌ಪ್ಲಸ್ ಒಪ್ಪಂದ!
 

click me!