Honor X30 5G ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಎಷ್ಟು?

By Suvarna News  |  First Published Dec 19, 2021, 12:11 PM IST

* ಈ ಆನರ್ ಎಕ್ಸ್30 5ಜಿ ಸ್ಮಾರ್ಟ್‌ಫೋನ್ ಬೆಲೆ ಅಂದಾಜು 17,190 ರೂ.
* ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾ
* ಭಾರತೀಯ ಮಾರುಕಟ್ಟೆಗೆ ಬಿಡುಗೆಯಾಗುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ


Tech Desk: ಸ್ಮಾರ್ಟ್‌ಫೋನ್ (Smartphone) ಉತ್ಪಾದನಾ ಕಂಪನಿಗಳ ಸಾಲಿನಲ್ಲಿ ಆನರ್(Honor) ಕಂಪನಿ ಕೂಡ ಪ್ರಮುಖವಾಗಿದ್ದು, ಬಜೆಟ್‌ ಫೋನಿನಿಂದ ಹಿಡಿದು ಪ್ರೀಮಿಯಂವರೆಗಿನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದೆ. ಈ ಆನರ್ ಕಂಪನಿ, ಚೀನಾ ಮಾರುಕಟ್ಟೆಗೆ ಇದೀಗ ಆನರ್ ಎಕ್ಸ್30 5ಜಿ (Honor X30 5G) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಹೊಸ ಸ್ಮಾರ್ಟ್‌ಫೋನ್ ಬಗ್ಗೆ ಬಹಳ ದಿನಗಳಿಂದಲೂ ಮಾತುಗಳು ಕೇಳಿ ಬರುತ್ತಿದ್ದವು. ಆನ್‌ಲೈನ್‌ನಲ್ಲಿ ಸಾಕಷ್ಟು ಮಾಹಿತಿಯೂ ಸೋರಿಕೆಯಿಂದಾಗಿ ತೀವ್ರ ಕುತೂಹಲ ಕೆರಳಿಸಿತ್ತು. ಅದಕ್ಕೀಗ ಎಲ್ಲ ತೆರೆ ಬಿದ್ದಿದ್ದು, ಕಂಪನಿಯು ಚೀನಾ ಮಾರುಕಟ್ಟೆಗೆ ಆನರ್ ಎಕ್ಸ್30 5ಜಿ (Honor X30 5G) ಮಧ್ಯಮ ವ್ಯಾಪ್ತಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಫೋನು ಎಫ್‌ಎಚ್‌ಪ್ಲಸ್ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಕ್ವಾಲಂಕಾಮ್ ಪ್ರೊಸೆಸರ್ ಅನ್ನು ನೀವು ಈ ಫೋನಿನಲ್ಲಿ ಕಾಣಬಹುದು. ಸಾಕಷ್ಟು ಹೊಸ ಹೊಸ ಫೀಚರ್‌ಗಳನ್ನು ಹೊಂದಿರುವ ಈ ಫೋನು ಗ್ರಾಹಕರ ನಿರೀಕ್ಷೆಗಳನ್ನು ತಲುಪಬಹುದು. 

ಚೀನಾ (China) ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಆನರ್ ಎಕ್ಸ್30 5ಜಿ (Honor X30 5G) ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಹಾಗೂ 66 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಕಂಪನಿಯು ಹೇಳಿಕೊಂಡಿರುವ ಪ್ರಕಾರ, ಈ ಫೋನು ಬ್ಯಾಟರಿ ಅರ್ಧಗಂಟೆಯಲ್ಲೇ ಶೇ.81ರಷ್ಟು ಚಾರ್ಜ್ ಆಗುತ್ತದೆ. ಅಂದರೆ, ಅಷ್ಟೊಂದು ವೇಗವಾಗಿ ಚಾರ್ಜ್ ಆಗುವುದನ್ನು ನೋಡಬಹುದು. 

Tap to resize

Latest Videos

undefined

2022ರಲ್ಲಿ ಸ್ಯಾಮ್ಸಂಗ್, ಆಪಲ್, ಶಿಯೋಮಿ, ಒನ್‌ಪ್ಲಸ್ ಯಾವ ಫೋನು ಲಾಂಚ್?

ಈ ಮೊದಲೇ ಹೇಳಿರುವಂತೆ ಆನರ್ ಎಕ್ಸ್30 5ಜಿ (Honor X30 5G) ಸ್ಮಾರ್ಟ್‌ಫೋನ್ ಅಕ್ಟಾ ಕೋರ್ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 696 ಪ್ರೊಸೆಸರ್ ಆಧರಿತವಾಗಿದ್ದು, ಇದಕ್ಕೆ 6 GB RAM ಮತ್ತು 8 GB RAM ಸಂಯೋಜಿತಗೊಂಡಿದೆ. ಜೊತೆಗೆ ನೀವು ಈ ಫೋನಿನ ರ್ಯಾಮ್ ಅನ್ನು 2 GBವರೆಗೂ ವರ್ಚವಲ್ RAM ಆಗಿ ವಿಸ್ತರಿಸಿಕೊಳ್ಳಬಹುದಾಗಿದೆ. ಒಟ್ಟು ಎರಡು ವೆರಿಯೆಂಟ್‌ಗಳಲ್ಲಿ ಈ ಫೋನು ಸಿಗಲಿದೆ. ಅದಂರೆ, 6 GB RAM ಮತ್ತು 128 GB ಸ್ಟೋರೇಜ್, 8 GB RAM ಮತ್ತು 256 GB ಸ್ಟೋರೇಜ್ ವೆರಿಯೆಂಟ್‌ಗಳಲ್ಲಿ ಲಭ್ಯವಾಗಲಿದೆ. 

ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್ ಅಪ್ ಇದೆ. ಈ ಪೈಕಿ ಮೊದಲನೆಯ ಕ್ಯಾಮೆರಾ  48 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದ್ದರೆ, ಎರಡು ಮತ್ತು ಮೂರನೇ ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಿವೆ. ಸೆಲ್ಫಿಗಾಗಿ ಕಂಪನಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಿದೆ. 4,800 mAh ಬ್ಯಾಟರಿ ನೀಡಲಾಗಿದೆ.

ಆನರ್ ಎಕ್ಸ್ 30 5ಜಿ ಸ್ಮಾರ್ಟ್‌ಫೋನ್ ಒಟ್ಟು ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಮಿಡ್‌ನೈಟ್  ಬ್ಲ್ಯಾಕ್ (Midnight Black), ಟೈಟಾನಿಯಂ ಸಿಲ್ವರ್ (Titanium Silver), ಒಸಿಯನ್ ಬ್ಲೂ (Ocean Blue), ಗೋಲ್ಡ್ (Gold), ಟೈಟಾನಿಯಂ ಸ್ಕೈ ಸಿಲ್ವರ್ ಸ್ಟಾರ್ ರಿಂಗ್ ( Titanium Sky Silver Star Ring Edition) ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. 

Oppoದ ಮೊದಲ ಪೋಲ್ಡಬಲ್ ಸ್ಮಾರ್ಟ್‌ಫೋನ್ ಫೈಂಡ್ ಎನ್ ಬಿಡುಗಡೆ, ಏನೆಲ್ಲ ಫೀಚರ್ಸ್ ಇದೆ? 

ಭಾರತೀಯ (Indian) ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಈ ಆನರ್ ಎಕ್ಸ್30 5ಜಿ ಸ್ಮಾರ್ಟ್‌ಫೋನ್ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ಈ ಫೋನ್ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಮೊದಲೇ ಹೇಳಿದಂತೆ ಇದೊಂದು ಮಧ್ಯಮವ್ಯಾಪ್ತಿಯ ಸ್ಮಾರ್ಟ್‌ಫೋನ್ ಆಗಿರುವುದರಿಂದ ರೀತಾ ದುಬಾರಿ ಬೆಲೆಯನ್ನು ನಿರೀಕ್ಷಿಸುವ ಅಗತ್ಯವೇನೂ ಇಲ್ಲ. ಚೀನಾ (China) ಮಾರುಕಟ್ಟೆಯಲ್ಲಿ ಈ ಫೋನು ಬೆಲೆ ಅಂದಾಜು 1499 ಯಾನ್. ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು 17,190 ರೂಪಾಯಿ. ಹಾಗಾಗಿ, ಈ ಫೋನು ತೀರಾ ದುಬಾರಿಯೂ ಅಲ್ಲ, ಅಗ್ಗವೂ ಅಲ್ಲ.

click me!