
ಸ್ಮಾರ್ಟ್‌ಫೋನ್ ಜೊತೆಗೆ ಕೀಪ್ಯಾಡ್ ಸೆಟ್‌ಗಳನ್ನ ಈಗಲೂ ಇಷ್ಟಪಡುವ ಒಂದು ವರ್ಗ ಇದೆ. ಅನೇಕ ಹಿರಿಯ ನಾಗರಿಕರು ಕೂಡ ಕೀಪ್ಯಾಡ್ ಫೋನ್ ಬಳಸೋರು ಇದ್ದಾರೆ. ಅಂಥವ್ರಿಗಾಗಿ ಜಿಯೋ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಕೇವಲ 299 ರೂಪಾಯಿಗೆ ಫೋನ್ ಆಫರ್ ಮಾಡಿದೆ. ಹೌದು, ಫೀಚರ್ ಫೋನ್‌ಗಳನ್ನು ಇಷ್ಟಪಡೋರಿಗೆ ಇದು ಒಳ್ಳೆಯ ಸುದ್ದಿ ಇದಾಗಿದೆ.
ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಪ್ರವೇಶಿಸಿ 10 ವರ್ಷಗಳನ್ನು ಪೂರೈಸಿದೆ. ಇತ್ತೀಚೆಗೆ ಜಿಯೋ ತನ್ನ 10ನೇ ವಾರ್ಷಿಕೋತ್ಸವ ಆಚರಿಸಿತು. ಈ ವೇಳೆ ಬಂಪರ್ ಆಫರ್ ಘೋಷಣೆ ಮಾಡಿದೆ. ನೀವು 299 ರೂಪಾಯಿಗೆ ಫೋನ್ (jio bharat 4g phone ) ಖರೀದಿ ಜೊತೆಗೆ ಆರು ತಿಂಗಳವರೆಗೆ ಉಚಿತ ರೀಚಾರ್ಜ್ ಲಾಭ ಸಿಗಲಿದೆ. ಆದರೆ ಜಿಯೋ ಅದಕ್ಕಾಗಿ ಒಂದು ಪ್ಲಾನ್ ನೀಡಿದೆ.
ನೀವು ಕೇವಲ 299 ರೂಪಾಯಿ ಹಿಡಿದು ಜಿಯೋ ಸ್ಟೋರ್‍ಗೆ ಹೋದರೆ ಫೋನ್ ಸಿಗಲ್ಲ. ಅದಕ್ಕಾಗಿ ನೀವು ಒಟ್ಟಿ 1499 ರೂಪಾಯಿ ಪಾವತಿ ಮಾಡಬೇಕು. ಆಫರ್‌ನ ಭಾಗವಾಗಿ.. 1499 ರೂ.ಗೆ 4G ಜಿಯೋ ಭಾರತ್ ಫೋನ್ ಸಿಗಲಿದೆ. ಆರು ತಿಂಗಳವರೆಗೆ 1200 ರೂ. ಮೌಲ್ಯದ ಉಚಿತ ರೀಚಾರ್ಜ್ ನೀಡಲಿದೆ. ಆ ಮೂಲಕ ಫೋನ್ 299 ರೂಪಾಯಿಗೆ ಲಭ್ಯ ಆಗಲಿದೆ. ನೀವು ಆರು ತಿಂಗಳವರೆಗೆ ರೀಚಾರ್ಜ್ ಮಾಡಬೇಕಾಗಿಲ್ಲ. ನೀವು ಉಚಿತ ರೀಚಾರ್ಜ್ ಪ್ರಯೋಜನಗಳನ್ನು ಪಡೆಯುತ್ತೀರಿ. ಜೊತೆಗೆ ಅನಿಯಮಿತ ಕರೆಗಳನ್ನು ಮಾಡಬಹುದು.
ಈ ಫೋನ್‌ನಲ್ಲಿ ಹಲವು ಫೀಚರ್ಸ್ ನೋಡಬಹುದಾಗಿದೆ. ಕರೆಗಳು ಮತ್ತು ಸಂದೇಶಗಳ ಜೊತೆಗೆ, ನೀವು ಟಿವಿ ಕಾರ್ಯಕ್ರಮಗಳನ್ನೂ ವೀಕ್ಷಿಸಬಹುದು. ಹಾಡುಗಳನ್ನು ಕೇಳಬಹುದು. ಅಲ್ಲದೇ UPI ಪಾವತಿಗಳನ್ನು ಸಹ ಮಾಡಬಹುದು. HD ಧ್ವನಿ ಕರೆಗಳನ್ನು ಸಹ ಮಾಡಬಹುದು. ಜಿಯೋ ಭಾರತ್ ಸರಣಿಯ ಭಾಗವಾಗಿ, A1, B1, B2, B3 ಸೇರಿದಂತೆ ಹಲವು ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳು ಜಿಯೋ ಪೇ ಮೂಲಕ UPI ಪಾವತಿಗೆ ವ್ಯವಸ್ಥೆ ಮಾಡಲಾಗಿದೆ.
ಇನ್ನು ಜಿಯೋ ಆಫರ್ ವಿಚಾರ ತಿಳಿಯುತ್ತಿದ್ದಂತೆಯೇ ಜನ ಎಕ್ಸೈಟ್ ಆಗಿದ್ದಾರೆ. ಜನ ಮೊಬೈಲ್‌ಗಾಗಿ ರಸ್ತೆಯಲ್ಲಿ ಕ್ಯೂ ಹಚ್ಚಿ ನಿಲ್ಲುತ್ತಾರೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡುತ್ತಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.