*ದೇಶದ ಆಯ್ದ ಸ್ಥಳಗಳಲ್ಲಿ ರಿಲಯನ್ಸ್ ಜಿಯೋ 5ಜಿ ಸೇವೆಯನ್ನು ಒದಗಿಸಲಾಗುತ್ತಿದೆ.
*ಜಿಯೋ ಟ್ರೂ 5ಜಿ ಎನೇಬಲ್ ದೇಶದ ಮೊದಲ ಫೋನ್ ನಥಿಂಗ್ ಫೋನ್(1) ಎಂಬ ಕೀರ್ತಿ
*ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ 5ಜಿ ಸೇವೆಗೆ ಚಾಲನೆ ನೀಡಿದ್ದರು
ದೇಶದ ಆಯ್ದ ಸ್ಥಳಗಳಲ್ಲಿ ಜಿಯೋ ಟ್ರೂ 5G ಪಬ್ಲಿಕ್ ವೈ ಫೈ (Jio True 5G) ದೊರೆಯಲಾರಂಭಿಸಿದೆ. ಇದರೊಂದಿಗೆ 5ಜಿ ಎನೇಬಲ್ ದೇಶದ ಮೊದಲ ಫೋನ್ ಎಂಬ ಕೀರ್ತಿಯನ್ನು ನಥಿಂಗ್ ಫೋನ್ 1 (Nothing Phone-1) ಪಡೆದುಕೊಳ್ಳುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಕಾರ್ಲ್ ಪೀ ನೇತೃತ್ವದ ಇಂಗ್ಲೆಂಡ್ ಮೂಲದ ಕಂಪನಿಯು OTA ಅಪ್‌ಡೇಟ್ ಅನ್ನು ಬಿಡುಗಡೆ ಮಾಡುತ್ತಿದೆ. ಅದು ನಥಿಂಗ್ ಫೋನ್ (1) ಅನ್ನು Jioನ ಟ್ರೂ 5G ಸೇವೆಯೊಂದಿಗೆ ಹೊಂದಿಕೊಳ್ಳುತ್ತದೆ. ಇದು Google, Apple, Oppo, Samsung ಸ್ಮಾರ್ಟ್‌ಫೋನ್‌ಗಳಿಗಿಂತ ಮೊದಲೇ 5ಜಿ ಎನೇಬಲ್ ಸ್ಮಾರ್ಟ್‌ಫೋನ್ ಆಗಲಿದೆ! ಏರ್‌ಟೆಲ್ 5G ನೆಟ್‌ವರ್ಕ್ ಅನ್ನು ಈಗಾಗಲೇ ಈ ನಥಿಂಗ್ ಫೋನ್ (1) ಬೆಂಬಲಿಸುತ್ತದೆ. ಅಪ್‌ಡೇಟ್ ನಂತರ, ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿಯಲ್ಲಿ ರಿಲಯನ್ಸ್ ಜಿಯೊದ ನಥಿಂಗ್ ಫೋನ್ ಗ್ರಾಹಕರು 5G ಸೇವೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿದೆ.
ನಥಿಂಗ್ ಫೋನ್ (1) ಅನ್ನು ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ 26,999 ರೂ. ಆರಂಭಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಖರೀದಿದಾರರು ತಮ್ಮ ಹಿಂದಿನ ಸ್ಮಾರ್ಟ್‌ಫೋನ್‌ನೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಂಡರೆ 16,900 ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಕೆಲವು ತಿಂಗಳ ಹಿಂದೆ, ನಥಿಂಗ್ ಫೋನ್ (1) ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಿತ್ತು. ಅಂದಿನಿಂದ, ನಥಿಂಗ್ ಫೋನ್ (1) ಅದರ ವಿಶಿಷ್ಟ ವೈಶಿಷ್ಟ್ಯಗಳು ಮತ್ತು ಶೈಲಿಯಿಂದಾಗಿ 2022ರ ಹೆಚ್ಚು ಸದ್ದು ಮಾಡಿದ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ.
ಭಾರತದಲ್ಲಿ Moto E22s ಬಿಡುಗಡೆ, ಕಡಿಮೆ ಬೆಲೆಗೆ ಸಖತ್ ಫೋನ್
undefined
ನಥಿಂಗ್ ಫೋನ್ (1) ನ OLED ಡಿಸ್ಪ್ಲೇ 6.55 ಇಂಚುಗಳಷ್ಟಿದೆ. ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಈ ಸ್ಮಾರ್ಟ್ಫೋನ್ ಇನ್- ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ನಥಿಂಗ್ ಫೋನ್ (1) ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778G+ ಪ್ರೊಸೆಸರ್ ಅನ್ನು ಒಳಗೊಂಡಿದೆ. ಪ್ರೊಸೆಸರ್ ಅನ್ನು 256GB ಆಂತರಿಕ ಸಂಗ್ರಹಣೆ ಮತ್ತು 12GB RAM ನೊಂದಿಗೆ ಸಂಯೋಜಿಸಲಾಗಿದೆ. 33W ವೇಗದ ಚಾರ್ಜಿಂಗ್ಗೆ ಬೆಂಬಲದೊಂದಿಗೆ 4,500 mAh ಬ್ಯಾಟರಿಯನ್ನು ಈ ಫೋನ್ ಒಳಗೊಂಡಿದೆ.
ರಾಜಸ್ಥಾನದಲ್ಲಿ ಜಿಯೋ , ಟ್ರೂ 5G-ಚಾಲಿತ ವೈ-ಫೈ ಸೇವೆ
ಎಲ್ಲ ಬಳಕೆದಾರರಿಗೂ 5G ಸೇವೆಗಳನ್ನು ಸಕ್ರಿಯಗೊಳಿಸಲು ರಿಲಯನ್ಸ್ ಜಿಯೋ , ಟ್ರೂ 5G-ಚಾಲಿತ ವೈ-ಫೈ (Wi-Fi) ಸೇವೆಗೆ ಚಾಲನೆ ನೀಡಿದೆ. ಮತ್ತೆರಡು ಹೊಸ ನಗರದಲ್ಲಿ ಜಿಯೋ ಟ್ರು 5ಜಿ ಸೇವೆಗೆ ಚಾಲನೆ ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು, ರೈಲು ನಿಲ್ದಾಣ, ಬಸ್ ನಿಲ್ದಾಣಗಳು, ವಾಣಿಜ್ಯ ಕೇಂದ್ರಗಳು ಮತ್ತಷ್ಟು ಕಡೆ ಹೆಚ್ಚಿನ ಜನಸಂದಣಿಗಳಲ್ಲಿ ಜಿಯೋ ಟ್ರು 5ಜಿ ಸೇವೆ ಆರಂಭಗೊಂಡಿದೆ. ಜಿಯೋ ವೆಲ್‌ಕಮ್ ಆಫರ್ ಇತ್ತೀಚೆಗೆ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಾಣಸಿಯಲ್ಲಿ ಪ್ರಾರಂಭಿಸಲಾಗಿದೆ. ಇನ್ನಷ್ಟು ನಗರಗಳಲ್ಲಿ ವಿಸ್ತರಿಸಲು ಮತ್ತು ಟ್ರೂ5G-ಸಿದ್ಧ ಹ್ಯಾಂಡ್‌ಸೆಟ್‌ಗಳ ಲಭ್ಯತೆ ಹೆಚ್ಚಿಸಲು ಜಿಯೋ ತಂಡಗಳು ಹಗಲಿರುಳು ಕೆಲಸ ಮಾಡುತ್ತಿವೆ.
USB ಟೈಪ್-C ಚಾಲಿತ ಸಿರಿ ರಿಮೋಟ್‌ನೊಂದಿಗೆ Apple TV 4K 2022 ಲಾಂಚ್
ಶುಭಾರಂಭ ಎಂಬಂತೆ ಜಿಯೋಟ್ರೂ5G ಸೇವೆಗಳ ಜೊತೆಗೆ ಜಿಯೋ ಇಂದು ರಾಜಸ್ಥಾನದ ದೇವಾಲಯ ಪಟ್ಟಣವಾದ ನಾಥದ್ವಾರದಲ್ಲಿ ಜಿಯೋಟ್ರೂ5G- ಚಾಲಿತ ವೈ-ಫೈ ಸೇವೆಗಳನ್ನು ಪ್ರಾರಂಭಿಸಿದೆ. ಜಿಯೋ ವೆಲ್‌ಕಮ್ ಆಫರ್ ಅವಧಿಯಲ್ಲಿ ಜಿಯೋ ಬಳಕೆದಾರರು ಯಾವುದೇ ಶುಲ್ಕವಿಲ್ಲದೆ ಈ ಸೇವೆಯನ್ನು ಪಡೆಯುತ್ತಾರೆ, ಜಿಯೋ ಅಲ್ಲದ ಗ್ರಾಹಕರು ಪೂರ್ಣ ಮತ್ತು ಅನಿಯಮಿತ ಸೇವಾ ಅನುಭವವನ್ನು ಪಡೆಯಲು ಜಿಯೋಗೆ ತೆರಳುವ ಮೊದಲು ಈ ಸೇವೆಯನ್ನು ಪಡೆದುಕೊಳ್ಳಬಹುದು.