Tecno Spark 8C: ಆಂಡ್ರಾಯ್ಡ್ 11 ಗೋ ಎಡಿಷನ್‌ನೊಂದಿಗೆ ಸ್ಪಾರ್ಕ್‌ ಸರಣಿಗೆ ಮತ್ತೊಂದು ಸೇರ್ಪಡೆ!

By Manjunath Nayak  |  First Published Jan 31, 2022, 12:28 PM IST

Tecno Spark 8C ಬೆಲೆ ಇನ್ನೂ ಪ್ರಕಟವಾಗಿಲ್ಲ. ಆದಾಗ್ಯೂ, ಕಂಪನಿಯ ಸೈಟ್‌ನಲ್ಲಿ ಡೈಮಂಡ್ ಗ್ರೇ, ಐರಿಸ್ ಪರ್ಪಲ್, ಮ್ಯಾಗ್ನೆಟ್ ಬ್ಲ್ಯಾಕ್ ಮತ್ತು ಟರ್ಕೋಯಿಸ್ ಸಯಾನ್ ಬಣ್ಣಗಳಲ್ಲಿ ಫೋನನ್ನು ಪಟ್ಟಿ ಮಾಡಲಾಗಿದೆ. 


Tech Desk: Tecno Spark 8C ಯನ್ನು Spark 8 ಸರಣಿಯಲ್ಲಿ ಇತ್ತೀಚಿನ ಮಾದರಿಯಾಗಿ ಕಂಪನಿ ಬಿಡುಗಡೆ ಮಾಡಿದೆ. ಹೊಸ ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾಗಳು ಮತ್ತು 90Hz ಡಿಸ್ಪ್ಲೇಯೊಂದಿಗೆ ಬರುತ್ತದೆ. Tecno Spark 8C  ಆಂಡ್ರಾಯ್ಡ್ 11ನಲ್ಲಿ (ಗೋ ಆವೃತ್ತಿ)  ಕಾರ್ಯನಿರ್ವಹಿಸುತ್ತದೆ. Tecno Spark 8C ಯ ಇತರ ಪ್ರಮುಖ ವಿಶೇಷತೆಗಳು DTS ಸ್ಟಿರಿಯೊ ಸೌಂಡ್, ವಾಟರ್‌ಡ್ರಾಪ್-ಶೈಲಿಯ ಡಿಸ್ಪ್ಲೇ ನಾಚ್ ಮತ್ತು NFC ಬೆಂಬಲವನ್ನು ಒಳಗೊಂಡಿವೆ. ಫೋನ್ ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಕ್ಯಾಮೆರಾ ಎಫೆಕ್ಟಗಳನ್ನು (Camera Effects) ಸಹ ಒಳಗೊಂಡಿದೆ ಮತ್ತು ನಾಲ್ಕು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

Tecno Spark 8C ಬೆಲೆ & ಲಭ್ಯತೆ: Tecno Spark 8C ಬೆಲೆ ಇನ್ನೂ ಪ್ರಕಟವಾಗಿಲ್ಲ. ಆದಾಗ್ಯೂ, ಕಂಪನಿಯ ಸೈಟ್‌ನಲ್ಲಿ ಡೈಮಂಡ್ ಗ್ರೇ, ಐರಿಸ್ ಪರ್ಪಲ್, ಮ್ಯಾಗ್ನೆಟ್ ಬ್ಲ್ಯಾಕ್ ಮತ್ತು ಟರ್ಕೋಯಿಸ್ ಸಯಾನ್ ಬಣ್ಣಗಳಲ್ಲಿ ಫೋನನ್ನು ನೈಜೀರಿಯಾ ಮತ್ತು ಥೈಲ್ಯಾಂಡ್‌ನಲ್ಲಿ ಪಟ್ಟಿ ಮಾಡಲಾಗಿದೆ. ಕಳೆದ ವರ್ಷ, ರೆಗುಲರ್ ಟೆಕ್ನೋ ಸ್ಪಾರ್ಕ್ 8 ಅನ್ನು ಭಾರತ ಸೇರಿದಂತೆ‌ ಇತರ ಮಾರುಕಟ್ಟೆಗಳಲ್ಲಿ ರೂ. 7,999ಗೆ ಬಿಡುಗಡೆ ಮಾಡಲಾಗಿತ್ತು. ಇದು ಡಿಸೆಂಬರ್‌ನಲ್ಲಿ ಭಾರತದಲ್ಲಿ ಬೆಲೆ ರೂ. 8,999 ಪ್ರಾರಂಭವಾದ ಟೆಕ್ನೋ ಸ್ಪಾರ್ಕ್ 8Tಯ ರೂಪದಲ್ಲಿ ಇದು ನವೀಕರಣವನ್ನು  ಪಡೆದುಕೊಂಡಿದೆ.

Tap to resize

Latest Videos

undefined

ಇದನ್ನೂ ಓದಿ: Tecno Pop 5 Pro: 6000mAh ಬ್ಯಾಟರಿಯೊಂದಿಗೆ ಅತಿ ಅಗ್ಗದ ಮೊಬೈಲ್ ಭಾರತದಲ್ಲಿ ಬಿಡುಗಡೆ!

Tecno Spark 8C specifications: ಟಿಕ್ನೋದ ಪ್ರಾದೇಶಿಕ ವೆಬ್‌ಸೈಟ್‌ಗಳಲ್ಲಿ ಪಟ್ಟಿ ಮಾಡಲಾದ ವಿವರಗಳ ಪ್ರಕಾರ, Tecno Spark 8C Android 11 (Go Edittion) ನಲ್ಲಿ HiOS ಜೊತೆಗೆ ರನ್ ಆಗುತ್ತದೆ ಮತ್ತು 90Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ HD+ (720x1,612 ಪಿಕ್ಸೆಲ್‌ಗಳು) ಡಾಟ್ ನಾಚ್ ಡಿಸ್‌ಪ್ಲೇಯನ್ನು ಹೊಂದಿದೆ. ಪ್ರೊಸೆಸರ್ ಬಗ್ಗೆ ನಿಖರವಾದ ವಿವರಗಳನ್ನು ಆನ್‌ಲೈನ್‌ನಲ್ಲಿ ಪಟ್ಟಿ ಮಾಡಲಾಗಿಲ್ಲ. ಆದಾಗ್ಯೂ, ಇದು ಆಕ್ಟಾ-ಕೋರ್ Unisoc T606 SoC ಎಂದು ಊಹಿಸಲಾಗಿದೆ. ಟೆಕ್ನೋ ನೈಜೀರಿಯಾ ಸೈಟ್‌ನಲ್ಲಿನ ಪಟ್ಟಿಯು ಫೋನ್ 2GB ಮತ್ತು 3GB RAM ಆಯ್ಕೆಗಳಲ್ಲಿ ಬರುತ್ತದೆ ಎಂದು ತೋರಿಸುತ್ತದೆ, ಆದರೆ ಕಂಪನಿಯ ಥೈಲ್ಯಾಂಡ್ ಸೈಟ್‌ನಲ್ಲಿ 4GB RAM  ಒಂದೇ ಆಯ್ಕೆಯನ್ನು ಉಲ್ಲೇಖಿಸಿದೆ.

ಫೋಟೋಗಳು ಮತ್ತು ವೀಡಿಯೊಗಳಿಗಾಗಿ, ಟೆಕ್ನೋ ಸ್ಪಾರ್ಕ್ 8C ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪನ್ನು ಹೊಂದಿದೆ, ಇದು 13ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ f/1.8 ಲೆನ್ಸ್ ಮತ್ತು ಡ್ಯುಯಲ್ LED ಫ್ಲ್ಯಾಷ್‌ ಒಳಗೊಂಡಿದೆ. ಸೆಲ್ಫಿ ಫ್ಲ್ಯಾಷ್‌ನೊಂದಿಗೆ ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸರ್‌ ಕೂಡ ಇದೆ.

Tecno Spark 8C 64GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, FM ರೇಡಿಯೋ, GPS/ A-GPS, NFC, ಮತ್ತು USB ಪೋರ್ಟ್ ಸೇರಿವೆ. ಸ್ಮಾರ್ಟ್‌ಪೋನ್‌ನ  ಇತರ ಸೆನ್ಸರ್‌ಗಳು ಎಕ್ಸಲೋಮೀಟರ್,‌ ಎಂಬಿಯಂಟ್‌ ಲೈಟ್ (ambient light)‌ ಮತ್ತು ಪ್ರಾಕ್ಸಿಮೀಟರ್ ಸೆನ್ಸರ್‌ ಒಳಗೊಂಡಿದೆ. ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ.  

click me!