ಇಂಟರ್ನೆಟ್ ಇಲ್ದಿದ್ರೂ ಕಾರ್ಯ ನಿರ್ವಹಿಸುತ್ತೆ ಈ ಆ್ಯಪ್| ಆ್ಯಪ್ ಬಳಸಿ ಸಂದೇಶ ರವಾನಿಸುತ್ತಿದ್ದಾರಾ ಪ್ರತಿಭಟನಾಕಾರರು| ಪೌರತ್ವ ವಿರೋಧಿ ಕಾಯ್ದೆ ಜಾರಿಯಾದ ಬೆನ್ನಲ್ಲೇ ನೇಕರು ಡೌನ್‌ಲೋಡ್ ಮಾಡಿದ್ದಾರೆ ಈ ಆ್ಯಪ್
ನವದೆಹಲಿ[ಡಿ.21]: ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ದೇಶದ ನಾನಾ ಕಡೆ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಹೀಗಿದ್ದರೂ ಈ ಕ್ರಮದಿಂದ ಹೆಚ್ಚು ವ್ಯತ್ಯಾಸವಾಗಿಲ್ಲ. ಪ್ರತಿಭಟನಾಕಾರರು ಇಂಟರ್ನೆಟ್ ಸ್ಥಗಿತಗೊಳಿಸಿದ್ದರೂ ಆ್ಯಪ್ ಒಂದರ ಮೂಲಕ ಸಂದೇಶ ರವಾನಿಸುತ್ತಿದ್ದಾರೆನ್ನಲಾಗಿದೆ. ಅಷ್ಟಕ್ಕೂ ಆ ಆ್ಯಪ್ ಯಾವುದು?
ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ಸಂದೇಶ ರವಾನಿಸಲು ಫೈರ್ ಚಾಟ್ ಆ್ಯಪ್ ಬಳಸುತ್ತಿದ್ದಾರೆ. ಇದು ಇಂಟರ್ನೆಟ್ ಸೌಲಭ್ಯ ಇಲ್ಲದಿದ್ದರೂ ಕಾರ್ಯ ನಿರ್ವಹಿಸುತ್ತದೆ. ಪ್ರತಿಭಟನೆಯ ನಡುವೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಫೈರ್ ಚಾಟ್ ಆ್ಯಪ್ ಟ್ರೆಂಡ್ ಪಡೆದಾಗ ಈ ವಿಚಾರ ಮತ್ತಷ್ಟು ಇಂಬು ಪಡೆದಿದೆ.
undefined
ನೀವು 1987ಕ್ಕಿಂತ ಮೊದಲು ಜನಿಸಿದ್ದರೆ...ಇವು ಪೌರತ್ವ ನಿಯಮಗಳು!
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಫೈರ್ ಚಾಟ್ ಆ್ಯಪ್ ನ್ನು 10 ಲಕ್ಷಕ್ಕೂ ಅಧಿಕ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ಆ್ಯಪ್ ಇಂಟರ್ನೆಟ್ ಸಂಪರ್ಕ ಇಲ್ಲದೆಯೂ ಕರ್ಯ ನಿರ್ವಹಿಸುತ್ತೆ. ಅಲ್ಲದೇ ಬ್ಲೂ ಟೂಥ್ ಹಾಗೂ ವೈ ಫೈ ಇದ್ದರೂ ಕಾರ್ಯ ನಿರ್ವಹಿಸುತ್ತೆ.
ಗುರುವಾರದಂದು ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದ ಬೆನ್ನಲ್ಲೇ ದೆಹಲಿ, ಉತ್ತರ ಪ್ರದೇಶದ ಹಲವೆಡೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಹೀಗಿದ್ದರೂ ಪ್ರತಿಭಟನಾಕಾರರು ಈ ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ತಡೆಯಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.