*ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಗ್ಗದ ಫೋನ್ ಬಿಡುಗಡೆ ಮಾಡಿದ ಮೊಟೊರೊಲಾ
*ಕಡಿಮೆ ಬೆಲೆಗೆ ಅತ್ಯುತ್ತಮ ಫೀಚರ್, ಸೌಲಭ್ಯಗಳಿರುವ ಫೋನ್ ಮೊಟೊ ಇ 22ಎಸ್
*ಈ ಫೋನಿನಲ್ಲಿ ಕ್ಯಾಮೆರಾ, ಬ್ಯಾಟರಿ ಸೇರಿದಂತೆ ಇತರ ಫೀಚರ್‌ಗಳು ಗಮನಾರ್ಹವಾಗಿವೆ.
ಮೊಟೊರೊಲಾ ಕಂಪನಿಯು ಭಾರತದಲ್ಲಿ ಕಡಿಮೆ ಬೆಲೆಯ 4 ಜಿ ಫೋನ್ ಲಾಂಚ್ ಮಾಡಿದೆ. ಹೊಸದಾಗಿ ಬಿಡುಗಡೆಯಾಗಿರುವ ಈ ಫೋನ್ ಹೆಸರು ಮೊಟೊ ಇ22ಎಸ್ (Moto E22s). 10,000 ರೂಪಾಯಿಗಿಂತ ಕಡಿಮೆ ಬೆಲೆಯ ಹಾಗೂ ಎಲ್ಲಾ ಉದ್ದೇಶದ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿರುವ ಜನರಿಗೆ ಈ ಫೋನ್ ಸೂಕ್ತವಾಗಿದೆ ಎಂಬುದು ಕಂಪನಿಯ ಅಭಿಪ್ರಾಯಪವಾಗಿದೆ. ಇದು ನೀರು-ನಿರೋಧಕ ವಿನ್ಯಾಸವನ್ನು ಹೊಂದಿದೆ. ಅಗ್ಗದ ಬೆಲೆಗೆ ಹೆಚ್ಚು ಫೀಚರ್ಸ್ ಹಾಗೂ ಸೌಲಭ್ಯಗಳನ್ನು ಹೊಂದಿರುವ ಫೋನ್ ಇದಾಗಿದೆ ಎಂದು ಹೇಳಬಹುದು. ದೊಡ್ಡ 5,000mAh ಬ್ಯಾಟರಿ, 90Hz ಡಿಸ್‌ಪ್ಲೇ, ಟ್ವಿನ್ ಬ್ಯಾಕ್ ಕ್ಯಾಮೆರಾ ಕಾನ್ಫಿಗರೇಶನ್ ಮತ್ತು ಇತರ ವೈಶಿಷ್ಟ್ಯಗಳು ಗಮನ ಸೆಳೆಯುತ್ತವೆ. ಹೊಚ್ಚಹೊಸ Moto E22s ಸ್ಮಾರ್ಟ್‌ಫೋನ್ ಬೆಲೆ 8,999 ರೂಪಾಯಿಯಿಂದ ಆರಂಭವಾಗುತ್ತದೆ. ಅಂದರೆ, 4 GB RAM + 64 GB ಸ್ಟೋರೇಜ್ ವೆರಿಯೆಂಟ್ ಬೆಲೆ ಅಂದಾಜು 8,999 ರೂಪಾಯಿ ಆಗಿದೆ. ಆರ್ಕ್ಟಿಕ್ ಬ್ಲೂ (Arctic Blue) ಮತ್ತು ಇಕೋ ಬ್ಲ್ಯಾಕ್ (Eco Black) ಎರಡು ಬಣ್ಣಗಳ ಆಯ್ಕೆಯಲ್ಲಿ ಈ ಫೋನ್ ಮಾರಾಟಕ್ಕೆ ಸಿಗಲಿದೆ. ಈ ಮೊಟೊ ಇ22ಎಸ್ ಸ್ಮಾರ್ಟ್‌ಫೋನ್ ಅಕ್ಟೋಬರ್ 22ರಿಂದ ಫ್ಲಿಪ್‌ಕಾರ್ಟ್ ಸೇರಿದಂತೆ ಇತರ ರಿಟೇಲ್ ಶಾಪ್‌ಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಮೊಟೊರೊಲಾ ಕಂಪನಿಯು ತನ್ನ ಪ್ರೀಮಿಯಂ ಹಾಗೂ ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಈಗ ಕಡಿಮೆ ಬೆಲೆಗೆ ಅತ್ಯುತ್ತಮವಾದ ಫೀಚರ್‌ಗಳಿರುವ ಫೋನ್ ಲಾಂಚ್ ಮಾಡಿದೆ.
ಯಾವುದು ಬೆಸ್ಟ್? ಗೂಗಲ್ Pixel ವಾಚ್‌ನಾ OR ಆಪಲ್ ವಾಚ್‌ನಾ?
undefined
Moto E22s ಪ್ರಮಾಣಿತ 6.5-ಇಂಚಿನ IPS LCD ಸ್ಕ್ರೀನ್ ಪಾಂಡ ಗ್ಲಾಸ್ ರಕ್ಷಣೆಯೊಂದಿಗೆ ಬರುತ್ತದೆ. ಮತ್ತು ಈ ಡಿಸ್ಪ್ಲೇ 500nitsನ ಗರಿಷ್ಠ ಹೊಳಪನ್ನು ಹೊಂದಿದೆ. ಡಿಸ್ಪ್ಲೇ ವೈಡ್ವೈನ್ L1 ಪ್ರಮಾಣೀಕರಿಸಲ್ಪಟ್ಟಿದೆ. HD+ ರೆಸಲ್ಯೂಶನ್ ಅನ್ನು ಈ ಸ್ಮಾರ್ಟ್ಫೋನ್ ಬೆಂಬಲಿಸುತ್ತದೆ. ಕಡಿಮೆ ಬೆಲೆಯ ಫೋನ್ IP52 ನೀರು-ನಿರೋಧಕ ದರ್ಜೆಯನ್ನು ಹೊಂದಿದೆ. ಹಾಗಾಗಿ ಮಳೆ ಮತ್ತು ನೀರಿನಲ್ಲಿ ಫೋನ್ ಮುಳುಗಿದರೂ ಅಂಥ ಹಾನಿಯೇನೂ ಆಗಲಾರದು ಎನ್ನಲಾಗುತ್ತಿದೆ. ಫೋನ್ನ ಮುಂಭಾಗವು ಪಂಚ್-ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ, ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕವೂ ಇದೆ.
ಇದು ಕಡಿಮೆ-ಮಟ್ಟದ MediaTek Helio G37 ಆಕ್ಟಾ-ಕೋರ್ CPU, 4 GB RAM ಮತ್ತು 64 GB ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಆದರೆ, ಮೊಟೊರೊಲಾ ಈ ಸ್ಮಾರ್ಟ್‌ಫೋನ್ ಅನ್ನು ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಯೊಂದಿಗೆ ಮಾರಾಟ ಮಾಡುತ್ತಿಲ್ಲ ಎಂದು ಕೆಲವರು ನಿರಾಶೆಗೊಳ್ಳಬಹುದು. ತಯಾರಕರ ಪ್ರಕಾರ ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಆಂತರಿಕ ಸಂಗ್ರಹಣೆಯನ್ನು 1 TB ವರೆಗೆ ಹೆಚ್ಚಿಸಬಹುದು.
ಎಡಿಟ್ ಮಾಡಿದ ವಾಟ್ಸಾಪ್ ಮೇಸೆಜ್ ಮೇಲೆ ಲೇಬಲ್!
PDAF ನೊಂದಿಗೆ 16 - ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಡೆಪ್ತ್ ಸೆನ್ಸಿಂಗ್‌ಗಾಗಿ 2- ಮೆಗಾ ಪಿಕ್ಸೆಲ್ ಸೆಕೆಂಡರಿ ಸಂವೇದಕವನ್ನು ಛಾಯಾಗ್ರಹಣಕ್ಕಾಗಿ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹಿಂಬದಿಯ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಕಾಣಬಹುದು. ಮೊಟೊರೊಲಾ ಕಂಪನಿಯು ಫೋನ್ ಮುಂಭಾಗದಲ್ಲಿ ಸೆಲ್ಫಿ ತೆಗೆದುಕೊಳ್ಳಲು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಿದೆ. ಪೋರ್ಟ್ರೇಟ್, ಪನೋರಮಾ, ನೈಟ್ ವಿಷನ್, ಡ್ಯುಯಲ್ ಕ್ಯಾಪ್ಚರ್, ಲೈವ್ ಫಿಲ್ಟರ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ಶೂಟಿಂಗ್ ಆಯ್ಕೆಗಳು ಕ್ಯಾಮರಾ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಇದು 5,000mAh ಬ್ಯಾಟರಿಯನ್ನು ಹೊಂದಿದೆ. ಕಂಪನಿ ಹೇಳಿಕೊಳ್ಳುವ ಪ್ರಕಾರ, ಎರಡು ದಿನಗಳವರೆಗೆ ಈ ಬ್ಯಾಟರಿ ಬಾಳಿಕೆ ಬರುತ್ತದೆ. ಮೊಟೊರೊಲಾ 10W ಚಾರ್ಜರ್ ಬೆಂಬಲಿಸುತ್ತದೆ. ಆದರೂ ಬ್ಯಾಟರಿಯನ್ನು ರೀಚಾರ್ಜ್ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.