iPhone 17 ಗೆ ₹20 ಸಾವಿರ ರಿಯಾಯಿತಿ, ಈ ದಿನದಿಂದ ಭರ್ಜರಿ ಮಾರಾಟ

Published : Sep 30, 2026, 07:21 PM IST
iPhone 17

ಸಾರಾಂಶ

ಐಫೋನ್ ಖರೀದಿ ಮಾಡಬೇಕು ಅಂದುಕೊಂಡವರಿಗೆ ಗುಡ್‌ನ್ಯೂಸ್ ಇದೆ. iPhone 17 ಮತ್ತು 15 ಫೋನ್‌ಗಳ ಮೇಲೆ ಫ್ಲಿಪ್‌ ಕಾರ್ಟ್‌ ಭಾರೀ ರಿಯಾಯಿತಿ ನೀಡುತ್ತಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.. ಸ್ಟೋರಿ ಓದಿ..

ಹಬ್ಬದ ಸೀಸನ್ ಶುರುವಾಗ್ತಿದೆ. ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್‌ ಸೇಲ್-2026 ಆರಂಭಕ್ಕೂ ಮುನ್ನವೇ ಫೋನ್ ಖರೀದಿ ಮಾಡುವ ಪ್ಲಾನ್‌ನಲ್ಲಿ ಇರೋರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಕಂಪನಿಯು ಐಫೋನ್ 15 ಮತ್ತು 17 ಮಾರಾಟದ ಬೆಲೆಯನ್ನ ಬಹಿರಂಗಪಡಿಸಿ ಸಂಚಲನ ಸೃಷ್ಟಿಸಿದೆ.

ಐಫೋನ್ ಖರೀದಿಗೆ ಒಳ್ಳೆ ಅವಕಾಶ

ಐಫೋನ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡೋದಾಗಿ ತಿಳಿಸಲಾಗಿದ್ದು ಅದರಲ್ಲೂ 17 ಫೋನ್ ಖರೀದಿಸಿದ್ರೆ ನಿಮಗೆ ಬರೋಬ್ಬರಿ 20 ಸಾವಿರ ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಇದರಲ್ಲಿ ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಬೋನಸ್‌ಗಳು ಕೂಡ ಸೇರಲಿದೆ.

ಇನ್ನು ಫ್ಲಿಪ್ ಕಾರ್ಟ್‌ನ ಬಿಗ್ ಬಿಲಿಯನ್ ಡೇ ಅಕ್ಟೋಬರ್ 9 ರಿಂದ ಪ್ರಾರಂಭವಾಗಲಿದೆ. ಪ್ಲಸ್ ಮತ್ತು ಬ್ಲ್ಯಾಕ್ ಸದಸ್ಯರಿಗೆ ಅಕ್ಟೋಬರ್ 8 ರಿಂದಲೇ ಅದರ ಪ್ರವೇಶ ಸಿಗಲಿದೆ. ಇದು ಐಫೋನ್ ಖರೀದಿದಾರರಿಗೆ ಒಳ್ಳೆಯ ವೇದಿಕೆಯನ್ನ ನೀಡಲಿದೆ.

ಐಫೋನ್ ಬೆಲೆ 79,999

ನೀವು ಫ್ಲಿಪ್‌ ಕಾರ್ಟ್‌ನಲ್ಲಿ ಡೀಲ್ ಮಾಡೋದಾಗಿದ್ದರೆ.. ಪ್ರಸ್ತುತ ಮಾರುಕಟ್ಟೆಯಲ್ಲಿ 256 ಜಿಬಿ ಐಫೋನ್ 17 ಬೆಲೆ 99,900 ಇದೆ. ಈ ಮೆಗಾ ಈವೆಂಟ್‌ನಲ್ಲಿ ನೀವು 79,999 ರೂಪಾಯಿಗೆ ಪಡೆಯಬಹುದಾಗಿದೆ. ಅಂದರೆ ನೀವು ಪ್ರಸ್ತುತ ಬೆಲೆಗಿಂತ 19,901 ರೂಪಾಯಿ ಕಡಿಮೆಗೆ ಸಿಗಲಿದೆ.

ಇನ್ನೊಂದು ವಿಚಾರ ಏನಂದರೆ ಎಲ್ಲಾ ಗ್ರಾಹಕರಿಗೂ 19,901 ರೂಪಾಯಿ ಕಡಿಮೆ ಆಗಲ್ಲ.ವರದಿಗಳ ಪ್ರಕಾರ ಐಫೋನ್ 17 ಬೆಲೆಯನ್ನು 84,999 ರೂಪಾಯಿಗೆ ನಿಗದಿಪಡಿಸಲಾಗಿದೆ. ಬ್ಯಾಂಕ್ ರಿಯಾಯಿತಿ ಮತ್ತು ವಿನಿಮಯ ಬೋನಸ್‌ಗಳ ನಂತರ ಅದರ ಬೆಲೆ 79,999 ರೂಪಾಯಿ ಆಗಲಿದೆ.

ಐಫೋನ್ 15 ಕೂಡ ಕಮ್ಮಿ ಬೆಲೆಗೆ

ನಿಮಗೆ ಐಫೋನ್ 17 ಖರೀದಸಲು ಸಾಧ್ಯವಾಗದಿದ್ದರೆ.. 15ಕ್ಕೆ ಹೋಗಬಹುದು. ಫ್ಲಿಪ್‌ಕಾರ್ಟ್‌ ನೀಡಿರುವ ಬೆಲೆ ಪ್ರಕಾರ, 63,999ಕ್ಕೆ ಏರಬಹುದು. ಇಲ್ಲಿಯೂ ಕೂಡ ಬ್ಯಾಂಕ್ ಕೊಡುಗೆಗಳು ಹಾಗೂ ವಿವಿಧ ರಿಯಾಯತಿ ಇದೆ. ಇನ್ನು ಇದರ ಮಾರಾಟದ ಬೆಲೆಯಲ್ಲಿ 67,999 ರೂಪಾಯಿಗೆ ನಿಗದಿಪಡಿಸಲಾಗಿದೆ. ಬ್ಯಾಂಕ್ ರಿಯಾಯತಿಯಲ್ಲಿ ಮೂರು ಸಾವಿರ ರೂಪಾಯಿ ಗರಿಷ್ಠ ಬೋನಸ್ ಸಿಗಲಿದೆ. ಅಂದರೆ ನೀವು ಐಫೋನ್ ಅನ್ನು 63,999 ರೂಪಾಯಿಗೆ ಐಫೋನ್ 15 ಖರೀದಿಸಬಹುದು.

ಐಫೋನ್ 17 ಬೆಲೆ ಹೆಚ್ಚಿಸಿರುವ ಕಂಪನಿ

ಇತ್ತೀಚೆಗೆ ಐಫೋನ್ 18 ಅನ್ನು ಬಿಡುಗಡೆ ಮಾಡಿದೆ. ಬೆನ್ನಲ್ಲೇ 17 ಬೆಲೆಯನ್ನು ಕಂಪನಿ ಏರಿಕೆ ಮಾಡಿದೆ. ಈ ಮೊದಲು 82,900 ರೂಪಾಯಿ 17 ಬೆಲೆ ನಿಗಧಿ ಆಗಿತ್ತು. 18 ಬಿಡುಗಡೆ ಬೆನ್ನಲ್ಲೇ 99,999ಕ್ಕೆ ಹೆಚ್ಚಿಸಿದೆ. ಇನ್ನು ಫ್ಲಿಪ್‌ಕಾರ್ಟ್‌ ತನ್ನ ಮೆಗಾ ಈವೆಂಟ್‌ನಲ್ಲಿ ಫೋನ್ ಖರೀದಿ ಮಾಡೋರಿಗೆ ಒಳ್ಳೆಯ ಅವಕಾಶವನ್ನ ನೀಡುತ್ತಿದೆ. ಕೇವಲ ಐಫೋನ್ ಮಾತ್ರವಲ್ಲದೇ ಸ್ಯಾಮ್‌ಸಂಗ್, ಮೊಟೊರೊಲಾ, ಗೂಗಲ್, ನಥಿಂಗ್ ಸೇರಿದಂತೆ ಇತರೆ ಕಂಪನಿಗಳ ಸ್ಮಾರ್ಟ್‌ಫೋನ್ ಬೆಲೆಯಲ್ಲೂ ಭಾರೀ ರಿಯಾಯತಿ ನೀಡಲಿದೆ. ಅಷ್ಟೇ ಅಲ್ಲದೇ.. ಈಗಾಗಲೇ ಅನೇಕ ಎಲೆಕ್ಟ್ರಾನಿಕ್ ಐಟಂಗಳ ಮೇಲೆ ಕಂಪನಿ ರಿಯಾತಿ ನೀಡಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Jioದಿಂದ ಬಂಪರ್ ಗಿಫ್ಟ್, ನಿಮಗೆ ಸಿಗಲಿಗೆ 6 ತಿಂಗಳ ಫ್ರೀ ರಿಚಾರ್ಜ್ ಆಫರ್! ನೀವು ಏನು ಮಾಡ್ಬೇಕು?
ದೀರ್ಘ ಬ್ಯಾಟರಿ ಬಾಳಿಕೆ ಬರುವ ಆಲ್‌ರೌಂಡರ್‌ ರೆಡ್‌ಮಿ ನೋಟ್ 17 ಪ್ರೊ: ಈ ಫೋನ್‌ನಲ್ಲಿ ಇನ್ನೇನಿದೆ?