
ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 1.1 ಬಿಲಿಯನ್ ಮೊಬೈಲ್ ಸಂಪರ್ಕಗಳಿವೆ. ಅದರಲ್ಲಿ ಶೇ.95 ಪ್ರೀಪೆಯ್ಡ್ ಸಂಪರ್ಕಗಳೇ!
ವಿದ್ಯಾ-ಅವಿದ್ಯಾವಂತರು, ಯುವಕರು- ವಯಸ್ಸಾದವರು, ಕಾರ್ಮಿಕರು- ಆಫೀಸರ್‌ಗಳು, ಯಾರೇ ಆಗಿರಲಿ ಮೊಬೈಲ್ ರೀಚಾರ್ಜ್ ಮಾಡೋ ಮುನ್ನ, ಯಾವ ಪ್ಲಾನ್ ಹಾಕಿಸ್ಕೊಳ್ಳಬೇಕು, ಏನಾದ್ರೂ ಆಫರ್ ಇದೆಯಾ? ಯಾವ ಆಫರ್ ಚೆನ್ನಾಗಿದೆ ಎಂದು ಒಂದು ಕ್ಷಣ ಯೋಚಿಸೋದು ಸಾಮಾನ್ಯ.
ಇದನ್ನೂ ಓದಿ: ಪೋಕೋ ಮೊದಲ ಸ್ವತಂತ್ರ ಮೊಬೈಲ್ ಬಿಡುಗಡೆ!, ಆ್ಯಪಲ್, ಸ್ಯಾಮ್ಸಂಗ್‌ಗೆ ಟಕ್ಕರ್!
ಭಾರತೀಯ ಮೊಬೈಲ್ ಬಳಕೆದಾರರನ್ನು ಗಮನದಲ್ಲಿಟ್ಟು ಸಾಫ್ಟ್‌ವೇರ್ ದೈತ್ಯ ಗೂಗಲ್ ಈಗ ಹೊಸ ಫೀಚರ್‌ವೊಂದನ್ನು ಈಗ ಪರಿಚಯಿಸಿದೆ. ಹೊಸ ಫೀಚರ್ ಮೂಲಕ ಬಳಕೆದಾರರರು ಪ್ರೀಪೇಯ್ಡ್ ರೀಚಾರ್ಜ್ ಮಾಡೋ ಮುನ್ನ ಬೇರೆ ಬೇರೆ ಪ್ಲಾನ್‌ಗಳನ್ನು ಹೋಲಿಕೆ ಮಾಡಬಹುದಾಗಿದೆ.
ಬೇರೆ ಬೇರೆ ಮೊಬೈಲ್ ಪ್ಲಾನ್, ಡಿಸ್ಕೌಂಟ್ ಹಾಗೂ ಆಫರ್‌ಗಳನ್ನು ಗೂಗಲ್ ಸರ್ಚ್ ಮೂಲಕ ಹೋಲಿಸಿ, ರೀಚಾರ್ಜ್ ಮಾಡಬಹುದಾಗಿದೆ.
ಆ್ಯಂಡ್ರಾಯಿಡ್ ಬಳಸುವವರು ಸೈನ್-ಇನ್ ಮಾಡಿ, ಏರ್ಟೆಲ್, ವೊಡಾಫೋನ್- ಐಡಿಯಾ, ಜಿಯೋ ಮತ್ತು ಬಿಎಸ್‌ಎನ್‌ಎಲ್ ದರ-ಪ್ಲಾನ್-ಆಫರ್‌ಗಳನ್ನು ನೋಡಬಹುದು.
ಇದನ್ನೂ ಓದಿ: ಗೂಗಲ್ ಕಿವಿಗೆ ಹೂವಿಟ್ಟ ಕಲಾವಿದ, ನಕಲಿ ಟ್ರಾಫಿಕ್ ಜಾಮ್ ಸೃಷ್ಟಿಸಿದ!
ಗೂಗಲ್ ಸರ್ಚ್‌ನಲ್ಲಿ ಪ್ರೀಪೇಯ್ಡ್ ರೀಚಾರ್ಜ್ ಎಂದು ಹುಡುಕಿದಾಗ, ರೀಚಾರ್ಜ್ ಫಾರ್ಮೊಂದು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಕೇಳಲಾಗುವ ಮಾಹಿತಿಯನ್ನು ಭರ್ತಿ ಮಾಡಿದಾಗ, ಗೂಗಲ್ ನಿಮ್ಮ ಮುಂದೆ ಎಲ್ಲ ವಿವರಗಳನ್ನು ಬಿಚ್ಚಿಡುತ್ತದೆ.
ರೀಚಾರ್ಜ್ ಮಾಡಬೇಕಾದರೆ, ಅಲ್ಲೇ ಕಾಣಿಸಕೊಳ್ಳುವ ಮೊಬಿಕ್ವಿಕ್, ಪೇಟಿಎಂ, ಫ್ರೀಚಾರ್ಜ್ ಮತ್ತು ಗೂಗಲ್ ಪೇ ಮೂಲಕ ರೀಚಾರ್ಜ್ ಮಾಡಬಹುದು. ಬಳಕೆದಾರರು ಮೊಬೖಲ್ ವ್ಯಾಲೆಟ್ ಅಥವಾ ಇನ್ನಿತರ ಆ್ಯಪ್ಗಳನ್ನು ಬಳಸಿ ಹಣ ಪಾವತಿ ಮಾಡುವ ಸೌಲಭ್ಯ ಇದೆ.
ಇದನ್ನೂ ನೋಡಿ : ಐಫೋನ್ ಸ್ಲೋ ಆಯ್ತು... ಆ್ಯಪಲ್‌ಗೆ ಬಿತ್ತು 195 ಕೋಟಿ ದಂಡ
"
ಫೆಬ್ರವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.