India Smartphone Market: 2021ರಲ್ಲಿ ಭಾರತದಲ್ಲಿ ದಾಖಲೆಯ 17 ಕೋಟಿ ಮೊಬೈಲ್‌ ಮಾರಾಟ!

By Suvarna News  |  First Published Jan 23, 2022, 3:45 PM IST

*2020ರಲ್ಲಿ 1.52 ಕೋಟಿ ಸ್ಮಾರ್ಟ್‌ಫೋನ್‌ ಮಾರಾಟವಾಗಿತ್ತು
*2021ರಲ್ಲಿ ದೇಶದಲ್ಲಿ 16.9 ಕೋಟಿ ಸ್ಮಾರ್ಟ್‌ಫೋನ್‌ ಮಾರಾಟ
*10 ಸಾವಿರಕ್ಕಿಂತ ಕಡಿಮೆ ಬೆಲೆಯ ಮಾರಾಟ ಶೇ.5ರಷ್ಟುಕುಸಿತ


ನವದೆಹಲಿ (ಜ. 23): ದೇಶದಲ್ಲಿ ಕೋವಿಡ್‌ (Covid 19) ಸಂಕಷ್ಟ, ಆರ್ಥಿಕ ಸಂಕಷ್ಟದ ಹೊರತಾಗಿಯೂ ದಾಖಲೆ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದೆ. 2021ರಲ್ಲಿ ದೇಶದಲ್ಲಿ 16.9 ಕೋಟಿ ಸ್ಮಾರ್ಟ್‌ಫೋನ್‌ ಮಾರಾಟವಾಗಿದೆ. ಇದು 2020ರಲ್ಲಿ ಮಾರಾಟವಾದ 15.2 ಕೋಟಿ ಮೊಬೈಲ್‌ಗಳಿಗಿಂತ ಶೇ.11ರಷ್ಟುಹೆಚ್ಚು. 5ಜಿ ಮೊಬೈಲ್‌ಗಳ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆ ಎದುರಾಗಿ ಅಗ್ಗದ ದರಕ್ಕೆ ಮೊಬೈಲ್‌ಗಳು ಲಭ್ಯವಾಗುತ್ತಿರುವುದು, ಇತರೆ ಮೊಬೈಲ್‌ಗಳ ದರ ಇಳಿಕೆಯಾಗಿರುವುದು, ಹೊಸ ಹೊಸ ಮಾದರಿಗಳು ಮಾರುಕಟ್ಟೆಗೆ ಬಿಡುಗಡೆಯಾಗಿರುವುದು ಮಾರಾಟದಲ್ಲಿ ಭಾರೀ ಏರಿಕೆಗೆ ಕಾರಣವಾಗಿದೆ.

ದೇಶದಲ್ಲಿ 10 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳು ಶೇ.30ರಷ್ಟುಮಾರುಕಟ್ಟೆ ಹೊಂದಿದ್ದರೂ ಅವುಗಳ ಮಾರಾಟ ಶೇ.5ರಷ್ಟುಕುಸಿದಿದೆ. ಆದರೆ 10ರಿಂದ 20 ಸಾವಿರದ ಬೆಲೆ ಹೊಂದಿರುವ ಫೋನ್‌ಗಳ ಬೇಡಿಕೆ ಶೇ.8ರಷ್ಟುಏರಿದೆ. 20 ಸಾವಿರದಿಂದ 30 ಸಾವಿರ ಬೆಲೆಯ ಫೋನ್‌ಗಳ ಬೇಡಿಕೆ ಶೇ.95ರಷ್ಟುಏರಿಕೆ ಕಂಡಿದೆ ಎಂದು ಕೌಂಟರ್‌ಪಾಯಿಂಟ್‌ ವರದಿ (Counterpoint Research)  ಮಾಡಿದೆ. 2021ರಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಹೆಚ್ಚಿನ ಸ್ಥಿರತೆಯನ್ನು ದಾಖಲಿಸಿದೆ. ಇದು ಎರಡನೇ  COVID-19 ಅಲೆ ಮತ್ತು ಪ್ರಪಂಚದಾದ್ಯಂತ ಸೆಮಿ ಕಂಡಕ್ಟರ್ ಕೊರತೆಯಿಂದಾಗಿ ಪೂರೈಕೆ ಅಡೆತಡೆಗಳು ಮತ್ತು ಬೆಲೆ ಹೆಚ್ಚಳ ಹೊರತಾಗಿಯೂ ಸ್ಮಾರ್ಟ್‌ಫೋನ್ ಮಾರುಕಟ್ಟೆ ಬೆಳವಣಿಗೆ ಕಂಡಿದೆ. 

Tap to resize

Latest Videos

undefined

ಇದನ್ನೂ ಓದಿApple iPhone 12 ಭಾರತದಲ್ಲಿ ಅತ್ಯಂತ ಜನಪ್ರಿಯ ಫೋನ್‌ ಬ್ರ್ಯಾಂಡ್ ಪಟ್ಟಿ ಪ್ರಕಟ, ಆ್ಯಪಲ್‌ಗೆ ಮೊದಲ ಸ್ಥಾನ!

5G ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ: 5G ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿದ  ಬೇಡಿಕೆಯು 2021 ರಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್ ಸಾಗಣೆಗೆ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ವರದಿಯು ತಿಳಿಸಿದೆ. 5G ಸ್ಮಾರ್ಟ್‌ಫೋನ್‌ಗಳ ಸಾಧನಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯು 2021 ರಲ್ಲಿ ಒಟ್ಟಾರೆ ಸಾಗಣೆಯ ಶೇಕಡಾ 17 ರಷ್ಟು ಕೊಡುಗೆಯನ್ನು ನೀಡಿದೆ, 2020 ಕ್ಕೆ ಹೋಲಿಸಿದರೆ ಇದು 6x ಬೆಳವಣಿಗೆಯನ್ನು ದಾಖಲಿಸಿದೆ.

“OEM (Original equipment manufacturer) ಗಳ ನಡುವೆ ತೀವ್ರ ಪೈಪೋಟಿ, ಅಗ್ಗದ 5G ಚಿಪ್‌ಸೆಟ್‌ಗಳ ಲಭ್ಯತೆ ಮತ್ತು 5G ಸಾಧನಗಳ ಇಳಿಮುಖವಾಗುತ್ತಿರುವ ಬೆಲೆಗಳು ಹೆಚ್ಚು 5G ಸಾಧನಗಳನ್ನು ಮಾರುಕಟ್ಟೆಗೆ ತಳ್ಳಲು ಬ್ರ್ಯಾಂಡ್‌ಗಳನ್ನು ಉತ್ತೇಜಿಸುತ್ತದೆ. ಕಳೆದ ಆರು ತಿಂಗಳಲ್ಲಿ ಪ್ರವೇಶ ಮಟ್ಟದ 5G ಸಾಧನಗಳ ಬೆಲೆಯು ಶೇಕಡಾ 40 ರಷ್ಟು ಕಡಿಮೆಯಾಗಿದೆ. 5G ಸಾಧನಗಳ ಕೈಗೆಟಕುವ ದರದಲ್ಲಿ ಹೆಚ್ಚಳವು ಹೆಚ್ಚಿನ 5G ಸ್ಮಾರ್ಟ್‌ಫೋನ್ ಅಳವಡಿಕೆಗೆ ಪ್ರಮುಖ ಕಾರಣವಾಗಿದೆ, ”ಎಂದು ಕೌಂಟರ್‌ಪಾಯಿಂಟ್ ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: Global Smartphone Shipments : Q4 2021ರಲ್ಲಿ ಸ್ಯಾಮಸಂಗ್‌ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಆ್ಯಪಲ್

95 ಪ್ರತಿಶತದಷ್ಟು ಬೆಳೆವಣಿಗೆ: ಕುತೂಹಲಕಾರಿಯಾಗಿ, ಗ್ರಾಹಕರ ಬೇಡಿಕೆಯು 2021 ರಲ್ಲಿ ಹೆಚ್ಚಿನ ಬೆಲೆ ಶ್ರೇಣಿಗಳಲ್ಲಿ (ರೂ. 20,000 ಕ್ಕಿಂತ ಹೆಚ್ಚು) ಹೆಚ್ಚಗಿದ್ದು, ಈ ಬೆಲೆ ಬ್ಯಾಂಡ್‌ಗಳಲ್ಲಿನ ಸಾಗಣೆಗಳು ವರ್ಷದಿಂದ ವರ್ಷದ ಆಧಾರದ ಮೇಲೆ 95 ಪ್ರತಿಶತದಷ್ಟು ಬೆಳೆವಣಿಗೆ ಕಂಡಿವೆ. ರೂ.10,000 ಒಳಗಿನ ಸಾಧನಗಳ ಮಾರಾಟದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ಮತ್ತು ರೂ 30,000 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಬ್ಯಾಂಡ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು 98 ಪ್ರತಿಶತ ಬೆಳವಣಿಗೆಯನ್ನು ಕಂಡಿವೆ.

ರಿಟೇಲ್  ಸರಾಸರಿ ಮಾರಾಟದ ಬೆಲೆ (Average Selling Price) ಸಹ ಹೆಚ್ಚಿನ ಬೆಳವಣಿಗೆಯನ್ನು ತೋರಿಸಿದೆ, ಇದು ವರ್ಷಕ್ಕೆ 13 ಪ್ರತಿಶತದಷ್ಟು ಹೆಚ್ಚಾಗಿದೆ. ಪ್ರೀಮಿಯಂ ಸಾಧನಗಳ ಹೆಚ್ಚುತ್ತಿರುವ ಕೈಗೆಟುಕುವ ಬೆಲೆಯೊಂದಿಗೆ ಹೆಚ್ಚಿನ ಸ್ಥಾಪಿತ ಬೇಸ್ ಮತ್ತು ಹೆಚ್ಚಿನ ಮೊಬೈಲ್‌ ರಿಪ್ಲೇಸ್‌ಮೆಂಟ್ ಬೇಡಿಕೆಯು ಪ್ರೀಮಿಯಂ ವಿಭಾಗದ ಹೆಚ್ಚಿನ ಬೆಳವಣಿಗೆಗೆ ಕಾರಣವಾಯಿತು.

"ಮಧ್ಯಮದ ಶ್ರೇಣಿಯಿಂದ ಉನ್ನತ ಮಟ್ಟದ 5G ಸ್ಮಾರ್ಟ್‌ಫೋನ್‌ಗಳ ಕೊಡುಗೆಯೊಂದಿಗೆ ಮಾರುಕಟ್ಟೆಯಲ್ಲಿ ಎರಡು ಅಂಕಿಗಳ ಬೆಳೆವಣಿಗೆಯನ್ನು ನಾವು ನಿರೀಕ್ಷಿಸುತ್ತೇವೆ. ಜತೆಗೆ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಅನೇಕ ಆಟಗಾರರಿಗೆ ಬೆಳೆಯಲು ಮತ್ತು ಸಹ-ಅಸ್ತಿತ್ವಕ್ಕೆ ದೊಡ್ಡ ಅವಕಾಶಗಳನ್ನು ನೀಡುವುದನ್ನು ಮುಂದುವರೆಸಿದೆ, ”ಎಂದು ವರದಿಯಲ್ಲಿ ಹೇಳಲಾಗಿದೆ. 

click me!