Huawei Nova Y9a ಪಾಪ್ ಅಪ್ ಸೆಲ್ಫಿಕ್ಯಾಮೆರಾ ನಾಚ್‌ಲೆಸ್ ವಿನ್ಯಾಸದೊಂದಿಗೆ ಲಾಂಚ್!

Published : Jan 31, 2022, 01:00 PM ISTUpdated : Jan 31, 2022, 01:17 PM IST
Huawei Nova Y9a ಪಾಪ್ ಅಪ್ ಸೆಲ್ಫಿಕ್ಯಾಮೆರಾ ನಾಚ್‌ಲೆಸ್ ವಿನ್ಯಾಸದೊಂದಿಗೆ ಲಾಂಚ್!

ಸಾರಾಂಶ

Huawei Nova Y9a ಸ್ಮಾರ್ಟ್‌ಫೋನ್ ನಾಚ್ ಇಲ್ಲದ 6.63-ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ  

Tech Desk: Huawei Nova Y9a ಕಂಪನಿಯ ಲೆಟೆಸ್ಟ್ ಸ್ಮಾರ್ಟ್‌ಫೋನಾಗಿ ಬಿಡುಗಡೆ ಮಾಡಲಾಗಿದೆ. ಇದು 64ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ ಪಾಪ್-ಅಪ್ ಸೆಲ್ಫಿ  ಕ್ಯಾಮೆರಾವನ್ನು (Pop-up Selfie camera) ಒಳಗೊಂಡಿದೆ. Huawei Nova Y9a  MediaTek Helio G80 SoC 8GB RAM ನೊಂದಿಗೆ ಜೋಡಿಸಲಾಗಿದೆ. ಸ್ಮಾರ್ಟ್‌ಫೋನ್ ನಾಚ್ ಇಲ್ಲದ 6.63-ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಸ್ಮಾರ್ಟ್‌ಫೋನನ್ನು ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ ಮಾಡಲಾಗಿದ್ದು ಜಾಗತಿಕ ಮಾರುಕಟ್ಟೆಯಲ್ಲಿ ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ. 

Huawei Nova Y9a ಬೆಲೆ, ಲಭ್ಯತೆ: ಏಕೈಕ 8GB RAM + 128GB ಸ್ಟೋರೇಜ್ ಮಾದರಿಗಾಗಿ Huawei Nova Y9a ಬೆಲೆ ZAR 6,499 (ಸುಮಾರು ರೂ. 31,300)ಗೆ ನಿಗದಿಪಡಿಸಲಾಗಿದೆ. ಮಿಡ್‌ನೈಟ್ ಬ್ಲಾಕ್, ಸಕುರಾ ಪಿಂಕ್ ಮತ್ತು ಸ್ಪೇಸ್ ಸಿಲ್ವರ್‌ ಬಣ್ಣಗಳಲ್ಲಿ ಮುಂಗಡ-ಆರ್ಡರ್‌ಗಳಿಗೆ ಸ್ಮಾರ್ಟ್‌ಫೋನ್ ಲಭ್ಯವಿದೆ. ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಯೋಜನೆಯನ್ನು Huawei ಇನ್ನೂ ಪ್ರಕಟಿಸಿಲ್ಲ.́

ಇದನ್ನೂ ಓದಿ: Huawei Smart Glasses: ಬೆನ್ನುಮೂಳೆ ಸಮಸ್ಯೆಯಿದ್ದರೆ ಎಚ್ಚರಿಸೋ ಕನ್ನಡಕವಿದು!

Huawei Nova Y9a Specifications: ಡ್ಯುಯಲ್-ಸಿಮ್ (ನ್ಯಾನೋ) Huawei Nova Y9a ಆಂಡ್ರಾಯ್ಡ್ 10 ರನ್‌ ಮಾಡುತ್ತಿದ್ದು, ಕಂಪನಿಯ EMUI 10.1 ಸ್ಕಿನ್ ಮೇಲೆ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್ 6.63-ಇಂಚಿನ Full-HD+ (1,080x2,400 ಪಿಕ್ಸೆಲ್‌ಗಳು) ಟಿಎಫ್‌ಟಿ ಎಲ್‌ಸಿಡಿ ಡಿಸ್ಪ್ಲೇ ಜೊತೆಗೆ 'ನಾಚ್-ಲೆಸ್' ವಿನ್ಯಾಸವನ್ನು ಹೊಂದಿದೆ. Huawei Nova Y9a ಆಕ್ಟಾ-ಕೋರ್ MediaTek Helio G80 SoC ನಿಂದ ನಡೆಸಲ್ಪಡುತ್ತಿದೆ, Mali-G52 MC2 GPU ಮತ್ತು 8GB RAM ನೊಂದಿಗೆ ಜೋಡಿಸಲಾಗಿದೆ.

Huawei Nova Y9a ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದ್ದು, f/1.8 ಅಪರ್ಚರ್ ಲೆನ್ಸ್‌ನೊಂದಿಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ,  120-ಡಿಗ್ರಿ ಫೀಲ್ಡ್ ಆಫ್ ವ್ಯೂ ಜೊತೆಗೆ f/2.4 ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ, ಮತ್ತು  f/2.4 ಅಪರ್ಚರ್ ಲೆನ್ಸ್‌ನೊಂದಿಗೆ ಎರಡು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು ಡೆಪ್ತ್ ಕ್ಯಾಮೆರಾ ನೀಡಲಾಗಿದೆ. ಮುಂಭಾಗದಲ್ಲಿ f/2.2 ಅಪರ್ಚರ್ ಲೆನ್ಸ್‌ನೊಂದಿಗೆ 16-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ.

ಇದನ್ನೂ ಓದಿ: Infinix Zero 5G: ಕಂಪನಿಯ ಮೊದಲ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ!

ಸ್ಮಾರ್ಟ್ಫೋನಲ್ಲಿ 128GB ಇಂಟರ್‌ನಲ್ ಸಂಗ್ರಹಣೆ ನೀಡಲಾಗಿದ್ದು ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ  256GBವರೆಗೆ ವಿಸ್ತರಿಸಬಹುದಾಗಿದೆ . Huawei Nova Y9a 4G LTE, Wi-Fi, Bluetooth v5.1, GPS/ AGPS ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ಗೆ ಬೆಂಬಲದೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿರುವ ಸೆನ್ಸರ್ ambient light sensor, ಗೈರೊಸ್ಕೋಪ್, ದಿಕ್ಸೂಚಿ ಮತ್ತು ಗುರುತ್ವಾಕರ್ಷಣೆ ಸೆನ್ಸರ್ ಒಳಗೊಂಡಿವೆ. Huawei Nova Y9a 4,300mAh ಬ್ಯಾಟರಿಯೊಂದಿಗೆ  USB ಟೈಪ್-C ಮೂಲಕ 40W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ 163.5x76.5x8.95mm ಅಳತೆ ಮತ್ತು 197 ಗ್ರಾಂ ತೂಗುತ್ತದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್