Xiaomi Foldable Smartphone: ಶಾಓಮಿಯ ಹೊಸ ಫ್ಲಿಪ್‌ ಸ್ಟೈಲ್ ಸ್ಮಾರ್ಟ್‌ಫೋನ್ ವಿನ್ಯಾಸ ಲೀಕ್!

By Suvarna News  |  First Published Dec 30, 2021, 1:56 PM IST

ಫೋಲ್ಡಬಲ್ ಡಿಸ್ಪ್ಲೇ ಹೊಂದಿರುವ ಫ್ಲಿಪ್ ಫೋನ್‌ಗಾಗಿ Xiaomi CNIPA ನಲ್ಲಿ ಹೊಸ ಪೇಟೆಂಟ್ ಅನ್ನು ಸಲ್ಲಿಸಿದೆ.


Tech Desk: ಶಾಓಮಿ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್‌ ಮೇಲೆ ಕಾರ್ಯನಿರ್ವಹಿಸುತ್ತಿದೆ. ಕಂಪನಿಯು ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ಮಿಕ್ಸ್ ಫೋಲ್ಡ್ (Mix Fold) ಅನ್ನುಪ್ರಾರಂಭಿಸಿತ್ತು. ಆದರೆ ಈ ಹೊಸ ಮಡಚಬಹುದಾದ ಸ್ಮಾರ್ಟ್‌ಫೋನ್ Galaxy Z Fold 3 ಕಾರ್ಯವಿಧಾನವನ್ನು ಹೋಲುತ್ತದೆ. ಸದ್ಯಕ್ಕೆ ಇದು ಚೀನಾದ ಹೊರಗೆ ಅಧಿಕೃತವಾಗಿ ಬಿಡುಗಡೆಯಾಗಬೇಕಿದೆ. ಈ ಮಧ್ಯೆ ಚೀನಾದ ಸ್ಮಾರ್ಟ್‌ಫೋನ್ ಟೆಕ್ ದೈತ್ಯದಿಂದ ಕ್ಲಾಮ್‌ಶೆಲ್ ಫೋಲ್ಡಿಂಗ್ ಸ್ಮಾರ್ಟ್‌ಫೋನ್ ನಿರ್ಮಾಣದಲ್ಲಿ ತೊಡಗಿದೆ. 

ಅಪ್ಲಿಕೇಶನ್ ಸಂಖ್ಯೆ 2020301357510 ಅಡಿಯಲ್ಲಿ ಮುಂಬರುವ ಫೋಲ್ಡಬಲ್ ಫೋನ್‌ನ ಚಿತ್ರಗಳನ್ನು ಚೀನಾ ನ್ಯಾಷನಲ್ ಇಂಟೆಲೆಕ್ಚುವಲ್ ಪ್ರಾಪರ್ಟಿ ಅಡ್ಮಿನಿಸ್ಟ್ರೇಷನ್ (CNIPA) ನಲ್ಲಿ ಕಂಡುಬಂದಿದೆ. ಈ ಚಿತ್ರವು ಸಾಧನದ ಹೆಸರು ಅಥವಾ ಅದರ ವಿಶೇಷಣಗಳನ್ನು ಬಹಿರಂಗಪಡಿಸದಿದ್ದರೂ,  ಶಾಓಮಿ ಫೋಲ್ಡಬಲ್‌ ಸ್ಮಾರ್ಟ್‌ಫೋನ್ ಬಗ್ಗೆ ಹಲವು ಮಾಹಿತಿಗಳು ಬಹಿರಂಗಗೊಂಡಿವೆ. 

Latest Videos

undefined

ಶಾಓಮಿ ಫ್ಲಿಪ್ ಫೋಲ್ಡಬಲ್ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು

ಫೋಲ್ಡಬಲ್ ಡಿಸ್ಪ್ಲೇ ಹೊಂದಿರುವ ಫ್ಲಿಪ್ ಫೋನ್‌ಗಾಗಿ ಶಾಓಮಿ CNIPA ನಲ್ಲಿ ಹೊಸ ಪೇಟೆಂಟ್ ಅನ್ನು ಸಲ್ಲಿಸಿದೆ. ಮಡಿಸುವ ಕಾರ್ಯವಿಧಾನವು Samsung Galaxy Z ಫ್ಲಿಪ್ 3 ಅನ್ನು ಹೋಲುತ್ತದೆ. ಇದನ್ನು ಪೇಟೆಂಟ್‌ ಫೈಲ್‌ ಮಾಡುವ ಸಮಯದಲ್ಲಿ ಶಾಓಮಿ ಅಧಿಕೃತವಾಗಿ ಫ್ಲಿಪ್ ಶೈಲಿಯ ಫೋಲ್ಡಬಲ್ ಸ್ಮಾರ್ಟ್‌ಫೋನ್ ಕುರಿತು ಯಾವುದೇ ವಿವರಗಳನ್ನು ದೃಢೀಕರಿಸಿಲ್ಲ. ಶಾಓಮಿ ಫ್ಲಿಪ್ ಸ್ಮಾರ್ಟ್‌ಫೋನ್, ಹೊರಭಾಗದಲ್ಲಿ ಆಯತಾಕಾರದ ಸ್ಕ್ರೀನ್ ನೀಡಲಾಗಿದ್ದು ಇದರಲ್ಲಿ ಸಣ್ಣ ಸ್ರೀನ್‌  ಮತ್ತು ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ನೋಡಬಹುದು. ಕ್ಯಾಮೆರಾ ಮಾಡ್ಯೂಲ್‌ನ ಮೇಲ್ಭಾಗದಲ್ಲಿ ಕಟೌಟ್ ಇದೆ (ಮಡಿಸಿದಾಗ), ಅದು ಎಲ್‌ಇಡಿ ಫ್ಲ್ಯಾಷ್ ಆಗಿರಬಹುದು.

ಸ್ಯಾಮ್‌ಸಂಗ್ ಜತೆ ಸ್ಪರ್ಧಿಸಲಿರುವ  ಶಾಓಮಿ

ಸ್ಮಾರ್ಟ್‌ಫೋನ್ ಅನ್ನು ಬಿಚ್ಚಿದರೆ ಎತ್ತರದ ಡಿಸ್‌ಪ್ಲೇ ಸಿಗುತ್ತದೆ. ‌ಆದರೆ  ಪ್ರಸ್ತುತ ಸ್ಕ್ರೀನ್ ಗಾತ್ರದ ವಿವರಗಳನ್ನು ಬಹಿರಂಗಗೊಂಡಿಲ್ಲ. ಮೇಲಿನ ಎಡ ಮೂಲೆಯಲ್ಲಿ ವೃತ್ತಾಕಾರದ  ಕಟೌಟ್ ಇದೆ. ಇದು ಡ್ಯುಯಲ್-ಫ್ರಂಟ್ ಕ್ಯಾಮೆರಾ ಸೆಟಪ್ ಅನ್ನು ಹೊಂದಬಹುದು. ಸ್ಕ್ರೀನ್ ಸುತ್ತಲೂ ದಪ್ಪ ಬೆಜೆಲ್‌ಗಳಿವೆ. ಚೌಕಟ್ಟಿನ ಬಲಭಾಗದಲ್ಲಿ ಪವರ್ ಮತ್ತು ವಾಲ್ಯೂಮ್ ಕೀಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಸ್ಪೀಕರ್ ಗ್ರಿಲ್ ಮತ್ತು ಸಿಮ್ ಟ್ರೇ ಇದೆ.‌ 

ಎಡ ಮತ್ತು ಮೇಲಿನ ಅಂಚುಗಳು ಫ್ಲ್ಯಾಷ್ ಆಗಿದ್ದು ಯಾವುದೇ ಪೋರ್ಟ್‌ಗಳು ಅಥವಾ ಬಟನ್‌ಗಳನ್ನು ಹೊಂದಿಲ್ಲ. ಫ್ಲಿಪ್ ಫೋನ್‌ನ ಇತರ ವಿಶೇಷಣಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಶಾಓಮಿ ಫ್ಲಿಪ್ ಫೋನ್ ಮುಂದಿನ ವರ್ಷ ಸ್ಯಾಮ್‌ಸಂಗ್ Z ಫ್ಲಿಪ್ ಸರಣಿಗೆ ಪ್ರತಿಸ್ಪರ್ಧಿಯಾಗಿ ಸ್ಪರ್ಧಾತ್ಮಕ ಬೆಲೆಯೊಂದಿಗೆ ಪ್ರಾರಂಭಿಸಬಹುದು. ಅದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

ಕಂಪನಿಯು ಚೀನಾದ ಹೊರಗೆ ಅಂದರೆ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ Mi ಮಿಕ್ಸ್ ಫೋಲ್ಡ್ ಸ್ಮಾರ್ಟ್‌ ಫೋನ್‌ಅನ್ನು ಇನ್ನೂ ಬಿಡುಗಡೆ ಮಾಡಬೇಕಿದೆ.  ಆದರೆ ಇದನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ ಅಥವಾ ಇಲ್ಲವೇ ಎಂದು ಖಚಿತವಾಗಿಲ್ಲ. ಆದಾಗ್ಯೂ  ಶಾಓಮಿಯ ಮುಂದಿನ ಫೋಲ್ಡಬಲ್ ಸಾಧನ, ನಾವು ನೋಡುವಂತೆ ಈ ಕ್ಲಾಮ್‌ಶೆಲ್‌ನಲ್ಲಿ ಬಂದರೆ, Mi Mix ಫೋಲ್ಡ್‌ಗಿಂತ ಕಡಿಮೆ ಬೆಲೆಯಿರಬಹುದು ಮತ್ತು ಇತರ ದೇಶಗಳಲ್ಲಿ ಮಡಿಸಬಹುದಾದ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯನ್ನು ಪರೀಕ್ಷಿಸಲು ಶಾಓಮಿಗೆ ಇದು ಉತ್ತಮ ಮಾರ್ಗವಾಗಲಿದೆ. ಜತೆಗ ಮಾರುಕಟ್ಟೆಯಲ್ಲಿರುವ ಇತರ ಕಂಪನಿಯ  ಫೋಲ್ಡಬಲ್ ಸ್ಮಾರ್ಟ್‌ ಫೋನ್‌ ಜತೆಗೆ ಸ್ಪರ್ಧಿಸಲಿದೆ.

ಇದನ್ನೂ ಓದಿ:

1) Samsung Galaxy Tab A8: 7040mAh ಬ್ಯಾಟರಿ, ವೇಗದ ಚಾರ್ಜಿಂಗ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆ!

2) Moto Edge X30: ಮೊಟೊರೊಲಾ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಜನವರಿಯಲ್ಲಿ ಬಿಡುಗಡೆ?

3) Amazon's Best Phone: ಐಫೋನ್ 13 ಅಮೆಜಾನ್ ಗ್ರಾಹಕರ ಆಯ್ಕೆಯ ವರ್ಷದ ಅತ್ಯುತ್ತಮ ಸ್ಮಾರ್ಟ್‌ಫೋನ್!

click me!