ಹೊಸ ವರ್ಷದ ರೆಸೆಲ್ಯೂಷನ್‌ ಜಾರಿಯಲ್ಲಿಡುವ ಆ್ಯಪ್‌ಗಳು

By Suvarna News  |  First Published Jan 11, 2020, 5:28 PM IST

ಹೊಸ ವರ್ಷದ ರೆಸಲ್ಯೂಷನ್‌ಗಳು ಜಾರಿಯಲ್ಲಿರಲು ಸಹಾಯ ಮಾಡುವಂತಹ ಕೆಲವು ಆ್ಯಪ್‌ಗಳಿವೆ. ಅದನ್ನು ಆದಷ್ಟು ಬೇಗ ಡೌನ್‌ಲೋಡ್‌ ಮಾಡಿಕೊಂಡು ಒಳ್ಳೆಯ ಕೆಲಸಗಳನ್ನು ಮುಂದುವರಿಸಿ.
 


ಹೊಸ ವರ್ಷ ಬಂದಿದೆ. ಈ ವರ್ಷ ಏನಾದರೂ ಮಾಡಲೇಬೇಕು ಅಂತ ರೆಸೆಲ್ಯೂಷನ್‌ ಹಾಕಿಕೊಂಡಾಗಿದೆ. ಆ ರೆಸೆಲ್ಯೂಷನ್‌ ಅನ್ನು ಮುಂದುವರಿಸಿಕೊಂಡು ಹೋಗುವುದು ಸ್ವಲ್ಪ ಕಷ್ಟ. 

ಸ್ವಲ್ಪ ದಿನ ಆ ರೆಸೆಲ್ಯೂಷನ್‌ಗಳು ಜಾರಿಯಲ್ಲಿರಲು ಸಹಾಯ ಮಾಡುವಂತಹ ಕೆಲವು ಆ್ಯಪ್‌ಗಳಿವೆ. ಅದನ್ನು ಆದಷ್ಟು ಬೇಗ ಡೌನ್‌ಲೋಡ್‌ ಮಾಡಿಕೊಂಡು ಒಳ್ಳೆಯ ಕೆಲಸಗಳನ್ನು ಮುಂದುವರಿಸಿ.

Tap to resize

Latest Videos

undefined

ಇದನ್ನೂ ಓದಿ | ಕುಡಿದು ವಾಹನ ಚಲಾಯಿಸಿದರೆ ಆಫ್‌ ಆಗುತ್ತೆ ವಾಹನ ಎಂಜಿನ್‌...

ಒಳ್ಳೆಯ ಹವ್ಯಾಸಗಳ ಮೇಲೆ ಗಮನ ಇರಲಿ

ಮೆಟ್ಟಿಲುಗಳನ್ನೇ ಹತ್ತಬೇಕು ಎಂಬ ಮಾತನ್ನು ಮರೆಯಬಹುದು. ಜಿಮ್‌ಗೆ ಹೋಗಿಯೇ ಸಿದ್ಧ ಎಂಬ ಶಪಥವನ್ನು ಮುರಿಯಬಹುದು. ಆದರೆ ಆ ಮಾತುಗಳನ್ನು ಉಳಿಸಿಕೊಳ್ಳಲು ಯಾರಾದರೂ ಹೇಳುತ್ತಿರಬೇಕು. ಅದಕ್ಕೆಂದೇ ಆ್ಯಪ್‌ಗಳಿವೆ. ಮೊಮೆಂಟಮ್‌ ನಿಮ್ಮ ಓಟದ ಹವ್ಯಾಸವನ್ನು ಚೆನ್ನಾಗಿರಿಸುತ್ತದೆ.

ನಿಮ್ಮ ಜತೆ ಇರಲು ಸಹಾಯ ಮಾಡುತ್ತವೆ!

ಒತ್ತಡದ ಜಗತ್ತು ಇದು. ಈ ಕಾಲದಲ್ಲಿ ನಮ್ಮ ಜತೆ ನಾವು ಕಾಲ ಕಳೆಯುವುದೇ ಕಷ್ಟಆಗಿದೆ. ನಮ್ಮ ಪೂರ್ತಿ ಟೈಮು ಬೇರೆಯವರಿಗೆ ಕೊಡಬೇಕಾಗಿ ಬರುತ್ತದೆ. ಇಂಥಾ ಟೈಮಲ್ಲಿ ಮೆಡಿಟೇಟ್‌ ಮಾಡುವುದಕ್ಕೆ, ನಮ್ಮ ಬಗ್ಗೆ ನಾವು ಜಾಸ್ತಿ ಗಮನ ಕೊಡುವುದಕ್ಕೆ ಸಹಾಯ ಆಗುವ ಆ್ಯಪ್‌ ಇದೆ. ಅವುಗಳ ಹೆಸರು ಕಾಮ್‌ ಮತ್ತು ಹೆಡ್‌ಸ್ಪೇಸ್‌. ಎಷ್ಟುನಿದ್ದೆ ಮಾಡಬೇಕು, ಮೆಡಿಟೇಷನ್‌ ಹೇಗೆ ಮಾಡಬೇಕು ಇತ್ಯಾದಿ ಸಲಹೆಗಳನ್ನೂ ಅವು ನೀಡುತ್ತವೆ.
 

click me!