ಒನ್‌ಪ್ಲಸ್‌ನಿಂದ ಲಿಮಿಟೆಡ್ ಎಡಿಷನ್ ಫೋನ್, ವಿಶೇಷತೆಗಳೇನು?

By Suvarna News  |  First Published Nov 3, 2020, 4:08 PM IST

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದಟ್ಟ ಪ್ರಭಾವ ಹೊಂದಿರುವ ಒನ್‌ಪ್ಲಸ್ ಕಂಪನಿಯು ಮುಂಬರಲಿರುವ ಸೈಬರ್‌ಪಂಕ್ 2077 ಆಕ್ಷನ್ ಗೇಮ್‌ ಉತ್ತೇಜನಕ್ಕಾಗಿ ಈ ಗೇಮ್‌ನ ಥೀಮ್ ಆಧಾರಿತ ಈ ಲಿಮಿಟೆಡ್ ಎಡಿಷನ್ ಫೋನ್ ಬಿಡುಗಡೆ ಮಾಡುತ್ತಿದೆ.
 


ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಭಾವ ಬೀರುತ್ತಿರುವ ಚೀನಾ ಮೂಲದ ಒನ್‌ಪ್ಲಸ್ ಇತ್ತೀಚೆಗಷ್ಟೇ ಒನ್‌ಪ್ಲಸ್ 8ಟಿ ಫೋನ್‌ ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದಿತ್ತು. ಬಳಕೆದಾರರು ಈ ಫೋನ್ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದಾರೆ. ಇದೀಗ, ಮತ್ತೊಂದು ಫೋನ್ ಬಿಡುಗಡೆ ಮಾಡಲು ಮುಂದಾಗಿದ್ದು, ಈ ಹೊಸ ಫೋನ್ ಲಿಮಿಟೆಡ್ ಎಡಿಷನ್ ಫೋನ್ ಆಗಿದ್ದು, ಒನ್‌ಪ್ಲಸ್ 8ಟಿ ಸರಣಿಗೆ ಸೇರಿದೆ. 

ನವೆಂಬರ್ 11ಕ್ಕೆ ಬಿಡುಗಡೆಯಾಗಲು ಸಿದ್ಧವಾಗಿರುವ ಈ ಹೊಸ ಫೋನ್ ಹೆಸರು ಒನ್‌ಪ್ಲಸ್ 8ಟಿ ಸೈಬರ್‌ಪಂಕ್ 2077. ಅಂದರೆ, ಮುಂಬರಲಿರುವ ಸೈಬರ್‌ಪಂಕ್ 2077 ಆಕ್ಷನ್ ಗೇಮ್‌ ಪ್ರಚಾರಕ್ಕಾಗಿ ಒನ್‌ಪ್ಲಸ್ ಕಂಪನಿ ಈ ಗೇಮ್‌ನ ಥೀಮ್ ಆಧಾರಿತ ಈ ಲಿಮಿಟೆಡ್ ಎಡಿಷನ್ ಫೋನ್ ಬಿಡುಗಡೆ ಮಾಡುತ್ತಿದೆ.

Tap to resize

Latest Videos

undefined

ಮತ್ತೆ ನಂಬರ್ 1 ಸ್ಥಾನಕ್ಕೇರಿದ ಸ್ಯಾಮ್ಸಂಗ್

ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ  ಬಿಡುಗಡೆಯಾಗಿರುವ 8ಟಿ ಸೈಬರ್‌ಪಂಕ್ 2077 ಲಿಮಿಟೆಡ್ ಎಡಿಷನ್ ಫೋನ್ ಬೆಲೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು 45 ಸಾವಿರ ರೂಪಾಯಿಯಾಗುತ್ತದೆ. ಈ ಫೋನ್ ಭಾರತೀಯ ಮಾರುಕಟ್ಟೆ ಅಥವಾ ಇತರ ಯಾವುದೇ ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಸದ್ಯಕ್ಕಿಲ್ಲ.

ಒನ್‌ಪ್ಲಸ್ 8ಟಿ ಸೈಬರ್‌ಪಂಕ್ 2077 ಲಿಮಿಟೆಡ್ ಎಡಿಷನ್ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಅಂದರೆ, ರೆಗ್ಯುಲರ್ ಒನ್‌ಪ್ಲಸ್ 8ಟಿ ಸೀರಿಸ್ ಫೋನ್‌ಗಳಲ್ಲಿರುವ ಫೀಚರ್‌ಗಳೊಂದಿಗೆ ಇನ್ನಷ್ಟು ಫೀಚರ್‌ಗಳನ್ನು ಸೇರಿಸಲಾಗಿದೆ. ಡುಯಲ್ ಸಿಮ್ ಸೌಲಭ್ಯವಿದ್ದು, ಈ ಪೈಕಿ ಒಂದು ಸಿಮ್ ನ್ಯಾನೋ ಸಿಮ್‌ ಆಗಿರುತ್ತದೆ. ಈ ಫೋನ್‌ ಆಂಡ್ರಾಯ್ಡ್ 1.1 ಆಧಾರಿತ ಹೈಡ್ರೋಜಿನ್ ಆಪರೇಟಿಂಗ್ ಸಾಫ್ಟ್‌ವೇರ್ ಮೇಲೆ ರನ್ ಆಗುತ್ತದೆ. ಸ್ನ್ಯಾಪ್ ಡ್ರಾಗನ್ 865 ಎಸ್ಒಎಸ್  ಅಡ್ರೆನೋ 650 ಸಿಪಿಯು ಮೈಕ್ರೋಪ್ರೊಸೆಸರ್ ಇದ್ದು, 12 ಜಿಬಿ ರಾಮ್ ಕೊಡಲಾಗಿದೆ ಮತ್ತು 256 ಜಿಬಿ ಸ್ಟೋರೇಜ್ ಕ್ಯಾಪಾಸಿಟಿ ಇದೆ. 

ಕೇವಲ 1,999 ರೂಪಾಯಿಗೆ ಬೋಟ್ ಸ್ಟಾರ್ಮ್ ಸ್ಮಾರ್ಟ್ ವಾಚ್!

ಕ್ಯಾಮೆರಾ ಹೇಗಿದೆ?
ಒನ್‌ಪ್ಲಸ್‌ ಈ ಲಿಮಿಟೆಡ್ ಎಡಿಷನ್ ಫೋನ್‌ನಲ್ಲಿ ಕ್ವಾಡ್ ರಿಯರ್ ಸೆಟ್‌ ಅಪ್ ಇದ್ದು, ಎಫ್/1.7 ಲೆನ್ಸ್‌ನೊಂದಿಗೆ 48 ಮೆಗಾಪಿಕ್ಸೆಲ್ ಸೋನಿ ಐಎಎಕ್ಸ್586 ಪ್ರೈಮರಿ ಕ್ಯಾಮರಾ ಅಳವಡಿಸಲಾಗಿದೆ. ಜೊತೆಗೆ 16 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಆಂಗಲ್ ಲೆನ್ಸ್ ಹಾಗೂ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಮತ್ತು 2 ಮೆಗಾಪಿಕ್ಸೆಲ್ ಮೋಮೋಕ್ರೋಮ್ ಸೆನ್ಸರ್ ಕ್ಯಾಮರಾಗಳನ್ನು ಕ್ವಾಡ್ ರಿಯರ್ ಕ್ಯಾಮರಾ ಸೆಟಪ್‌ನಲ್ಲಿ ಅಳವಡಿಸಲಾಗಿದೆ. ಹಾಗಾಗಿ, ಈ ಅದ್ಭುತವಾದ ಚಿತ್ರಗಳನ್ನು ಸೆರೆ ಹಿಡಿಯಬಹುದು. ಜೊತೆಗೆ ಅಲ್ಟ್ರಾ ವೈಡ್ ಆಂಗಲ್ ಫೋಟೋ ಸೆರೆ ಹಿಡಿಯಲು ಈ ಫೋನ್ ಹೆಚ್ಚು ಸಶಕ್ತವಾಗಿದೆ. ಇನ್ನು ಫೋನ್‌ನ ಫ್ರಂಟ್‌ನಲ್ಲಿ ಎಫ್/2.4 ಲೆನ್ಸ್ ಇರುವ 16 ಮೆಗಾಪಿಕ್ಸೆಲ್ ಐಎಂಎಕ್ಸ್471 ಕ್ಯಾಮರಾ ಕೊಡಲಾಗಿದೆ. ಹಾಗಾಗಿ, ಅದ್ಭುತವಾದ ಸೆಲ್ಫಿಗಳನ್ನು ಕೂಡ ಸೆರೆ ಹಿಡಿಯಬಹುದು. ಕ್ಯಾಮರಾ ದೃಷ್ಟಿಯಿಂದ ಈ ಫೋನ್ ಇನ್ನೂ ಚೆನ್ನಾಗಿದೆ ಎಂದು ಹೇಳಬಹುದು.

ಕನೆಕ್ಟಿವಿಟಿ 
ಈ ಫೋನ್‌ ನಿಮಗೆ 5ಜಿ, 4ಜಿ, ಡ್ಯುಯಲ್ ಬ್ಯಾಂಡ್ ವೈಫೈ,  ಬ್ಲೂಟೂಥ್ 5.1, ಜಿಪಿಎಸ್, ಎನ್ಎಫ್‌ಸಿ, ಗ್ಲೋನಆಸ್, ಯುಎಸ್‌ಬಿ ಟೈಪ್ ಸಿ ಪೋರ್ಟ್(ಚಾರ್ಜಿಂಗ್‌ಗೆ)ಗೆ  ಸಪೋರ್ಟ್ ಮಾಡುತ್ತದೆ. ಜೊತೆಗೆ ಈ ಲಿಮಿಟೆಟ್ ಎಡಿಷನ್ ಫೋನ್‌ನ ಸಾಮರ್ಥ್ಯವೂ ಚೆನ್ನಾಗಿದೆ. ಕಂಪನಿ 4,500 ಎಂಎಎಚ್ ಸಾಮರ್ಥ್ಯ ಬ್ಯಾಟರಿ ನೀಡುತ್ತದೆ. 65 ವಾಟ್  ಚಾರ್ಜಿಂಗ್‌ಗೆ ಇದು ಸಪೋರ್ಟ್ ಮಾಡುತ್ತದೆ. 188 ಗ್ರಾಮ್ ತೂಕವಿದೆ ಈ ಫೋನ್.

ಈ ಒನ್‌ಪ್ಲಸ್ 8ಟಿ ಸೈಬರ್‌ಪಂಕ್ 2077 ಲಿಮಿಟೆಡ್ ಎಡಿಷನ್ ಫೋನ್ ನೋಡಲು ಕೂಡ ತುಂಬಾ ಚೆನ್ನಾಗಿದೆ. ಫೋನ್ ಹೊರ ಮೈ ಸೈಬರ್‌ಪಂಕ್ ಗೇಮ್ ಥೀಮ್ ಅನ್ನು ಪ್ರತಿನಿಧಿಸುತ್ತದೆ. ಬ್ಲ್ಯಾಕ್ ಕಾರ್ಬನ್ ಫಿನಿಷಿಂಗ್ ಮತ್ತು ಹೊಳೆಯುವ ಎರಡು ಪ್ಯಾನಲ್‌ಗಳಿಂದ ಸುತ್ತುವರಿದಿದೆ. ಫೋನ್ ಹಿಂಬದಿಯಲ್ಲಿ ಸೈಬರ್ ಪಂಕ್ ಗೇಮ್ ಬ್ರ್ಯಾಡಿಂಗ್ ಪ್ರತಿಫಲನಗೊಳ್ಳುತ್ತದೆ.  ಇದು ಸೈಬರ್‌ಪಂಕ್‌ನ ಲುಕ್‌ಗೆ ಅನುಗುಣವಾಗಿ ಪ್ರೀಲೋಡೆಡ್ ಥೀಮ್‌ನೊಂದಿಗೆ  ಬರುತ್ತದೆ. ಸೈಬರ್‌ಪಂಕ್ ಥೀಮ್‌ಗೆ ಜೀವ ತುಂಬುವ ಕೆಲವು ಆಡಿಯೊ ಬದಲಾವಣೆಗಳನ್ನು ನೀವಿಲ್ಲಿ ಕಾಣಬಹುದು. ಈ ಫೋನ್‌ ಗೇಮಿಂಗ್, ಕ್ಯಾಮರಾ, ಪ್ರದರ್ಶನ ದೃಷ್ಟಿ ಸೇರಿದಂತೆ ಒಟ್ಟಾರೆಯಾಗಿ ನಿಮಗೆ ಅತ್ಯುತ್ತಮ ಅನುಭವವನ್ನು ನೀಡುತ್ತದೆ.

ಭಾರತದ ಮಾರುಕಟ್ಟೆಯಲ್ಲಿ ಟಿ8 ಸೀರಿಸ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವ ಒನ್‌ಪ್ಲಸ್, ಈ ಲಿಮಿಟೆಡ್ ಎಡಿಷನ್ ಪೋನ್‌ನೊಂದಿಗೆ ಮತ್ತೊಂದು ಹಂತಕ್ಕೆ ಬಳಕೆದಾರರನ್ನು ಕೊಂಡೊಯ್ಯಲು ಮುಂದಾಗಿದೆ.

ವಾಟ್ಸ್ಆ್ಯಪ್‌ಗೆ ಶೀಘ್ರ ಫೇಶಿಯಲ್ ರೆಕಗ್ನಿಷನ್?

click me!