*5ಜಿ ಎಂಟ್ರಿಲೇವಲ್ ಗ್ರಾಹಕರನ್ನು ಗುರಿಯಾಗಿಸಿಕೊಂಡು ಫೋನ್ ಲಾಂಚ್ ಮಾಡಿದ ಲಾವಾ
*ಲಾವಾ ಬ್ಲೇಜ್ 5ಜಿ ಫೋನ್ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ ಮತ್ತು ಆಕರ್ಷಕವಾಗಿದೆದ
*ಈ ಒಂದೇ ವೆರಿಯೆಂಟ್‌ಲ್ಲಿ ದೊರೆಯಲಿದ್ದದು, ಆರಂಭಿಕ ಸೇಲ್‌ನಲ್ಲಿ ಹತ್ತು ಸಾವಿರಕ್ಕೆ ಸಿಗಲಿದೆ.
"ಭಾರತದ ಅತ್ಯಂತ ಅಗ್ಗದ 5G ಫೋನ್" ಎಂದು ಕರೆಯಲಾಗುವ ಲಾವಾ ಬ್ಲೇಜ್ 5ಜಿ (Lava Blaza 5G) ಸ್ಮಾರ್ಟ್ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಔಪಚಾರಿಕವಾಗಿ ಪರಿಚಯಿಸಲಾಗಿದೆ. ಕಳೆದ ತಿಂಗಳು ಅಕ್ಟೋಬರ್ನಲ್ಲಿ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 (India Mobile Congress-2022) ಸಮಾವೇಶದಲ್ಲಿ ಕಂಪನಿಯು ಈ ಫೋನ್ ಅನ್ನು ಅನಾವರಣ ಮಾಡಿತ್ತು. ಭಾರತದಲ್ಲಿ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ನಿಗದಿತ ನಗರಗಳಲ್ಲಿ 5ಜಿ ಸೇವೆಯನ್ನು ಒದಗಿಸಲು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ 5G ಅಳವಡಿಸಿಕೊಳ್ಳಲು ಉತ್ಸುಕರಾಗಿರುವ ಪ್ರವೇಶ ಮಟ್ಟದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಸ್ಮಾರ್ಟ್ಫೋನ್ ಅನ್ನು ದೇಶಿ ಕಂಪನಿಯಾಗಿರುವ ಲಾವಾ ಅಭಿವೃದ್ಧಿಪಡಿಸಿದೆ. ಲಾವಾದ ಹೊಸ 5G ಸ್ಮಾರ್ಟ್ ಫೋನ್ ಅನ್ನು ಅಮೆಜಾನ್ ಮೂಲಕ ಮಾರಾಟ ಮಾಡಲಾಗುವುದು ಎಂದು ಖಚಿತಪಡಿಸಲಾಗಿದೆ. ಎಂಟ್ರಿ ಲೇವಲ್ ಗ್ರಾಹಕರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿರುವ ಈ ಸ್ಮಾರ್ಟ್‌ಫೋನ್ ಬಗ್ಗೆ ಈಗಾಗಲೇ ಮಾರುಕಟ್ಟೆಯಲ್ಲಿ ಒಳ್ಳೆಯ ಮಾತುಗಳು ಕೇಳಿ ಬರುತ್ತವೆ. ಬಳಕೆದಾರರು ಹೇಗೆ ಪ್ರತಿಕ್ರಿಯಿಸಲಿದ್ದಾರೆಂದು ಕಾದು ನೋಡಬೇಕು.
ಬೆಂಗಳೂರಿನಲ್ಲಿ ಜಿಯೋ ಟ್ರೂ 5G ಸೇವೆ ಆರಂಭ, ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಣೆ!
undefined
ಲಾವಾ ಬ್ಲೇಜ್ 5ಜಿ (Lava Blaze 5G) ಒಂದೇ ವೆರಿಯೆಂಟ್ನಲ್ಲಿ ಮಾರಾಟಕ್ಕೆ ದೊರೆಯಲಿದೆ. ಇದರಲ್ಲಿ ಬೇರೆ ಬೇರೆ ಮಾಡೆಲ್ಗಳು ಇಲ್ಲ. ಅಂದರೆ 4 GB RAM ಮತ್ತು 128 GB ಸ್ಟೋರೇಜ್ ಕಾನ್ಫಿಗರೇಶನ್ ವೆರಿಯೆಂಟ್ ಫೋನ ಮಾತ್ರ ಮಾರಾಟಕ್ಕೆ ದೊರೆಯಲಿದೆ. ಈ ಫೋನ್ ಬೆಲೆ 9,999 ರೂಪಾಯಿ ಆಗಿರಲಿದೆ. ಆರಂಭಿಕ ಮಾರಾಟದ ಬಳಿಕ, ಈ ಫೋನ್ ಬೆಲೆ ಹೆಚ್ಚಾಗುವ ಸಾಧ್ಯತೆಗಳಿವೆ. Lava ಇನ್ನೂ ಬ್ಲೇಜ್ 5G ಸ್ಮಾರ್ಟ್ಫೋನ್ಗೆ ನಿಖರವಾದ ಬಿಡುಗಡೆ ದಿನಾಂಕವನ್ನು ನಿರ್ದಿಷ್ಟಪಡಿಸಿಲ್ಲ. ಹಾಗಿದ್ದಾಗೂ, ಶೀಘ್ರವೇ ಮಾರಾಟಕ್ಕೆ ಸಿಗಬಹುದು ಎಂದು ಹೇಳಲಾಗುತ್ತಿದೆ. ಗ್ಲಾಸ್ ಬ್ಲೂ (Glass Blue) ಮತ್ತು ಗ್ಲಾಸ್ ಗ್ರೀನ್ (Glass Green) ಈ ಎರಡು ಬಣ್ಣಗಳ ಆಯ್ಕೆಯಲ್ಲಿ ದೇಶದ ಅಗ್ಗದ ಫೋನ್ ಎನಿಸಿರುವ ಲಾವಾ ಬ್ಲೇಜ್ 5ಜಿ ಸ್ಮಾರ್ಟ್ಫೋನ್ ಗ್ರಾಹಕರಿಗೆ ಸಿಗಲಿದೆ.
MediaTek ಡೈಮೆನ್ಸಿಟಿ 700 ಪ್ರೊಸೆಸರ್, ಜೊತೆಗೆ 4 GB RAM ಮತ್ತು 128 GB ಸ್ಟೋರೇಜ್, Lava Blaze 5G ಗೆ ಶಕ್ತಿ ನೀಡುತ್ತದೆ. ಲಾವಾ ಕಂಪನಿಯ ಈ ಫೋನ್ ಆಂಡ್ರಾಯ್ಡ್ 12ರಿಂದ ಚಾಲಿತವಾಗಿದೆ ಎಂಬುದು ಗಮನಾರ್ಹವಾಗಿದೆ. ಫೋನ್ ಸ್ಟೋರೇಜ್ ಅನ್ನು ಬಳಕೆದಾರರು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿಕೊಂಡು 156 ಜಿಬಿವರೆಗೂ ಹೆಚ್ಚಿಸಿಕೊಳ್ಳಹುದಾಗಿದೆ.
ದೇಶದ ಅತಿ ಅಗ್ಗದ 5ಜಿ ಫೋನ್ ಎನಿಸಿಕೊಂಡಿರುವ ಲಾವಾ ಬ್ಲೇಜ್ 5ಜಿ ಫೋನ್‌ನಲ್ಲಿ 6.5 ಇಂಚಿನ ಐಪಿಎಸ್ ಎಚ್ ಡಿ ಪ್ಲಸ್ ಸ್ಕ್ರೀನ್ ನೀಡಲಾಗಿದೆ. ಇದು 90Hz ರಿಫ್ರೆಶ್ ದರಕ್ಕೆ ಬೆಂಬಲಿಸುತ್ತದೆ. ಗ್ರಾಹಕರು ಅಮೆಜಾನ್ ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ನಂತಹ OTT ಅಪ್ಲಿಕೇಶನ್‌ಗಳನ್ನು HD ಯಲ್ಲಿ ಬಾಕ್ಸ್‌ನ ಹೊರಗೆ ಫೋನ್‌ನಲ್ಲಿ ಅನುಭವಿಸಬಹುದು.
Instagram Followers ಜಾಸ್ತಿಯಾಗಬೇಕು ಅಂದ್ರೆ ಈ ಟ್ರಿಕ್ಸ್ ಫಾಲೋ ಮಾಡಿ
ಲಾವಾ ಬ್ಲೇಜ್ 5ಜಿ (Lava Blaze 5G) ಆಪ್ಟಿಕ್ಸ್ಗಾಗಿ ಟ್ರಿಪಲ್ ಕ್ಯಾಮೆರಾ ಕಾನ್ಫಿಗರೇಶನ್ ಅನ್ನು ಹೊಂದಿದೆ. ಇದರಲ್ಲಿ 50 - ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ಎರಡನೇ ಆಳ ಸಂವೇದಕ ಮತ್ತು ನಿರ್ದಿಷ್ಟ ಮ್ಯಾಕ್ರೋ ಲೆನ್ಸ್ ಕ್ಯಾಮೆರಾಗಳನ್ನು ಹೊಂದಿದೆ. 8 ಮೆಗಾ ಪಿಕ್ಸೆಲ್ ಫ್ರಂಟ್ ಫೇಸಿಂಗ್ ಸೆಲ್ಫಿ ಕ್ಯಾಮೆರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಇದು ಯುಎಸ್ಬಿ ಟೈಪ್-ಸಿ ಮೂಲಕ ಚಾರ್ಜ್ ಆಗುತ್ತದೆ ಮತ್ತು ಈ ಸ್ಮಾರ್ಟ್ಫೋನ್ನಲ್ಲಿ ಕಂಪನಿಯು 5,000mAh ಬ್ಯಾಟರಿಯನ್ನು ಒದಗಿಸಿದೆ. ಈ ಬ್ಯಾಟರಿ ಸ್ಟ್ಯಾಂಡ್ಬೈ ಮೋಡ್ನಲ್ಲಿ 50 ಗಂಟೆಗಳ ಟಾಕ್ ಟೈಮ್ ಮತ್ತು 25 ದಿನಗಳ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.