*ಶೀಘ್ರದಲ್ಲಿ ಮಾರುಕಟ್ಟೆಗೆ ಪರಿಚಯವಾಗಲಿವೆ ಒನ್‌ಪ್ಲಸ್ 11 ಮತ್ತು ಒಪ್ಪೋ ಫೈಂಡ್ ಎನ್ 2
*ಒನ್ ಪ್ಲಸ್ 11 ಮತ್ತು ಒಪ್ಪೋ ಫೈಂಡ್ ಎನ್2 ಪೈಕಿ, ಒಪ್ಪೋ ಫೋಲ್ಡಬಲ್ ಫೋನ್ ಆಗಿದೆ
*ಈ ಎರಡೂ ಫೋನ್‌ಗಳ ಮಧ್ಯೆ ಸಾಕಷ್ಟು ಸಾಮ್ಯತೆಗಳಿವೆ ಎಂದು ಹೇಳಲಾಗುತ್ತಿದೆ
ಒಪ್ಪೋ (Oppo) ಕಂಪನಿಯ ಒಪ್ಪೋ ಫೈಂಡ್ ಎನ್ 2 (Oppo Find N2) ಮತ್ತು ಒನ್ ಪ್ಲಸ್ (OnePlus) ಕಂಪನಿಯ ಒನ್ ಪ್ಲಸ್ 11 (OnePlus 11) ಎರಡೂ ಸ್ಮಾರ್ಟ್‌ಫೋನುಗಳು ಬಹು ನಿರೀಕ್ಷೆಯ ಫೋನುಗಳಾಗಿವೆ. ಈಗಾಗಲೇ ಇವುಗಳ ಬಗ್ಗೆ ಬಳಕೆದಾರರಲ್ಲಿ ತೀವ್ರ ಕುತೂಹಲ ಸೃಷ್ಟಿಯಾಗಿದೆ. ಅದರಲ್ಲೂ OnePlus 11 ಸ್ಮಾರ್ಟ್‌ಫೋನ್ ಸಂಬಂಧಿ ಮಾಹಿತಿಯ ಸೋರಿಕೆಯಿಂದಾಗಿ ಮತ್ತಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಈ ಎರಡೂ ಫೋನ್‌ಗಳು ಪೈಕಿ ಒಂದು ಫೋಲ್ಡಬಲ್ ಫೋನ್ ಆಗಿದೆ. ಆದಾಗ್ಯೂ, ಕ್ಯಾಮೆರಾ ವಿಷಯದಲ್ಲಿ ಮಾತ್ರ ಈ ಎರಡೂ ಫೋನ್‌ಗಳು ಸೇಮ್ ಟು ಸೇಮ್ ಎಂದು ಹೇಳಲಾಗುತ್ತಿದೆ. ಈ ಫೋನ್‌ಗಳ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಮಾಹಿತಿಯು ಸೋರಿಕೆಯಾಗಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿನ ಕ್ಯಾಮೆರಾಗಳು ಒಂದೇ ಆಗಿರುತ್ತವೆ ಎಂದು ಸೂಚಿಸುತ್ತದೆ.
ಬೆಂಗಳೂರಿನಲ್ಲಿ ಜಿಯೋ ಟ್ರೂ 5G ಸೇವೆ ಆರಂಭ, ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಣೆ!
undefined
ಒನ್ ಪ್ಲಸ್ 11 (OnePlus 11) ಮತ್ತು ಒಪ್ಪೋ ಫೈಂಡ್ ಎನ್2 (Oppo Find N2) ಎರಡೂ ಒಂದೇ ರೀತಿಯ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಇದರಲ್ಲಿ 50 ಮೆಗಾ ಪಿಕ್ಸೆಲ್ ಸೋನಿ IMX890 ಪ್ರಾಥಮಿಕ ಕ್ಯಾಮೆರಾ, 48 ಮೆಗಾ ಪಿಕ್ಸೆಲ್ ಸೋನಿ IMX581 ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 32 ಮೆಗಾ ಪಿಕ್ಸೆಲ್ ಸೋನಿ IMX709 2x ಜೂಮ್ ಕ್ಯಾಮೆರಾ ಇರಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ನಲ್ಲಿ ಮಾತ್ರ ವ್ಯತ್ಯಾಸವಿರಬಹುದು. ಹಾಗೆಯೇ, OnePlus 11 ಈ ಕ್ಯಾಮೆರಾ ಮಾತ್ರ ಈ ವೈಶಿಷ್ಟ್ಯವನ್ನು ಹೊಂದಿರುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ.
ಈ ಹಿಂದೆ ಸೋರಿಕೆಯಾದ ಮಾಹಿತಿಗಳ ಪ್ರಕಾರ, OnePlus 11 ಫೋನ್ Snapdragon 8 Gen 2 ಪ್ರೊಸೆಸರ್ ಮತ್ತು 16 GB RAM ಅನ್ನು ಬಳಸಬಹುದು. ಈ ಫೋನ್ 6.7-ಇಂಚಿನ QHD+ OLED ಡಿಸ್ ಪ್ಲೇ ಹೊಂದಿರಬಹುದು. 100 W ಕೇಬಲ್ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ 5000 mAh ಬ್ಯಾಟರಿಯನ್ನು ಫೋನಿನಲ್ಲಿ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಬ್ಯಾಟರಿ ದೃಷ್ಟಿಯಿಂದ ತೀರಾ ಅಂಥ ಕಳಪೆ ಏನಲ್ಲ ಎಂದು ಹೇಳಲಾಗುತ್ತಿದೆ. ಮೂಲಗಳು ಮತ್ತು ಸೋರಿಕೆಯ ಮಾಹಿತಿಗಳ ಪ್ರಕಾರ, Oppo Find N2 ಸ್ನಾಪ್ಡ್ರಾಗನ್ 8+ Gen 1 ಚಿಪ್ಸೆಟ್ ಅನ್ನು ಬಳಸುವ ನಿರೀಕ್ಷೆಯಿದೆ. ಆದರೆ OnePlus 11 ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 2 ಬಳಸಿರುವ ಸಾಧ್ಯತೆ ಇದೆ.
ಹಾಗೆಯೇ, OnePlus OnePlus 11 ಅನ್ನು Series 11 ಅಡಿಯಲ್ಲಿ ಪ್ರೊ ಮಾದರಿಯ ಬದಲಿಗೆ Pro ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗುತ್ತಿದೆ. ಜನಪ್ರಿಯ ಟಿಪ್ಸಟರ್ ಮ್ಯಾಕ್ಸ್ ಜಂಬೋರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮೊದಲಿಗೆ ಸುದ್ದಿ ಹರಿಬಿಟ್ಟಿದ್ದಾರೆ. ಕಂಪನಿಗಳು ಮಾತ್ರ ಈ ಬಗ್ಗೆ ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 OS ಒಳಗೊಂಡಿರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಇನ್ನು ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, Wi-Fi 6E, ಬ್ಲೂಟೂತ್ 5.2, GPS ಮತ್ತು USB ಟೈಪ್-C ಕನೆಕ್ಟರ್ ಇರಬಹುದು.
Instagram Followers ಜಾಸ್ತಿಯಾಗಬೇಕು ಅಂದ್ರೆ ಈ ಟ್ರಿಕ್ಸ್ ಫಾಲೋ ಮಾಡಿ
ಚೀನಾ ಮೂಲದ ಒನ್ ಪ್ಲಸ್ ಕಂಪನಿಯು OnePlus 11R ಎಂದು ಕರೆಯಲಾಗುವ ಮತ್ತೊಂದು ಫೋನ್ನ ತಯಾರಿಕೆಯಲ್ಲೂ ಮಗ್ನವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ. ಹಾಗಿದ್ದಯೂ, ಈ ಫೋನ್ ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಕಂಪನಿಯು OnePlus 11 ಸರಣಿ ಅಥವಾ ಅದರ ಕೊಡುಗೆಗಳಿಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ ಎಂಬುದನ್ನು ಓದುಗರು ಗಮನಿಸಬೇಕು.