ಗೂಗಲ್ ಚಾಲಿತ ಕ್ಯಾಮೆರಾ ಇರುವ Nokia C31 ಫೋನ್ ಲಾಂಚ್

By Suvarna News  |  First Published Dec 18, 2022, 2:00 PM IST

*ಎಂಟ್ರಿ ಲೇವಲ್ ಫೋನ್ ಕೆಟಗರಿಯಲ್ಲಿ ನೋಕಿಯಾ ಮತ್ತೊಂದು ಹೊಸ ಫೋನ್ ಲಾಂಚ್
*ನೋಕಿಯಾ ಸಿ31 ಫೋನ್ ಬೆಲೆ ಪರಿಗಣಿಸಿದರೆ, ಇದೊಂದು ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ
* ನೋಕಿಯಾ ಇಂಡಿಯಾ ವೆಬ್‌ಸೈಟ್‌ನಲ್ಲಿ ನೋಕಿಯಾ ಸಿ31 ಫೋನ್ ಮಾರಾಟಕ್ಕೆ ಇದೆ


ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ನೋಕಿಯಾ, ತನ್ನ ಸಿ ಸರಣಿಯ ಫೋನುಗಳ ಸಾಲಿಗೆ ಮತ್ತೊಂದು ಹೊಸ ಫೋನ್ ಸೇರ್ಪಡೆ ಮಾಡಿದೆ. ಕಂಪನಿಯು ನೋಕಿಯಚಾ ಸಿ31 (Nokia C31) ಹೊಸ ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪೋರ್ಟಬಲ್ ನೋಕಿಯಾದ ಈ ಸ್ಮಾರ್ಟ್‌ಫೋನ್ 6.7 - ಇಂಚಿನ ಡಿಸ್‌ಪ್ಲೇ, ಟ್ರಿಪಲ್ ಬ್ಯಾಕ್ ಕ್ಯಾಮೆರಾಗಳು ಮತ್ತು ಆಕ್ಟಾ-ಕೋರ್ ಸಿಪಿಯು ಹೊಂದಿರುವುದು ವಿಶೇಷತೆಯಾಗಿದೆ. ಭಾರತದಲ್ಲಿ ಈಗ ಬಿಡುಗಡೆಯಾಗಿರುವ ನೋಕಿಯಾ ಸಿ31 ಸ್ಮಾರ್ಟ್‌ಫೋನ್ ಅನ್ನು ಕಂಪನಿಯು ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಕೆಲವು ವಿದೇಶಿ ಮಾರುಕಟ್ಟೆಗಳಿಗೂ ಬಿಡುಗಡೆ ಮಾಡಿತ್ತು. ಇದೀಗ ಭಾರತದಲ್ಲಿ ಲಾಂಚ್ ಮಾಡಲಾಗಿದೆ. Nokia C31 ಫೋನ್ ಆಂಡ್ರಾಯ್ಡ್ 12 (Android 12) ಆಪರೇಟಿಂಗ್ ಸಾಫ್ಟ್ ವೇರ್ ಆಧರಿತವಾಗಿದೆ.  ಈ ಫೋನ್  4 GB RAM ಮತ್ತು 64 GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. 5,050mAh ಬ್ಯಾಟರಿಯು ಹೊಸ ನೋಕಿಯಾ ಸ್ಮಾರ್ಟ್‌ಫೋನ್‌ಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಚಾರ್ಜಿಂಗ್ ಶಕ್ತಿಯು ನಡುವೆ ಮೂರು ದಿನಗಳವರೆಗೆ ಇರುವಂತೆ ವಿನ್ಯಾಸಗೊಳಿಸಲಾಗಿದೆ.

ನೋಕಿಯಾ ಸಿ31 (Nokia C31) ಸ್ಮಾರ್ಟ್‌ಫೋನ್ 6.74-ಇಂಚಿನ HD+ (1,600 x 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಹೊಂದಿದೆ. ಇದು 20:9 ಆಕಾರ  ಅನುಪಾತದಲ್ಲಿದ್ದು, 2.5D ಟಫನ್ಡ್ ಸ್ಕ್ರೀನ್ ಹೊಂದಿದೆ. ಮುಂಭಾಗದ ಕ್ಯಾಮೆರಾವನ್ನು ಡಿಸ್‌ಪ್ಲೇನಲ್ಲಿರುವ ವಾಟರ್ ಡ್ರಾಪ್ ನಾಚ್‌ನಲ್ಲಿ ಇರಿಸಲಾಗಿದೆ. ಈ ಸ್ಮಾರ್ಟ್‌ಫೋನ್ 1.6GHz ಗರಿಷ್ಠ ಆವರ್ತನದೊಂದಿಗೆ ಆಕ್ಟಾ-ಕೋರ್ UNISOC ಪ್ರೊಸೆಸರ್ ಅನ್ನು ಹೊಂದಿದೆ. ಇದು 64 GB ವರೆಗಿನ ಆಂತರಿಕ ಮೆಮೊರಿಯನ್ನು ಮತ್ತು 4 GB RAM  ಹೊಂದಿದೆ. ಜತೆಗೆ ಗ್ರಾಹಕರು ತಮಗೆ ಅಗತ್ಯವಾದರೆ ಮೆಮೋರಿಯನ್ನು ಮೈಕ್ರೋ ಎಸ್ ಡಿ ಕಾರ್ಡ್ ಸ್ಲಾಟ್ ಮೂಲಕ ಹೆಚ್ಚಿಸಿಕೊಳ್ಳಬಹುದಾಗಿದೆ. 

Moto G53 5G: ಅಗ್ಗದ ಮೊಟೊ ಜಿ53 5ಜಿ ಫೋನ್ ಲಾಂಚ್, ಬೆಲೆ ಎಷ್ಟು?

Tap to resize

Latest Videos

undefined

Nokia C31 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳನ್ನು ನೀಡಲಾಗಿದೆ. ಆಟೋಫೋಕಸ್‌ನೊಂದಿಗೆ 13 MP ಮುಖ್ಯ ಕ್ಯಾಮೆರಾ ಇದ್ದರೆ, 2 MP ಆಳ ಸಂವೇದಕ ಮತ್ತು 2 MP ಮ್ಯಾಕ್ರೋ ಲೆನ್ಸ್ ಕ್ಯಾಮೆರಾವನ್ನು ಒದಗಿಸಲಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಫೋನ್ ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಕಂಪನಿಯು ಒದಗಿಸಿದೆ. 

ಗೂಗಲ್ ಪ್ರಾಯೋಜಿತ ಹಿಂಬದಿಯ ಕ್ಯಾಮೆರಾಗಳು ಪೋರ್ಟ್ರೇಟ್, ಎಚ್‌ಡಿಆರ್ ಮತ್ತು ರಾತ್ರಿ ಮೋಡ್‌ಗಳನ್ನು ಒಳಗೊಂಡಂತೆ ಛಾಯಾಗ್ರಹಣ ಆಯ್ಕೆಗಳ ಶ್ರೇಣಿಯ ಆಯ್ಕೆಗಳನ್ನು ಬಳಕೆದಾರರಿಗೆ ಒದಗಿಸುತ್ತವೆ. ನೋಕಿಯಾ ಸಿ 31 ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು 5,050mAh ಬ್ಯಾಟರಿ ಅಳವಡಿಸಿದೆ. ಇದು 10W ಪ್ರಮಾಣಿತ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಬ್ಯಾಟರಿಯು ಫೋನ್‌ಗೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಬ್ಯಾಟರಿ 14 ದಿನಗಳ ಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಹೆಚ್ಚಿನ ರಕ್ಷಣೆಗಾಗಿ, ಫೋನ್ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇದು IP52 ಜಲ-ನಿರೋಧಕ ನಿರ್ಮಾಣವನ್ನು ಸಹ ಹೊಂದಿದೆ.

2022ರ ಬೆಸ್ಟ್ ಫೋನ್ಸ್: ಐಫೋನ್‌ 14 ಪ್ರೋನಿಂದ ಹಿಡಿದು ಒನ್‌ಪ್ಲಸ್ 10ಟಿ 5ಜಿವರೆಗೆ..!

Nokia C31 ಸ್ಮಾರ್ಟ್‌ಫೋನ್ ಮೂಲ ಮಾದರಿಯು 3 GB RAM ಮತ್ತು 32 GB ಸಂಗ್ರಹವನ್ನು ಹೊಂದಿದೆ. ಈ ವೆರಿಯೆಂಟ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 9,999 ರೂಪಾಯಿ ಆಗಿದೆ. 4 GB RAM + 64 GB ಸ್ಟೋರೇಜ್ ವೆರಿಯೆಂಟ್‌ನ ಬೆಲೆ 10,999 ರೂ. ಆಗಿದೆ. ಈ ಫೋನ್‌ ಬೆಲೆಗಳನ್ನು ಪರಿಗಣಿಸಿದರೆ, ಬಜೆಟ್ ಫೋನ್ ಆಗಿದ್ದು, ಎಂಟ್ರಿ ಲೇವಲ್ ಫೋನ್ ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯನ್ನು ಒದಗಿಸುತ್ತದೆ. ಗ್ರಾಹಕರು ನೋಕಿಯಾ ಸಿ31 ಫೋನ್ ಅನ್ನು ಚಾರ್ಕೋಲ್ ಮತ್ತು ಮಿಂಟ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ, ನೋಕಿಯಾ ಇಂಡಿಯಾ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ದೊರೆಯಲಿದೆ. 

click me!