
ನವದೆಹಲಿ(ಜೂ.29): ಮೊಬೈಲ್ ಚಂದಾ ಶುಲ್ಕವನ್ನು ರಿಲಯನ್ ಜಿಯೋ ಏರಿಕೆ ಮಾಡಿದ ಮರು ದಿನವೇ ಏರ್‌ಟೆಲ್ ಹಾಗೂ ವೊಡಾಫೋನ್ ಕೂಡ ಅದೇ ನಿರ್ಧಾರ ಕೈಗೊಂಡಿವೆ. ಶೇ.10ರಿಂದ ಶೇ.24ರವರೆಗೆ ವಿವಿಧ ಪ್ಯಾಕ್ ಗಳ ದರ ಹೆಚ್ಚಳ ಮಾಡಿವೆ.
ಜಿಯೋ ಹೊಸ ದರಗಳು ಜು.3 ರಿಂದ ಅನ್ವಯಿಸಲಿವೆ. ಇನ್ನು ವೊಡಾಫೋನ್ ಐಡಿಯಾ ಕೂಡಾ ಶೇ.11-ಶೇ.24ರಷ್ಟು ದರ ಹೆಚ್ಚಳ ಮಾಡಿದ್ದು, ಜು.4ರಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.
ಬಡವರ ಬದುಕಿಗೆ ಮತ್ತೊಂದು ಹೊರೆ; ಹಾಲು, ಪೆಟ್ರೋಲ್ ಆಯ್ತು.. ಮೊಬೈಲ್ ರಿಚಾರ್ಜ್ ಕೂಡ ಈಗ ದುಬಾರಿ!
ಹೊಸ ದರದಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.