ಬಿಗ್ ರಿಲೀಫ್! 'ನೆಟ್ಟು ಗಿಟ್ಟು ಬೇಕಾಗಿಲ್ಲ' ಜಸ್ಟ್ ಮಾತಾಡೋಕೆ ರೀಚಾರ್ಜ್ ಬೇಕು ಅನ್ನೋರಿಗೆ ಗುಡ್‌ನ್ಯೂಸ್

Published : Sep 22, 2026, 09:17 PM IST
TRAI New Rules Jio Airtel Vi Users to Get More Voice and SMS-Only Recharge Plans

ಸಾರಾಂಶ

ಮೊಬೈಲ್ ಬಳಕೆದಾರರಿಗೆ ಟ್ರಾಯ್ ಶೀಘ್ರದಲ್ಲೇ ಸಿಹಿಸುದ್ದಿ ನೀಡಲಿದ್ದು, ಇಂಟರ್ನೆಟ್ ಡೇಟಾ ಇಲ್ಲದ ಕೇವಲ ವಾಯ್ಸ್ ಕಾಲ್ ಮತ್ತು ಎಸ್‌ಎಂಎಸ್ ಪ್ಲಾನ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ಗ್ರಾಹಕರು ತಾವು ಬಳಸುವ ಸೇವೆಗೆ ಮಾತ್ರ ಹಣ ಪಾವತಿಸುವ ಮೂಲಕ ದುಬಾರಿ ರಿಚಾರ್ಜ್‌ನಿಂದ ಪಾರಾಗಬಹುದು. ಈ ಕುರಿತ ಸ್ಟೋರಿ ಇಲ್ಲಿದೆ.

ನವದೆಹಲಿ: ಮೊಬೈಲ್ ಬಳಕೆದಾರರಿಗೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಬಿಗ್ ರಿಲೀಫ್ ನೀಡಲು ಮುಂದಾಗಿದೆ. ಮೊಬೈಲ್ ಇದೆ ಅಂದ್ರೆ ಇವತ್ತು ರಿಚಾರ್ಜ್‌ ಮಾಡಿದಷ್ಟೂ ಸಾಕಾಗಲ್ಲ. ತಿಂಗಳ ಹೇಗೆ ಕಳೆಯುತ್ತೋ ಗೊತ್ತೇ ಆಗಲ್ಲ. ಅಷ್ಟರಲ್ಲೇ ರಿಚಾರ್ಜ್ ಮಾಡಿ ಎಂಬ ಸಂದೇಶ ಬಂದಾಗಿರುತ್ತೆ. ಅದು ದುಬಾರಿ ರಿಚಾರ್ಜ್‌!

ಇಂಟರ್‍‌ನೆಟ್ ಬಳಸಲಿ, ಬಳಸದಿರಲಿ ಫೋನ್ ಅಲ್ಲಿ ಮಾತಾಡಬೇಕು ಅಂದ್ರೆ ದುಬಾರಿ ರಿಚಾರ್ಜ್ ಮಾಡಿಸಿಕೊಳ್ಳಲೇಬೇಕು. ದೊಡ್ಡ ದೊಡ್ಡ ದೈತ್ಯ ಕಂಪನಿಗಳು ಹಣ ಮಾಡುವ ಹಪಾಹಪಿಗೆ ಮೊಬೈಲ್ ಬಳಸದೇ ಇರೋರನ್ನೂ ಸುಲಿಗೆ ಮಾಡ್ತಿದೆ. ಇದಕ್ಕೆಲ್ಲಾ ವಿರಾಮ ಹಾಡಲು ಟ್ರಾಯ್ ಮುಂದಾಗಿದೆ. ಇನ್ಮುಂದೆ ನನಗೆ ಯಾವುದೇ ಡೇಟಾ ಬೇಡ, ಜಸ್ಟ್ ಹಲೋ ಅಂತಾ ಹೇಳೋಕೆ ರಿಚಾರ್ಜ್ ಇದ್ದರೆ ಸಾಕು ಅನ್ನೋರಿಗೆ ಟ್ರಾಯ್ ಗುಡ್‌ನ್ಯೂಸ್ ಕೊಡಲಿದೆ.

TRAI ಹೊಸ ನಿಯಮದಲ್ಲಿ ಏನಿದೆ?

ಹೊಸ ನಿಯಮದ ಪ್ರಕಾರ.. ಜಿಯೋ (Jio), ಏರ್‌ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vi) ಇಂಟರ್ನೆಟ್ ಡೇಟಾ ಇಲ್ಲದ ಪ್ರತ್ಯೇಕ ರೀಚಾರ್ಜ್ ಪ್ಲಾನ್‌ಗಳನ್ನು ನೀಡಲಿವೆ. ಪ್ರಸ್ತುತ ಕಂಪನಿಗಳು 28 ದಿನ, 56 ದಿನ ಅಥವಾ 84 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್‌ಗಳನ್ನು ನೀಡುತ್ತಿವೆ. ಇನ್ಮುಂದೆ ಇದೇ ಅವಧಿಗೆ ಕೇವಲ ವಾಯ್ಸ್ ಕಾಲ್ ಮತ್ತು ಎಸ್‌ಎಂಎಸ್ ಮಾತ್ರ ಒಳಗೊಂಡಿರುವ ಪ್ಲಾನ್‌ಗಳನ್ನು ಕಂಪನಿಗಳು ನೀಡಲೇಬೇಕು.

ಟ್ರಾಯ್‌ನ ಹೊಸ ನಿಯಮದಿಂದ ದೇಶದ ಕೋಟ್ಯಂತರ ಜನರಿಗೆ ನೇರ ಲಾಭವಾಗಲಿದೆ. ಮನೆಯಲ್ಲಿರುವ ಹಿರಿಯರು ಮೊಬೈಲ್ ಅನ್ನು ಕೇವಲ ಮಾತನಾಡೋದಕ್ಕೆ ಮಾತ್ರ ಬಳಸುತ್ತಾರೆ. ಅವರಿಗೆ ಡೇಟಾ ಪ್ಯಾಕ್‌ನ ಅವಶ್ಯಕತೆ ಬೇಕಾಗಿಲ್ಲ. ಬೇಸಿಕ್ ರಿಚಾರ್ಜ್ ಪ್ಲಾನ್ ಇದ್ದರೆ ಸಾಕು.

ಅಷ್ಟೇ ಅಲ್ಲದೇ ನಮ್ಮ ದೇಶದಲ್ಲಿ ಇಂದಿಗೂ ಕೋಟ್ಯಂತರ ಜನರು ಇಂಟರ್ನೆಟ್ ಇಲ್ಲದ ಸಾಮಾನ್ಯ ಫೋನ್‌ಗಳನ್ನು ಬಳಸುತ್ತಿದ್ದಾರೆ. ಅವರಿಗೂ ಈ ಡೇಟಾ ಶುಲ್ಕ ಉಳಿಯಲಿದೆ. ಜೊತೆಗೆ ಅನೇಕ ಮಂದಿ ಎರಡು ಸಿಮ್‌ ಬಳಸುತ್ತಿರುತ್ತಾರೆ. ಅಂತವರಿಗೂ ಒಂದು ನಂಬರ್‍‌ನಿಂದ ಕರೆ ಮಾಡಲು ಮಾತ್ರ ರಿಚಾರ್ಜ್‌ ಅಗತ್ಯ ಇರುತ್ತದೆ. ಅಂಥವ್ರಿಗೆ ಹೊಸ ನಿಯಮ ತುಂಬಾನೇ ಪ್ರಯೋಜನ ಆಗಲಿದೆ.

ಟ್ರಾಯ್ ಮೊಬೈಲ್ ರೀಚಾರ್ಜ್ ಬೆಲೆಗಳನ್ನು ನೇರವಾಗಿ ಕಡಿಮೆ ಮಾಡುತ್ತಿಲ್ಲ. ಬದಲಾಗಿ ನಿಮಗೆ ಇಂಟರ್ನೆಟ್ ಬೇಡ ಎಂದಾದರೆ ಡೇಟಾ ಇಲ್ಲದ ಪ್ಲಾನ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡುತ್ತಿದೆ. ನೀವು ಬಳಸುವ ಸೇವೆಗೆ ಮಾತ್ರ ಹಣ ಪಾವತಿಸಿ (Pay only for what you use), ಉಳಿದ ಹಣವನ್ನು ಉಳಿಸಿಕೊಳ್ಳಲು ಈ ನಿಯಮ ನೆರವಾಗಲಿದೆ. ಜೊತೆಗೆ 30 ದಿನಗಳ ಮಾಸಿಕ ವ್ಯಾಲಿಡಿಟಿ ಪ್ಲಾನ್‌ಗಳು ಕೂಡ ಎಂದಿನಂತೆ ಮುಂದುವರಿಯಲಿವೆ ಎಂದು ವರದಿಯಾಗಿದೆ.

ನಂಗೆ ಈ ನೆಟ್ಟು ಗಿಟ್ಟು ಬೇಡ. ಜಸ್ಟ್ ಮಾತಾಡೋಕೆ ಪ್ಲಾನ್ ಇದ್ದರೆ ಸಾಕು ಮಾರಾಯ್ರೆ ಇದೆಂಥ? ರಿಚಾರ್ಜ್‌ ಮಾಡಿ ಮಾಡಿ ಸಾಕಾಯ್ತು ಅನ್ನೋರಿಗೆ ಹೊಸ ನಿಯಮ ತುಂಬಾನೇ ಹೆಲ್ಪ್ ಆಗಲಿದೆ. ಜೊತೆಗೆ ಜೇಬಲ್ಲಿ ಸ್ವಲ್ಪ ಹಣ ಕೂಡ ಉಳಿತಾಯ ಆಗಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

OnePlus N6 5G ಫೋನ್ ಬೆಲೆಯಲ್ಲಿ ₹6000 ಕಡಿತ, ಅಮೇಜಾನ್ ಬಿಗ್ ಸೇಲ್‌ಗೂ ಮುನ್ನ ಧಮಾಕಾ ಆಫರ್
ಯೂಟೂಬ್ ಚಾನೆಲ್‌ಗೆ ವಿಡಿಯೋ ಮಾಡಲು ₹1 ಲಕ್ಷದೊಳಗೆ ಬರುವ ಟಾಪ್-5 ಬೆಸ್ಟ್ ಕ್ಯಾಮೆರಾ ಮೊಬೈಲ್‌ಗಳು!