ನಿಮ್ಮ ಫೋನ್‌ನಲ್ಲೇ ಇದೆ ಜೀವರಕ್ಷಕ ಸೀಕ್ರೆಟ್ ಫೀಚರ್; Lock Screen ಮೇಲೆ Emergency Info ಸೇರಿಸೋದು ಹೇಗೆ? ಇಲ್ಲಿದೆ ಸಿಂಪಲ್ ಹಂತಗಳು!

Published : Jun 25, 2026, 08:35 PM IST
Mobile Saftey

ಸಾರಾಂಶ

ಇತ್ತೀಚಿನ ಅಪಘಾತ ಮತ್ತು ಹಠಾತ್ ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ, ಲಾಕ್ ಆಗಿರುವ ಮೊಬೈಲ್‌ನಿಂದಾಗಿ ಕುಟುಂಬವನ್ನು ಸಂಪರ್ಕಿಸುವುದು ಕಷ್ಟವಾಗುತ್ತದೆ. ಆದರೆ, ನಿಮ್ಮ ಸ್ಮಾರ್ಟ್‌ಫೋನ್ ಲಾಕ್ ಆಗಿದ್ದರೂ ಸಹ, ತುರ್ತು ಸಂಪರ್ಕ ಮತ್ತು ವೈದ್ಯಕೀಯ ಮಾಹಿತಿಯನ್ನು ಲಾಕ್ ಸ್ಕ್ರೀನ್‌ನಲ್ಲಿ ಹಾಕಬಹುದು.

ಬೆಂಗಳೂರು (ಜೂ.25): ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು, ಸಡನ್ ಕಾರ್ಡಿಯಾಕ್ ಅರೆಸ್ಟ್ ಅಥವಾ ಹಠಾತ್ ಹೃದಯಾಘಾತಗಳ (Heart Attack) ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ದುರದೃಷ್ಟಕರ ಸಂದರ್ಭಗಳಲ್ಲಿ ವ್ಯಕ್ತಿ ಪ್ರಜ್ಞೆ ತಪ್ಪಿ ಬಿದ್ದಾಗ, ಆಸ್ಪತ್ರೆಗೆ ಸೇರಿಸುವ ಸಾರ್ವಜನಿಕರಿಗಾಗಲಿ ಅಥವಾ ಚಿಕಿತ್ಸೆ ನೀಡುವ ವೈದ್ಯರಿಗಾಗಲಿ ಅವರ ಕುಟುಂಬದವರನ್ನು ಸಂಪರ್ಕಿಸುವುದು ದೊಡ್ಡ ಸವಾಲಾಗುತ್ತದೆ. ಏಕೆಂದರೆ ಬಹುತೇಕರ ಮೊಬೈಲ್ ಫೋನ್‌ಗಳು ಪಾಸ್‌ವರ್ಡ್‌ನಿಂದ ಲಾಕ್ ಆಗಿರುತ್ತವೆ.

ಆದರೆ, ನಿಮ್ಮ ಸ್ಮಾರ್ಟ್‌ಫೋನ್ ಲಾಕ್ ಆಗಿದ್ದರೂ ಸಹ ನಿಮ್ಮ ಪ್ರಾಣ ಉಳಿಸಬಲ್ಲ ಜೀವರಕ್ಷಕ ಮಾಹಿತಿಯನ್ನು ಲಾಕ್ ಸ್ಕ್ರೀನ್ ಮೇಲೆ ಪ್ರದರ್ಶಿಸುವ ಅದ್ಭುತ ಫೀಚರ್ ಆಂಡ್ರಾಯ್ಡ್ ಹಾಗೂ ಐಫೋನ್‌ಗಳಲ್ಲಿದೆ. ಅದನ್ನು ಸೆಟ್ ಮಾಡಿಕೊಳ್ಳುವುದು ಹೇಗೆ ಎಂಬ ವಿವರ ಇಲ್ಲಿದೆ.

ತುರ್ತು ಸಂದರ್ಭದಲ್ಲಿ ಇದು ಹೇಗೆ ಸಹಕಾರಿ?

ಅಪಘಾತ ಅಥವಾ ಹೃದಯಾಘಾತವಾದಾಗ ನಿಮ್ಮ ಫೋನ್ ಅನ್‌ಲಾಕ್ ಮಾಡದೆಯೇ ಸಹಾಯ ಮಾಡುವವರು ನಿಮ್ಮ ಕುಟುಂಬಸ್ಥರಿಗೆ ಕರೆ ಮಾಡಬಹುದು. ನಿಮ್ಮ ರಕ್ತದ ಗುಂಪು (Blood Group), ನಿಮಗಿರುವ ಅಲರ್ಜಿಗಳು ಅಥವಾ ಆರೋಗ್ಯದ ಇತಿಹಾಸವನ್ನು ಫೋನ್ ಲಾಕ್ ಆಗಿದ್ದಾಗಲೂ ವೈದ್ಯರು ನೋಡಿ ತಕ್ಷಣ ಸೂಕ್ತ ಚಿಕಿತ್ಸೆ ನೀಡಬಹುದು.

ಲಾಕ್ ಸ್ಕ್ರೀನ್‌ನಲ್ಲಿ ತುರ್ತು ಮಾಹಿತಿ ಉಳಿಸಲು ಸರಳ ಹಂತಗಳು

ಸೆಟ್ಟಿಂಗ್ಸ್ ಓಪನ್ ಮಾಡಿ: ನಿಮ್ಮ ಮೊಬೈಲ್‌ನ Settings ಆಪ್‌ಗೆ ಹೋಗಿ, ಅಲ್ಲಿ Safety ಅಥವಾ Emergency ಆಯ್ಕೆಯನ್ನು ಕ್ಲಿಕ್ ಮಾಡಿ.

ಸಂಪರ್ಕ ಸಂಖ್ಯೆ ಸೇರಿಸಿ: ನಿಮ್ಮ ಆಪ್ತರ ಅಥವಾ ಕುಟುಂಬದ ಇಬ್ಬರ ತುರ್ತು ಸಂಪರ್ಕ ಸಂಖ್ಯೆಗಳನ್ನು (Emergency Contacts) ಅಲ್ಲಿ ಆಡ್ ಮಾಡಬಹುದು.

ಮೆಡಿಕಲ್ ನೋಟ್ಸ್ ಬರೆಯಿರಿ: ನಿಮ್ಮ ರಕ್ತದ ಗುಂಪು, ಪ್ರಮುಖ ಕಾಯಿಲೆಗಳು ಅಥವಾ ಅಲರ್ಜಿಗಳ ವಿವರಗಳನ್ನು ನಮೂದಿಸಿ.

ಫೀಚರ್ ಆನ್ ಮಾಡಿ: ಫೋನ್ ಲಾಕ್ ಆಗಿದ್ದಾಗಲೂ ಈ ಮಾಹಿತಿ ಕಾಣಿಸಲು Enable lock-screen access ಆಯ್ಕೆಯನ್ನು ಆನ್ ಮಾಡಿ.

ಟೆಸ್ಟ್ ಮಾಡಿ ನೋಡಿ: ಕೊನೆಯದಾಗಿ ನಿಮ್ಮ ಫೋನ್ ಲಾಕ್ ಮಾಡಿ, ಅನ್‌ಲಾಕ್ ಮಾಡದೆಯೇ ತುರ್ತು ಮಾಹಿತಿ (Emergency Info) ಕಾಣಿಸುತ್ತಿದೆಯೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳಿ.

ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ

ಈ ಫೀಚರ್‌ನಲ್ಲಿ ನಿಮ್ಮ ರಕ್ತದ ಗುಂಪು ಮತ್ತು ತುರ್ತು ನಂಬರ್ ಹೊರತುಪಡಿಸಿ, ನಿಮ್ಮ ಬ್ಯಾಂಕ್ ವಿವರಗಳು ಅಥವಾ ಇತರ ಯಾವುದೇ ಅತ್ಯಂತ ಗೌಪ್ಯವಾದ ವೈಯಕ್ತಿಕ ಮಾಹಿತಿಯನ್ನು ನಮೂದಿಸಬೇಡಿ. ನಿಮ್ಮ ಮತ್ತು ನಿಮ್ಮ ಕುಟುಂಬದವರ ಮೊಬೈಲ್‌ಗಳಲ್ಲಿ ಈ ಸೆಟ್ಟಿಂಗ್ ಆನ್ ಮಾಡಿಕೊಳ್ಳಿ. ಯಾಕಂದ್ರೆ ಮುಂಜಾಗ್ರತೆಗಿಂತ ದೊಡ್ಡ ರಕ್ಷಣೆ ಬೇರೊಂದಿಲ್ಲ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Mobile Charger: ಮೊಬೈಲ್ ಚಾರ್ಜ್‌ಗೆ ಹಾಕಿದಾಗಲೇ ಯಾಕೆ ಬ್ಲಾಸ್ಟ್ ಆಗುತ್ತೆ? ನೀವು ಈ ತಪ್ಪು ಎಂದಿಗೂ ಮಾಡಬೇಡಿ!
Google Pixel 10 Offer: ಬೆಲೆ ಇಳಿಕೆಯಾದ ಗೂಗಲ್ ಪಿಕ್ಸೆಲ್ 10, ಅಮೇಜಾನ್‌ನಲ್ಲಿ ಭರ್ಜರಿ ₹16,000 ಡಿಸ್ಕೌಂಟ್!