ಬಹು ನಿರೀಕ್ಷಿತ ಆ್ಯಪಲ್ ಐಫೋನ್ 16 ಸೀರಿಸ್ ಬಿಡುಗಡೆಯಾಗಿದೆ. ಹಲವು ಅಪ್‌ಗ್ರೇಡ್, ಅತ್ಯಾಧುನಿಕ ಫೀಚರ್ಸ್ ಜೊತೆ ಐಫೋನ್ 16 ಬಿಡುಗಡೆಯಾಗಿದೆ. ಭಾರತದಲ್ಲಿ ನೂತನ ಫೋನ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ಸೆ.10) ಭಾರಿ ಕುತೂಹಲ ಮೂಡಿಸಿದ್ದ ಆ್ಯಪಲ್ ಐಫೋನ್ 16 ಸೀರಿಸ್ ಬಿಡುಗೆಡಯಾಗಿದೆ. ಬಹುನಿರೀಕ್ಷಿತ ಫೋನ್ ಇದೀಗ ಹಲವು ಅಪ್‌ಗ್ರೇಡ್ ಜೊತೆಗೆ ಮಾರುಕಟ್ಟೆ ಪ್ರವೇಶಿಸಿದೆ. ಹಿಂದಿನ ಮಾಡೆಲ್‌ಗೆ ಹೋಲಿಸಿದರೆ ಐಫೋನ್ 16 ಹಲವು ಹೊಸತನಕ್ಕೆ ಸಾಕ್ಷಿಯಾಗಿದೆ. ಆ್ಯಪಲ್ ಸ್ಟೋರ್, ಅಮೇಜಾನ್, ಫ್ಲಿಪ್‌ಕಾರ್ಟ್ ವೇದಿಕೆಯಲ್ಲಿ ಪ್ರಿ ಆರ್ಡರ್ ಶೀಘ್ರದಲ್ಲೇ ಆರಂಭಗೊಳ್ಳುತ್ತಿದೆ. ಐಫೋನ್ 16 ಆರಂಭಿಕ ಬೆಲೆ 67,000 ರೂಪಾಯಿ. ಟಾಪ್ ಮಾಡೆಲ್ ಐಫೋನ್ 16 ಪ್ರೋ ಮ್ಯಾಕ್ಸ್ ಬೆಲೆ 1,44,900 ರೂಪಾಯಿ.
ಭಾರತದಲ್ಲಿ ಐಫೋನ್ 16ಬೆಲೆ
ಐಫೋನ್ 16 ಬೆಲೆ: 79,900 ರೂಪಾಯಿ
ಐಫೋನ್ 16 ಪ್ಲಸ್ ಬೆಲೆ : 89,900 ರೂಪಾಯಿ
ಐಫೋನ್ 16 ಪ್ರೋ ಬೆಲೆ : 1,19,900 ರೂಪಾಯಿ(128 ಜಿಬಿ)
ಐಫೋನ್ 16 ಪ್ರೋ ಮ್ಯಾಕ್ಸ್ ಬೆಲೆ :1,44900 ರೂಪಾಯಿ(256 ಜಿಬಿ)
undefined
ಐಫೋನ್ 15, 14 ಬೆಲೆಯಲ್ಲಿ ಭಾರಿ ಇಳಿಕೆ, ಐಫೋನ್ 16 ಬಿಡುಗಡೆಯಿಂದ ಡಿಸ್ಕೌಂಟ್ ಘೋಷಣೆ!
ಆದರೆ ಅಮೆರಿಕ ಮಾರುಕಟ್ಟೆಯಲ್ಲಿ ಐಫೋನ್ 16 ಬೆಲೆ $799 ಅಂದರೆ ಭಾರತೀಯ ರೂಪಾಯಿಗಳಲ್ಲಿ 67,00 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಬರೋಬ್ಬರಿ 13,900 ರೂಪಾಯಿ ಭಾರತದಲ್ಲಿ ದುಬಾರಿಯಾಗಿದೆ. ಐಫೋನ್ 16 ಸೀರಿಸ್ ಫೋನ್ ಪ್ರೀ ಆರ್ಡರ್ ಸೆಪ್ಟೆಂಬರ್ 13, ಸಂಜೆ 5.30 ರಿಂದ ಭಾರತದಲ್ಲಿ ಆರಂಭಗೊಳ್ಳಲಿದೆ. ಇನ್ನು ಮೊದಲ ಮಾರಾಟ ಸೆಪ್ಟೆಂಬರ್ 20ರಿಂದ ಆರಂಭಗೊಳ್ಳುತ್ತಿದೆ ಎಂದು ಆ್ಯಪಲ್ ಸ್ಟೋರ್ ಹೇಳಿದೆ.
ಏರೋಸ್ಪೇಸ್ ಗ್ರೇಡ್ ಅಲ್ಯುಮಿನಿಂಯ ಪ್ರೀಮಿಯಂ ನಿಂದ ನಿರ್ಮಾಣಗೊಂಡಿರುವ ಐಫೋನ್ 16, ಕಪ್ಪುಬಣ್ಣದ ಗ್ಲಾಸ್ ಹಾಗೂ ಹೊಸ ಬಣ್ಣಗಳಲ್ಲಿ ಲಭ್ಯವಿದೆ. ಐಫೋನ್ 16 ಫೋನ್ ಡಿಸ್‌ಪ್ಲೆ 6.1 ಇಂಚು ಹೊಂದಿದೆ. ಆದರೆ 16 ಪ್ಲಸ್ 6.7 ಇಂಚು ಹೊಂದಿದೆ. ಆ್ಯಕ್ಷನ್ ಬಟನ್ ಅನ್ನು ಎಲ್ಲಾ ಮಾಡೆಲ್‌ನಲ್ಲಿ ಪರಿಚಯಿಸಿದೆ. ಹೊಸ ಕ್ಯಾಮೆರಾ ಕಂಟ್ರೋಲ್ ಫೀಚರ್ಸ್ ಐಫೋನ್ 16 ನಲ್ಲಿದೆ. ಸಿಂಗಲ್ ಕ್ಲಿಕ್ ಒಪನ್ ಕ್ಯಾಮೆರಾ ಹಾಗೂ 2ನೇ ಕ್ಲಿಕ್‌ನಲ್ಲಿ ಫೋಟೋ ತೆಗೆಯಲು ಸಾಧ್ಯ.
ಸೆಕೆಂಡ್ ಜನರೇಶನ್ 3nm ತಂತ್ರಜ್ಞಾನದ ಆ್ಯಪಲ್ A18ಚಿಪ್‌ಸೆಟ್ ಬಳಕೆ ಮಾಡಲಾಗಿದೆ.ಐಫೋನ್ 15 ಸೀರಿಸ್‌ಗಿಂತ ಐಫೋನ್ 16 ಶೇಕಡಾ 30 ರಷ್ಟು ಫಾಸ್ಟ್ ಕಾರ್ಯಕ್ಷಮತೆ ಹೊಂದಿದೆ ಎಂದು ಆ್ಯಪಲ್ ಹೇಳಿದೆ. ಜೊತೆಗೆ ಶೇಕಡಾ 17ರಷ್ಟು ಹೆಚ್ಚು ಸಿಸ್ಟಮ್ ಮೆಮೋರಿ ನೀಡುತ್ತದೆ. ಅತ್ಯಾಕರ್ಷಕ ಮೊಬೈಲ್ ಗೆ ಈಗಾಗಲೇ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಹೊಸ ಐಫೋನ್ ತಗೊಂಡ್ರಾ : ನಿಮ್ಮ ಐಫೋನ್ ನಕಲಿಯೋ ಅಸಲಿಯೋ ತಿಳಿಯೋದು ಹೇಗೆ?