ಒನ್‌ಪ್ಲಸ್ ತಮ್ಮ ಹಳೆಯ ಸಾಧನವನ್ನು ಹೊಸ ಒನ್‌ಪ್ಲಸ್ ಸಾಧನಕ್ಕೆ ವಿಶೇಷವಾಗಿ OnePlus 10R ಗೆ ಅಪ್‌ಗ್ರೇಡ್ ಮಾಡಲು 30,000 ರೂ. ವರೆಗೆ ರಿಯಾಯಿತಿ ವೋಚರ್ ಅನ್ನು ಭರವಸೆ ನೀಡುತ್ತಿದೆ.
ನವದೆಹಲಿ (ಆಗಸ್ಟ್ 10, 2023): ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಮತ್ತು ಜಾಗತಿಕವಾಗಿ ಕೆಲವು ಒನ್‌ಪ್ಲಸ್ ಬಳಕೆದಾರರು ವಿಚಿತ್ರವಾದ ಗ್ರೀನ್ ಸ್ಕ್ರೀನ್ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೋನ್ ಕಾರ್ಯನಿರ್ವಹಿಸುತ್ತಿದ್ದರೂ ಹಸಿರು ಲೈನ್ ಕಾಣಿಸಿಕೊಳ್ಳುತ್ತಿದೆ ಮತ್ತು ಇದು ಒಟ್ಟಾರೆ ಸ್ಕ್ರೋಲಿಂಗ್ ಅನುಭವವನ್ನು ಅಡ್ಡಿಪಡಿಸುತ್ತದೆ ಎಂದಿದ್ದಾರೆ. ಹಾಗೂ, AMOLED ಡಿಸ್ಪ್ಲೇ ಹೊಂದಿರುವ ಫೋನ್‌ಗಳಲ್ಲಿ ಈ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ "ಗ್ರೀನ್-ಸ್ಕ್ರೀನ್" ಸಮಸ್ಯೆಯಿಂದ ಬಳಲುತ್ತಿರುವ ಬಳಕೆದಾರರಿಗೆ ಒನ್‌ಪ್ಲಸ್ ಕಂಪನಿ ಲೈಫ್‌ಟೈಮ್ ವಾರಂಟಿಯನ್ನು ಘೋಷಿಸಿದೆ.
ಈ ವಾರಂಟಿಯು ಬಹುತೇಕ ಎಲ್ಲ ಮಾಡೆಲ್‌ಗಳನ್ನು ಒಳಗೊಂಡಿದೆ ಎಂದು ಕಂಪನಿ ಹೇಳುತ್ತದೆ. ಆದರೆ, OnePlus 8 Pro, OnePlus 8T, OnePlus 9, ಮತ್ತು OnePlus 9R ಸೇರಿದಂತೆ ಹಳೆಯ OnePlus ಸಾಧನಗಳನ್ನು ಇದು ಒಳಗೊಂಡಿರುವುದಿಲ್ಲ. ಏಕೆಂದರೆ ಸಮಸ್ಯೆಯನ್ನು ಪರಿಹರಿಸಲು ಯಾವುದೇ "ಬಿಡಿ ಭಾಗಗಳು" ಇಲ್ಲ ಎನ್ನಲಾಗಿದೆ.. ಆದರೂ, ಒನ್‌ಪ್ಲಸ್ ತಮ್ಮ ಹಳೆಯ ಸಾಧನವನ್ನು ಹೊಸ ಒನ್‌ಪ್ಲಸ್ ಸಾಧನಕ್ಕೆ ವಿಶೇಷವಾಗಿ OnePlus 10R ಗೆ ಅಪ್‌ಗ್ರೇಡ್ ಮಾಡಲು 30,000 ರೂ. ವರೆಗೆ ರಿಯಾಯಿತಿ ವೋಚರ್ ಅನ್ನು ಭರವಸೆ ನೀಡುತ್ತಿದೆ. ಅಂದರೆ, ಹಳೆಯ ಒನ್‌ಪ್ಲಸ್ ಬಳಕೆದಾರರು 5,000 ರಿಂದ 10,000 ರೂಪಾಯಿಗಳನ್ನು ನೀಡಿದರೆ ಹೊಸ ಒನ್‌ಪ್ಲಸ್ 10R ಅನ್ನು ಖರೀದಿಸಬಹುದು.
ಇದನ್ನು ಓದಿ: ಆ್ಯಪಲ್ ಫೋನ್ ಪ್ರಿಯರಿಗೆ ಸಿಹಿ ಸುದ್ದಿ: iPhone 15 ರಿಲೀಸ್ ಡೇಟ್ ಬಹಿರಂಗ; ಹೊಸ ಫೋನ್‌ನಲ್ಲಿರಲಿದೆ ಈ ಫೀಚರ್ಸ್!
ಆದರೆ, ಜೀವಮಾನದ ವಾರಂಟಿಯನ್ನು ಭಾರತದಲ್ಲಿನ ಬಳಕೆದಾರರಿಗೆ ಮಾತ್ರ ವಿಸ್ತರಿಸಲಾಗಿದೆ ಎಂದು ಆಂಡ್ರಾಯ್ಡ್ ಅಥಾರಿಟಿ ವರದಿ ಮಾಡಿದೆ. "ಈ ಸಮಸ್ಯೆಯು ಸ್ಕ್ರೀನ್ ಸಮಸ್ಯೆಯುಳ್ಳ ಬಳಕೆದಾರರಿಗೆ ಹೆಚ್ಚಿನ ಅನಾನುಕೂಲತೆಯನ್ನು ಉಂಟುಮಾಡಿದೆ ಎಂದು ನಾವು ಅರಿತುಕೊಂಡಿದ್ದೇವೆ ಮತ್ತು ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ನಾವು ಸ್ಮಾರ್ಟ್‌ಫೋನ್ ಡಯಾಗ್ನಸಿಸ್‌ಗಾಗಿ ಹತ್ತಿರದ ಒನ್‌ಪ್ಲಸ್ ಸರ್ವೀಸ್ ಸೆಂಟರ್‌ಗೆ ಭೇಟಿ ಮಾಡಲು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ. ಹಾಗೂ ಗ್ರೀನ್ ಸ್ಕ್ರೀನ್ ಸಮಸ್ಯೆಯುಳ್ಳ ಎಲ್ಲ ಸ್ಮಾರ್ಟ್‌ಫೋನ್‌ಗಳಿಗೆ ನಾವು ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಅನ್ನು ಒದಗಿಸುತ್ತೇವೆ.
ಆಯ್ದ OnePlus 8 ಮತ್ತು 9 ಸರಣಿಯ ಸಾಧನಗಳಲ್ಲಿ, ಹೊಸ OnePlus ಸಾಧನಕ್ಕೆ ಅಪ್‌ಗ್ರೇಡ್ ಮಾಡಲು ಫೋನ್ ಮೌಲ್ಯದ ನ್ಯಾಯೋಚಿತ ಶೇಕಡಾವಾರು ಪ್ರಮಾಣವನ್ನು ಬಳಕೆದಾರರಿಗೆ ಒದಗಿಸುವ ವೋಚರ್ ಅನ್ನು ಸಹ ನಾವು ನೀಡುತ್ತಿದ್ದೇವೆ. ಪ್ರಸ್ತುತ ಪರಿಸ್ಥಿತಿ ಹಿನ್ನೆಲೆ, ನಾವು ಈಗ ಎಲ್ಲಾ ಪೀಡಿತ ಸಾಧನಗಳಳಿಗೆ ಲೈಫ್‌ಟೈಂ ಸ್ಕ್ರೀನ್ ವಾರಂಟಿ ನೀಡುತ್ತಿದ್ದೇವೆ. ನಿಮ್ಮ ತಿಳುವಳಿಕೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು’’ ಎಂದು ವರದಿ ಹೇಳುತ್ತದೆ.
ಇದನ್ನೂ ಓದಿ: ವಿಶ್ವದ ನಂ. 1 ಶ್ರೀಮಂತ ವ್ಯಕ್ತಿಯಾಗಿದ್ರೂ 2 ಬೆಡ್‌ರೂಮ್‌ನ ಪುಟ್ಟ ಮನೆಯಲ್ಲಿ ವಾಸ: ಇದು ಎಲಾನ್ ಮಸ್ಕ್ ಸರಳ ಜೀವನ
ಈ ಮಧ್ಯೆ, ಒನ್‌ಪ್ಲಸ್ ಸೇವಾ ಕೇಂದ್ರದ ಹೊರಗೆ ಸ್ಕ್ರೀನ್ ಸಮಸ್ಯೆಯಿಂದ ಪ್ರಭಾವಿತವಾಗಿರುವ OnePlus 8 Pro, OnePlus 8T, OnePlus 9 ಮತ್ತು OnePlus 9R ಬಳಕೆದಾರರಿಗೆ ಕಂಪನಿ ನೀಡುತ್ತಿರುವ "ಡಿಸ್ಕೌಂಟ್ ವೋಚರ್" ಕುರಿತು ಸ್ಪಷ್ಟವಾದ ವಿವರವನ್ನು ಒದಗಿಸುತ್ತದೆ ಎಂದು ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
OnePlus 8 Pro ಬಳಕೆದಾರರು 25,500 ರೂ. ವೋಚರ್ ಸ್ವೀಕರಿಸುತ್ತಾರೆ. ಹಾಗೂ OnePlus 8T 20,000 ರೂ. ಮೌಲ್ಯದ ವೋಚರ್ ಮೌಲ್ಯಕ್ಕೆ ಅರ್ಹವಾಗಿದೆ. ಇನ್ನು, OnePlus 9ಗೆ 23,500 ರೂ. ಮತ್ತು ಒನ್‌ಪ್ಲಸ್ 9Tಗೆ 19,000 ರೂ. ಮೌಲ್ಯದ ವೋಚರ್ ಮೌಲ್ಯವನ್ನು ಪಡೆಯುತ್ತಿವೆ. ಹೆಚ್ಚುವರಿಯಾಗಿ, ಹಳೆಯ ಒನ್‌ಪ್ಲಸ್ ಫೋನ್‌ಗಳನ್ನು ಹೊಂದಿರುವ ಬಾಧಿತ ಬಳಕೆದಾರರು OnePlus 10R ಗೆ ಅಪ್‌ಗ್ರೇಡ್ ಮಾಡಿದರೆ, ಒನ್‌ಪ್ಲಸ್ ಹೆಚ್ಚುವರಿ 4,500 ರೂ. ಕೊಡುಗೆಯನ್ನು ಒದಗಿಸುತ್ತದೆ ಎಂದು ತಿಳಿದುಬಂದಿದೆ. ಡಿಸ್ಕೌಂಟ್ ವೋಚರ್‌ಗೆ ಅರ್ಹರಾಗಲು ಸ್ಮಾರ್ಟ್‌ಫೋನ್‌ನ ಸ್ಥಿತಿಯ ಬಗ್ಗೆ ಸೂಚನೆಯು ಏನನ್ನೂ ಉಲ್ಲೇಖಿಸಿಲ್ಲ ಎಂಬುದನ್ನು ಗಮನಿಸಬೇಕು.
ಇದನ್ನೂ ಓದಿ: Zomato ಪ್ರಿಯರಿಗೆ ಶಾಕಿಂಗ್ ನ್ಯೂಸ್: ಪ್ರತಿ ಆಹಾರದ ಆರ್ಡರ್‌ಗೆ ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧಾರ