ಮೊಬೈಲ್ ರೀಚಾರ್ಜ್ ಆ್ಯಪ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಟೂ-ಫ್ಯಾಕ್ಟರ್ ಅಥೆಂಟಿಕೇಶನ್, ಸೆಕ್ಯೂರ್ ಪೇಮೆಂಟ್ ಗೇಟ್‌ವೇಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುತ್ತವೆ. ಬಜಾಜ್ ಪೇ ನಂತಹ ಆ್ಯಪ್‌ಗಳು ಬಳಕೆದಾರರ ಡೇಟಾವನ್ನು ರಕ್ಷಿಸಲು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಒದಗಿಸುತ್ತವೆ.
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ರೀಚಾರ್ಜ್ ಅಪ್ಲಿಕೇಶನ್‌ಗಳು ದೈನಂದಿನ ಹಣಕಾಸಿನ ವಹಿವಾಟುಗಳನ್ನು ನಿರ್ವಹಿಸಲು ಅತ್ಯಗತ್ಯ ಸಾಧನವಾಗಿದೆ. ಮೊಬೈಲ್ ಪ್ಲಾನ್ ರೀಚಾರ್ಜ್, ಯುಟಿಲಿಟಿ ಬಿಲ್ ಪಾವತಿ, ಫಾಸ್ಟ್‌ಟ್ಯಾಗ್ ಖಾತೆಯ ಟಾಪ್‌ಅಪ್ ಮಾಡಿಸಿಕೊಳ್ಳಲು ಅಪ್ಲಿಕೇಶನ್‌ಗಳು ಸಹಾಯಕವಾಗಿವೆ. ಇಂದು ಎಲ್ಲರ ಆನ್‌ಲೈನ್ ವಹಿವಾಟು ಹೆಚ್ಚಳವಾಗಿದ್ದು, ಈ ಅಪ್ಲಿಕೇಶನ್‌ಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯೂ ಮೂಡುತ್ತದೆ. ಈ ರೀಚಾರ್ಜ್ ಅಪ್ಲಿಕೇಶನ್‌ಗಳು ಹೊಂದಿರುವ ಭದ್ರತಾ ವೈಶಿಷ್ಯಗಳೇನು ಎಂಬುದರ ಮಾಹಿತಿ ಈ ಲೇಖನದಲ್ಲಿದೆ. ಮೊಬೈಲ್ ರೀಚಾರ್ಜ್ ಆಪ್‌ಗಳು ಹೊಂದಿರುವ ಭದ್ರತಾ ವೈಶಿಷ್ಟ್ಯಗಳು, ಹಣಕಾಸಿನ ವ್ಯವಹಾರ ನಡೆಸಲು ನಂಬಿಕೆಗೆ ಎಷ್ಟು ಅರ್ಹ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. Bajaj Pay ಅಂತಹ ಪ್ಲಾಟ್‌ಫಾರ್ಮ್‌ಗಳು ತಮ್ಮ ಗ್ರಾಹಕರಿಗೆ ಸುರಕ್ಷಿತ ಸೇವೆಯನ್ನು ಹೇಗೆ ನೀಡುತ್ತವೆ ಎಂದು ತಿಳಿದುಕೊಳ್ಳಬೇಕು.
1. End-to-end encryption
ಅತ್ಯಂತ ಪ್ರಮುಖ ಸೆಕ್ಯುರಿಟಿ ಫೀಚರ್‌ಗಳಲ್ಲಿ End-to-end encryption ಒಂದಾಗಿದೆ. ಈ ವೈಶಿಷ್ಟ್ಯ ಬಳಕೆದಾರದ ಡಿವೈಸ್ ಮತ್ತು ಆಪ್ ಸರ್ವರ್ ನಡುವಿನ ಸಂಪರ್ಕವಾಗಿರುತ್ತದೆ. ಈ ವ್ಯವಹಾರ ಇಬ್ಬರನ್ನು ಹೊರತುಪಡಿಸಿ ಮೂರನೇ ವ್ಯಕ್ತಿಗೆ ತಿಳಿಯದಂತೆ ಕಾಪಾಡುವ ಕೆಲಸವನ್ನು ಮೊಬೈಲ್ ರೀಚಾರ್ಜ್ ಅಪ್ಲಿಕೇಶನ್ಗಳು ಕೆಲಸ ಮಾಡುತ್ತವೆ. ಪೇಮೆಂಟ್ ಡೇಟಾ ಮತ್ತು ಬಳಕೆದಾರರ ಗುರುತು ಸೇರಿದಂತೆ ಇತರೆ ಮಾಹಿತಿಯನ್ನು ಕಾಪಾಡೋದು ಮತ್ತು ಅನಾಮಧೇಯರಿಗೆ ತಿಳಿಯದಂತೆ ರಹಸ್ಯವಾಗಿ ಕಾಪಾಡುವ ಕೆಲಸ ಮಾಡಲಾಗುತ್ತದೆ.
undefined
ವಹಿವಾಟು ನಡೆಸಲು ನೀವು ಅಪ್ಲಿಕೇಶನ್‌ಗಳನ್ನು ಬಳಸಿದಾಗ ವಿನಿಮಯವಾಗುವ ಪ್ರತಿಯೊಂದು ಬಿಟ್ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಇದು ನೆಟ್‌ವರ್ಕ್ ಟ್ರಾಫಿಕ್ ಅನ್ನು ತಡೆಹಿಡಿಯಲು ನಿರ್ವಹಿಸುತ್ತಿದ್ದರೂ ಸಹ ಸೈಬರ್ ಅಪರಾಧಿಗಳು ಸಾಗಣೆಯಲ್ಲಿರುವಾಗ ಸೂಕ್ಷ್ಮ ಮಾಹಿತಿಯನ್ನು ಪ್ರವೇಶಿಸುವುದನ್ನು ತಡೆಯುತ್ತದೆ. End-to-end encryption ನಿಮ್ಮ ಹಣಕಾಸಿನ ವಿವರಣೆಯನ್ನು ಕಾಪಾಡುತ್ತದೆ. ನಿಮ್ಮ ವ್ಯವಹಾರ ಸಂಪೂರ್ಣ ಕಂಪ್ಲೀಟ್ ಆಗೋವರೆಗೂ ಪ್ರತಯೊಂದು ಬಿಟ್ ಡೇಟಾ ಎನ್‌ಕ್ರಿಪ್ಟ್ ಮಾಡಲಾಗುತ್ತದೆ.
2. Two-factor authentication (2FA)
ಎರಡು-ಅಂಶದ ದೃಢೀಕರಣ ಬಳಕೆದಾರರ ಭದ್ರತೆಯನ್ನು ಎರಡುಪಟ್ಟು ಹೆಚ್ಚಿಸಲಾಗಿದೆ. ಎರಡು ಹಂತದ ಪರಿಶೀಲನೆ ಬಳಕೆದಾರರ ಗುರುತನ್ನು ಪರಿಶೀಲಿಸುತ್ತದೆ. ಮೊದಲು ಆಪ್ ಓಪನ್ ಮಾಡಲು ಪಿನ್ ಅಥವಾ ಪಾಸ್‌ವರ್ಡ್ ಹಾಕಲಾಗುತ್ತದೆ. ನಂತರ ನೋಂದಾಯಿತ ಸಂಖ್ಯೆ ಅಥವಾ ಇ-ಮೇಲ್‌ಗೆ ಒಟಿಪಿ ಕಳುಹಿಸಲಾಗುತ್ತದೆ. ಈ ಓಟಿಪಿ ನಮೂದಿಸಿದಾಗ ಅಪ್ಲಿಕೇಶನ್ ಮಾಡಲಾಗುತ್ತದೆ. ಈ ವೈಶಿಷ್ಟ್ಯದಿಂದಾಗಿ ಅನಧಿಕೃತ ಅಥವಾ ಎರಡನೇ ವ್ಯಕ್ತಿಯ ಲಾಗಿನ್ ತಡೆಯಲಾಗುತ್ತದೆ.
ಒಂದು ವೇಳೆ ಯಾರಾದ್ರೂ ಪಾಸ್‌ವರ್ಡ್ ಕಂಡು ಹಿಡಿದರೂ ಪ್ರತಿಬಾರಿ ಲಾಗಿನ್‌ಗೆ ಓಟಿಪಿ ಅವಶ್ಯಕವಾಗಿ ಬೇಕಾಗುತ್ತದೆ. PhonePe ಮತ್ತು Bajaj Pay ನಂತಹ ಅಪ್ಲಿಕೇಶನ್‌ಗಳು ಎರಡು-ಅಂಶದ ದೃಢೀಕರಣದ ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡುತ್ತವೆ. ಇದರಿಂದ ಹ್ಯಾಕರ್ಸ್‌ಗಳಿಂದ ನಿಮ್ಮನ್ನು ಇದು ರಕ್ಷಣೆ ಮಾಡುತ್ತದೆ. ಹಣಕಾಸಿನ ವಹಿವಾಟುಗಳೊಂದಿಗೆ ವ್ಯವಹರಿಸುವಾಗ 2FA ನಿರ್ಣಾಯಕ ಸ್ಥಾನದಲ್ಲಿರುತ್ತದೆ. 2FA ಗ್ರಾಹಕರ ಖಾತೆಯ ಭದ್ರತೆಯನ್ನು ಹೆಚ್ಚಿಸುತ್ತದೆ.
3. Secure payment gateways
ಮೊಬೈಲ್ ಅಪ್ಲಿಕೇಶನ್‌ಗಳು ವಹಿವಾಟುಗಳನ್ನು ನಿರ್ವಹಿಸಲು ಸುರಕ್ಷಿತ ಪಾವತಿ ಗೇಟ್‌ವೇಗಳನ್ನು ಬಳಸುತ್ತವೆ. ಆದ್ರೆ ಈ ಗೇಟ್‌ವೇಗಳು ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ ಹಾಗೂ ಇನ್ನಿತರ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹ ಮಾಡುವುದಿಲ್ಲ. ಕೇವಲ ಥರ್ಡ್ ಪಾರ್ಟಿಯಾಗಿ ಮೊಬೈಲ್ ಅಪ್ಲಿಕೇಶನ್‌ಗಳು ಕೆಲಸ ಮಾಡುತ್ತವೆ. ಈ ಆಪ್ ಮೂಲಕ ಪ್ರವೇಶಿಸಿ ಹ್ಯಾಕರ್‌ಗಳು ಬ್ಯಾಂಕ್ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಪಾವತಿ ಗೇಟ್‌ವೇಗಳು ಟೋಕನೈಸೇಶನ್ ಸಹ ನೀಡುತ್ತವೆ. ಹಾಗಾಗಿ ವಂಚನೆಯ ಅಪಾಯವನ್ನು ಕಡಿಮೆ ಮಾಡುತ್ತವೆ.
4.ಬಯೋಮೆಟ್ರಿಕ್ ದೃಢೀಕರಣ
ಇಂದು ಸ್ಮಾರ್ಟ್‌ಫೋನ್‌ಗಳಲ್ಲಿ ಬಯೋಮೆಟ್ರಿಕ್‌ನಂತಹ ಆಯ್ಕೆಗಳಿವೆ. ಫಿಂಗರ್‌ಪ್ರಿಂಟ್ ಸ್ಕ್ಯಾನಿಂಗ್ ಮತ್ತು ಫೇಸ್‌ಲಾಕ್ ಅಂತಹ ಸೌಲಭ್ಯಗಳಿವೆ.ಈ ಟೆಕ್ನಾಲಜಿಯನ್ನು ಮೊಬೈಲ್ ಅಪ್ಲಿಕೇಶನ್‌ಗಳಿಗೆ ಅನ್ವಯಿಸಬಹುದು. ಪಾಸ್‌ವರ್ಡ್, ಪಿನ್ ಮರೆತರೂ ಸುಲಭವಾಗಿ ಬಯೋಮೆಟ್ರಿಕ್ ವಿಧಾನ ಬಳಸಿ ಆಪ್ ಓಪನ್ ಮಾಡಬಹುದಾಗಿದೆ. ಫಿಂಗರ್‌ಫ್ರಿಂಟ್, ಫೇಸ್ ಲಾಕ್ ಮಾಡಿದ್ರೆ ನಿಮ್ಮನ್ನು ಹೊರತುಪಡಿಸಿ ಬೇರೆ ಯಾರೂ ಸಹ ಆಪ್ ಓಪನ್ ಮಾಡಲು ಸಾಧ್ಯವಿಲ್ಲ.
Google Pay, Bajaj Pay, PayTM ಅಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಫಿಂಗರ್‌ಪ್ರಿಂಟ್ ಸ್ಕ್ಯಾನಿಂಗ್ ಮತ್ತು ಫೇಸ್‌ಲಾಕ್ ಗಳಿಗೆ ಅನುಮತಿ ನೀಡಿವೆ. ವಿಶ್ವಾಸಾರ್ಹ ಮತ್ತು ಬಳಕೆದಾರ ಸ್ನೇಹಿ ಎರಡೂ ಭದ್ರತೆಯನ್ನು ಹೆಚ್ಚಿಸುತ್ತದೆ. ಬಯೋಮೆಟ್ರಿಕ್ ಡೇಟಾ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರೋದರಿಂದ ಅಪ್ಲಿಕೇಶನ್‌ಗೆ ಅನಧಿಕೃತ ಪ್ರವೇಶದ ಅಪಾಯವನ್ನು ಕಡಿಮೆ ಮಾಡುತ್ತದೆ.
5.ಪ್ರತಿ ವ್ಯವಹಾರದ ಸಂದೇಶ
ಮೊಬೈಲ್ ರೀಚಾರ್ಜ್ ಅಪ್ಲಿಕೇಶನ್‌ಗಳು ನೀಡುವ ಪ್ರಮುಖ ಭದ್ರತಾ ವೈಶಿಷ್ಟ್ಯವೆಂದರೆ Real-time transaction alerts. ನಿಮ್ಮ ಹಣಕಾಸಿನ ಪೂರ್ಣಗೊಂಡ ನಂತರ ಬಳಕೆದಾರರಿಗೆ ನವೀಕರಣದ ಮೆಸೇಜ್ ನೀಡುತ್ತದೆ. ಖಾತೆಯಿಂದ ನಡೆಯುವ ಹಣಕಾಸಿನ ವಹಿವಾಟು ನೋಂದಿತ ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಗೆ ಮೆಸೇಜ್ ರವಾನೆ ಮಾಡಲಾಗುತ್ತದೆ. ಇದರಿಂದ ಅನಧಿಕೃತ ವ್ಯವಹಾರದ ಬಗ್ಗೆ ತಿಳಿದುಕೊಳ್ಳಲು ಅವಶ್ಯಕವಾಗಿದೆ. ಈ ವೈಶಿಷ್ಟ್ಯವು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ. ಅಪಾಯ ಸಂಭವಿಸುವ ಮೊದಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬಹುದು.
6.ಆಟೋ ಲಾಗೌಟ್
ಈ ಮೊಬೈಲ್ ಅಪ್ಲಿಕೇಶನ್‌ಗಳ ಮತ್ತೊಂದು ವೈಶಿಷ್ಯ ಏನೆಂದ್ರೆ ಆಪ್ ನಿಂದ ಹೊರ ಬರುತ್ತಲೇ ಆಟೋ ಲಾಗೌಟ್ ಆಗತ್ತದೆ. ನಿರ್ದಿಷ್ಟ ಅವಧಿಯ ನಿಷ್ಕ್ರಿಯತೆಯ ನಂತರ ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತವೆ. ಒಂದು ವೇಳೆ ಬಳಕೆದಾರರು ಲಾಗ್ ಔಟ್ ಮಾಡಲು ಮರೆತರೂ ಅಪ್ಲಿಕೇಶನ್ ಲಾಗ್ ಔಟ್ ಆಗಲಿದೆ. ಒಂದು ವೇಳೆ ಬೇರೆಯಾದ್ರೂ ತಪ್ಪಾದ ಮಾಹಿತಿ ನೀಡಿ ಪ್ರವೇಶಕ್ಕೆ ಮುಂದಾದರೆ ಕೂಡಲೇ ಅಲರ್ಟ್ ಮೆಸೇಜ್ ರವಾನೆ ಮಾಡುತ್ತದೆ. ಅನಧಿಕೃತ ಪ್ರವೇಶವನ್ನು ತಡೆಯಲು ಹಿಂದಿನ ಸೆಶನ್ ಅನ್ನು ಕೊನೆಗೊಳಿಸುತ್ತದೆ.
7.ಕೃತಕ ಬುದ್ಧಿಮತ್ತೆ
ವಂಚನೆಯನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ಸುಧಾರಿತ ತಂತ್ರಜ್ಞಾನ ಬಳಕೆ ಮಾಡಲಾಗಿರುತ್ತದೆ. ಬಳಕೆದಾರರ ನಡವಳಿಕೆ ಮತ್ತು ವಹಿವಾಟಿನ ಮಾದರಿ ಸಂಗ್ರಹಿಸಿ ಮೇಲ್ವಿಚಾರಣೆ ಮಾಡುತ್ತವೆ. ಒಂದು ವೇಳೆ ಬಳಕೆಯಲ್ಲಿ ವ್ಯತ್ಯಾಸ ಕಂಡು ಬಂದ್ರೆ ನುಮಾನಾಸ್ಪದ ಚಟುವಟಿಕೆಯನ್ನು ಫ್ಲ್ಯಾಗ್ ಮಾಡುತ್ತವೆ ಅಂದ್ರೆ ನಿಯಂತ್ರಿಸುತ್ತವೆ. Bajaj Pay ನಂತಹ ಅಪ್ಲಿಕೇಶನ್‌ಗಳು ಕೃತಕ ಬುದ್ಧಿಮತ್ತೆಯಿಂದ ಅಪಾಯವನ್ನು ಪತ್ತೆ ಹಚ್ಚುತ್ತದೆ. ಇದರಿಂದ ಬಳಕೆದಾರರ ಖಾತೆಯಲ್ಲಿ ಹಣ ಸೇಫ್ ಆಗಿರುತ್ತದೆ.
8.ಡೇಟಾ ಗೌಪ್ಯತೆ ಮತ್ತು ಅನುಸರಣೆ
ಆನ್‌ಲೈನ್‌ನಲ್ಲಿ ಮೊಬೈಲ್ ರೀಚಾರ್ಜ್ ಮಾಡುವಾಗ ಸುರಕ್ಷತೆಯ ಪ್ರಮುಖ ಅಂಶವೆಂದರೆ ಬಳಕೆದಾರರ ಡೇಟಾದ ರಕ್ಷಣೆ. ಭಾರತದ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ (PDPB) ಅಥವಾ EU ನಲ್ಲಿನ ಸಾಮಾನ್ಯ ಡೇಟಾ ಸಂರಕ್ಷಣಾ ನಿಯಂತ್ರಣ (GDPR) ನಂತಹ ಕಟ್ಟುನಿಟ್ಟಾದ ಡೇಟಾ ಗೌಪ್ಯತೆ ನಿಯಮಗಳನ್ನು ಅನುಸರಿಸಲಾಗುತ್ತದೆ. ಅನೇಕ ಪ್ರತಿಷ್ಠಿತ ಪ್ಲಾಟ್‌ಫಾರ್ಮ್‌ಗಳು, ಬಳಕೆದಾರರ ಮಾಹಿತಿಯನ್ನು ಹೇಗೆ ಸಂಗ್ರಹಿಸಲಾಗುತ್ತದೆ, ಸಂಗ್ರಹಿಸಲಾಗುತ್ತದೆ ಮತ್ತು ಬಳಸಲಾಗುತ್ತದೆ ಎಂಬುದನ್ನು ನಿಯಂತ್ರಿಸುವ ಡೇಟಾ ಸಂರಕ್ಷಣಾ ನೀತಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಈ ನಿಯಮಗಳಿಗೆ ಬದ್ಧವಾಗಿದೆ. ಡೇಟಾ ಗೌಪ್ಯತೆಗೆ ಈ ಬದ್ಧತೆಯು ಬಳಕೆದಾರರಿಗೆ ತಮ್ಮ ವೈಯಕ್ತಿಕ ವಿವರಗಳನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಅಥವಾ ಒಪ್ಪಿಗೆಯಿಲ್ಲದೆ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂಬ ವಿಶ್ವಾಸವನ್ನು ನೀಡುತ್ತದೆ.
9.ಗ್ರಾಹಕ ಸೇವಾಕೇಂದ್ರ
ಮೊಬೈಲ್ ಅಪ್ಲಿಕೇಶನ್‌ಗಳು ಭದ್ರತಾ ವೈಶಿಷ್ಟ್ಯಗಳಿದ್ದರೂ ಕೆಲವೊಮ್ಮೆ ವಂಚನೆಗೆ ಒಳಗಾಗುವ ಸನ್ನಿವೇಶಗಳು ಸೃಷ್ಟಿಯಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಗ್ರಾಹಕರ ಸಮಸ್ಯೆಗೆ ಅಪ್ಲಿಕೇಶನ್‌ಗಳು ತ್ವರಿತವಾಗಿ ಸ್ಪಂದಿಸುತ್ತವೆ. ಬಳಕೆದಾರರು ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸಬಹುದು ಅಥವಾ ಅನುಮಾನಾಸ್ಪದ ಚಟುವಟಿಕೆಯನ್ನು ವರದಿ ಮಾಡಬಹುದು. PhonePe ಅಥವಾ Bajaj Pay ನಂತಹ ಅಪ್ಲಿಕೇಶನ್‌ಗಳು ಪ್ರಾಂಪ್ಟ್ ಗ್ರಾಹಕ ಬೆಂಬಲವನ್ನು ನೀಡುತ್ತವೆ. ಇದು ಬಳಕೆದಾರರ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವ ಭರವಸೆಯನ್ನು ನೀಡುತ್ತವೆ.
10.ಸೆಕ್ಯುರಿಟಿ ಅಪ್‌ಡೇಟ್ ಮಾಹಿತಿ
ಅಪ್ಲಿಕೇಶನ್‌ಗಳ ಭದ್ರತೆ ಸಂಬಂಧ ನಿರಂತರವಾಗಿ ಕೆಲಸಗಳು ನಡೆಯುತ್ತಿರುತ್ತವೆ. ಈ ಸಂಬಂಧ ಡೆವಲಪರ್‌ಗಳು ಎನ್‌ಕ್ರಿಪ್ಶನ್ ವಿಧಾನ ಸುಧಾರಣೆ, ಹೊಸ ಭದ್ರತಾ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುತ್ತಾರೆ. ಹಾಗಾಗಿ ಮೊಬೈಲ್ ಅಪ್ಲಿಕೇಶನ್ ಆಪ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು.
ದೈನಂದಿನ ಹಣಕಾಸಿನ ಕಾರ್ಯಗಳನ್ನು ನಿರ್ವಹಿಸಲು ಮೊಬೈಲ್ ರೀಚಾರ್ಜ್ ಅಪ್ಲಿಕೇಶನ್‌ಗಳು ಅನಿವಾರ್ಯವಾಗಿವೆ. ಎಲ್ಲಾ ಮೊಬೈಲ್ ಅಪ್ಲಿಕೇಶನ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಬಯೋಮೆಟ್ರಿಕ್ ದೃಢೀಕರಣ, ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದ್ದು, ಬಳಕೆದಾರರಿಗೆ ಸುರಕ್ಷತೆಯ ಭರವಸೆಯನ್ನು ನೀಡುತ್ತದೆ. ಬಜಾಜ್ ಪೇ ನಂತಹ ಪ್ಲಾಟ್‌ಫಾರ್ಮ್‌ಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ಡೇಟಾದ ಗೌಪ್ಯತೆಯನ್ನು ಕಾಪಾಡುತ್ತವೆ.