OnePlus 11 ಮೊದಲ ಅಧಿಕೃತ ಟೀಸರ್ ಲಾಂಚ್! ಏನೆಲ್ಲ ವಿಶೇಷತೆಗಳಿವೆ?

By Suvarna News  |  First Published Dec 19, 2022, 11:18 AM IST

*ಒನ್‌ಪ್ಲಸ್ ಕಂಪನಿಯು ಬಹು ನಿರೀಕ್ಷೆಯ ಒನ್‌ಪ್ಲಸ್ 11 ಸ್ಮಾರ್ಟ್‌ಫೋನ್ ಕುತೂಹಲ ಹುಟ್ಟು ಹಾಕಿದೆ.
*ಕಂಪನಿಯು ಈ ಫೋನಿನ ಮೊದಲ ಅಧಿಕೃತ ಟೀಸರ್ ಲಾಂಚ್ ಮಾಡಿದ್ದು, ಮೆಚ್ಚುಗೆ ವ್ಯಕ್ತವಾಗಿದೆ
*ಟೀಸರ್ ಬಿಡುಗಡೆಯಾಗಿರುವುದಿರಂದ ಸದ್ಯದಲ್ಲಿ ಫೋನ್ ಲಾಂಚ್ ಕೂಡ ನಿರೀಕ್ಷಿಸಬಹುದಾಗಿದೆ
 


ಒನ್‌ಪ್ಲಸ್ ಕಂಪನಿಯ ಭಾರೀ ನಿರೀಕ್ಷೆಯ ಹುಟ್ಟು ಹಾಕಿರುವ ಮತ್ತು ಹೈ ಎಂಡ್ ಫೋನ್ ಒನ್‌ಪ್ಲಸ್ 11 5ಜಿ ಫೋನ್ ಕುರಿತು ಸುದ್ದಿಗಳು ಆಗಾಗ ಹೊರ ಬರತ್ತಲೇ ಇರುತ್ತವೆ. ಇದೀಗ ಅಧಿಕೃತ ಸುದ್ದಿಯೊಂದು ಹೊರ ಬಿದ್ದಿದ್ದು, ಕಂಪನಿಯ ಒನ್‌ಪ್ಲಸ್ 11 5ಜಿ (OnePlus 11 5G) ಫೋನ್ ಕುರಿತಾದ ಟೀಸರ್ ಲಾಂಚ್ ಮಾಡಿದೆ. ಆ ಮೂಲಕ ಕಂಪನಿಯು ಈ ಫೋನ್ ಬಿಡುಗಡೆಯು ಹತ್ತಿರದಲ್ಲೇ ಇದೆ ಎಂಬ ಸಂದೇಶವನ್ನು ರವಾನಿಸಿದೆ. ಕಂಪನಿಯ 9ನೇ ವಾರ್ಷಿಕೋತ್ಸವದ ಅಂಗವಾಗಿ ಚೀನಾದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ, ತನ್ನ ಗ್ರಾಹಕರಿಗೆ ಒನ್ ಪ್ಲಸ್ ಕಂಪನಿಯು OnePlus 11 ಸ್ಮಾರ್ಟ್‌ಫೋನ್ ಅನ್ನು ವೀಡಿಯೊದಲ್ಲಿ ಬಹಿರಂಗಪಡಿಸಿದೆ. ಇದು ಸ್ಮಾರ್ಟ್‌ಫೋನ್‌ನ ವಿನ್ಯಾಸವನ್ನು ಭಾಗಶಃ ಮಾತ್ರ ಬಹಿರಂಗಪಡಿಸುತ್ತದೆಯಾದರೂ, ಇದು ಹಲವಾರು ಅಂಶಗಳನ್ನು ದೃಢೀಕರಿಸುತ್ತದೆ.

ಟೀಸರ್ ಪ್ರಕಾರ, OnePlus 11 ನಲ್ಲಿನ ಟ್ರಿಪಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ವರ್ಧಿತ ಬಣ್ಣ ಗ್ರೇಡಿಂಗ್ ಮತ್ತು ಒಟ್ಟಾರೆ ಗುಣಮಟ್ಟಕ್ಕಾಗಿ ಹ್ಯಾಸೆಲ್‌ಬ್ಲಾಡ್ ಆಪ್ಟಿಮೈಸ್ ಮಾಡುತ್ತದೆ ಎಂಬುದನ್ನು ಕಾಣಬಹುದಾಗಿದೆ. ಹಿಂದಿನ ವಿನ್ಯಾಸಕ್ಕಿಂತ, ಈ ಫೋನ್‌ನಲ್ಲಿ  ಸ್ವಲ್ಪ ದೊಡ್ಡದಾಗಿ ತೋರುವ ವೃತ್ತಾಕಾರದ ಮಾಡ್ಯೂಲ್ ಹಿಂಭಾಗದ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರುತ್ತದೆ ಎಂಬುದು ಖಚಿತವಾಗಿದೆ.

Moto G53 5G: ಅಗ್ಗದ ಮೊಟೊ ಜಿ53 5ಜಿ ಫೋನ್ ಲಾಂಚ್, ಬೆಲೆ ಎಷ್ಟು?

Tap to resize

Latest Videos

undefined

ಸ್ಮಾರ್ಟ್‌ಫೋನ್‌ನ ಬಲಭಾಗದಲ್ಲಿ ಅಲರ್ಟ್ ಸ್ಲೈಡರ್ ಕೂಡ ಇದೆ. ಈ ಹಿಂದೆ ಒನ್‌ಪ್ಲಸ್ 11 ಫೋನ್ ಕುರಿತು ಸೋರಿಕೆಯಾದ ಮಾಹಿತಿಗಳಲ್ಲೂ ಈ ವಿಷಯವಿತ್ತು. ಅದೀಗ ಖಚಿತವಾಗಿದೆ. ಟೀಸರ್ ಪ್ರಕಾರ, OnePlus 11 5ಜಿ  ಸ್ಮಾರ್ಟ್‌ಫೋನ್ ಸಾಂಪ್ರದಾಯಿಕ ಕಪ್ಪು ಬಣ್ಣದ ಫಿನಿಶ್‌ನಲ್ಲಿ ಅನಾವರಣಗೊಳ್ಳಲಿದೆ. ಹಾಗೆಯೇ, ಇನ್ನೂ ಹೆಚ್ಚಿನ ಬಣ್ಣಗಳ ಆಯ್ಕೆಯಲ್ಲಿ ಫೋನ್ ದೊರೆಯಬಹುದು ಎನ್ನಲಾಗುತ್ತಿದೆ. ವಿಡಿಯೋದಲ್ಲಿ ನೋಡಿದಾಗ ಫೋನ್ ಹಿಂಭಾಗದಲ್ಲಿ ಹೊಳೆಯುವ ಗ್ಲಾಸ್ ಫಿನಿಶ್ ಹೊಂದಿರುವಂತೆ ತೋರುತ್ತಿದೆ.

OnePlus 11 5ಜಿ ಸ್ಮಾರ್ಟ್‌ ಫೋನ್  6.7-ಇಂಚಿನ QHD+ AMOLED ಪರದೆಯು 120Hz ನ ರಿಫ್ರೆಶ್ ದರವನ್ನು ಮತ್ತು ಮುಂಭಾಗದ ಕ್ಯಾಮರಾಗೆ ಪಂಚ್ ಹೋಲ್ ಅನ್ನು ಹೊಂದಿರುವ ಸಾಧ್ಯತೆಗಳಿವೆ. ಇತ್ತೀಚೆಗೆ ಬಿಡುಗಡೆಯಾದ Qualcomm Snapdragon 8 Gen 2 CPU ಬಹುಶಃ ಈ ಹೈ ಎಂಡ್ ಸ್ಮಾರ್ಟ್‌ಫೋನ್‌ಗೆ ಶಕ್ತಿ ನೀಡುತ್ತದೆ. ಈ ಫೋನ್ ಬಹುಶಃ 256 GB ಸ್ಟೋರೇಜ್ ಮತ್ತು 16 GB RAM ವರೆಗೆ ಸಂಯೋಜಿಸಬಹುದು ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಕಂಪನಿಯು ಇನ್ನೂ ಯಾವುದೇ ಖಚಿತ ಮಾಹಿತಿಯನ್ನು ಹೊರ ಹಾಕಿಲ್ಲ. ಆಕ್ಸಿಜನ್ ಓಎಸ್ 13 (OxygenOS 13) ನಲ್ಲಿ ನಿರ್ಮಿಸಲಾದ ಆಂಡ್ರಾಯ್ಡ್ 13 ನೊಂದಿಗೆ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದೆ. 

ಗೂಗಲ್ ಚಾಲಿತ ಕ್ಯಾಮೆರಾ ಇರುವ Nokia C31 ಫೋನ್ ಲಾಂಚ್

OnePlus 11 ಟ್ರಿಪಲ್ ರಿಯರ್ ಕ್ಯಾಮೆರಾ ಕಾನ್ಫಿಗರೇಶನ್ ಅನ್ನು ಹೊಂದಿರುತ್ತದೆ ಎಂಬ ಊಹಾಪೋಹಗಳಿವೆ. ಈ ಸ್ಮಾರ್ಟ್ಫೋನ್ ಹಿಂಬದಿಯಲ್ಲಿ 50 MP ಮುಖ್ಯ ಕ್ಯಾಮೆರಾ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.  48 MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 32 MP 2x ಟೆಲಿಫೋಟೋ ಕ್ಯಾಮರಾವನ್ನು ಒಳಗೊಂಡಿರುವ ಸಾಧ್ಯತೆಗಳಿವೆ. ಫೋನ್ ಮುಂಭಾಗದಲ್ಲಿ 16 MP ಕ್ಯಾಮೆರಾ ಇರಲಿದೆ ಎನ್ನಲಾಗುತ್ತಿದೆ. ಈ ಸ್ಮಾರ್ಟ್ಫೋನ್, 5,000 mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ ಮತ್ತು 100W ಕ್ಷಿಪ್ರ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗುತ್ತಿದೆ. ಈಗ ಬಿಡುಗಡೆಯಾಗಿರುವ ಟೀಸರ್ ಮಾತ್ರ ಫೋನ್ ಗ್ರಾಹಕರಲ್ಲಿ ಸಾಕಷ್ಟು ಕುತೂಹಲವಂತೂ ಕೆರಳಿಸಿದೆ. ಹೈ ಎಂಡ್ ಫೋನ್‌ ನಿರೀಕ್ಷೆಯಲ್ಲಿರುವವರಿಗೆ ಒನ್‌ಪ್ಲಸ್ 11 ಹೊಸ ಆಯ್ಕೆಯನ್ನು ಖಂಡಿತ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು. 

click me!