Upcoming OnePlus Phones: 2022ರಲ್ಲಿ ಬಿಡುಗಡೆಯಾಗಲಿರುವ ಒನ್‌ಪ್ಲಸ್ ಫೋನ್‌ಗಳಿವು!

By Suvarna News  |  First Published Dec 19, 2021, 11:35 AM IST

OnePlus Pro ಮತ್ತು OnePlus Nord 2 CE 5G ಬಗ್ಗೆ ಇತ್ತೀಚೆಗೆ ಸಾಕಷ್ಟು ಮಾಹಿತಿ ಸೋರಿಕೆಯಗಿದೆ. ಹಾಗಾಗಿ  ಈ ಸ್ಮಾರ್ಟ್‌ಫೋನ್‌ಗಳು 2022 ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಎರಡು ಫೋನ್‌ಗಳ ವಿವರಗಳು ಇಲ್ಲಿವೆ.
 


Tech Desk: OnePlus ಭಾರತದಲ್ಲಿ OnePlus RT ಅನ್ನು ಬಿಡುಗಡೆಯೊಂದಿಗೆ ಒನ್‌ಪ್ಲಸ್ 2021ನ್ನು ಬಹುಶ: ವೈಂಡ್‌ ಅಪ್‌ ಮಾಡುತ್ತಿದೆ.  ಹಾಗಾಗಿ  2022 ರಲ್ಲಿ ಮುಂಬರುವ OnePlus ಫೋನ್‌ಗಳಿಗೆ ಕಡೆಗಡ ಸಂಪೂರ್ಣ ಗಮನ ಹರಿಸಲಿದೆ. ಇತ್ತೀಚೆಗೆ OnePlus 10 Pro ಮತ್ತು OnePlus Nord 2 CE 5G ಎಂಬ ಎರಡು OnePlus ಸ್ಮಾರ್ಟ್‌ಫೋನ್ ಬಿಡುಗಡೆ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿವೆ. ಎರಡರಲ್ಲಿ, ಮೊದಲನೆಯದು ಫ್ಲಾಗ್‌ಶಿಪ್ ಆಗಿದ್ದರೆ,  ಇನ್ನೊಂದು ಮಧ್ಯಮ ಶ್ರೇಣಿಯ ಮೊಬೈಲ್‌ ಆಗಿದೆ.

OnePlus 10 Pro ಅನ್ನು ಮೊದಲು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಅದಾದ ಬಳಿಕವೇ OnePlus Nord 2 CE ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.  ಮಾರುಕಟ್ಟೆಯಲ್ಲಿನ ಲೀಕ್‌ಗಳು ಎರಡು ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ಬಹಿರಂಗಪಡಿಸಿದೆ. ಲೀಕ್ ಪ್ರಕಾರ OnePlus 10 Pro ಸ್ಮಾರ್ಟ್‌ಫೋನ್‌ನ ಅಂಚಿನಲ್ಲಿ ಬಾಗಿದ ವಿಶಿಷ್ಟವಾದ ಕ್ಯಾಮೆರಾ ಮಾಡ್ಯೂಲ್ ಅನ್ನು ಪರಿಚಯಿಸಲಿದೆ. ಮತ್ತೊಂದೆಡೆ, OnePlus Nord 2 CE ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. ವಿನ್ಯಾಸವನ್ನು ಹೊರತುಪಡಿಸಿ, ಎರಡು ಸ್ಮಾರ್ಟ್‌ಫೋನ್‌ಗಳ ವಿಶೇಷಣಗಳು ಸಹ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಆದ್ದರಿಂದ, 2022 ರಲ್ಲಿ ಮುಂಬರುವ OnePlus ಫೋನ್‌ಗಳ ಸಂಪೂರ್ಣ ವಿವರಗಳು ಇಲ್ಲಿವೆ.

Latest Videos

undefined

 

So... Following my design leak, today I bring you the full and official specs sheet of the upcoming Flagship!...

Which includes a little exclusive regarding ...

On behalf of my Friends over -> https://t.co/Huq8ZIMqZx pic.twitter.com/e6c1i4uibJ

— Steve H.McFly (@OnLeaks)

 

OnePlus 10 Pro

OnePlus Pro ಮುಂದಿನ ವರ್ಷ ಬಿಡುಗಡೆಯಾಗಲಿರುವ ಹಾಟೆಸ್ಟ್ ಸಾಧನಗಳಲ್ಲಿ ಒಂದಾಗಿದೆ. ವದಂತಿಗಳ ಪ್ರಕಾರ ಸ್ಮಾರ್ಟ್‌ಫೋನ್ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ ಬಹುಶಃ ಜನವರಿಯಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿ, ನಂತರ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಹಿಂದಿನ ಲೀಕ್‌ನಲ್ಲಿ, OnePlus 10 Pro ನ ಸಂಪೂರ್ಣ ವಿನ್ಯಾಸವನ್ನು ಬಹಿರಂಗಪಡಿಸಲಾಗಿತ್ತು. ವಿಶ್ಲೇಷಕರು OnePlus 10 Pro ಅನ್ನು ಅಂಚಿಗೆ ಬಾಗಿದ ಬೃಹತ್ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಪ್ರದರ್ಶಿಸಿದ್ದರು. ಸ್ಮಾರ್ಟ್‌ ಫೋನ್‌ನ ಹಿಂದಿಯಲ್ಲಿ  ಟ್ರಿಪಲ್ ಕ್ಯಾಮೆರಾಗಳು ಮತ್ತು LED ಫ್ಲ್ಯಾಷ್ ಅನ್ನು ಹೊಂದಿದೆ. ಮುಂಭಾಗದಲ್ಲಿ  ಪಂಚ್-ಹೋಲ್ ಡಿಸ್ಲ್ಪಲೇ ಇದೆ ಎಂದು ಹೇಳಲಾಗಿದೆ. 

OnePlus 10 Pro Snapdragon 8 Gen 1 8 Gen 1 ಚಿಪ್‌ಸೆಟ್‌ನೊಂದಿಗೆ ಬಿಡುಗಡೆಯಾಗಲಿದೆ.  ಸ್ಮಾರ್ಟ್‌ಫೋನನ್ನು 12GB RAM ಮತ್ತು 256GB ಸ್ಟೋರೆಜ್‌ದೊಂದಿಗೆ ನೀಡಬಹುದು. ಅದರೊಂದಿಗೆ, ಇದು 120 Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ LTPO AMOLED ಪ್ಯಾನೆಲ್  ಹೊಂದಿರಬಹುದು. 

ಸ್ಮಾರ್ಟ್‌ಫೋನ್ 48-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 8-ಮೆಗಾಪಿಕ್ಸೆಲ್ ಸೆನ್ಸರ್‌ನೊಂದಿಗೆ ಬರುವ ಸಾಧ್ಯತೆಯಿದೆ. ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆಯಬಹುದು. OnePlus 10 Pro Android 12 ಆಧಾರಿತ ColorOS 12 ಅನ್ನು ರನ್ ಮಾಡುವ ನಿರೀಕ್ಷೆಯಿದೆ. ಸಾಧನವು 80W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್  ಬೆಂಬಲಿಸಬಹುದು ಎಂದು ಲೀಕ್‌ನಲ್ಲಿ ತಿಳಿದುಬಂದಿದೆ.

OnePlus Nord 2 CE 5G

OnePlus Nord 2 CE 5G ಕೂಡ ಕೆಲವು ಸಮಯದಿಂದ ಸುದ್ದಿಯಲ್ಲಿದೆ. ಇತ್ತೀಚಿನ ಬೆಳವಣಿಗೆಯಲ್ಲಿ, OnePlus Nord 2 CE 5G ಯ ​​ರೆಂಡರ್‌ಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಸಾಧನವು ಹಿಂದಿನ ಕ್ಯಾಮೆರಾ ಮಾಡ್ಯೂಲ್‌ನ ಹೊರತಾಗಿ ಅದರ ಈ ಹಿಂದಿನ ಮಾದರಿಗಳನ್ನೆ ಹೋಲುವ ವಿನ್ಯಾಸದಲ್ಲಿ ಕಾಣಿಸಿಕೊಳ್ಳುತ್ತದೆ. OnePlus Nord 2 CE ರೆಂಡರ್‌ಗಳಲ್ಲಿ ಬೂದು ಬಣ್ಣವನ್ನು ಹೊಂದಿದೆ. ಆದರೆ ವರದಿಯು ಆಲಿವ್ ಹಸಿರು ಬಣ್ಣದ ಆಯ್ಕೆಯನ್ನು ಸಹ ಉಲ್ಲೇಖಿಸುತ್ತದೆ.

OnePlus Nord 2 CE 5G ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳೊಂದಿಗೆ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು ಹಿಂಭಾಗದಲ್ಲಿ LED ಫ್ಲ್ಯಾಷ್ ಅನ್ನು ಹೊಂದಿದೆ. ಮುಂಭಾಗದಲ್ಲಿರ  ಪಂಚ್-ಹೋಲ್ ಡಿಸ್ಪ್ಲೇ ಹೊಂದಿದೆ. ವಾಲ್ಯೂಮ್ ಬಟನ್ ಬಲಭಾಗದಲ್ಲಿ ಇರಿಸಲಾಗುತ್ತದೆ, ಆದರೆ ಪವರ್ ಬಟನ್ ಎಡಭಾಗದಲ್ಲಿದೆ. ಕೆಳಗಿನ ಅಂಚಿನಲ್ಲಿ 3.5 ಎಂಎಂ ಜ್ಯಾಕ್ ಮತ್ತು ಟೈಪ್-ಸಿ ಪೋರ್ಟ್ ಇದೆ.

OnePlus Nord 2 CE 90Hz ರಿಫ್ರೆಶ್ ದರದೊಂದಿಗೆ 6.4-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರಬಹುದು. ಸ್ಮಾರ್ಟ್‌ಫೋನ್  Dimensity 900 ಚಿಪ್‌ಸೆಟ್‌ನಿಂದ ಚಾಲಿತವಾಗಬಹುದು. OnePlus ಈ ಸಾಧನವನ್ನು 12GB RAM ಮತ್ತು 256GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ನೀಡಬಹುದು. ಸಾಧನವು 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದುವ ನಿರೀಕ್ಷೆಯಿದೆ. ಸೆಲ್ಫಿಗಳಿಗಾಗಿ 16-ಮೆಗಾಪಿಕ್ಸೆಲ್ ಶೂಟರ್‌ಅನ್ನು ಪಡೆಯಬಹುದು.

OnePlus Nord 2 CE 65W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಸ್ಮಾರ್ಟ್ಫೋನ್ 5G, Wi-Fi, GPS, NFC, 3.5mm ಆಡಿಯೋ ಜ್ಯಾಕ್ ಮತ್ತು ಇತರೆ ಸಂಪರ್ಕ ಆಯ್ಕೆಗಳ ಜತೆಗೆ ಬರಬಹುದು.

ಇದನ್ನೂ ಓದಿ:

1) Realme GT 2 Launch: 150 ಡಿಗ್ರಿ ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಸಾಧ್ಯತೆ!

2) 2022ರಲ್ಲಿ ಸ್ಯಾಮ್ಸಂಗ್, ಆಪಲ್, ಶಿಯೋಮಿ, ಒನ್‌ಪ್ಲಸ್ ಯಾವ ಫೋನು ಲಾಂಚ್?

3) Oppoದ ಮೊದಲ ಪೋಲ್ಡಬಲ್ ಸ್ಮಾರ್ಟ್‌ಫೋನ್ ಫೈಂಡ್ ಎನ್ ಬಿಡುಗಡೆ, ಏನೆಲ್ಲ ಫೀಚರ್ಸ್ ಇದೆ?

click me!