ಚೀನಾ ಫೋನ್‌ಗಳಿಗೆ ನಡುಕ, ಭಾರತದ ಮಿವಿ ಒನ್‌ನಿಂದ ಕೈಗೆಟುಕುವ ದರದಲ್ಲಿ ಫೋನ್ ಲಾಂಚ್

Published : Sep 24, 2026, 04:46 PM IST
Mivi One 5g Smartphone Launch

ಸಾರಾಂಶ

ಭಾರತದ ಬ್ರ್ಯಾಂಡ್ ಮಿವಿ ಒನ್ ಇದೀಗ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ವಿಶೇಷ ಅಂದರೆ ಚೀನಾ ಫೋನ್‌ಗಳಿಂತ ಉತ್ತಮ ಗುಣಮಟ್ಟದ ಫೋನ್ ಇದು. ಇಷ್ಟೇ ಅಲ್ಲ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ. ಜೊತೆಗೆ ಡಿಸ್ಕೌಂಟ್ ಆಫರ್ ಕೂಡ ಲಭ್ಯವಿದೆ.

ನವದೆಹಲಿ (ಸೆ.24) ಭಾರತದ ಮಾರುಕಟ್ಟೆಯಲ್ಲಿ ಚೀನಾ ಫೋನ್‌ಗಳೇ ಹೆಚ್ಚು ಆವರಿಸಿಕೊಂಡಿದೆ. ಕಡಿಮೆ ಬೆಲೆ, ಉತ್ತಮ ಸ್ಟೋರೇಜ್, ಅತ್ಯಾಧುನಿಕ ಫೀಚರ್, ಗುಣಮಟ್ಟದ ಕ್ಯಾಮೆರಾಗಳ ಕಾರಣ ಚೀನಾ ಫೋನ್‌ಗಳೇ ಹೆಚ್ಚು ಮಾರಾಟ ಕಾಣುತ್ತಿದೆ. ಇದೀಗ ಚೀನಾ ಫೋನ್‌ಗಳಿಗೆ ಸೆಡ್ಡು ಹೊಡೆಯಲು ಭಾರತದ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಮಿವಿ ಒನ್ ಇದೀಗ 5ಜಿ ಫೋನ್ ಲಾಂಚ್ ಮಾಡಿದೆ. ಮಿವಿ ಬಿಡುಗಡೆ ಮಾಡಿರುವ ಫೋನ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ವಿಶೇಷ ಅಂದರೆ ಆರಂಭಿಕ ಮಾರಾಟದಲ್ಲಿ 3000 ರೂಪಾಯಿ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ.

ಮಿವಿ ಒನ್ 5ಜಿ ಫೋನ್ ವಿಶೇಷತೆ ಹಾಗೂ ಬೆಲೆ

ಮಿವಿ ಒನ್ 5ಜಿ ಪೋನ್ ಹಲವು ವಿಶೇಷತೆ ಹೊಂದಿದೆ. ಜೊತೆಗೆ ಚೀನಾ ಫೋನ್‌ಗಳಿಗೆ ಠಕ್ಕರ್ ಕೊಡುವುದು ಬಹುತೇಕ ಖಚಿತವಾಗಿದೆ. ಪ್ರಮುಖವಾಗಿ ಇದು ಭಾರತದಲ್ಲೇ ತಯಾರಾದ, ಭಾರತದ ಕಂಪನಿಯ ಫೋನ್. ಇನ್ನು ಕ್ವಾಲ್ಕಾಮ್ ಪ್ರೊಸೆಸರ್, 8ಜಿಬಿ RAM ವೇರಿಯೆಂಟ್, 5 ವಿವಿಧ ಬಣ್ಣಗಳು, 50ಎಂಪಿ ಕ್ಯಾಮೆರಾ, 90Hz ರೀಫ್ರೆಶ್ ರೇಟ್ ಸೇರಿದಂತೆ ಹಲವು ವಿಶೇಷತೆ ಈ ಫೋನ್‌ನಲ್ಲಿದೆ. ಇದರ ಆರಂಭಿಕ ಬೆಲೆ 14,999 ರೂಪಾಯಿ. ಜೊತೆಗೆ ಆರಂಭಿಕ ಹಂತದಲ್ಲಿ ಇನ್‌ಸ್ಟಾಂಟ್ ಡಿಸ್ಕೌಂಟ್ 3000 ರೂಪಾಯಿವರೆಗೂ ಸಿಗಲಿದೆ.

ಮಿವಿ ಒನ್ 5ಜಿ ಫೋನ್ ಬೆಲೆ ಹಾಗೂ ವೇರಿಯೆಂಟ್

  • ಮಿವಿ ಒನ್ 5ಜಿ ಫೋನ್ 4GB RAM ಹಾಗೂ 128 ಜಿಬಿ ಸ್ಟೋರೇಜ್: 14,999 ರೂಪಾಯಿ
  • ಮಿವಿ ಒನ್ 5ಜಿ ಫೋನ್ 6GB RAM ಹಾಗೂ 128 ಜಿಬಿ ಸ್ಟೋರೇಜ್: 15,999 ರೂಪಾಯಿ
  • ಮಿವಿ ಒನ್ 5ಜಿ ಫೋನ್ 8GB RAM ಹಾಗೂ 128 ಜಿಬಿ ಸ್ಟೋರೇಜ್: 16,999 ರೂಪಾಯಿ

3000 ರೂಪಾಯಿ ಡಿಸ್ಕೌಂಟ್

ಭಾರತದ ಮಾರುಕಟ್ಟೆಗೆ ಮಿವಿ ಒನ್ 5ಜಿ ಫೋನ್ ಲಾಂಚ್ ಆಗಿದೆ. ಇಕಾಮರ್ಸ್ ಮೂಲಕ ಅಕ್ಟೋಬರ್ 8 ರಿಂದ ಖರೀದಿಗೆ ಲಭ್ಯವಿದೆ. ಬಿಗ್ ಬಿಲಿಯನ್ ಡೇಸ್ ಮೂಲಕ ಖರೀದಿ ಮಾಡುವುದಾದರೆ 3000 ರೂಪಾಯಿ ಇನ್‌ಸ್ಟಾಂಟ್ ಡಿಸ್ಕೌಂಟ್ ಸಿಗಲಿದೆ.

ಮಿವಿ ಒನ್ 5ಜಿ ಫೋನ್ 50ಎಂಪಿ ಕ್ಯಾಮೆರಾ ಹೊಂದಿದೆ. ಸೆಲ್ಫಿ ಹಾಗೂ ವಿಡಿಯೋ ಕಾಲ್ಸ್‌ಗೆ 8ಎಂಪಿ ಫ್ರಂಟ್ ಕ್ಯಾಮೆರಾ ಆಯ್ಕೆ ಹೊಂದಿದೆ. 6.74 ಇಂಚಿನ HD+ ಡಿಸ್‌ಪ್ಲೇ, 90Hz ರೀಫ್ರೆಶ್ ರೇಟ್, ಆ್ಯಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್, ಕ್ವಾಲ್ಕಾಂ ಸ್ನಾಪ್‌ಡ್ರಾಗನ್ 4 Gen 2 ಪ್ರೊಸೆಸರ್, 6000mAh ಬ್ಯಾಟರಿ ಸೇರಿದಂತೆ ಹಲವು ವಿಶೇಷತೆಗಳು ಈ ಫೋನ್‌ನಲ್ಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ನಿಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಗಾರ್ಡ್‌ಗೆ ಕಾದಿದೆ ದೊಡ್ಡ ಕಂಟಕ! 2027ರ ಏಪ್ರಿಲ್ 1ರಿಂದ ಈ ನಿಯಮ ಅನ್ವಯ
ಬಿಗ್ ರಿಲೀಫ್! 'ನೆಟ್ಟು ಗಿಟ್ಟು ಬೇಕಾಗಿಲ್ಲ' ಜಸ್ಟ್ ಮಾತಾಡೋಕೆ ರೀಚಾರ್ಜ್ ಬೇಕು ಅನ್ನೋರಿಗೆ ಗುಡ್‌ನ್ಯೂಸ್