ಜಿಯೋ ಬಳಕೆದಾರರಿಗೆ ಮತ್ತೊಂದು ಶಾಕ್

By Mahmad Rafik  |  First Published Jul 2, 2024, 6:26 PM IST

ಈ ಎರಡು ಯೋಜನೆಗಳನ್ನು ಬದಲಾಯಿಸಲಾಗಿದೆ. ಈಗಾಗಲೇ ಘೋಷಣೆಯಾಗಿರುವ ಹೊಸ ಬೆಲೆಗಳು ಜುಲೈ 3ರಿಂದ ಜಾರಿಗೆ ಬರಲಿವೆ.


ಮುಂಬೈ: ಭಾರತೀಯ ಟೆಲಿಕಾಂ ನೆಟ್‌ವರ್ಕ್‌ ದೈತ್ಯ ಕಂಪನಿಗೆ ತನ್ನ ಬಳಕೆದಾರರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ರಿಚಾರ್ಜ್‌ ಪ್ಲಾನ್‌ಗಳ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಬಳಕೆದಾರರು ಹೆಚ್ಚಾಗಿ ಬಳಸುತ್ತಿದ್ದ ಪ್ಲಾನ್‌ಗಳನ್ನು ತೆಗೆದು ಹಾಕಲಾಗಿದೆ. ಈ ಎರಡು ಯೋಜನೆಗಳನ್ನು ಬದಲಾಯಿಸಲಾಗಿದೆ. ಈಗಾಗಲೇ ಘೋಷಣೆಯಾಗಿರುವ ಹೊಸ ಬೆಲೆಗಳು ಜುಲೈ 3ರಿಂದ ಜಾರಿಗೆ ಬರಲಿವೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಲು ಬಳಕೆದಾರರು ಒಂದು ದಿನ ಮುಂಚಿತವಾಗಿ ರೀಚಾರ್ಜ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಒಂದು ದಿನ ಮುಂಚಿತವಾಗಿ ದೀರ್ಘಕಾಲದ ಪ್ಲಾನ್ ಆಕ್ಟಿವ್ ಮಾಡಿಕೊಳ್ಳಲು ಆಗುತ್ತಿದ್ದಾರೆ. ಆದ್ರೆ ರೀಚಾರ್ಜ್ ಮಾಡಿಕೊಳ್ಳಲು ಮುಂದಾದ ಬಳಕೆದಾರರಿಗೆ 395 ರೂಪಾಯಿ ಹಾಗೂ 1,559 ರೂಪಾಯಿ ಪ್ಯಾಕೇಜ್‌ಗಳು ಕಾಣಿಸುತ್ತಿಲ್ಲ.

395 ರೂಪಾಯಿ ಹಾಗೂ 1,559 ರೂಪಾಯಿ ಪ್ಯಾಕ್‌ನಲ್ಲಿ ಬಳಕೆದಾರರಿಗೆ 24 ಜಿಬಿ ಡಾಟಾ ಮಿತಿಯೊಂದಿಗೆ ಅನಿಯಮಿತ ಕರೆಗಳು ಸಿಗುತ್ತವೆ. 395 ರೂಪಾಯಿ ಪ್ಯಾಕ್ ಅವಧಿ 84 ದಿನಗಳಾಗಿದ್ದು 6ಜಿಬಿ ಡೇಟಾ ಹಾಗೂ ಅನಿಯಮಿತ ಕರೆಗಳ ಸೌಲೌಭ್ಯವಿತ್ತು. ಈ ಎರಡು ಪ್ಲಾನ್‌ಗಳನ್ನು ಜಿಯೋ ಸ್ಥಗಿತಗೊಳಿಸಿದೆ.

Tap to resize

Latest Videos

undefined

ಎಷ್ಟು ಬೆಲೆ ಹೆಚ್ಚಳ?

ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಪ್ಲಾನ್‌ಗಳ ಬೆಲೆಗಳಲ್ಲಿ ಹೆಚ್ಚಳ ಮಧ್ಯಮ ವರ್ಗದ ಜನತೆಗೆ ಹೊರೆ ಆಗಲಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಪರಿಷ್ಕೃತ ಟಾರಿಫ್ ಏರಿಕೆಯ ಪ್ರಕಾರ, 155 ರೂ.ಗೆ ಲಭ್ಯವಾಗುತ್ತಿದ್ದ 28 ದಿನಗಳ 2GB ಡೇಟಾ ಯೋಜನೆಯು ಪ್ರಸ್ತುತ ರೂ.189 ಆಗಿದೆ. 1GB ಪ್ಲಾನ್‌ನ ಬೆಲೆ ರೂ.209 ರಿಂದ ರೂ.249 ಕ್ಕೆ ಹೆಚ್ಚಿಸಲಾಗಿದೆ. 1.5 GB ದೈನಂದಿನ ಡೇಟಾ ಯೋಜನೆಯ ಬೆಲೆಯನ್ನು ರೂ.239 ರಿಂದ ರೂ.299 ಕ್ಕೆ ಹೆಚ್ಚಿಸಲಾಗುತ್ತಿದೆ. 2GB ದೈನಂದಿನ ಯೋಜನೆಯು ಈಗ 299 ರಿಂದ 349 ಕ್ಕೆ ಹೆಚ್ಚಿಸಲಾಗುವುದು. ನಾಳೆಯಿಂದ ಅಂದ್ರೆ ಜುಲೈ 3ರಿಂದಲೇ ಹೊಸ ಬೆಲೆಗಳು ಜಾರಿಗೆ ಬರಲಿವೆ.

ಡ್ಯಾಮೇಜ್‌ ಪ್ರೂಫ್‌ ಬಾಡಿ, ಆಕರ್ಷಕ ಟೆಕ್‌ ಅಪ್‌ಗ್ರೇಡ್‌: ಯೂಸರ್‌ ಎಕ್ಸ್‌ಪೀರಿಯನ್ಸ್‌ನಲ್ಲಿ ಒಂದು ಹೆಜ್ಜೆ ಮುಂದೆ OPPO A3 Pro

ಹೆಚ್ಚಿನ ಡೇಟಾ ಅಗತ್ಯವಿರುವ ಬಳಕೆದಾರರಿಗೆ 2.5GB ದೈನಂದಿನ ಯೋಜನೆಯು ರೂ.349 ರಿಂದ ರೂ. 399 ಆಗಲಿದೆ. 3GB ದೈನಂದಿನ ಡೇಟಾ ಯೋಜನೆಯು ರೂ.399 ರಿಂದ ರೂ. 449ಕ್ಕೆ ಹೆಚ್ಚಿಸಲಾಗಿದೆ.

ರೂ. 479ಯ ಎರಡು ತಿಂಗಳ 1.5GB ದೈನಂದಿನ ಡೇಟಾ ಯೋಜನೆಗೆ ನೀವು ರೂ.579 ಪಾವತಿಸಬೇಕು. ರೂ.533 ಆಗಿರುವ ದೈನಂದಿನ 2ಜಿಬಿ ಪ್ಲಾನ್ ಈಗ ರೂ.629 ಆಗಲಿದೆ. ನೀವು ರೂ.479 ಅನ್ನು ಮುಂದಿನ ಮೂರು ತಿಂಗಳವರೆಗೆ ರೂ.395 ಗೆ 6GB ಡೇಟಾ ಯೋಜನೆಗೆ ಖರ್ಚು ಮಾಡಬೇಕಾಗುತ್ತದೆ.

ಜಿಯೋ ಬಳಿಕ ವೊಡಾಫೋನ್, ಏರ್‌ಟೆಲ್‌ ಮೊಬೈಲ್ ಇಂಟರ್ನೆಟ್ ತುಟ್ಟಿ..!

click me!