AI1 ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸೀರಿಸ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಗ್ಯಾಲಕ್ಸಿಎಸ್24 ಅಲ್ಟ್ರಾ, ಗ್ಯಾಲಕ್ಸಿ ಎಸ್24+ ಮತ್ತು ಗ್ಯಾಲಕ್ಸಿ S24 ಅತ್ಯಾಧುನಿಕಂ ತಂತ್ರಜ್ಞಾನ ಒಳಗೊಂಡಿದ್ದು, ಆಕರ್ಷಕ ಆಫರ್ ಕೂಡ ಲಭ್ಯವಿದೆ.
ಬೆಂಗಳೂರು(ಜ.18): ಸ್ಯಾಮ್‌ಸಂಗ್ ಇಂದು ಗ್ಯಾಲಕ್ಸಿಎಸ್24 ಅಲ್ಟ್ರಾ, ಗ್ಯಾಲಕ್ಸಿ ಎಸ್24+ ಮತ್ತು ಗ್ಯಾಲಕ್ಸಿ S24 ಅನ್ನು ಅನಾವರಣಗೊಳಿಸಿದೆ. ಇದು ಗ್ಯಾಲಕ್ಸಿ ಎಐ1 ಮೂಲಕ ರೂಪುಗೊಂಡಿದ್ದು ಗ್ರಾಹಕರಿಗೆ ಅತ್ಯುತ್ತಮ ಹಾಗೂ ಹೊಸ ಅನುಭವ ನೀಡಲಿದೆ. ಗ್ಯಾಲಕ್ಸಿ ಎಸ್24 ಸರಣಿಯಲ್ಲಿನ ಪ್ರತಿಯೊಂದು ಅನುಭವವನ್ನು ಎಐ ಅಪೂರ್ವಗೊಳಿಸಲಿದ್ದು, ಟೆಕ್ಸ್ಟ್, ಕಾಲ್ ಟ್ರಾನ್ಸ್ ಲೇಷನ್ ಗಳೊಂದಿಗೆ ತಡೆ ರಹಿತ ಸಂಪರ್ಕ ಒದಗಿಸುವುದರಿಂದ ಹಿಡಿದು, ಗ್ಯಾಲಕ್ಸಿ ಪ್ರೋ ವಿಶ್ಯುವಲ್ ಮೂಲಕ ಬಳಕೆದಾರರ ಸ್ವಾತಂತ್ರ್ಯ ಹೆಚ್ಚಿಸಲಿದೆ.
ಗ್ಯಾಲಕ್ಸಿ ಎಸ್24 ಸರಣಿ ಫೋಟೋ ಸಾಮರ್ಥ್ಯ ಎಐ-ಚಾಲಿತ ತಂತ್ರಜ್ಞಾನದಿಂದ ಕೂಡಿದೆ. ಗ್ಯಾಲಕ್ಸಿ ಎಸ್24 ಅಲ್ಟ್ರಾ ದ ಕ್ವಾಡ್ ಟೆಲಿ ಸಿಸ್ಟಮ್, ಹೊಸ 5x ಆಪ್ಟಿಕಲ್ ಜೂಮ್ ಲೆನ್ಸ್‌ನೊಂದಿಗೆ ಮತ್ತು 50ಎಂಪಿ ಸೆನ್ಸರ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 2x, 3x, 5xನಿಂದ 10x10 ವರ್ಧನೆಯ ಸಾಮರ್ಥ್ಯವುಳ್ಳ ಜೂಮ್ ಲೆವೆಲ್ ಗಳಲ್ಲಿ ಆಪ್ಟಿಕಲ್-ಗುಣಮಟ್ಟದ ಕಾರ್ಯಕ್ಷಮತೆಯನ್ನು ಸಕ್ರಿಯಗೊಳಿಸುವ ಅಡಾಪ್ಟಿವ್ ಪಿಕ್ಸೆಲ್ ಸೆನ್ಸರ್ ಹೊಂದಿದೆ. ವರ್ಧಿತ ಡಿಜಿಟಲ್ ಜೂಮ್‌ನೊಂದಿಗೆ ಚಿತ್ರಗಳು 100xನಲ್ಲಿ ಸ್ಫಟಿಕ ಸ್ಪಷ್ಟ ಫಲಿತಾಂಶಗಳನ್ನು ತೋರಿಸುತ್ತವೆ.
ಸ್ಯಾಮ್‌ಸಂಗ್ ಫೋನ್‌ಗಳ ಭರ್ಜರಿ ಡಿಸ್ಕೌಂಟ್, ಗ್ಯಾಲಕ್ಸಿ A05S ಸೇರಿ ಕೆಲ ಫೋನ್ ಮೆಲೆ ಆಕರ್ಷಕ ಕೊಡುಗೆ!
ಉತ್ತಮ ಶಾಟ್‌ಗಳನ್ನು ಸೆರೆಹಿಡಿದ ನಂತರ, ನವೀನ ಗ್ಯಾಲಕ್ಸಿ ಎಐ ಎಡಿಟಿಂಗ್ ಟೂಲ್ಸ್ ಎರೇಸ್ ಮಾಡಲು, ಮರು-ಸಂಯೋಜಿಸಲು ಮತ್ತು ರಿಮಾಸ್ಟರ್ ಕ್ರಿಯೆಗಳನ್ನು ಸರಳಗೊಳಿಸುತ್ತವೆ. ಸುಲಭ ಮತ್ತು ಹೆಚ್ಚು ಪರಿಣಾಮಕಾರಿ ಆಪ್ಟಿಮೈಸೇಶನ್‌ಗಳಿಗಾಗಿ, ಪ್ರತಿ ಫೋಟೋಗೆ ಸೂಕ್ತವಾದ ಟ್ವೀಕ್‌ಗಳನ್ನು ಸೂಚಿಸಲು ಗ್ಯಾಲಕ್ಸಿ ಎಐ ಪೂರಿತ ಎಡಿಟ್ ಸಜೆಷನ್ ಬಳಸಬಹುದು. ಬಳಕೆದಾರರಿಗೆ ಇನ್ನಷ್ಟು ಸೃಜನಾತ್ಮಕ ನಿಯಂತ್ರಣ ಮತ್ತು ಸ್ವಾತಂತ್ರ್ಯವನ್ನು ನೀಡುವ, ಜನರೇಟಿವ್ ಎಡಿಟ್ ಫೀಚರ್ ಮೂಲಕ ಫೋಟೋಗಳ ಹಿನ್ನೆಲೆಯ ಭಾಗಗಳನ್ನು ಜನರೇಟಿವ್ ಎಐ ನೊಂದಿಗೆ ತುಂಬಬಹುದು. ಹೆಚ್ಚು ವಿವರವಾದ ನೋಟಕ್ಕಾಗಿ ಆಕ್ಷನ್-ಪ್ಯಾಕ್ಡ್ ಕ್ಷಣಗಳನ್ನು ನಿಧಾನಗೊಳಿಸಲು ಹೊಸ ಇನ್‌ಸ್ಟಂಟ್ ಸ್ಲೋ-ಮೋಕನ್ ಫೀಚರ್ ಚಲನೆಗಳ ಆಧಾರದ ಮೇಲೆ ಹೆಚ್ಚುವರಿ ಫ್ರೇಮ್‌ಗಳನ್ನು ರಚಿಸುತ್ತದೆ.
ಪ್ರತಿ ಗ್ಯಾಲಕ್ಸಿ ಎಸ್24 ಅಲ್ಟ್ರಾವು ಗ್ಯಾಲಕ್ಸಿಗೆ ಆಪ್ಟಿಮೈಸ್ ಮಾಡಲಾದ ವಿಶೇಷವಾಗಿ ಗ್ಯಾಲಕ್ಸಿ ಬಳಕೆದಾರರಿಗೆ ಸ್ನ್ಯಾಪ್ ಡ್ರ್ಯಾಗನ್® 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿದೆ. ಈ ಚಿಪ್‌ಸೆಟ್ ಅಸಾಧ್ಯವಾದ ಪರಿಣಾಮಕಾರಿ ಎಐ ಪ್ರೊಸೆಸಿಂಗ್ ಗಾಗಿ ಗಮನಾರ್ಹವಾದ ಎನ್ ಪಿ ಯು ಸುಧಾರಣೆಯನ್ನು ಒದಗಿಸುತ್ತದೆ. ಎಲ್ಲಾ ಮೂರು ಗ್ಯಾಲಕ್ಸಿ ಎಸ್24 ಮಾದರಿಗಳಲ್ಲಿ, 1-120 ಹರ್ಟ್ಜ್ ಅಡಾಪ್ಟಿವ್ ರಿಫ್ರೆಶ್ ದರಗಳು ಕಾರ್ಯಕ್ಷಮತೆಯ ದಕ್ಷತೆಯನ್ನು ತೀವ್ರಗೊಳಿಸುತ್ತದೆ.
ಇದು ವೈಬ್ರೆಂಟ್ ಮತ್ತು ಆಕರ್ಷಕವಾದ ದೃಶ್ಯಗಳನ್ನು ನೀಡುವ ಬ್ರೈಟೆಸ್ಟ್ ಗ್ಯಾಲಕ್ಸಿ ಡಿಸ್ ಪ್ಲೇಯನ್ನು ಹೊಂದಿದೆ. ಗ್ಯಾಲಕ್ಸಿ ಎಸ್24, 2,600ಎನ್ಐಟಿ ತಲುಪಿ ಗರಿಷ್ಠ ಬ್ರೈಟ್ ನೆಸ್ ಅನ್ನು ನೀಡುತ್ತದೆ ಮತ್ತು ವಿಷನ್ ಬೂಸ್ಟರ್‌ನೊಂದಿಗೆ ಸುಧಾರಿತ ಔಟ್ ಡೋರ್ ವಿಸಿಬಿಲಿಟಿಯನ್ನು ನೀಡುತ್ತದೆ.
ಕೇವಲ 11,699 ರೂ.ಗೆ ಸ್ಯಾಮ್‌ಸಂಗ್ ಫೋಲ್ಡಬಲ್ ಫೋನ್, ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಸೂಪರ್ ಆಫರ್!
ಗ್ಯಾಲಕ್ಸಿಯ ಡಿಫೆನ್ಸ್-ಗ್ರೇಡ್, ಮಲ್ಟಿ-ಲೇಯರ್ ಸೆಕ್ಯುರಿಟಿ ಪ್ಲಾಟ್‌ಫಾರ್ಮ್ ಆದ ಸ್ಯಾಮ್‌ಸಂಗ್ ನಾಕ್ಸ್‌ನಿಂದ ಸುರಕ್ಷತೆಯನ್ನು ಹೊಂದಿರುವ ಉತ್ಪನ್ನದ ಸುಧಾರಿತ ಭದ್ರತೆ ಮತ್ತು ಪ್ರೈವೆಸಿಯು ಬಳಕೆದಾರರ ಆಯ್ಕೆ ಮತ್ತು ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ. ಗ್ಯಾಲಕ್ಸಿ ಎಸ್ 24 ಮುಖ್ಯ ಮಾಹಿತಿಗಳನ್ನು ರಕ್ಷಿಸುತ್ತದೆ ಮತ್ತು ಎಂಡ್-ಟು-ಎಂಡ್ ಸುರಕ್ಷಿತ ಹಾರ್ಡ್‌ವೇರ್, ರಿಯಲ್-ಟೈಮ್ ಥ್ರೆಟ್ ಡಿಟೆಕ್ಷನ್ ಮತ್ತು ಸಹಯೋಗದ ರಕ್ಷಣೆಯೊಂದಿಗೆ ಗ್ರಾಹಕರ ರಕ್ಷಣೆ ಮಾಡುತ್ತದೆ.