ಗುಂಡೇಟಿನಿಂದ ಸೈನಿಕನ ಜೀವ ಉಳಿಸಿದ ಐಫೋನ್‌

By Anusha Kb  |  First Published Jul 18, 2022, 10:50 AM IST

ಐಫೋನ್‌ ಕೇವಲ ನಿಮ್ಮ ಮಾಹಿತಿಯ ರಕ್ಷಣೆ ಮಾಡುವುದಲ್ಲದೇ ಜೀವವನ್ನು ಕೂಡ ರಕ್ಷಿಸಿದ ಘಟನೆ ಉಕ್ರೇನ್‌ನಲ್ಲಿ ನಡೆದಿದೆ. ಉಕ್ರೇನ್‌ ಯೋಧನೋರ್ವನನ್ನು ಬುಲೆಟ್ ದಾಳಿಯಿಂದ ಐಫೋನ್‌ ರಕ್ಷಿಸಿದೆ. ಇವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಐಫೋನ್ ಅಥವಾ ಆಪಲ್ ಫೋನ್‌ಗಳು ಬಳಕೆದಾರರ ಗೌಪ್ಯತೆ ಹಾಗೂ ಸುರಕ್ಷತೆಗೆ ಹೆಚ್ಚು ಪ್ರಸಿದ್ಧವಾದಂತಹ ಫೋನ್‌ಗಳು. ಕೆಲ ದಿನಗಳ ಹಿಂದೆ ನೀರಿಗೆ ಬಿದ್ದು ಹತ್ತು ತಿಂಗಳುಗಳ ನಂತರವೂ ಯಾವುದೇ ಹಾನಿಗೊಳಗಾಗದೇ ಬಳಕೆಗೆ ಯೋಗ್ಯವಾದ ರೀತಿಯಲ್ಲೇ ಐಫೋನ್ ಮರಳಿ ಸಿಕ್ಕಿದ್ದ ಘಟನೆ ವಿದೇಶದಲ್ಲಿ ನಡೆದಿತ್ತು. ಗ್ರಾಹಕರ ಮಾಹಿತಿ ಸೋರಿಕೆಯಾಗದಂತೆ ಐಪೋನ್‌ಗಳು ಹೆಚ್ಚು ಸುರಕ್ಷತೆಗೆ ಆದ್ಯತೆ ನೀಡುತ್ತವೆ. ಈಗ ಐಫೋನ್‌ ಕೇವಲ ನಿಮ್ಮ ಮಾಹಿತಿಯ ರಕ್ಷಣೆ ಮಾಡುವುದಲ್ಲದೇ ಜೀವವನ್ನು ಕೂಡ ರಕ್ಷಿಸಿದ ಘಟನೆ ಉಕ್ರೇನ್‌ನಲ್ಲಿ ನಡೆದಿದೆ. ಉಕ್ರೇನ್‌ ಯೋಧನೋರ್ವನನ್ನು ಬುಲೆಟ್ ದಾಳಿಯಿಂದ ಐಫೋನ್‌ ರಕ್ಷಿಸಿದೆ. ಇವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಉಕ್ರೇನಿಯನ್ ಸೈನಿಕನೊಬ್ಬ ತನ್ನ ಐಫೋನ್ 11 ಪ್ರೊದಿಂದಾಗಿ ಜೀವ ಉಳಿಸಿಕೊಂಡ ವೈರಲ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸುತ್ತು ಹೊಡೆಯುತ್ತಿದೆ. ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಉಕ್ರೇನಿಯನ್ ಸೈನಿಕನು ತನ್ನ ಬೆನ್ನೆಗೆ ಹಾಕಿದ ಬ್ಯಾಗ್‌ನಿಂದ ತನ್ನ ಐಫೋನ್ ಅನ್ನು ಹೊರ ತೆಗೆಯುವುದನ್ನು ಕಾಣಬಹುದು. ಹಾನಿಗೊಳಗಾದ ಫೋನ್‌ನ ಒಳಗೆ ಬುಲೆಟ್ ಸಿಲುಕಿಕೊಂಡಿದೆ. 2019 ರ ಮಾದರಿಯು ಗುಂಡು ನಿರೋಧಕ ಉಡುಪಿನಲ್ಲಿದ್ದ ಐಫೋನ್‌ನಿಂದ ಸೈನಿಕನ ಜೀವ ಉಳಿದಿದೆ. ಒಂದು ವೇಳೆ ಫೋನ್ ಇಲ್ಲದಿದ್ದರೆ ಆತನ ಜೀವ ಹೊರಟು ಹೋಗುತ್ತಿತ್ತು.

Tap to resize

Latest Videos

undefined

ಆದರೆ ಈ ಘಟನೆಯ ಸಂಪೂರ್ಣ ವಿವರವನ್ನು ಪೋಸ್ಟ್‌ನಲ್ಲಿ ತಿಳಿಸಿಲ್ಲ. ಈ ವಿಡಿಯೋಗೆ ಬಳಕೆದಾರರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಐಫೋನ್‌ಗಳು ಅಂತಿಮವಾಗಿ ಯಾವುದಾದರೂ ಒಳ್ಳೆಯದೇ ಈ ವಿಚಾರವನ್ನು ಹೇಳಲು ಆತ ಬದುಕುಳಿದಿದ್ದಾನೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಸ್ಮಾರ್ಟ್‌ಫೋನ್‌ನಲ್ಲಿ ಬಳಸಿದ ವಸ್ತುಗಳೊಂದಿಗೆ ಬುಲೆಟ್ ಪ್ರೂಫ್ ಉಡುಪನ್ನು ಏಕೆ ತಯಾರಿಸಬಾರದು? ಇದು ಹೆಚ್ಚು ಹಗುರವಾಗಿರುತ್ತದೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

ಜಡ್ಜ್‌ಗಳಿಗೆಲ್ಲಾ ಐಫೋನ್ 13 ಪ್ರೋ ಮೊಬೈಲ್, ಟೆಂಡರ್ ಕರೆದ ಪಾಟ್ನಾ ಹೈಕೋರ್ಟ್!

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸದಿರುವ ಈ ಸಮಯದಲ್ಲಿ ವೀಡಿಯೊ ಬಂದಿದೆ. ಶನಿವಾರ, ರಷ್ಯಾದ ಪಡೆಗಳು ದಕ್ಷಿಣ ಉಕ್ರೇನಿಯನ್ ನಗರವಾದ ನಿಕೋಪೋಲ್ ಮೇಲೆ ಶೆಲ್ ದಾಳಿ ಮಾಡಿದ್ದವು. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡು ಇಬ್ಬರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಉಕ್ರೇನಿಯನ್ ತುರ್ತು ಸೇವೆ ತಿಳಿಸಿದೆ. 

(ಜುಲೈ 15)ಶುಕ್ರವಾರ, ಡೊನೆಟ್ಸ್ಕ್‌ನ ಪೂರ್ವ ಪ್ರದೇಶದ 10 ಸ್ಥಳಗಳಲ್ಲಿ ಶೆಲ್‌ಗಳ ಸರಣಿ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 13 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಘೋಷಿಸಿತು. ಅದಕ್ಕೂ ಒಂದು ದಿನ ಮೊದಲು, ಕಪ್ಪು ಸಮುದ್ರದಲ್ಲಿ ರಷ್ಯಾದ ಜಲಾಂತರ್ಗಾಮಿ ನೌಕೆಯಿಂದ ಉಡಾವಣೆಯಾದ ಕಲಿಬ್ರ್ ಕ್ರೂಸ್ ಕ್ಷಿಪಣಿಗಳು ವಿನ್ನಿಟ್ಸಿಯಾದಲ್ಲಿನ ಕಚೇರಿ ಕಟ್ಟಡಕ್ಕೆ ಅಪ್ಪಳಿಸಿದವು. ಈ ದಾಳಿಯಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನದಿಗೆ ಬಿದ್ದು 10 ತಿಂಗಳಾದ್ಮೇಲೆ ಸಿಕ್ತು ಐಫೋನ್ : ಸ್ವಲ್ಪನೂ ಡ್ಯಾಮೇಜ್ ಆಗಿಲ್ಲ ನೋಡಿ

ಕೆಲ ದಿನಗಳ ಹಿಂದೆ ತನ್ನಲ್ಲಿರುವ ಎಲ್ಲಾ ನ್ಯಾಯಾಧೀಶರಿಗೆ ಐಪೋನ್ 13 ಪ್ರೋ ಮೊಬೈಲ್ ಫೋನ್‌ಗಳನ್ನು ಖರೀದಿ ಮಾಡಲು ಪಾಟ್ನಾ ಹೈಕೋರ್ಟ್ ಟೆಂಡರ್ ಪ್ರಕಟಿಸಿತ್ತು. ಜಿಎಸ್‌ಟಿ ಮತ್ತು ಸೇವಾ ಶುಲ್ಕಗಳನ್ನು ಒಳಗೊಂಡಂತೆ ಅತ್ಯಂತ ಕಡಿಮೆ ಬೆಲೆಯನ್ನು ನಮೂದು ಮಾಡುವವರು ಈ ಟೆಂಡರ್ ಗೆಲ್ಲಲಿದ್ದಾರೆ.

click me!