Samsung Galaxy Tab A8: 7040mAh ಬ್ಯಾಟರಿ, ವೇಗದ ಚಾರ್ಜಿಂಗ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆ!

By Suvarna NewsFirst Published Dec 30, 2021, 12:32 PM IST
Highlights

Samsung Galaxy Tab A8 ಭಾರತದಲ್ಲಿ ಬಿಡುಗಡೆಯಾಗಲಿದೆ. ಅಧಿಕೃತ ಬಿಡುಗಡೆ ದಿನಾಂಕದ ಘೋಷಣೆಗೆ ಮುಂಚಿತವಾಗಿ Samsung ಟ್ಯಾಬ್ಲೆಟ್ ಅನ್ನು Amazon India ನಲ್ಲಿ ಪಟ್ಟಿ ಮಾಡಲಾಗಿದೆ.


Tech Desk: ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್‌ A8ಅನ್ನು ಈ ವರ್ಷದ ಆರಂಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಯಿತು. ಟ್ಯಾಬ್ಲೆಟ್ 10.5-ಇಂಚಿನ TFT ಡಿಸ್ಪ್ಲೇ ಹೊಂದಿದೆ.  ಡಿಸ್ಲ್ಪೇ 60Hz ರಿಫ್ರೆಶ್ ದರವನ್ನು ಹೊಂದಿದೆ ಮತ್ತು 1920*1200 ಪಿಕ್ಸೆಲ್‌ಗಳ WUXGA+ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು ಬದಿಗಳಲ್ಲಿ ಸ್ವಲ್ಪ ದಪ್ಪವಾದ ಬೆಜೆಲ್‌ಗಳನ್ನು ಹೊಂದಿದ್ದು, ಬಲ ಚೌಕಟ್ಟಿನಲ್ಲಿ 5MP ಸೆಲ್ಫೀ ಕ್ಯಾಮೆರಾವನ್ನು ಹೊಂದಿದೆ. Galaxy Tab A8 ಯುನಿಸೊಕ್ T610 ಆಕ್ಟಾ-ಕೋರ್ SoC ಅನ್ನು ಹೊಂದಿದೆ. ಇದನ್ನು 3GB / 4GB RAM ಮತ್ತು 32GB / 64GB ಮತ್ತು 128GB ಆಂತರಿಕ ಸಂಗ್ರಹಣೆಯ ಆಯ್ಕೆಗಳೊಂದಿಗೆ ಪ್ರಾರಂಭಿಸಲಾಗಿದೆ. ಟ್ಯಾಬ್ಲೆಟ್ 15W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 7040mAh ಬ್ಯಾಟರಿ ಜತೆಗೆ ಬರಲಿದೆ. 

Samsung Galaxy Tab A8 ಒಂದೇ 8MP ಹಿಂಬದಿಯ ಕ್ಯಾಮೆರಾ ಸೆನ್ಸರ್ ಹೊಂದಿದೆ. ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಡಾಲ್ಬಿ ಅಟ್ಮಾಸ್‌ನೊಂದಿಗೆ ಕ್ವಾಡ್-ಸ್ಪೀಕರ್ ಸೆಟಪ್ ಅನ್ನು ಹೊಂದಿದೆ. Samsung Galaxy Tab A8 ಆಂಡ್ರಾಯ್ಡ್ 11 ಆಧಾರಿತ OneUI ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಟ್ಯಾಬ್ಲೆಟ್‌ - ಪಿಂಕ್ ಗೋಲ್ಡ್, ಸಿಲ್ವರ್ ಮತ್ತು ಗ್ರೇ ಒಟ್ಟು ನಾಲ್ಕು ಬಣ್ಣಗಳಲ್ಲಿ ಲಭ್ಯವಿರಲಿದೆ.

Samsung Galaxy Tab A8 price, availability

Samsung Galaxy Tab A8 ಭಾರತದ ಬೆಲೆ ಮತ್ತು ಲಭ್ಯತೆಯ ವಿವರಗಳು ಇನ್ನೂ ಬಹಿರಂಗವಾಗಿಲ್ಲ. Samsung Galaxy Tab A8 ನ ಅಧಿಕೃತ ಬಿಡುಗಡೆ ದಿನಾಂಕವನ್ನು Amazon India ನಲ್ಲಿನ ಪಟ್ಟಿಯಿಂದ ಬಹಿರಂಗಪಡಿಸಲಾಗಿಲ್ಲ. ಇದು 3GB + 32GB ವೈಫೈ-ಮಾತ್ರ ರೂಪಾಂತರಕ್ಕಾಗಿ (Wi-Fi model) ಸುಮಾರು 19,700 ರೂಗಳ ಆರಂಭಿಕ ಬೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದೆ.

ಟ್ಯಾಬ್ಲೆಟ್ ವೈಫೈ + ಸೆಲ್ಯುಲಾರ್ ಆಯ್ಕೆಗಳಲ್ಲಿ ಬರುತ್ತದೆ ಮತ್ತು ಇದರ ಆರಂಭಿಕ ಬೆಲೆ ಸುಮಾರು 24,000 ರೂ.  ಆದರೆ ಟ್ಯಾಬ್ಲೆಟ್ ಭಾರತದಲ್ಲಿ ಸುಮಾರು 20,000 ರೂ.ಗೆ ಬಿಡುಗಡೆಯಾಗಲಿದೆ ಎಂದು ನಾವು ನಿರೀಕ್ಷಿಸಬಹುದು.

Samsung Galaxy Tab A8 specifications

Samsung Galaxy Tab A8 10.5-ಇಂಚಿನ (1,920x1,200 ಪಿಕ್ಸೆಲ್‌ಗಳು) TFT ಡಿಸ್ಪ್ಲೇಯನ್ನು 80 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಹೊಂದಿದೆ. ಇದು ಡ್ರ್ಯಾಗ್ ಮತ್ತು ಸ್ಪ್ಲಿಟ್ ವೈಶಿಷ್ಟ್ಯದೊಂದಿಗೆ split-screen mode ಅನ್ನು ಬೆಂಬಲಿಸುವ Android 11-ಆಧಾರಿತ One UI ಸ್ಕಿನ್ ಅನ್ನು ರನ್ ಮಾಡುತ್ತದೆ. ಇದು  4GB RAM ಮತ್ತು 128GB ಸಂಗ್ರಹದೊಂದಿಗೆ ಬಿಡುಗಡೆಯಾಗಿದೆ. ಟ್ಯಾಬ್ಲೆಟ್ ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಕ್ವಾಡ್-ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.

ಕ್ಯಾಮೆರಾ ಕಡೆಗೆ ಗಮನಹರಿಸುವುದಾದರೆ Samsung Galaxy Tab A8 8-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾದೊಂದಿಗೆ ಬರುತ್ತದೆ ಮತ್ತು ಟ್ಯಾಬ್ಲೆಟ್ ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗಾಗಿ 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಟ್ಯಾಬ್ಲೆಟ್ 7,040mAh ಬ್ಯಾಟರಿಯನ್ನು ಹೊಂದಿದೆ. ಇದು USB ಟೈಪ್-ಸಿ ಮೂಲಕ 15W ನಲ್ಲಿ ಚಾರ್ಜ್ ಆಗುತ್ತದೆ. ಸಂಪರ್ಕ ಆಯ್ಕೆಗಳಲ್ಲಿ 4G LTE, ಡ್ಯುಯಲ್-ಬ್ಯಾಂಡ್ Wi-Fi ಮತ್ತು ಬ್ಲೂಟೂತ್ v5.0 ಸೇರಿವೆ. ಬಯೋಮೆಟ್ರಿಕ್ ಆಯ್ಕೆಗಳು ಮುಖ ಗುರುತಿಸುವಿಕೆಯನ್ನು ಒಳಗೊಂಡಿರುತ್ತವೆ. ಇದು 246.8x161.9x6.9mm ಅಳತೆ ಮತ್ತು 508 ಗ್ರಾಂ ತೂಗುತ್ತದೆ.

ಇದನ್ನೂ ಓದಿ:

1) Moto Edge X30: ಮೊಟೊರೊಲಾ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಜನವರಿಯಲ್ಲಿ ಬಿಡುಗಡೆ?

2) Foxconn Tamil Nadu: ಚೆನ್ನೈನ ಐಫೋನ್ ಕಾರ್ಖಾನೆ ಮೌಲ್ಯಮಾಪನಕ್ಕೆ ಅಧಿಕಾರಿ ನೇಮಿಸಿದ ಆ್ಯಪಲ್‌!

3) Password Safety: ಇಂಟರ್ನೆಟ್ ಬ್ರೌಸರ್‌ಗಳಲ್ಲಿ ನಿಮ್ಮ ಪಾಸ್‌ವರ್ಡ್‌ ಸೇವ್‌ ಮಾಡುವುದು ಎಷ್ಟು ಸೇಫ್?

click me!