Rs.47,000 ಬೆಲೆಯ ಮಿಲಿಟರಿ ದರ್ಜೆಯ Nokia XR20 ಫೋನ್ ಭಾರತದಲ್ಲಿ ಬಿಡುಗಡೆ!

By Suvarna NewsFirst Published Oct 19, 2021, 11:22 AM IST
Highlights

-ಮಿಲಿಟರಿ ದರ್ಜೆಯ Nokia XR20 ಭಾರತದಲ್ಲಿ ಬಿಡುಗಡೆ
-248 ಗ್ರಾಮ್‌ ತೂಕವಿರುವ ಈ ಪೋನಿನ ಬೆಲೆ ರೂ.46,999 
-ಮುಂಗಡ ಬುಕ್‌ ಮಾಡುವ ಗ್ರಾಹಕರಿಗೆ ವಿಶೇಷ ಆಫರ್ಸ್

ನೋಕಿಯಾ XR20 ಪೋನ್ ಸೋಮವಾರ (ಅ. 18)  ಭಾರತದಲ್ಲಿ ಬಿಡುಗಡೆಯಾಗಿದೆ. ಈ ಹೊಸ ನೋಕಿಯಾ ಫೋನ್ ಮಿಲಿಟರಿ ದರ್ಜೆಯ  (Military Grade)ಗುಣಮಟ್ಟ ಹೊಂದಿದ್ದು 55 ಡಿಗ್ರಿಯಿಂದ 20ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಕೆಲಸ ಮಾಡಲಿದೆ ಎಂದು ಕಂಪನಿ ತಿಳಿಸಿದೆ. ಸುಮಾರು ಒಂದು ಘಂಟೆಗಳ ಕಾಲ ನೀರಿನಲ್ಲಿಟ್ಟರೂ, 1.5 ಮೀಟರ್ ಎತ್ತರದಿಂದ ಬಿದ್ದರೂ ಪೋನ್ ಕೆಲಸ ಮಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಜತೆಗೆ ನಾಲ್ಕು ವರ್ಷಗಳ ಕಾಲ ಸೆಕ್ಯೂರಿಟಿ ಅಪ್‌ಡೇಟ್ಸ್ (Security Updates) ಮತ್ತು ಮೂರು ವರ್ಷಗಳ ಕಾಲ ಓಎಸ್ ಅಪ್‌ಡೇಟ್ಸ್ (OS Updates) ಕೊಡುವುದಾಗಿ ಭರವಸೆ ನೀಡಿದೆ. ಡ್ಯೂಯಲ್ ರೇರ್ ಕ್ಯಾಮೆರಾ (Dual rare camera)  ಹೊಂದಿರುವ ಈ ಫೋನ್ 20:9 ಆಸ್ಪೆಕ್ಟ್‌ ರೇಶೋ (Aspect Ratio) ಡಿಸ್‌ಪ್ಲೆ ಹೊಂದಿದೆ.

ಇನ್ಫಿನಿಕ್ಸ್ ನೋಟ್ 11, ಇನ್ಫಿನಿಕ್ಸ್ ನೋಟ್ 11 ಪ್ರೋ ಫೋನ್ ಲಾಂಚ್

ಭಾರತದಲ್ಲಿ 46,999  ಬೆಲೆ ಹೊಂದಿರುವ ಈ ಪೋನ್‌ 6GB ರ‍್ಯಾಮ್ (RAM) 12GB ಇಂಟರ್‌ನಲ್ ಸ್ಟೋರೆಜ್‌ (Internal Storage) ಹೊಂದಿದೆ. ಅಕ್ಟೋಬರ್‌ 20 ರಿಂದ ಮುಂಗಡ ಬುಕ್ಕಿಂಗ್‌ ಲಭ್ಯವಾಗಲಿದ್ದು, ಗ್ರೆನೈಟ್‌ (Granite) ಮತ್ತು ಅಲ್ಟ್ರಾ ನೀಲಿ (Ultra blue) ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಅಕ್ಟೋಬರ್‌ 30 ರಂದು ಇದರ ಸೇಲ್ ಆರಂಭವಾಗಲಿದ್ದು ನೋಕಿಯಾದ ಅಧಿಕೃತ ವೆಬ್‌ಸೈಟ್‌ (Nokia.com) ಸೇರಿದಂತೆ, ಇ-ಕಾಮರ್ಸ್‌ (E-Commerce) ಮತ್ತು ಮೊಬೈಲ್‌ ಶೋ ರೂಮ್‌ಗಳಲ್ಲಿ ಫೋನ್‌ ಲಭ್ಯವಿರಲಿದೆ. 

20ನೇ ವಾರ್ಷಿಕೋತ್ಸವಕ್ಕೆ ನೋಕಿಯಾ 6310 ಫೋನು ಮರು ಬಿಡುಗಡೆ!

ಪೋನ್‌ ಮುಂಗಡ ಬುಕ್ಕಿಂಗ್‌ ಮಾಡುವವರಿಗೆ ಲಾಂಚ್‌ ಆಫರ್‌ ಅಡಿಯಲ್ಲಿ 3,599 ಬೆಲೆಯ ನೋಕಿಯಾ ಪವರ್ ಇಯರ್‌ಬಡ್ಸ್ ಲೈಟ್ (Nokia Power Earbuds Lite) ಉಚಿತವಾಗಿ ನೀಡುತ್ತಿದೆ. ಅಲ್ಲದೇ ಫೋನ್ ಮುಂಗಡವಾಗಿ ಬುಕ್‌ ಮಾಡುವ ಗ್ರಾಹಕರಿಗೆ ಒಂದು ವರ್ಷ ಸ್ಕ್ರೀನ್‌ ಪ್ರೋಟೆಕ್ಷನ್‌ ಪ್ಲಾನ್‌ ಉಚಿತವಾಗಿ ನೀಡಲಿದೆ ಎಂದು ಕಂಪನಿ ತಿಳಿಸಿದೆ.

Nokia XR20 ವಿಶೇಷತೆಗಳು 

ಎರಡು ಸಿಮ್‌ ಹೊಂದಿರುವ ಈ ಪೋನ್ Android 11 ಓಎಸ್‌ ಮೇಲೆ ರನ್‌ ಆಗಲಿದೆ.  6.67 ಇಂಚು‌ ಫುಲ್‌ ಎಚ್‌ಡಿ+ ಡಿಸ್‌ಪ್ಲೆ, (HD+) 20:9 ಆಸ್ಪೆಕ್ಟ್‌ ರೇಶೋ ಹಾಗೂ ಗೋರಿಲ್ಲಾ ಗ್ಲಾಸ್‌ ಪ್ರೊಟೆಕ್ಶನ್‌ ಕೂಡ ಹೊಂದಿದೆ. octa-core Qualcomm Snapdragon 480 SoC ಪ್ರೋಸೆಸರ್ ಜತೆಗೆ 6GB ರ‍್ಯಾಮ್ ಲಭ್ಯವಿದೆ. ಡ್ಯೂಲ್ ರೇರ್‌ ಕ್ಯಾಮೆರಾ ಪೋನ್‌ನಲ್ಲಿ ನೀಡಲಾಗಿದ್ದು  48 ಮೆಗಾ ಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಹಾಗೂ 13 ಮೆಗಾ ಪಿಕ್ಸೆಲ್‌ ಅಲ್ಟ್ರಾ ವೈಡ್‌ ಶೂಟರ್‌ ಕ್ಯಾಮೆರಾ ನೀಡಲಾಗಿದೆ. ಫೋನಿನಲ್ಲಿ ಕ್ಯಾಮರಾ ಆಪ್ಟಿಕ್ಸ್ Zeissನದ್ದಾಗಿದೆ. ಸ್ಥಿರವಾಗಿ ವಿಡಿಯೋಗಳನ್ನು ಶೂಟ್‌ ಮಾಡಬಲ್ಲ ಆ್ಯಕ್ಶನ್‌ ಕ್ಯಾಮೆರಾ ಮೋಡ್‌ (Action Camera Mode) ಕೂಡ ಇದರಲ್ಲಿ ಲಭ್ಯವಿದೆ.

ನೋಯ್ಸ್‌ ಕ್ಯಾನ್ಸಲೇಷನ್‌ ಜತೆ OZO spatial audio recording support ಕೂಡ ಈ ಪೋನಿನಲ್ಲಿರಲಿದೆ. ಇದು ವಿಡಿಯೋ ರೆಕಾರ್ಡಿಂಗ್‌ನ ಗುಣಮಟ್ಟವನ್ನು ಕೂಡ ಹೆಚ್ಚಿಸಲಿದೆ. QZO Playback support ಹೊಂದಿರುವ ಸ್ಟೀರೀಯೋ ಸ್ಪೀಕರ್‌ಗಳನ್ನು ಕೂಡ ನೀಡಲಾಗಿದೆ. 128GB ಸ್ಟೋರೇಜ್‌ ಹೊಂದಿರುವ ಈ ಫೋನ್ ನಲ್ಲಿ 4,630mAh ಬ್ಯಾಟರಿ ಇದೆ.  ಈ ಬ್ಯಾಟರಿ 18W ವೈಯರ್ಡ್ ಹಾಗೂ 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ.  XR20  5G, 4G LTE ಸಪೋರ್ಟ್‌ ಹೊಂದಿದ್ದು Wi-Fi 6, ಬ್ಲೂಟುತ್ v5.1, GPS/ A-GPS, NavIC, NFC, USB Type-C ಗಳನ್ನು ನೀಡಲಾಗಿದೆ. ಜತೆಗೆ 3.5mm headphone jack ಜ್ಯಾಕ್‌ ಕೂಡ ಇರಲಿದೆ. ಸೈಡ್‌ ಮೌಂಟೆಡ್‌ ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಹೊಂದಿದ್ದು  ಧೂಳು ಮತ್ತು ನೀರಿನಿಂದ ಸಂರಕ್ಷಿಸುವ  IP68 ಸರ್ಟಿಫಿಕೇಶನ್‌ (IP68 Certification) ಹೊಂದಿದೆ. Nokia XR20 ಒಟ್ಟು 248 ಗ್ರಾಮ್‌ ತೂಕವಿದೆ.

ಅತ್ಯಾಕರ್ಷಕ, ಹೊಸಬರು ಖರೀದಿಸಬಲ್ಲ ನಯವಾದ ಕಾಂಪಾಕ್ಟ್ ಸ್ಮಾರ್ಟ್‌ಫೋನ್ OPPO A55!

'ಭಾರತೀಯ ಮೊಬೈಲ್‌ ಬಳಕೆದಾರರು ಸಾಹಸ ಪ್ರವೃತ್ತಿಯವರಾಗಿದ್ದು ಹೆಚ್ಚು ಪ್ರವಾಸಗಳನ್ನು ಮಾಡುತ್ತಾರೆ. ಹಾಗಾಗಿ ಯಾವುದೇ ಪರಿಸ್ಥಿತಿಯಲ್ಲಿ ತೊಂದರೆಗೊಳಗಾಗದ ಉತ್ತಮ ಗುಣಮಟ್ಟದ, ಗಟ್ಟಿಮುಟ್ಟಾದ ಮೊಬೈಲ್ ಬಳಸಲು ಇಚ್ಛಿಸುತ್ತಾರೆ. ಬಹುತೇಕ ಪೋನ್‌ ಬಳಕೆದಾರರು ಸರಾಸರಿ ಮೊಬೈಲ್‌ ಖರೀದಿಸಿದ ಹತ್ತು ವಾರಗಳಲ್ಲಿ ಅದನ್ನು ಹಾನಿಗೊಳಗಾಗಿಸುತ್ತಾರೆ. ಹಾಗಾಗಿ ಸ್ಕ್ರೀನ ಗಾರ್ಡ್‌ (Screen guard) ಮತ್ತು ಪೋನ್‌ ಕವರ್‌  ಸೇರಿದಂತೆ ಸುರಕ್ಷಾ ಸಾಮಗ್ರಿಗಳ ಮೇಲೆ ಅವರು ಹೆಚ್ಚಿನ ಹಣ ಸಂದಾಯ ಮಾಡಬೇಕಾಗುತ್ತದೆ. ಹಾಗಾಗಿ ದಿನನಿತ್ಯ ಬಳಕೆಯಲ್ಲಿ ಸಂಭವಿಸುವ ಯಾವುದೇ ತೊಂದರೆಗಳನ್ನು Nokia XR20 ಯಶಸ್ವಿಯಾಗಿ ತಡೆದುಕೊಳ್ಳಲಿದ್ದು ಇದಯ ಬಳಕೆದಾರರಿಗೆ ಅನುಕೂಲವಾಗಲಿದೆʼ ಎಂದು HMD Globalನ ಉಪಾಧ್ಯಕ್ಷ ಸನ್ಮೀತ್‌ ಸಿಂಗ್‌ ಕೋಚರ್‌ (Sanmeet Singh Kochhar) ಹೇಳಿದ್ದಾರೆ.

click me!