ವಾಟ್ಸಾಪ್‌ನಲ್ಲಿ ಬಹು ನಿರೀಕ್ಷಿತ ಫೀಚರ್ ಶೀಘ್ರ ಬಳಕೆಗೆ ಲಭ್ಯ!

By Kannadaprabha News  |  First Published Feb 27, 2020, 4:59 PM IST

ವಾಟ್ಸಾಪ್‌ ಹೊಸ ಆಪ್ಷನ್‌ ಶೀಘ್ರ ಬಳಕೆಗೆ ಲಭ್ಯ| ಈ ಫೀಚರ್ ರಾತ್ರಿ ವೇಳೆ ವಾಟ್ಸಾಪ್‌ ಅನ್ನು ಹೆಚ್ಚು ಬಳಸುವವರ ಕಣ್ಣಿನ ಮೇಲಿನ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲಿದೆ


ಲಂಡನ್‌[ಫೆ.27]: ವಿಶ್ವದ ಬಹುಜನಪ್ರಿಯ ಆ್ಯಪ್‌ಗಳ ಪೈಕಿ ಒಂದಾದ ವಾಟ್ಸಾಪ್‌ನ ಬಹುನಿರೀಕ್ಷಿತ ಡಾರ್ಕ್ಮೊಡ್‌ ಫೀಚರ್‌ ಶೀಘ್ರವೇ ಬಳಕೆದಾರರ ಮೊಬೈಲ್‌ಗೆ ಆಗಮಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಬೇಟಾ ವರ್ಷನ್‌ನಲ್ಲಿ ಈ ಫೀಚರ್‌ ಬಳಕೆಯಾಗುತ್ತಿದ್ದು, ಅದನ್ನು ಶೀಘ್ರವೇ ಎಲ್ಲಾ ಗ್ರಾಹಕರ ಬಳಕೆಗೂ ನೀಡಲು ಸಂಸ್ಥೆ ಮುಂದಾಗಿದೆ ಎಂದು ವರದಿಯೊಂದು ತಿಳಿಸಿದೆ.

ಏನಿದು ಡಾರ್ಕ್ಮೋಡ್‌?:

Tap to resize

Latest Videos

undefined

ವಾಟ್ಸಾಪ್‌ ಆರಂಭವಾದಾಗಿನಿಂದಲೂ ಅದರ ಬ್ಯಾಕ್‌ಗ್ರೌಂಡ್‌ ಕಲರ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬಿಳಿಯ ಬಣ್ಣದ ಬ್ಯಾಕ್‌ಗ್ರೌಂಡ್‌ನಲ್ಲಿ ಕಪ್ಪು ಬಣ್ಣದ ಅಕ್ಷರ ಕಾಣಿಸುವುದು ಅದರ ಸಾಮಾನ್ಯ ಲಕ್ಷಣವಾಗಿತ್ತು. ಆದರೆ ಇದೀಗ ಬ್ಯಾಕ್‌ಗ್ರೌಂಡ್‌ ಬಣ್ಣವನ್ನು ಬದಲಿಸಲಾಗುತ್ತಿದೆ. ಬಿಳಿಯ ಬಣ್ಣದ ಬದಲಾಗಿ ಬೂದು ಬಣ್ಣದ ಬ್ಯಾಕ್‌ಗ್ರೌಂಡ್‌ ವರ್ಣ ಇರಲಿದ್ದು, ಅದರ ಮೇಲೆ ಬಿಳಿಯ ಬಣ್ಣದಲ್ಲಿ ಅಕ್ಷರಗಳು ಮೂಡಲಿವೆ ಎನ್ನಲಾಗಿದೆ.

'ಅದರ' ಚಟ ಇದ್ದವರಿಗೆ ಶಾಕ್; ಟಿಕ್‌ಟಾಕ್‌ನಲ್ಲಿ ಇನ್ಮುಂದೆ ಪೋಲಿ ವರ್ತನೆಗೆ ಕಡಿವಾಣ

ಈ ಬದಲಾವಣೆ ರಾತ್ರಿ ವೇಳೆ ವಾಟ್ಸಾಪ್‌ ಅನ್ನು ಹೆಚ್ಚು ಬಳಸುವವರ ಕಣ್ಣಿನ ಮೇಲಿನ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲಿದೆ. ಜೊತೆಗೆ ಹೊಸ ವರ್ಣಗಳು ಬ್ಯಾಟರಿ ಬಳಕೆಯಲ್ಲೂ ಕಡಿತ ಮಾಡಲಿದೆ.

ಈ ಬದಲಾವಣೆ ಜೊತೆಗೆ ವಾಟ್ಸಾಪ್‌ನಲ್ಲಿ ಬಳಕೆ ಲಭ್ಯವಿರುವ ಇಮೋಜಿಗಳಲ್ಲೂ ಸಾಕಷ್ಟುಬದಲಾವಣೆ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

click me!