ರೋಲೆಕ್ಸ್ ಡೆಟೋನಾ ವಾಚ್‌ಗಳ ವಿನ್ಯಾಸ ಮಾಡಿದ್ದ ಮಾಲ್ಕಂ ಕ್ಯಾಂಪ್‌ಬೆಲ್ ಈ ಮೊಬೈಲ್‌ನ ಹೊರ ವಿನ್ಯಾಸ ಮಾಡಿದ್ದಾರೆ. ಈ ಮೊಬೈಲ್‌ನ ಹಿಂಭಾಗದಲ್ಲಿ 8 ವಜ್ರದ ಹರಳುಗಳನ್ನು ಒಳಗೊಂಡಿರುವ ರೋಲೆಕ್ಸ್ ಡೇಟೋನಾ ವಾಚ್ ಅಳವಡಿಸಲಾಗಿದೆ.
ವಾಷಿಂಗ್ಟನ್: ಆ್ಯಪಲ್ ಮೊಬೈಲ್‌ಗಳೇ (Apple Mobile Phones) ದುಬಾರಿ ಎನ್ನುವಾಗ, ವಜ್ರಗಳನ್ನು (Diamond) ಅಳವಡಿಸಿರುವ ಸುಂದರವಾದ ಆ್ಯಪಲ್ ಮೊಬೈಲ್ ಒಂದನ್ನು ಐಷಾರಾಮಿ ವಸ್ತುಗಳಿಗೆ ಖ್ಯಾತಿ ಹೊಂದಿರುವ ರಷ್ಯಾದ ಕೇವಿಯರ್ (caviar) ಕಂಪನಿ ಬಿಡುಗಡೆ ಮಾಡಿದೆ. ಈ ಮೊಬೈಲ್‌ನ ಬೆಲೆ ಸುಮಾರು 1 ಕೋಟಿ ರುಪಾಯಿ. ಹೌದು. ರೋಲೆಕ್ಸ್ ಡೆಟೋನಾ ವಾಚ್‌ಗಳ (Rolex Daytona Watch) ವಿನ್ಯಾಸ ಮಾಡಿದ್ದ ಮಾಲ್ಕಂ ಕ್ಯಾಂಪ್‌ಬೆಲ್ (Malcolm Campbell) ಈ ಮೊಬೈಲ್‌ನ ಹೊರ ವಿನ್ಯಾಸ ಮಾಡಿದ್ದಾರೆ. ಈ ಮೊಬೈಲ್‌ನ ಹಿಂಭಾಗದಲ್ಲಿ 8 ವಜ್ರದ ಹರಳುಗಳನ್ನು ಒಳಗೊಂಡಿರುವ ರೋಲೆಕ್ಸ್ ಡೇಟೋನಾ ವಾಚ್ ಅಳವಡಿಸಲಾಗಿದೆ. ಈ ಮಾದರಿಯ ಸೀಮಿತ ಸಂಖ್ಯೆಯ ಮೊಬೈಲ್‌ಗಳನ್ನು ಮಾತ್ರ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಕೇವಿಯರ್ ಕಂಪನಿ ಹೇಳಿದೆ.
ಆ್ಯಪಲ್ ಅಧಿಕೃತ ವೆಬ್‌ಸೈಟ್‌ನಲ್ಲಿ 1 ಟಿಬಿ ಸ್ಟೋರೇಜ್ ಹೊಂದಿರುವ ಆ್ಯಪಲ್ 14 ಪ್ರೋ ಮ್ಯಾಕ್ಸ್‌ನ ಟಾಪ್ ಮಾಡೆಲ್‌ಗೆ 1,89,900 ರೂ. ವೆಚ್ಚವಾಗುತ್ತದೆ. ಇತರೆ, ಫೋನ್‌ಗಳಿಗೆ ಹೋಲಿಸಿದರೆ ಈ ಫೋನ್ ದರ ತುಂಬಾ ಹೆಚ್ಚು ಎನಿಸಿದರೂ, ಕೇವಿಯರ್ ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ಡೇಟೋನಾ ಮೊಬೈಲ್‌ಗೆ ಹೋಲಿಸಿದರೆ ಈ ಬೆಲೆ ತೀರಾ ಕಡಿಮೆ ಎನಿಸುತ್ತದೆ. ಏಕೆಂದರೆ, ರಷ್ಯಾದ ಲಕ್ಷುರಿ ಬ್ರ್ಯಾಂಡ್ ಕೇವಿಯರ್‌ನ ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ಡೇಟೋನಾದ ಬೆಲೆ ಸುಮಾರು 1.1 ಕೋಟಿ ರೂ…!
undefined
ಇದನ್ನು ಓದಿ: 15 ವರ್ಷದ ಹಿಂದೆ ಲಾಂಚ್ ಆದ ಐಫೋನ್ 32 ಲಕ್ಷಕ್ಕೆ ಈಗ ಹರಾಜು... ಅಂತದ್ದೇನಿದೆ ಇದ್ರಲ್ಲಿ?
ಹೌದು, ರಷ್ಯಾದ ಕೇವಿಯರ್ ಇತ್ತೀಚೆಗೆ ಆ್ಯಪಲ್ 14ನ ಇತ್ತೀಚಿನ ಮಾಡೆಲ್‌ನ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆ ಮಾಡಿದ್ದು, ಈ ಮೊಬೈಲ್ ಫೋನ್ ಸುವಾಸನೆಯ ವೈಶಿಷ್ಟ್ಯಗಳನ್ನು ಹಾಗೂ ರೋಲೆಕ್ಸ್ ವಾಚೊಂದನ್ನು ಒಳಗೊಂಡಿದೆ. ಕೇವಿಯರ್ ಬ್ರ್ಯಾಂಡ್‌ನ ಈ ಐಫೋನ್ 14 ಪ್ರೋ ಮೊಬೈಲ್‌ನ ಇತ್ತೀಚಿನ ಕಲೆಕ್ಷನ್ ಅನ್ನು ಗ್ರ್ಯಾಂಡ್ ಕಾಂಪ್ಲಿಕೇಷನ್ಸ್ ಎಂದು ಕರೆಯಲಾಗುತ್ತದೆ.
ಕೇವಿಯರರ್ ಬ್ರ್ಯಾಂಡ್ ಬಿಡುಗಡೆ ಮಾಡುವ ಪ್ರತಿ ಸ್ಮಾರ್ಟ್‌ಫೋನ್ ಅಕ್ಷರಶಃ ಯಾಂತ್ರಿಕ ಕ್ರೋನೋಗ್ರಾಫ್‌ನೊಂದಿಗೆ ಸಂಕೀರ್ಣವಾಗಿದೆ. ಹೊಸ 2022 ಫ್ಲ್ಯಾಗ್‌ಶಿಪ್ ರೇಸ್ ಕಾರ್ ಕಂಟ್ರೋಲ್ ಪ್ಯಾನೆಲ್‌ನ ಅಲಂಕಾರಿಕ ಸಂವೇದಕಗಳ ಜೊತೆಗೆ ಫೋನ್ ಬಾಡಿಯಲ್ಲಿ ರೋಲೆಕ್ಸ್ ವಾಚ್ ಅನ್ನು ಸಹ ಒಳಗೊಂಡಿದೆ. ಇನ್ನು, ಗ್ರ್ಯಾಂಡ್ ಕಾಂಪ್ಲಿಕೇಶನ್ ನವೀಕರಣವು ಎರಡು ವಿಶಿಷ್ಟ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ: ಡೇಟೋನಾ ಮತ್ತು ಸ್ಕೆಲಿಟನ್ ಬೂಸ್ಟರ್.
ಇದನ್ನೂ ಓದಿ: IPhone 14: ಹೊಸ ಐಫೋನ್ ಮಾಡೆಲ್ ಖರೀದಿಸಲು ಕೊಚ್ಚಿಯಿಂದ ದುಬೈಗೆ ಹಾರಿದ ಉದ್ಯಮಿ
ಡೇಟೋನಾ ಬೀಚ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಫ್ಲೋರಿಡಾದಲ್ಲಿರುವ ರೋಡ್ ಕೋರ್ಸ್‌ನ ನಂತರ ರೋಲೆಕ್ಸ್‌ನ ಕಾಸ್ಮೋಗ್ರಾಫ್ ಡೇಟೋನಾ ಎಂದು ಹೆಸರಿಸಲಾಯಿತು. ಫೆಬ್ರವರಿ 22, 1933 ರಂದು 272.465 mph ವೇಗದ ಚಾಲನೆ ಮೂಲಕ ಮಾಲ್ಕಮ್ ಕ್ಯಾಂಪ್‌ಬೆಲ್ ವಿಶ್ವ ದಾಖಲೆ ಸೃಷ್ಟಿಸುವ ಮೂಲಕ ಇದು ಜಗತ್ಪ್ರಸಿದ್ಧವಾಯಿತು. ರೋಲೆಕ್ಸ್ ಸಂಸ್ಥಾಪಕ ಹ್ಯಾನ್ಸ್ ವಿಲ್ಸ್‌ಡೋರ್ಫ್, ಇವರೊಂದಿಗೆ ಪಾಲುದಾರಿಕೆಯನ್ನು ಪ್ರಸ್ತಾಪಿಸಿದರು ಮತ್ತು ಆದ್ದರಿಂದ 1962 ರಲ್ಲಿ ರೋಲೆಕ್ಸ್ ಅಧಿಕೃತವಾಗಿ ಡೇಟೋನಾ ಕಾರು ರೇಸಿಂಗ್ ಅನ್ನು ಪ್ರಾಯೋಜಿಸಿದೆ ಮತ್ತು ಅದೇ ಹೆಸರಿನ ಗಡಿಯಾರವನ್ನು ತಯಾರಿಸಲು ಪ್ರಾರಂಭಿಸಿದರು.
ಕ್ಯಾವಿಯರ್‌ನ ಡೇಟೋನಾ ಒಂದೇ ಕಾಪಿಯಲ್ಲಿ ಮಾಡಿದ ಅದ್ಭುತ ಮಾಡೆಲ್ ಆಗಿದೆ. ಫೋನ್ ಕೇಸ್ ಅನ್ನು ಕ್ಯಾಂಪ್‌ಬೆಲ್ಸ್ ಬ್ಲೂ ಬರ್ಡ್ ನಂತಹ 1930 ರ ದಶಕದ ರೇಸಿಂಗ್ ಕಾರುಗಳ ಶೈಲಿಯಲ್ಲಿ ಮಾಡಲಾಗಿದೆ: ಅದೇ ಕಾರು ಡೇಟೋನಾ ವಿಶ್ವ ವೇಗದ ದಾಖಲೆಯನ್ನು ಸ್ಥಾಪಿಸಿತು. ಚಿನ್ನದಿಂದ ನಿರ್ಮಾಣವಾದ ಅಲಂಕಾರಿಕ ಸ್ಪೀಡೋ ಮೀಟರ್‌ಗಳು ಮತ್ತು ಸ್ವಿಚ್‌ಗಳು ಸೂಪರ್‌ಕಾರ್‌ನ ಡ್ಯಾಶ್‌ಬೋರ್ಡ್‌ನ ಚಿತ್ರವನ್ನು ರಚಿಸುತ್ತವೆ. ರೋಲೆಕ್ಸ್ ಡೇಟೋನಾ ಎಂಬ ಶ್ರೇಷ್ಠ ಗಡಿಯಾರ ಸಂಗ್ರಹಕ್ಕೆ ಇದೇ ಕಾರಣವಾಗಿದೆ.
ಇದನ್ನೂ ಓದಿ: iPhone 14: ನೂತನ ಫೋನ್‌ಗಳ ಬಿಡುಗಡೆ ವಿರುದ್ಧ ಕಿಡಿ ಕಾರಿದ ಸ್ಟೀವ್ ಜಾಬ್ಸ್ ಪುತ್ರಿ
iPhone 14 Pro ಗ್ರ್ಯಾಂಡ್ ಕಾಂಪ್ಲಿಕೇಶನ್ಸ್ 128GB ಸ್ಕೆಲಿಟನ್ ಬೂಸ್ಟರ್‌ನ ಮಾಡೆಲ್‌ಗಳ ಬೆಲೆ 10,320 ಡಾಲರ್ ನಿಂದ ಪ್ರಾರಂಭವಾಗುತ್ತದೆ. ಆದರೆ, ರೋಲೆಕ್ಸ್‌ನೊಂದಿಗೆ ಮಾಡಿಫೈ ಮಾಡಿದ ಮೊಬೈಲ್ ದುಬಾರಿಯಾಗಿದೆ. ಅಂದರೆ, iPhone 14 Pro Max Grand Complications Daytona 1TB ಅನ್ನು $134,250 ಅಂದರೆ 1.1 ಕೋಟಿ ರೂ. ಗೆ ಮಾರಾಟ ಮಾಡಲಾಗುತ್ತದೆ.