ಏರ್ಟೆಲ್ ನೂತನ ದರಗಳು ಪ್ರಕಟ: ಎಷ್ಟು ಎಕ್ಸ್‌ಟ್ರಾ ಕೊಡ್ಬೇಕು? ಇಲ್ಲಿದೆ ಚಾರ್ಟ್

Published : Dec 02, 2019, 06:47 PM IST
ಏರ್ಟೆಲ್ ನೂತನ ದರಗಳು ಪ್ರಕಟ: ಎಷ್ಟು ಎಕ್ಸ್‌ಟ್ರಾ  ಕೊಡ್ಬೇಕು? ಇಲ್ಲಿದೆ ಚಾರ್ಟ್

ಸಾರಾಂಶ

ಡಿ.03ರಿಂದ ಟೆಲಿಕಾಂ ಸೇವೆಗಳ ದರದಲ್ಲಿ ಏರಿಕೆ; ಏರ್ಟೆಲ್ ನೂತನ ದರ ಪಟ್ಟಿ ಪ್ರಕಟ; ಯಾವ್ಯಾವ ಪ್ಲಾನ್‌ಗೆ ಇನ್ಮುಂದೆ ಎಷ್ಟೆಷ್ಟು? ಇಲ್ಲಿದೆ ವಿವರ....

ಬೆಂಗಳೂರು (ಡಿ.02): ವ್ಯವಹಾರದಲ್ಲಿ ನಷ್ಟವನ್ನು ಸರಿತೂಗಿಸಲು ಭಾರತೀಯ ಟೆಲಿಕಾಂ ಕಂಪನಿಗಳು ದರ ಏರಿಕೆಯ ಮೊರೆ ಹೋಗಿವೆ. ಏರ್ಟೆಲ್ ಕೂಡಾ ನಾಳೆ (ಡಿ.03) 2019 ರಿಂದ ದರಗಳನ್ನು ಹೆಚ್ಚಿಸುತ್ತಿದೆ.  ಏರ್ಟೆಲ್ ತನ್ನ ವಿವಿಧ ಪ್ಲಾನ್‌ಗಳಿಗೆ ದಿನಕ್ಕೆ 50 ಪೈಸೆಯಿಂದ 2.85 ರೂ ವರೆಗೆ ದರವನ್ನು ಹೆಚ್ಚಿಸಿದೆ.

2 ದಿನಗಳ ವ್ಯಾಲಿಡಿಟಿ, 150MB ಡೇಟಾ ಹೊಂದಿರುವ  ₹19 ಪ್ಲಾನ್‌ನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗಿ, 100 ಹೆಚ್ಚುವರಿ SMSಗಳನ್ನು ಈ ಪ್ಲಾನ್‌ಗೆ ಸೇರಿಸಲಾಗಿದೆ.

28 ದಿನಗಳ ಅವಧಿಗೆ ₹26.66 ಟಾಕ್‌ಟೈಮ್, 100MB ಡೇಟಾವನ್ನು ಒಳಗೊಂಡಿದ್ದ  ₹35ರ ಪ್ಲಾನ್ ದರ ಹೆಚ್ಚಾಗಿದೆ.  ಇದರ ಬೆಲೆ ಇನ್ಮುಂದೆ ₹49 ಆಗಿದೆ. ₹38.52 ಟಾಕ್ ಟೈಮ್ ಸಿಗುತ್ತೆ.

28 ದಿನಗಳ ಅವಧಿಗೆ ₹130 ಮೌಲ್ಯದ ಟಾಕ್‌ಟೈಮ್, 200MB ಡೇಟಾ, 300 SMS ನೀಡುತ್ತಿದ್ದ ₹65 ಪ್ಲಾನ್ ದರ ನಾಳೆಯಿಂದ  ₹79 ಆಗಲಿದೆ. ಇದರಲ್ಲಿ ₹63.95 ಟಾಕ್‌ಟೈಮ್ ಸಿಗಲಿದೆ.

ಅನಿಯಮಿತ ಕಾಲಿಂಗ್, 300SMS, 2GB ಡೇಟಾ ಒಳಗೊಂಡಿದ್ದ ಮಾಸಿಕ ₹129ರ  ಪ್ಲಾನ್ ಬೆಲೆ ಇನ್ಮುಂದೆ ₹148 ಆಗಿರಲಿದೆ. ಇದರಲ್ಲಿ ಏರ್ಟೆಲ್ ಎಕ್ಸ್ಟ್ರೀಮ್, ವಿಂಕ್ ಮತ್ತು ಹಲೋ ಟ್ಯೂನ್ ಸೌಲಭ್ಯವನ್ನು ಸೇರಿಸಲಾಗಿದೆ.

ಇದನ್ನೂ ಓದಿ | ಗೂಗಲ್‌ನ ಸಣ್ಣ ಕೆಲಸವೊಂದು ಮಾಡಿಕೊಡಿ; ಬರೋಬ್ಬರಿ 10 ಕೋಟಿ ರೂ. ಪಡೆಯಿರಿ!..

ಅನಿಯಮಿತ ಕಾಲಿಂಗ್, 100SMS, 1GB ಡೇಟಾ ಸಿಗುತ್ತಿದ್ದ ₹169 ಪ್ಲಾನ್‌ಗೆ ಬಳಕೆದಾರರು ಇನ್ಮುಂದೆ ₹248 ತೆರಬೇಕು.  ಇದರಲ್ಲಿ 1.5GB ಹೈಯರ್ ಡೇಟಾ, ಏರ್ಟೆಲ್ ಎಕ್ಸ್ಟ್ರೀಮ್, ವಿಂಕ್ ಮ್ಯೂಸಿಕ್, ಹಲೋ ಟ್ಯೂನ್ ಮತ್ತು  ಆ್ಯಂಟಿ ವೈರಸ್ ಪ್ರೊಟೆಕ್ಷನ್ ಸೌಲಭ್ಯಗಳನ್ನು ನೀಡಲಾಗಿದೆ.

ಅನಿಯಮಿತ ಕಾಲಿಂಗ್, 100SMS, 1.5GB ಡೇಟಾ ಒಳಗೊಂಡಿದ್ದ ₹199 ಪ್ಲಾನ್‌ಗೆ ಬಳಕೆದಾರರು ಇನ್ಮುಂದೆ ₹248 ಕೊಡಬೇಕು. ಮೇಲಿನಂತೆ ಇದರಲ್ಲೂ ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಹಲೋ ಟ್ಯೂನ್ ಮತ್ತು  ಆ್ಯಂಟಿ ವೈರಸ್ ಪ್ರೊಟೆಕ್ಷನ್ ಫೀಚರ್‌ಗಳನ್ನು ನೀಡಲಾಗಿದೆ.

ಇದನ್ನೂ ಓದಿ | ರಿಲಯನ್ಸ್ ಜಿಯೋ ತಂದಿದೆ ಹೊಸ ಪ್ರಿಪೇಯ್ಡ್ ಪ್ಲಾನ್: ಅತೀ ಅಗ್ಗ, ಡೇಟಾ ಬೇಜಾನ್...

₹500ರ ಕೆಳಗಿನ ಪ್ಲಾನ್:

ಜನಪ್ರಿಯವಾಗಿರುವ ₹249 ಪ್ಲಾನ್‌ಗೆ ಗ್ರಾಹಕರು ಇನ್ಮುಂದೆ ₹298 ಪಾವತಿಸಬೇಕು. ಅನ್ಲಿಮಿಟೆಡ್ ಕಾಲಿಂಗ್,  100 SMS, ಪ್ರತಿದಿನ 2GB ಡೇಟಾ, ಜೊತೆಗೆ   ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಹಲೋ ಟ್ಯೂನ್ ಮತ್ತು  ಆ್ಯಂಟಿ ವೈರಸ್ ಪ್ರೊಟೆಕ್ಷನ್ ಫೀಚರ್‌ಗಳು ಸಿಗಲಿದೆ.

ಅದೇ ರೀತಿಯಲ್ಲಿ, 82 ದಿನಗಳ ವ್ಯಾಲಿಡಿಟಿಯ ₹448 ಪ್ಲಾನ್ ದರ ₹698 ಆಗಿದೆ. ವ್ಯಾಲಿಡಿಟಿಯನ್ನು 84 ದಿನಗಳಿಗೆ ಏರಿಸಲಾಗಿದೆ. ₹449 ಪ್ಲಾನ್  ಬೆಲೆಯೂ ₹698 ಆಗಿದ್ದು, ವ್ಯಾಲಿಡಿಯನ್ನು 82ರಿಂದ 84ಕ್ಕೆ ಏರಿಸಲಾಗಿದೆ. ಇವುಗಳ ಜೊತೆಗೆ ಇತರ ಅನ್ಲಿಮಿಟೆಡ್ ಕರೆ, SMS, ಸೌಲಭ್ಯಗಳನ್ನು ಕೂಡಾ ನೀಡಲಾಗುತ್ತಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್