ನೀವು ಫೇಸ್ ಬುಕ್ ಬಳಸುತ್ತೀರಾ ಹಾಗಾದರೆ ನಿಮ್ಮ ಪ್ರತೀ ಹೆಜ್ಜೆ ಮೇಲೆ ಫೆಸ್ ಕಣ್ಣು ಇಡಲಿದೆ. ಲೊಕೇಶನ್ ಎನೇಬಲ್ ಮಾಡದಿದ್ದರೂ ಇರುವ ಜಾಗ ಪತ್ತೆ ಹಚ್ಚಬಹುದಾಗಿದೆ.
ಸ್ಯಾನ್‌ಪ್ರಾನ್ಸಿಸ್ಕೋ [ಡಿ.19]: ನೀವು ಫೇಸ್ಬುಕ್ ಬಳಸುತ್ತಿದ್ದೀರಾ? ಹಾಗಾದರೆ ನೀವು ಇಡುವ ಪ್ರತೀ ಹೆಜ್ಜೆ ಕೂಡ ಫೇಸ್ಬುಕ್‌ಗೆ ತಿಳಿಯುತ್ತದೆ. ಇದನ್ನು ಸ್ವತಃ ಫೇಸ್ಬುಕ್ ಅಮೆರಿಕ ಸಂಸದರೊಬ್ಬರಿಗೆ ತಿಳಿಸಿದ್ದು, ಬಳಕೆದಾರರು ಲೊಕೇಶನ್ ಎನೇಬಲ್ ಮಾಡದಿದ್ದರೂ ಅವರಿರುವ ಜಾಗ ಪತ್ತೆ ಹಚ್ಚಬಹುದು ಎಂದು ಹೇಳಿದೆ.
ಫೇಸ್ಬುಕ್ ಮೂಲಕ ಬಳಕೆದಾರರ ಮಾಹಿತಿ ಸೋರಿಕೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿರುವಾಗಲೇ ಈ ಮಾಹಿತಿ ಹೊರ ಬಿದ್ದಿದ್ದು, ಮತ್ತಷ್ಟುಆತಂಕಕ್ಕೆ ಕಾರಣವಾಗಿದೆ. ಫೇಸ್ಬುಕ್ ಈ ಹೇಳಿಕೆ ಬಳಿಕ, ವೈಯಕ್ತಿಕ ಮಾಹಿತಿ ಮೇಲೆ ಯಾವುದೇ ಹಿಡಿತ ಇಲ್ಲ. ಹೀಗಾಗಿಯೇ ಇಂಥ ವಿಷಯಗಳ ಬಗ್ಗೆ ಸಂಸತ್ತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ರಿಪಬ್ಲಿಕನ್ ಸೆನೆಟರ್ ಜೋಶ್ ಹಾವ್ಲೇ ಟ್ವೀಟ್ ಮಾಡಿದ್ದಾರೆ.
undefined
ಟಿಕ್ ಟಾಕ್ ಮೂಲಕ ಸಾಮಾನ್ಯರು ಈಗ ಸೆಲೆಬ್ರೆಟಿ!..
ಇದೇ ವೇಳೆ ಹೀಗೆ ಫೇಸ್‌ಬುಕ್ ಬಳಕೆದಾರ ಎಲ್ಲಿದ್ದಾನೆ ಎಂದು ನಿಗಾ ಇಡುವುದರಿಂದ, ಅವರಿಗೆ ಬೇಕಾದ ನಿರ್ದಿಷ್ಟರೆಸ್ಟೋರೆಂಟ್ ಮಾಹಿತಿ ಕುರಿತು ಜಾಹೀರಾತು ನೀಡಲು ಅವಕಾಶವಾಗುತ್ತದೆ. ಜೊತೆಗೆ ಹ್ಯಾಕಿಂಗ್‌ನಿಂದ ತಡೆಯಬಹುದಾಗಿದೆ ಎಂದು ಹೇಳಿದೆ.