ಮೋಟೋದಿಂದ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಬಿಡುಗಡೆ: ಇದರಲ್ಲಿದೆ ಸಖತ್ ಫೀಚರ್ಸ್

By Anusha KbFirst Published Jul 9, 2023, 6:47 AM IST
Highlights

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮೊಟೋರೋಲಾ ಕಂಪನಿ, ರೇಜರ್‌ 40 ಅಲ್ಟ್ರಾ ಮತ್ತು ರೇಜರ್‌ 40 ಫೋಲ್ಡಬಲ್‌ ಎಂಬ ಎರಡು ಮಾದರಿಗಳ ಹೊಸ ಫೋನ್ ಬಿಡುಗಡೆ ಮಾಡಿದೆ. ಇದು ಜುಲೈ15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ.

ದಾವೂದ್‌ಸಾಬ ನದಾಫ, ಕನ್ನಡಪ್ರಭ ವಾರ್ತೆ ನವದೆಹಲಿ

ದೆಹಲಿ: ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ನ ಹೊಸ ಮಾದರಿಗಳಿಗೆ ಬರವಿಲ್ಲ. ಒಂದಕ್ಕಿಂತ ಒಂದು ವಿಭಿನ್ನ ಫೀಚರ್ಸ್‌, ತಾಂತ್ರಿಕ ವೈಶಿಷ್ಟ್ಯ ಹೊಂದಿರುವ ಆ್ಯಂಡ್ರಾಯ್ಡ್‌ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಅವುಗಳ ನಡುವೆಯೇ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮೊಟೋರೋಲಾ ಕಂಪನಿ, ರೇಜರ್‌ 40 ಅಲ್ಟ್ರಾ ಮತ್ತು ರೇಜರ್‌ 40 ಫೋಲ್ಡಬಲ್‌ ಎಂಬ ಎರಡು ಮಾದರಿಗಳನ್ನು ಬಿಡುಗಡೆ ಮಾಡಿದೆ.

ಮೊದಲ ಮೊಬೈಲ್‌ ಕರೆಗೆ 50 ವರ್ಷ ಪೂರ್ಣ: ಪ್ರತಿಸ್ಪರ್ಧಿ ಕಂಪನಿ ಸಿಬ್ಬಂದಿಗೆ ಫಸ್ಟ್‌ ಕಾಲ್‌ ಮಾಡಿದ್ದ ಕೂಪರ್‌

ಫೋಲ್ಡಬಲ್‌ ಮೊಬೈಲ್‌:

ಮೋಟೋರೋಲಾದ ರೇಜರ್‌ 40 ಅಲ್ಟ್ರಾ ಮಾದರಿಯು 3.6 ಇಂಚಿನ ಎಫ್‌ಎಚ್‌ಡಿ * ಪ್ರೊಎಲ್‌ಇಡಿ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿವೆ. ಈ ಡಿಸ್‌ಪ್ಲೇ ತೆರೆದಾಗ 73.95*170.83* 6.99 ಎಂಎಂ ಇದ್ದು, ಮುಚ್ಚಿದಾಗ 73.95*88.42*15.1 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿವೆ. 144 ಅಡಾಪ್ಟಿವ್‌ ರಿಫ್ರೆಶ್‌ ರೇಟ್‌ ಹೊಂದಿದೆ. ಅಲ್ಲದೆ, ಈ ಡಿಸ್‌ಪ್ಲೇ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌  ಪ್ರೋಟೆಕ್ಷನ್‌ ಅನ್ನು ಹೊಂದಿದೆ.

ಇನ್ನು ರೇಜರ್‌ 40, 6.9 ಪೋಲ್ಡ್‌ ಪರದೆ ಇದ್ದು, (ಈ ಡಿಸ್‌ಪ್ಲೇ ತೆರೆದಾಗ 73.95*170.82* 7.35 ಎಂಎಂ ಇದ್ದು, ಮುಚ್ಚಿದಾಗ 73.95*88.24*15.8 ಎಂಎಂ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿವೆ). 165 ಏ್ಢನ ಅತ್ಯಧಿಕ ಸ್ಕ್ರೀನ್ ರಿಫ್ರೆಶ್‌ದರ ಮತ್ತು 1400 ಯೂನಿಟ್‌ನ ಗರಿಷ್ಠ ಹೊಳಪನ್ನು ಹೊಂದಿದೆ.

ಕ್ಯಾಮೆರಾ ಫೀಚರ್ಸ್‌:

ರೇಜರ್‌ 40 ಅಲ್ಟ್ರಾ, ಟ್ರಿಬಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಮೊದಲ ಕ್ಯಾಮೆರಾ 12 ಮೆಗಾ ಪಿಕ್ಸೆಲ್‌ ಸೆನ್ಸಾರ್‌, 2ನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ನೈಟ್‌ ವಿಷನ್‌ ಮೂಡ್‌ ಸೆನ್ಸಾರ್‌ ಒಳಗೊಂಡಿದೆ. 3ನೇ ಕ್ಯಾಮೆರಾ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 32 ಮೆಗಾಪಿಕ್ಸೆಲ್‌ ಹೊಂದಿದೆ. ರೇಜರ್‌ 40ನಲ್ಲಿ 64 ಮೆಗಾಪಿಕ್ಸೆಲ್‌ ಮೇನ್‌ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇವು ಅಲ್ಟ್ರಾ ವೈಡ್‌, ಮ್ಯಾಕ್ರೋ ವಿಷನ್‌ ಲೆನ್ಸ್‌ ಮತ್ತು ಉತ್ತಮ ಗುಣಮಟ್ಟದ ವೀಡಿಯೊ ಕರೆಗಳನ್ನು ಮಾಡಲು ನೆರವಾಗಲಿದೆ.

ಭಾರತದಲ್ಲಿ Motorola Moto E32s ಲಾಂಚ್, ಕಡಿಮೆ ಬೆಲೆಗೆ ಉತ್ತಮ ಫೋನ್?

ಅತ್ಯಾಧುನಿಕ ವೇಗ:

ರೇಜರ್‌ 40 ಅಲ್ಟ್ರಾ, ಹೆಚ್ಚು ಶಕ್ತಿಶಾಲಿ ಸ್ನಾಪ್‌ಡ್ರಾಗನ್‌ 8+ ಆಂಡ್ರಾಯ್ಡ್‌ 1 ಪ್ರೊಸೆಸರ್‌, ಇದು ಸುಧಾರಿತ ಎಐ ಮತ್ತು 5ಜಿ ಸಂಪರ್ಕ ಹೊಂದಿರುವ ಕಾರನ ವೇಗದ ಕಾರ್ಯಾಚರಣೆ ಸಾಧ್ಯವಾಗಲಿದೆ. ಇನ್ನು ರೇಜರ್‌ 40 ಸ್ನಾಪ್‌ಡ್ರಾಗನ್‌ 7 ಆಂಡ್ರಾಯ್ಡ್‌ 1 ಪ್ರೊಸೆಸರ್‌ ಒಳಗೊಂಡಿದೆ. ಹಾಗೆಯೇ 5 ಜಿಬಿ ರಾರ‍ಯಮ್‌ ಮತ್ತು 256 ಜಿಬಿ ಇಂಟರ್ನಲ್ ಸ್ಟೋರೇಜ್‌ ಸಾಮರ್ಥ್ಯ ಹೊಂದಿವೆ.

ಬ್ಯಾಟರಿ ಫೀಚರ್ಸ್‌:

ಎರಡೂ ಸ್ಮಾರ್ಟ್‌ಫೋನ್‌ಗಳು 3800 ಎಂಎಎಚ್‌ ಸಾಮರ್ಥ್ಯದ ವೈರ್‌ಲೆಸ್‌ ಚಾರ್ಜಿಂಗ್ ಅನ್ನು ಹೊಂದಿದೆ.

ಇತರೆ ಫೀಚರ್ಸ್‌:

ಎರಡೂ ಮೊಬೈಲ್‌ಗಳು ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿಸಿ ಪೋರ್ಟ್ ಒಳಗೊಂಡಿದೆ. ಮೂರು ಬಣ್ಣಗಳಲ್ಲಿ ಮೊಬೈಲ್‌ಗಳು ಲಭ್ಯವಿದೆ. ಜೊತೆಗೆ ಎರಡೂ ಮೊಬೈಲ್‌ಗಳಲ್ಲಿ ಆ್ಯಂಡ್ರಾಯ್ಡ್ 13 ಆ್ಯಪ್‌ ಅಳವಡಿಕೆಯಾಗಿದೆ. ಅಲ್ಲದೆ 3 ಆಪರೇಟಿಂಗ್‌ ಸಿಸ್ಟಮ್‌ ಅಪ್‌ಗ್ರೇಡ್‌, 4 ವರ್ಷಗಳ ಭದ್ರತಾ ಪ್ಯಾಚ್‌ ಭರವಸೆ ಒಳಗೊಂಡಿದೆ. ಇದಲ್ಲದೆ ಅಗತ್ಯಗಳಿಗೆ ಅನುಗುಣವಾಗಿ ಮೊಬೈಲ್‌ ಅನ್ನು ನಮಗೆ ಬೇಕಾದಂತೆ ರೂಪಿಸಿಕೊಳ್ಳುವ, ಸರಳ ಸನ್ನೆಗಳು ಮತ್ತು ಕಸ್ಟಮ್‌ ಮನರಂಜನಾ ಸೆಟ್ಟಿಂಗ್‌ಗಳು ಸಹ ಲಭ್ಯವಿದೆ. ಜೊತೆಗೆ ಥಿಂಕ್‌ ಶೀಲ್ಡ್‌, ಮೋಟೋ ಸೆಕ್ಯೂರ್‌ ಮತ್ತು ಮೋಟೋಕೀಸೇಫ್‌ ಸೇರಿದಂತೆ ವ್ಯಾಪಕವಾದ ಭದ್ರತಾ ವೈಶಿಷ್ಯವೂ ಇದೆ.

ಜು.15ರಿಂದ ಗ್ರಾಹಕರಿಗೆ:

ರೇಜರ್‌ 40 ಅಲ್ಟ್ರಾ .89,999 ಮತ್ತು ರೇಜರ್‌ 40ಗೆ .59,999 ರು. ದರ ನಿಗದಿ ಮಾಡಲಾಗಿದೆ. ಗ್ರಾಹಕರು .7,000 ವರೆಗೆ ತ್ವರಿತ ರಿಯಾಯ್ತಿತಿ/ಕ್ಯಾಶ್‌ಬ್ಯಾಕ್‌ ಪಡೆಯಬಹುದಾಗಿದ್ದು, ಈಗಾಗಲೇ ಮುಂಗಡ ಬುಕಿಂಗ್‌ ಆರಂಭವಾಗಿದ್ದು, ಅಮೆಜಾನ್‌, ಮೊಟೋರೋಲಾ ಡಾಟ್‌ ಕಾಂ., ರಿಲಯನ್ಸ್‌ ಡಿಜಿಟಲ್‌ ಅಥವಾ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಜುಲೈ 15ರಿಂದ ಮಾರಾಟಕ್ಕೆ ಲಭ್ಯವಾಗಲಿವೆ.

ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಲೆನೆವೋ ಏಷ್ಯಾ ಪೆಸಿಫಿಕ್‌ ವಲಯದ ಅಧ್ಯಕ್ಷ ಅಮರ್‌ ಪ್ರಭು, ಮೋಟೋರೋಲಾದ ಜಾಗತಿಕ ಅಧ್ಯಕ್ಷ ಸೆರ್ಗಿಯೋ ಬುನಿಯಾಕ್‌, ಮೋಟೋರೋಲಾದ ಕಾರ್ಯ ನಿರ್ವಾಹಕ ನಿರ್ದೆಶಕ ಪ್ರಶಾಂತ್‌ ಮಣಿ, ಮೋಟೋರೋಲಾದ ಗ್ರಾಹಕ ಅನುಭವ ಮತ್ತು ವಿನ್ಯಾಸ ವಿಭಾಗದ ಮುಖ್ಯಸ್ಥ ರೂಬೆನ್‌ ಕ್ಯಾಸ್ಟಾನೋ ಉಪಸ್ಥಿತರಿದ್ದರು.

click me!